TATA Mumbai Marathon 2026: ಅಂತಾರಾಷ್ಟ್ರೀಯ, ಭಾರತೀಯ ಎಲೀಟ್ ಓಟಗಾರರು ಸಜ್ಜು!
ಬಹುನಿರೀಕ್ಷಿತ 2026ರ ಮುಂಬೈ ಮ್ಯಾರಥಾನ್‌ಗೆ ಕ್ಷಣಗಣನೆ ಶುರುವಾಗಿದೆ. ಜನವರಿ 18 ರಂದು ಮುಂಬೈನಲ್ಲಿ ಈ ಮ್ಯಾರಥಾನ್ ನಡೆಯಲಿದೆ. ದೇಶ ಹಾಗೂ ಅಂತಾರಾಷ್ಟ್ರೀಯ ಎಲೀಟ್ ಓಟಗಾರರು ಈಗಾಗಲೇ ಮುಂಬೈನಲ್ಲಿದ್ದು, ಮ್ಯಾರಥಾನ್‌ನಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದಾರೆ. ಈ ಮ್ಯಾರಥಾನ್‌ನ ಹವಾಮಾನ ಕೂಡ ಉತ್ತಮವಾಗಿದೆ.
ಮುಂಬೈ ಮ್ಯಾರಥಾನ್‌ಗೆ ಎಲೀಟ್ ಓಟಗಾರರು ಸಜ್ಜು. -
ಮುಂಬೈ: ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಈ ಬಾರಿ ಜಾಗತಿಕ ಮಟ್ಟದ ಪ್ರತಿಭೆ ಮತ್ತು ದೇಶಿ ಶ್ರೇಷ್ಠತೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಇಥಿಯೋಪಿಯಾ, ಉಗಾಂಡಾ ಹಾಗೂ ಎರಿಟ್ರಿಯಾ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಿಂದ ಆಗಮಿಸಿರುವ ಎಲಿಟ್ ಅಥ್ಲೀಟ್‌ಗಳು, ಭಾರತದ ಅತ್ಯುತ್ತಮ ದೂರ ಓಟಗಾರರೊಂದಿಗೆ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್‌ನ ಮುಂದಿನ ಆವೃತ್ತಿಯಲ್ಲಿ ಪೈಪೋಟಿ ನಡೆಸಲಿದ್ದಾರೆ.
ಏಷ್ಯಾದ ಅತ್ಯಂತ ಕಠಿಣ ಹಾಗೂ ಸ್ಪರ್ಧಾತ್ಮಕ ಮ್ಯಾರಥಾನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಟಾಟಾ ಮುಂಬೈ ಮ್ಯಾರಥಾನ್, ಸದಾ ಉನ್ನತ ಮಟ್ಟದ ಫಾರ್ಮ್‌ನಲ್ಲಿರುವ ಅಥ್ಲೀಟ್‌ಗಳನ್ನು ಆಕರ್ಷಿಸುತ್ತಿದೆ. ಸವಾಲಿನ ಹವಾಮಾನ ಮತ್ತು ತಾಂತ್ರಿಕವಾಗಿ ಕಠಿಣವಾದ ಕೋರ್ಸ್ ಮೂಲಕ ಸ್ಪರ್ಧಿಗಳ ಸಹನಶೀಲತೆ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸುವ ಈ ಮ್ಯಾರಥಾನ್‌ಗೆ, ಅಂತರರಾಷ್ಟ್ರೀಯ ಹಾಗೂ ಭಾರತೀಯ ಅಥ್ಲೀಟ್‌ಗಳು ಸಮಗ್ರ ಸಿದ್ಧತೆಯೊಂದಿಗೆ ಮುಂಬೈಗೆ ಆಗಮಿಸಿದ್ದಾರೆ.
ಅಂತಾರಾಷ್ಟ್ರೀಯ ಎಲೀಟ್ ವಿಭಾಗದಲ್ಲಿ ಇಥಿಯೋಪಿಯಾದ ಬಜೆಜೆವ್ ಅಸ್ಮಾರೆ ಬೆಲಾಯ್ ಪ್ರಮುಖ ಹೆಸರು. ಪ್ರಮುಖ ನಗರ ಮ್ಯಾರಥಾನ್‌ಗಳಲ್ಲಿ ನಿರಂತರ ಸಾಧನೆಗಾಗಿ ಪ್ರಸಿದ್ಧರಾಗಿರುವ ಅವರು, “ಟಾಟಾ ಮುಂಬೈ ಮ್ಯಾರಥಾನ್‌ಗಾಗಿ ನನ್ನ ಸಿದ್ಧತೆ ತುಂಬಾ ಕೇಂದ್ರೀಕೃತವಾಗಿದೆ. ಮುಂಬೈನ ಸವಾಲಿನ ಕೋರ್ಸ್ ನನಗೆ ವಿಶೇಷ ಉತ್ಸಾಹ ನೀಡುತ್ತದೆ. ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ಮತ್ತು ಬಲಿಷ್ಠ ಪ್ರದರ್ಶನ ನೀಡಲು ಕಾಯುತ್ತಿದ್ದೇನೆ ಎಂದರು.
ಗೋವಾದಲ್ಲಿ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಸ್ಟ್ರೀಟ್ ರೇಸ್; ಕಿಚ್ಚಾಸ್ ಕಿಂಗ್ಸ್ ತಂಡ ಸ್ಪರ್ಧೆ!
ಉಗಾಂಡಾದ ವಿಶ್ವ ಚಾಂಪಿಯನ್ ವಿಕ್ಟರ್ ಕಿಪ್ಲಾಂಗಾಟ್ ಕೂಡ ಪ್ರಮುಖ ಪೈಪೋಟಿದಾರರಲ್ಲಿ ಒಬ್ಬರು. ಈ ಕುರಿತು ಮಾತನಾಡಿದ ಅವರು ಪ್ರತಿ ಮ್ಯಾರಥಾನ್ ಹೊಸ ಪಾಠ ಕಲಿಸುತ್ತದೆ. ನನ್ನ ವೃತ್ತಿಯಲ್ಲಿ ಅನೇಕ ವಿಶೇಷ ಕ್ಷಣಗಳಿವೆ, ಆದರೆ ಪ್ರತಿಯೊಂದು ರೇಸ್ ಹೊಸ ಸವಾಲು. ಇಲ್ಲಿ ಸ್ಪರ್ಧಿಸಲು ಮತ್ತು ನನ್ನ ಶ್ರೇಷ್ಠತೆ ನೀಡಲು ಉತ್ಸುಕನಾಗಿದ್ದೇನೆ ಎಂದರು.
ಕಳೆದ ವರ್ಷದ ಟಾಟಾ ಮುಂಬೈ ಮ್ಯಾರಥಾನ್‌ನ ರಜತ ಪದಕ ವಿಜೇತ ಎರಿಟ್ರಿಯಾದ ಮೆರ್ಹಾವಿ ಕೆಸೆಟೆ ವೆಲ್ಡೆಮರ್ಯಾಮ್ ಕೂಡ ಈ ಬಾರಿ ಗಮನಾರ್ಹ ಸ್ಪರ್ಧಿಗಳಲ್ಲಿ ಸೇರಿದ್ದಾರೆ. “ಈ ಮ್ಯಾರಥಾನ್ ನನಗೆ ಒಳ್ಳೆಯ ನೆನಪುಗಳನ್ನು ನೀಡಿದೆ, ಅದು ನನಗೆ ಆತ್ಮವಿಶ್ವಾಸ ನೀಡುತ್ತದೆ,” ಎಂದು ಅವರು ಹೇಳಿದರು.
ಮಹಿಳಾ ಅಂತರರಾಷ್ಟ್ರೀಯ ವಿಭಾಗದಲ್ಲಿ ಇಥಿಯೋಪಿಯಾದ ಬಲಿಷ್ಠ ತಂಡ ಕಾಣಿಸಿಕೊಂಡಿದ್ದು, ಶುರೆ ಡೆಮಿಸೆ ತಂಡವನ್ನು ಮುನ್ನಡೆಸುತ್ತಿದ್ದಾರೆ. “ನನ್ನ ತರಬೇತಿ ನಿರಂತರವಾಗಿದೆ ಮತ್ತು ಆರೋಗ್ಯವಾಗಿರುವುದೇ ಅತ್ಯಂತ ಮುಖ್ಯ. ಈ ಮ್ಯಾರಥಾನ್ ವಿಶೇಷವಾಗಿರುವುದು ಕೋರ್ಸ್‌ನಾದ್ಯಂತ ಸಿಗುವ ಪ್ರೋತ್ಸಾಹದ ಕಾರಣ. ಇಲ್ಲಿ ಓಡುವುದಕ್ಕೆ ನನಗೆ ತುಂಬಾ ಸಂತೋಷ,” ಎಂದರು.
Under 19 World Cup: ಬಾಂಗ್ಲಾ ನಾಯಕನ ಜೊತೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ ಆಯುಷ್ ಮ್ಹಾತ್ರೆ!
ಇತ್ತೀಚಿನ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೆಡಿನಾ ಡೆಮೆ ಅರ್ಮಿನೋ ಕೂಡ ಪೈಪೋಟಿಗೆ ಸಜ್ಜಾಗಿದ್ದಾರೆ. “ಈ ಸೀಸನ್ ನನಗೆ ಬಹಳ ಪಾಸಿಟಿವ್ ಆಗಿದೆ. ನನ್ನ ತರಬೇತಿ ಶಕ್ತಿ ಮತ್ತು ಮಾನಸಿಕ ಸಮತೋಲನದ ಮೇಲೆ ಕೇಂದ್ರೀಕೃತವಾಗಿದೆ. ಭಾರತದಲ್ಲಿ ಓಡುವಾಗ ಸಿಗುವ ಎನರ್ಜಿ ವಿಶೇಷ,” ಎಂದು ಹೇಳಿದರು.
ಇಥಿಯೋಪಿಯಾ ತಂಡವನ್ನು ಪೂರ್ಣಗೊಳಿಸುವ ಯೇಶಿ ಕಲಾಯು ಚೆಕೋಲೆ, “ಇತ್ತೀಚೆಗೆ ನನ್ನ ಪ್ರದರ್ಶನ ಮಿಶ್ರವಾಗಿದೆ. ಟಾಟಾ ಮುಂಬೈ ಮ್ಯಾರಥಾನ್ ಕಲಿಕೆ ಮತ್ತು ಸುಧಾರಣೆಗೆ ಉತ್ತಮ ಅವಕಾಶ. ಕಠಿಣ ಪರಿಸ್ಥಿತಿಯ ಮ್ಯಾರಥಾನ್‌ಗಳು ಅನುಭವವನ್ನು ಮತ್ತಷ್ಟು ವಿಸ್ತರಿಸುತ್ತವೆ,” ಎಂದು ಅಭಿಪ್ರಾಯಪಟ್ಟರು.
ಭಾರತೀಯ ಎಲಿಟ್ ಅಥ್ಲೀಟ್‌ಗಳು ದೇಶೀಯ ಸವಾಲಿಗೆ ಸಜ್ಜು
ಭಾರತೀಯ ದೂರ ಓಟಗಾರಿಕೆಯ ಬಲಿಷ್ಠ ತಂಡವೂ ಈ ಬಾರಿ ಗಮನ ಸೆಳೆಯುತ್ತಿದೆ. ಕಳೆದ ವರ್ಷದ ವಿಜೇತ ಅನಿಶ್ ಥಾಪಾ ತಂಡವನ್ನು ಮುನ್ನಡೆಸುತ್ತಿದ್ದಾರೆ. “ಭಾರತೀಯ ಅಥ್ಲೀಟ್‌ಗಳಿಗೆ ಟಾಟಾ ಮುಂಬೈ ಮ್ಯಾರಥಾನ್ ಅತ್ಯಂತ ವಿಶೇಷ. ನನ್ನ ಸಿದ್ಧತೆ ಶಿಸ್ತಿನಿಂದ ಕೂಡಿದ್ದು, ರಿಕವರಿ ಮತ್ತು ನಿರಂತರತೆಯ ಮೇಲೆ ಗಮನವಿದೆ. ಇಲ್ಲಿ ಗೆದ್ದ ಅನುಭವ ನನಗೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ,” ಎಂದು ಥಾಪಾ ಹೇಳಿದರು.
ಎರಡು ಬಾರಿ ಚಾಂಪಿಯನ್ ಶ್ರೀನು ಬುಗ್ಗತಾ ಮಾತನಾಡಿ, “ಟಾಟಾ ಮುಂಬೈ ಮ್ಯಾರಥಾನ್ ಭಾರತದ ಪ್ರಮುಖ ಮ್ಯಾರಥಾನ್‌ಗಳಲ್ಲಿ ಒಂದು. ನನ್ನ ತರಬೇತಿ ಪೇಸಿಂಗ್ ಮತ್ತು ಶಕ್ತಿಯ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿದೆ,” ಎಂದರು.
ℹ️ 𝗛𝗮𝗹𝗳 𝗠𝗮𝗿𝗮𝘁𝗵𝗼𝗻 (21.097 km) - All You Need To Know For Race Day! #TMM2026 #HarDilMumbaihttps://t.co/YsllBm9Hbx
— Tata Mumbai Marathon (@TataMumMarathon) January 17, 2026
ಮಹಿಳಾ ಭಾರತೀಯ ವಿಭಾಗದಲ್ಲಿ ಹ್ಯಾಟ್ರಿಕ್ ಗುರಿಯೊಂದಿಗೆ ಮರಳುತ್ತಿರುವ ಠಾಕೋರ್ ನಿರ್ಮಾಬೆನ್ ಭಾರತೀಜಿ, “ಈ ಮ್ಯಾರಥಾನ್ ನನ್ನ ಜೀವನಯಾತ್ರೆಯ ಪ್ರಮುಖ ಭಾಗ. ಸ್ಥಿರ ಸಿದ್ಧತೆ ಮತ್ತು ಗಾಯರಹಿತವಾಗಿರುವುದೇ ನನ್ನ ಪ್ರಮುಖ ಗುರಿ. ಇಲ್ಲಿ ಓಡುವಾಗ ಸಿಗುವ ಪ್ರೇಕ್ಷಕರ ಬೆಂಬಲ ಅಪಾರ ಆತ್ಮವಿಶ್ವಾಸ ನೀಡುತ್ತದೆ,” ಎಂದು ಹೇಳಿದರು.
ಅನುಭವೀ ಓಟಗಾರ್ತಿ ಹಾಗೂ ಎರಡು ಬಾರಿ ವಿಜೇತೆ ಜ್ಯೋತಿ ಗವಟೆ, “ಈ ಮ್ಯಾರಥಾನ್ ನನ್ನ ವೃತ್ತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅನುಭವ ನಿಮಗೆ ಮ್ಯಾರಥಾನ್‌ನ್ನು ಗೌರವಿಸುವುದನ್ನು ಕಲಿಸುತ್ತದೆ. ಮತ್ತೆ ಈ ಕೋರ್ಸ್‌ನಲ್ಲಿ ಓಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ,” ಎಂದು ಹೇಳಿದರು.
ℹ️ 𝗙𝘂𝗹𝗹 𝗠𝗮𝗿𝗮𝘁𝗵𝗼𝗻 (42.195 km) - All You Need To Know For Race Day! #TMM2026 #HarDilMumbaihttps://t.co/Eftv5dJYcb
— Tata Mumbai Marathon (@TataMumMarathon) January 17, 2026
ಅಥ್ಲೀಟ್‌ಗಳ ಅಭಿಪ್ರಾಯಗಳಿಂದ ಸ್ಪಷ್ಟವಾಗುವುದೇನೆಂದರೆ, ಈ ರೇಸ್ ಸಹನೆ, ಅನುಭವ ಮತ್ತು ಧೈರ್ಯದ ಪರೀಕ್ಷೆಯಾಗಲಿದೆ. ಅಂತರರಾಷ್ಟ್ರೀಯ ಅಥ್ಲೀಟ್‌ಗಳು ತಮ್ಮ ಜಾಗತಿಕ ಅನುಭವದೊಂದಿಗೆ ಮುಂಬೈಯನ್ನು ಸವಾಲು ಮತ್ತು ಅವಕಾಶವಾಗಿ ನೋಡುತ್ತಿದ್ದರೆ, ಭಾರತೀಯ ಅಥ್ಲೀಟ್‌ಗಳು ಮನೆಮೈದಾನದ ಆತ್ಮವಿಶ್ವಾಸ ಮತ್ತು ಹೊಸ ಮಟ್ಟ ತಲುಪುವ ಹಸಿವಿನೊಂದಿಗೆ ಪೈಪೋಟಿಗೆ ಇಳಿಯುತ್ತಿದ್ದಾರೆ.
ರೇಸ್ ದಿನ ಸಮೀಪಿಸುತ್ತಿರುವಂತೆ, ಟಾಟಾ ಮುಂಬೈ ಮ್ಯಾರಥಾನ್ ಮತ್ತೊಮ್ಮೆ ಜಾಗತಿಕ ಸ್ಪರ್ಧೆ ಮತ್ತು ರಾಷ್ಟ್ರೀಯ ಹೆಮ್ಮೆಯ ಅದ್ಭುತ ಸಂಗಮವಾಗಲಿದೆ.