ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ghaati Movie: ʼಘಾಟಿʼ ಚಿತ್ರಕ್ಕೆ ಶುಭವಾಗಲೆಂದು ಅನುಷ್ಕಾ ಶೆಟ್ಟಿಗೆ ಹಾರೈಸಿದ ಪ್ರಭಾಸ್

Anushka Shetty: ಕನ್ನಡತಿ ಅನುಷ್ಕಾ ಶೆಟ್ಟಿ ನಟನೆಯ ತೆಲುಗಿನ ʼಘಾಟಿʼ ಸಿನಿಮಾ ಬಹುಭಾಷೆಗಳಲ್ಲಿ ಮೂಡಿ ಬಂದಿದೆ. ಸೆಪ್ಟೆಂಬರ್‌ 5ರಂದು ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಇದೀಗ ಇದೇ ಸಿನಿಮಾ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ʼಘಾಟಿʼ ಸಿನಿಮಾಕ್ಕೆ ಪ್ಯಾನ್‌ ಇಂಡಿಯನ್‌ ಸ್ಟಾರ್‌ ಪ್ರಭಾಸ್‌ ಶುಭ ಹಾರೈಸಿದ್ದಾರೆ.

ʼಘಾಟಿʼ ಚಿತ್ರಕ್ಕೆ ಶುಭ ಹಾರೈಸಿದ ಹಾರೈಸಿದ ಪ್ರಭಾಸ್

-

Profile Siddalinga Swamy Sep 4, 2025 6:53 PM

ಹೈದರಾಬಾದ್‌: ಟಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ನಟನೆಯ ತೆಲುಗಿನ ʼಘಾಟಿʼ ಸಿನಿಮಾ (Ghaati Movie) ಬಹುಭಾಷೆಗಳಲ್ಲಿ ಮೂಡಿಬಂದಿದೆ. ಟ್ರೈಲರ್ ಮೂಲಕವೇ ಸದ್ದು ಮಾಡುತ್ತಿರುವ ಈ ಸಿನಿಮಾ ಇನ್ನೇನು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಅಂದರೆ ಸೆಪ್ಟೆಂಬರ್‌ 5ರಂದು ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಇದೀಗ ಇದೇ ಸಿನಿಮಾ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ಅಂದರೆ ʼಘಾಟಿʼ ಸಿನಿಮಾಕ್ಕೆ ಪ್ಯಾನ್‌ ಇಂಡಿಯನ್‌ ಸ್ಟಾರ್‌ ಪ್ರಭಾಸ್‌ (Prabhas) ಶುಭ ಹಾರೈಸಿದ್ದಾರೆ.

ಕ್ರಿಷ್‌ ಜಗರ್ಲಮುಡಿ ನಿರ್ದೇಶನದಲ್ಲಿ ʼಘಾಟಿʼ ಸಿನಿಮಾ ತಯಾರಾಗಿದೆ. ಕ್ರೈಂ ಥ್ರಿಲ್ಲರ್‌ ಡ್ರಾಮಾ ಶೈಲಿಯ ಈ ಸಿನಿಮಾದಲ್ಲಿ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಮಿಂಚಿದ್ದಾರೆ. ಇದೀಗ ಇದೇ ಸಿನಿಮಾದ ಟ್ರೈಲರ್ ವೀಕ್ಷಿಸಿದ ನಟ ಪ್ರಭಾಸ್‌, ಅನುಷ್ಕಾ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಭಾಸ್ ಸ್ವೀಟಿಯ ʼಘಾಟಿʼ ಚಿತ್ರಕ್ಕೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

“ಘಾಟಿʼ ರಿಲೀಸ್‌ ಟ್ರೈಲರ್‌ ತೀವ್ರ ಕುತೂಹಲ ಕೆರಳಿಸುವಂತಿದೆ...ಸ್ವೀಟಿ, ನಿನ್ನ ಪವರ್‌ಫುಲ್‌ ಪಾತ್ರವನ್ನು ನೋಡಲು ಕಾಯುತ್ತಿದ್ದೇನೆ. ಇಡೀ ʼಘಾಟಿʼ ತಂಡಕ್ಕೆ ಶುಭಾಶಯಗಳು” ಎಂದು ಪ್ರಭಾಸ್‌ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಬಹುಮುಖ ಪ್ರತಿಭೆಗಳ ಸಮಾಗಮವಾಗಿದೆ.



ವಿಕ್ರಮ್ ಪ್ರಭು, ಚೈತನ್ಯ ರಾವ್ ಮದಡಿ ಹಾಗೂ ಹಿರಿಯ ನಟ ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ರಾಜೀವ್ ರೆಡ್ಡಿ ಯೇದುಗುರು ಮತ್ತು ಸಾಯಿ ಬಾಬು ಜಗರ್ಲಮುಡಿ ಅವರ ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಪ್ರಭಾಸ್, ಪ್ರಮೊದ್ ಉಪ್ಪಲಪಾಟಿ ಮತ್ತು ವಿ. ವಂಶಿಕೃಷ್ಣ ರೆಡ್ಡಿ ಅವರ ಯುವಿ ಕ್ರಿಯೇಷನ್ಸ್ ಸಂಸ್ಥೆಯು ಈ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದೆ.

ಈ ಸುದ್ದಿಯನ್ನೂ ಓದಿ | Beauty Trend 2025: ಹುಬ್ಬಿನ ಇನ್‌ಸ್ಟಂಟ್ ಸೌಂದರ್ಯ ಹೆಚ್ಚಿಸಲು ಬಂತು ಐಬ್ರೋ ಟ್ಯಾಟೂ ಪೆನ್!

ಪ್ರಭಾಸ್ ಈ ಸಿನಿಮಾಕ್ಕೆ ಕೈ ಜೋಡಿಸಿದ್ದು, ತಂಡಕ್ಕೆ ಬಲ ಬಂದಂತಾಗಿದೆ. ನಿರೀಕ್ಷೆಗಳು ದುಪ್ಪಟ್ಟಾಗಿವೆ. ಬಿಡುಗಡೆಯ ಮುನ್ನವೇ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅನುಷ್ಕಾ ಶೆಟ್ಟಿ ತಮ್ಮ ವೃತ್ತಿಜೀವನದ ಅತ್ಯಂತ ಪವರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.