ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚುನಾವಣೆ ಮುಗಿದ ಬೆನ್ನಲ್ಲೇ ಎಲ್‌ಪಿಜಿ ದುಬಾರಿ, ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಪಶ್ಚಿಮ ಬಂಗಾಳದ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದ್ದರೂ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 993 ರೂ. ಹೆಚ್ಚಳ ಮಾಡಲಾಗಿದೆ. ಹಿಂದೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,078.50 ರೂ. ಇದ್ದದ್ದು 3,071.50 ರೂ. ಗೆ ಹೆಚ್ಚಳವಾಗಿದೆ.

ಯುದ್ಧದ ನಡುವೆ ಎಲ್‌ಪಿಜಿ ಬೆಲೆ ಏರಿಕೆ

ಸಂಗ್ರಹ ಚಿತ್ರ -

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ವಿಧಾನ ಸಭಾ ಚುನಾವಣೆಯ (assembly elections) ಮತದಾನ (Voting) ಮುಗಿದು, ಫಲಿತಾಂಶದ ನಿರೀಕ್ಷೆಯಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಬಳಕೆ ಮಾಡುವ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಏರಿಕೆ ( LPG prices rises) ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದ್ದು, 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 993 ರೂ. ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,078.50 ರೂ. ನಿಂದ 3,071.50 ರೂ. ಗೆ ಹೆಚ್ಚಿಸಲಾಗಿದೆ.

ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆಯೇ ಇದೀಗ ವಾಣಿಜ್ಯ ಎಲ್‌ಪಿಜಿ ದರವನ್ನು 993 ರೂ. ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ದರಗಳು ಸ್ಥಿರವಾಗಿದ್ದು, ದೇಶೀಯ ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ತಮನ್ನಾ ಭಾಟಿಯಾ ಆಯ್ಕೆ ವಿವಾದದ ನಡುವೆಯೂ 2,016 ಕೋಟಿ ರುಪಾಯಿ ವಹಿವಾಟು ನಡೆಸಿದ ಮೈಸೂರು ಸ್ಯಾಂಡಲ್ ಸೋಪ್; ಹೊರ ರಾಜ್ಯಗಳಲ್ಲಿ ದಾಖಲೆ ಮಾರಾಟ

19 ಕೆಜಿಯ ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಸರಾಸರಿಯಾಗಿ 993 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 3,071.50 ರೂ. ಗೆ ಏರಿಕೆಯಾಗಿದ್ದು, ಹಿಂದಿನ ದರ 2,078.50 ರೂ. ಆಗಿತ್ತು. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,031 ರೂ. ಗಳಿಂದ 3,024 ರೂ. ಗೆ ಹೆಚ್ಚಳವಾಗಿದೆ.

ಇರಾನ್ ಯುದ್ಧ ಪ್ರಾರಂಭವಾದ ಬಳಿಕ ಅಂದರೆ ಕಳೆದ ಫೆಬ್ರವರಿ 28 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮೂರು ಬಾರಿ ಹೆಚ್ಚಿಸಲಾಗಿದೆ. ಮಾರ್ಚ್‌ನಲ್ಲಿ ಆರಂಭದಲ್ಲಿ 144 ರೂ., ಏಪ್ರಿಲ್ 1 ರಂದು 200 ರೂ. ಹೆಚ್ಚಳ ಮಾಡಲಾಗಿದ್ದು, ಈಗ 993 ರೂ. ಹೆಚ್ಚಿಸಲಾಗಿದೆ. ಇದರಿಂದ ದಿನನಿತ್ಯದ ಕಾರ್ಯಾಚರಣೆಗಳಿಗೆ ಅಡುಗೆ ಇಂಧನವನ್ನು ಅವಲಂಬಿಸಿರುವ ಹೊಟೇಲ್, ರೆಸ್ಟೋರೆಂಟ್‌, ತಿನಿಸು ಮಳಿಗೆಗಳು ಮತ್ತು ಇತರ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಗ್ರಾಹಕರಿಗೆ ಹೊರೆಯಾಗಲಿದೆ.

ಈ ನಡುವೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ. ವಾಯುಯಾನ ವಲಯವು ಕೂಡ ಬೆಲೆ ಹೆಚ್ಚಳದ ಹೊರೆಯಿಂದ ಮುಕ್ತವಾಗಿದೆ. ಯಾಕೆಂದರೆ ದೇಶೀಯ ವಿಮಾನಯಾನ ಸಂಸ್ಥೆಗಳ ನಿಗದಿತ ಕಾರ್ಯಾಚರಣೆಗಳಿಗೆ ವಾಯುಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.

14.2 ಕೆಜಿ ಯ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಇದರ ದರ ನವದೆಹಲಿಯಲ್ಲಿ 913 ರೂ., ಕೋಲ್ಕತ್ತಾದಲ್ಲಿ 939 ರೂ., ಮುಂಬೈ 912.50 ರೂ. ಚೆನ್ನೈ 928.50 ರೂ., ಗುರುಗ್ರಾಮ್ 921.50 ರೂ., ನೋಯ್ಡಾ 910.50 ರೂ., ಬೆಂಗಳೂರು 915.50 ರೂ., ಭುವನೇಶ್ವರ 939.00 ರೂ., ಚಂಡೀಗಢ 922.50 ರೂ., ಹೈದರಾಬಾದ್ 965 ರೂ., ಜೈಪುರ 916.50 ರೂ., ಲಕ್ನೋ 950.50 ರೂ., ಪಾಟ್ನಾ 1,002.50 ರೂ. ಆಗಿದೆ.

ಮನೆಗೆ ಬಳಸಲಾಗುವ ಅಡುಗೆ ಅನಿಲದ ಬೆಲೆ ಹೆಚ್ಚಳವಾಗದಿರುವುದು ಸಂತಸದ ವಿಚಾರವಾದರೂ ಕೂಡ ತೈಲ ಮಾರುಕಟ್ಟೆ ಕಂಪನಿಗಳು ಇದರ ಹೊರೆಯನ್ನು ತಾವೇ ಭರಿಸಬೇಕಿದೆ. ಇದರಿಂದಾಗಿ ಪ್ರತಿದಿನ ತೈಲ ಮಾರುಕಟ್ಟೆ ಕಂಪನಿಗಳಿಗೆ ಸರಿಸುಮಾರು 16,000 ಕೋಟಿ ರೂ. ವ್ಯಯವಾಗುತ್ತಿದೆ. ಯಾಕೆಂದರೆ ಅವು ಕಚ್ಚಾ ತೈಲವನ್ನು ಹೆಚ್ಚಿನ ದರದಲ್ಲಿ ಅಂದರೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ಗಿಂತ ಹೆಚ್ಚು ಪಾವತಿ ಮಾಡಿ ಖರೀದಿ ಮಾಡುತ್ತಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್, ವಿಮಾನ ಟರ್ಬೈನ್ ಇಂಧನ ಮತ್ತು ಎಲ್ ಪಿಜಿ ಬೆಲೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ.

ಸರ್ಕಾರವು ಈ ನಿಟ್ಟಿನಲ್ಲಿ ಸ್ವಲ್ಪ ಕಾದು ನೋಡುವ ಕ್ರಮವನ್ನು ಅನುಸರಿಸುತ್ತಿದೆ. ಇದರಿಂದ ಮುಂದೆ ಹಣದುಬ್ಬರ ಉಂಟಾಗಿ ದೇಶದ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕವಿದೆ. ಈಗಾಗಲೇ ಎಲ್ ಪಿಜಿ ಮತ್ತು ರಸಗೊಬ್ಬರ ಸಬ್ಸಿಡಿಗಳ ಹೆಚ್ಚಿನ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ.

ಮೇ 1ರಿಂದ ಹೊಸ ನಿಯಮ

ದೇಶಿಯ ಎಲ್‌ಪಿಜಿಯ ಬೆಲೆ ಬದಲಾಗದೆ ಇದ್ದರೂ ನಗರಗಳಲ್ಲಿ ಈಗ 25 ದಿನಗಳ ಅನಂತರ ಮಾತ್ರ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತಿದೆ. ಹಿಂದೆ ಇದು 21 ದಿನಗಳಾಗಿತ್ತು. ಈ ನಡುವೆ ಮೇ 1 ರಿಂದ ಜಾರಿಗೆ ಬರುವಂತೆ ಭಾರತದ ಮೂರು ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಇಂಡೇನ್), ಭಾರತ್ ಪೆಟ್ರೋಲಿಯಂ (ಭಾರತ್ ಗ್ಯಾಸ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ ಗ್ಯಾಸ್) ಹೊಸ ನಿಯಮಗಳನ್ನು ಅಂತಿಮಗೊಳಿಸಿವೆ. ಇದರಿಂದ ಎಲ್‌ಪಿಜಿ ಬುಕಿಂಗ್‌ಗಳ ನಡುವಿನ ಅಂತರವನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳವರೆಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸಲಾಗುತ್ತದೆ. ಇದರಿಂದ ಅಂತರ ಮುಗಿಯುವ ಮೊದಲು ಮಾಡುವ ಯಾವುದೇ ಬುಕಿಂಗ್ ಅನ್ನು ಸ್ವಯಂ ಚಾಲಿತವಾಗಿ ನಿರ್ಬಂಧಿಸಲಾಗುತ್ತದೆ.

ಭರ್ಜರಿ ಲಾಭ ದಾಖಲಿಸಿದ ಫೆಡರಲ್‌ ಬ್ಯಾಂಕ್‌ - Q4 ನಲ್ಲಿ ನಿವ್ವಳ ಲಾಭ 1,259 ಕೋಟಿ ರೂ!

ಹೊಸ ನಿರ್ದೇಶನಗಳ ಅಡಿಯಲ್ಲಿ ಗ್ರಾಹಕರು ಇನ್ನು ಮುಂದೆ ತಮ್ಮ ಸಿಲಿಂಡರ್‌ ಮರುಪೂರಣವನ್ನು ಬುಕ್ ಮಾಡಿದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನೀಡಿಯೇ ಸ್ವೀಕರಿಸಬೇಕು. ಭೌತಿಕ ನೀಲಿ ಪುಸ್ತಕ ಅಥವಾ ರಶೀದಿ ತೋರಿಸಿ ಸಿಲಿಂಡರ್ ಪಡೆಯಲು ಸಾಧ್ಯವಾಗುವುದಿಲ್ಲ.