ಭಾರತದಲ್ಲಿ ವಿಂಡ್ ಪವರ್ ಕನ್ವರ್ಟರ್ ವಿತರಣೆ ಆರಂಭಿಸುವ ಮೂಲಕ ನವೀಕರಿಸಬಹುದಾದ ಇಂಧನದ ಮೇಲಿನ ಗಮನ ತೀವ್ರಗೊಳಿಸಿದ ABB
ಎರಡು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ABB, ರಾಜ್ಯದಲ್ಲಿ ಬಲವಾದ ಕೈಗಾರಿಕಾ ಹೆಜ್ಜೆಗುರುತನ್ನು ಹೊಂದಿದೆ. ಭಾರತದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಕಾರ್ಯಸೂಚಿಯ ಪ್ರಮುಖ ಸ್ತಂಭಗಳಾದ ನವೀಕರಿಸಬಹುದಾದ ಇಂಧನ, ಮೂಲ ಸೌಕರ್ಯ, ಆಟೋಮೋಟಿವ್, ತಂತ್ರಜ್ಞಾನ ಮತ್ತು ಸುಧಾರಿತ ಉತ್ಪಾದನೆಯಂತಹ ಆದ್ಯತೆಯ ಕ್ಷೇತ್ರಗಳಿಗೆ ಕಂಪನಿಯು ಬೆಂಬಲ ನೀಡುತ್ತಿದೆ.
-
Gamesa Electric ಸಂಸ್ಥೆಯ ಪವರ್ ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಸ್ವಾಧೀನಪಡಿಸಿಕೊಂಡ ನಂತರ, ಭಾರತದ ನೆಲಮಂಗಲದಲ್ಲಿರುವ ಅತ್ಯಾಧುನಿಕ ಕಾರ್ಖಾನೆಯಲ್ಲಿ ಸ್ಥಳೀಯವಾಗಿ ತಯಾರಿಸಿದ ಮೊದಲ ವಿಂಡ್ ಪವರ್ ಕನ್ವರ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ವಿಂಡ್ ಪವರ್ ಕನ್ವರ್ಟರ್ ವಿತರಣೆ ಆರಂಭಿಸುವ ಮೂಲಕ ಸುಧಾರಿತ ಗಾಳಿ, ಸೌರ ಮತ್ತು ಇಂಧನ ಸಂಗ್ರಹಣಾ ತಂತ್ರಜ್ಞಾನಗಳ ಮೂಲಕ ಇಂಧನ ಬಳಕೆ ಬಲಾವಣೆಯನ್ನು ವೇಗ ಗೊಳಿಸುವಲ್ಲಿ ABB ಹೊಂದಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸ್ಥಳೀಯವಾಗಿ ತಯಾರಿಸಿದ ಸುಧಾರಿತ ತಂತ್ರಜ್ಞಾನಗಳನ್ನು ಹೊಂದುವ ಮೂಲಕ ಭಾರತದ ನವೀಕರಿಸ ಬಹುದಾದ ಇಂಧನ ಸಾಮರ್ಥ್ಯ ಮತ್ತಷ್ಟು ಬಲಗೊಂಡಿದೆ.
ಬೆಂಗಳೂರು: ಪ್ರತಿಷ್ಠಿತ ABB ಸಂಸ್ಥೆಯು ಡಿಸೆಂಬರ್ 2025ರಲ್ಲಿ Gamesa Electric ಪವರ್ ಎಲೆಕ್ಟ್ರಾನಿಕ್ ಉದ್ಯಮವನ್ನು ಸ್ವಾಧೀನಪಡಿಸಿಕೊಂಡ ನಂತರ ಭಾರತದಲ್ಲಿ ತನ್ನ ಮೊದಲ ವಿಂಡ್ ಪವರ್ ಕನ್ವರ್ಟರ್ ವಿತರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಇಂದು ಘೋಷಿಸಿದೆ. ಬೆಂಗ ಳೂರಿನ ನೆಲಮಂಗಲದಲ್ಲಿರುವ ಅತ್ಯಾಧುನಿಕ ಕಾರ್ಖಾನೆಯಲ್ಲಿ ತಯಾರಿಸಿ ರವಾನಿಸಲಾಗುತ್ತಿರುವ ಈ ಉತ್ಪನ್ನ ವಿತರಣೆಯು, ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಗಾಳಿ ಶಕ್ತಿ ಕ್ಷೇತ್ರಗಳ ಮೇಲೆ ABB ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ.
ಇದನ್ನೂ ಓದಿ: TATA Mumbai Marathon 2026: ಅಂತಾರಾಷ್ಟ್ರೀಯ, ಭಾರತೀಯ ಎಲೀಟ್ ಓಟಗಾರರು ಸಜ್ಜು!
Gamesa Electric ಸಂಸ್ಥೆಯ ಪವರ್ ಎಲೆಕ್ಟ್ರಾನಿಕ್ಸ್ ನ ಉತ್ಕೃಷ್ಟ ವಿಂಡ್ ಎನರ್ಜಿ ಕನ್ವರ್ಷನ್ ತಂತ್ರಜ್ಞಾನಗಳನ್ನು ABB ಯ ಪೋರ್ಟ್‌ಫೋಲಿಯೋಗೆ ಸೇರ್ಪಡೆಗೊಳಿಸುವಲ್ಲಿ ಈ ವಿತರಣಾ ಪ್ರಕ್ರಿಯೆಯು ಒಂದು ಪ್ರಮುಖ ಹೆಜ್ಜೆಯಾಗಿದೆ. 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನ ಮತ್ತು ದೇಶದ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಅನುಗುಣವಾಗಿ, ABB ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದಲ್ಲಿ ತನ್ನ ಹೆಜ್ಜೆಗುರುತನ್ನು ಗಟ್ಟಿಗೊಳಿಸುತ್ತಿದ್ದು, ಯುಟಿಲಿಟಿ- ಸ್ಕೇಲ್ ಸೋಲಾರ್ ಮತ್ತು battery energy storage systems (BESS) ಸೇರಿದಂತೆ ವಿಶಾಲವಾದ ಪೋರ್ಟ್ ಫೋಲಿಯೋದ ಬೆಂಬಲದೊಂದಿಗೆ, ಗಾಳಿ ಶಕ್ತಿಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ABB, ರಾಜ್ಯದಲ್ಲಿ ಬಲವಾದ ಕೈಗಾರಿಕಾ ಹೆಜ್ಜೆಗುರುತನ್ನು ಹೊಂದಿದೆ. ಭಾರತದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಕಾರ್ಯಸೂಚಿಯ ಪ್ರಮುಖ ಸ್ತಂಭಗಳಾದ ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ, ಆಟೋಮೋಟಿವ್, ತಂತ್ರಜ್ಞಾನ ಮತ್ತು ಸುಧಾರಿತ ಉತ್ಪಾದನೆಯಂತಹ ಆದ್ಯತೆಯ ಕ್ಷೇತ್ರಗಳಿಗೆ ಕಂಪನಿಯು ಬೆಂಬಲ ನೀಡುತ್ತಿದೆ.
ಬೆಂಗಳೂರಿನ ಸಮೀಪವಿರುವ ಪ್ರಮುಖ ಕೈಗಾರಿಕಾ ಕಾರಿಡಾರ್‌ನಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ABBಯ ನೆಲಮಂಗಲ ಘಟಕವು ಪ್ರಮುಖ ಉತ್ಪಾದನಾ ಮತ್ತು ಪೂರೈಕೆ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಅಖಿಲ ಭಾರತ ಮತ್ತು ರಫ್ತು ಅಗತ್ಯಗಳಿಗಾಗಿ ಗ್ರಾಹಕರಿಗೆ ಉತ್ತಮ ಪ್ರವೇಶಾವಕಾಶವನ್ನು ಒದಗಿಸುತ್ತದೆ.
ಸ್ಥಳೀಯ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳು ಹಾಗೂ ಉದ್ಯೋಗಿಗಳ ಬೆಳವಣಿಗೆಗೆ ನಿರಂತರ ಹೂಡಿಕೆ ಮಾಡುವ ಮೂಲಕ, ABB ಭಾರತದ ಕೈಗಾರಿಕಾ ಸ್ವಾವಲಂಬನೆ ಯನ್ನು ಬಲಪಡಿಸುತ್ತಿದೆ ಮತ್ತು ಇದು ಪೂರೈಕೆ ಸರಪಳಿಯ ದೃಢತೆ ಯನ್ನು ಹೆಚ್ಚಿಸುವುದಲ್ಲದೆ, ಕರ್ನಾಟಕದ ದೀರ್ಘಕಾಲೀನ ಆರ್ಥಿಕ ಸ್ಪರ್ಧಾತ್ಮಕತೆ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತಿದೆ.
ಈ ಕುರಿತು ಮಾತನಾಡಿರುವ ABB India Ltd ನ ಮೋಷನ್ ಹೈ ಪವರ್ ವಿಭಾಗದ ಅಧ್ಯಕ್ಷರಾದ ಅನೂಪ್ ಆನಂದ್ ಅವರು, “ಇಂಧನ ಬಳಕೆ ಬದಲಾವಣೆಯಲ್ಲಿ ಗಾಳಿ ಶಕ್ತಿಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಭಾರತದಲ್ಲಿಯೇ ಸ್ಥಳೀಯವಾಗಿ ತಯಾರಿಸಲ್ಪಟ್ಟ ಮತ್ತು ಪರಿಣಾಮಕಾರಿ ಗ್ರಿಡ್ ಸಂಯೋಜನೆಗಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಪವರ್ ಕನ್ವರ್ಷನ್ ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ, ನಾವು ಗ್ರಿಡ್‌ಗೆ ಗಾಳಿ ಶಕ್ತಿಯ ಸೇರ್ಪಡೆಯನ್ನು ಬಲಪಡಿಸುತ್ತಿದ್ದೇವೆ ಮತ್ತು ಜಾಗತಿಕ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನದ ವಿಸ್ತರಣೆಗೆ ಬೆಂಬಲ ನೀಡುತ್ತಿದ್ದೇವೆ,” ಎಂದು ಹೇಳಿದರು. “ಇದು ನವೀಕರಿಸಬಹುದಾದ ಇಂಧನ ತಯಾರಿಕೆ ಮತ್ತು ನಿಯೋಜನೆಯಲ್ಲಿ ಭಾರತವು ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ತೋರಿಸುತ್ತದೆ” ಎಂದೂ ಅನೂಪ್ ಹೇಳಿದರು.
ಭಾರತವು ಜಾಗತಿಕ ನವೀಕರಿಸಬಹುದಾದ ಇಂಧನ ತಯಾರಿಕೆ ಮತ್ತು ನಿಯೋಜನೆಯ ಕೇಂದ್ರ ವಾಗಿ ವೇಗವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ ಮತ್ತು ಈ ರೂಪಾಂತರದ ಕೇಂದ್ರ ಬಿಂದುವಿನಲ್ಲಿ ಗಾಳಿ ಶಕ್ತಿಯಿದೆ. ಸದ್ಯ ವಿಶ್ವದ 3ನೇ ಅತಿದೊಡ್ಡ ವಿಂಡ್ ಮ್ಯಾನುಫ್ಯಾಕ್ಚರಿಂಗ್ ನೆಲೆಯಾಗಿರುವ ಭಾರತವು, ಜಾಗತಿಕ ವಿಂಡ್ ಬೇಡಿಕೆಯ ಶೇ.10ರಷ್ಟನ್ನು ಪೂರೈಸುವ ಮತ್ತು 2030ರ ವೇಳೆಗೆ ತನ್ನ ಒಟ್ಟು ವಿಂಡ್ ಸಾಮರ್ಥ್ಯವನ್ನು 107 ಗಿಗಾ ವ್ಯಾಟ್ ಗೆ ಹೆಚ್ಚಿಸುವ ನಿರೀಕ್ಷೆ ಯಿದೆ. ಇದು ಜಾಗತಿಕ ನವೀಕರಿಸಬಹುದಾದ ಇಂಧನ ವ್ಯವಸ್ಥೆಯಲ್ಲಿ ಭಾರತದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
ABB ಜಾಗತಿಕವಾಗಿ 15 ವರ್ಷಗಳಿಗೂ ಹೆಚ್ಚು ಕಾಲ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸು ವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ವಿಶ್ವಾದ್ಯಂತ 60,000ಕ್ಕೂ ಹೆಚ್ಚು ವಿಂಡ್ ಕನ್ವರ್ಟರ್‌ಗಳು ಹಾಗೂ ಜನರೇಟರ್‌ಗಳನ್ನು ಪೂರೈಸಿದೆ. ಈ ಅಭಿವೃದ್ಧಿ ಪಥದಲ್ಲಿ ಮುಂದು ವರಿಯುತ್ತಿರುವಂತೆ ಹೊಸ ಕಂಪನಿ ಸ್ವಾಧೀನ ಮಾಡಿಕೊಂಡಿರುವುದು ABBಯ ನವೀಕರಿಸಬಹು ದಾದ ಇಂಧನ ಪರಿವರ್ತನಾ ಸಾಮರ್ಥ್ಯಗಳನ್ನು ಗಣನೀಯವಾಗಿ ಬಲಪಡಿಸುತ್ತದೆ.
ಇದು ಕಂಪನಿಯು ಗಾಳಿ, ಸೌರ ಮತ್ತು ಬ್ಯಾಟರಿ ಇಂಧನ ಸಂಗ್ರಹಣೆಯಾದ್ಯಂತ ಸಮಗ್ರವಾದ 'ಯುಟಿಲಿಟಿ-ಸ್ಕೇಲ್' ಪರಿಹಾರೋತ್ಪನ್ನಗಳನ್ನು ನೀಡಲು ಶಕ್ತಗೊಳಿಸುತ್ತದೆ, ಜೊತೆಗೆ ವಿಂಡ್ ಕನ್ವರ್ಟರ್‌ಗಳ ಸೇವಾ ಸಾಮರ್ಥ್ಯವನ್ನು ಸುಮಾರು 46 ಗಿಗಾವ್ಯಾಟ್‌ಗಳಷ್ಟು ಹೆಚ್ಚಿಸುತ್ತದೆ. ABBಯ ಈ ಜಾಗತಿಕ ಅಂಕಿಅಂಶವು ಭಾರತದ ಪ್ರಸ್ತುತ ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ದ ಸುಮಾರು ಐದನೇ ಒಂದು ಭಾಗಕ್ಕೆ ಸಮಾನವಾಗಿದೆ.
ಪವರ್ ಎಲೆಕ್ಟ್ರಾನಿಕ್ಸ್ ಮತ್ತು ಗ್ರಿಡ್ ಸಂಯೋಜನೆಯಲ್ಲಿ ಆಳವಾದ ಪರಿಣತಿಯನ್ನು ಹೊಂದಿರುವ ABB, ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಯ ಮುಂದಿನ ಹಂತವನ್ನು ಮುನ್ನಡೆ ಸಲು ಸನ್ನದ್ಧವಾಗಿದೆ. ಪ್ರಸ್ತುತ ಗ್ರಿಡ್ ವಿಶ್ವಾಸಾರ್ಹತೆ, ವಿಕಸನಗೊಳ್ಳುತ್ತಿರುವ ನಿಯಮಗಳ ಪಾಲನೆ ಮತ್ತು ಸ್ಥಳೀಯ ತಯಾರಿಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ABB Indiaದ ಸಮಗ್ರ ನವೀಕರಿಸಬಹುದಾದ ಪೋರ್ಟ್‌ಫೋಲಿಯೋ utility-scale solar inverters, power conversion systems (PCS) for battery energy storage systems (BESS) ಮತ್ತು ವಿಂಡ್ ಪವರ್ ಕನ್ವರ್ಟರ್ ಗಳನ್ನು ಒಳಗೊಂಡಿದೆ.
ಇವೆಲ್ಲವನ್ನೂ ಭಾರತದ ಸಮಗ್ರ ನವೀಕರಿಸಬಹುದಾದ ಇಂಧನ ದೃಷ್ಟಿಕೋನವನ್ನು ಬೆಂಬಲಿ ಸಲು ಮತ್ತು 2030 ರ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನದ ಗುರಿಯನ್ನು ತಲುಪಲು ಸ್ಥಳೀಯವಾಗಿಯೇ ತಯಾರಿಸಲಾಗುತ್ತಿದೆ.