Gold Rate Today on 23rd June 2026: ಚಿನ್ನದ ದರದಲ್ಲಿಂದು ಭಾರೀ ಇಳಿಕೆ; ಬೆಲೆ ಇಲ್ಲಿದೆ ಚೆಕ್ ಮಾಡಿ
ಚಿನ್ನ ಖರೀದಿಸುವವರಿಗೆ ಇಂದು ಗುಡ್ ನ್ಯೂಸ್ ದೊರಕಿದ್ದು, ಚಿನ್ನದ ಬೆಲೆಯಲ್ಲಿಂದು ಇಳಿಕೆ ಕಂಡಿದೆ. ಮಂಗಳವಾರ 190 ರೂ. ಇಳಿಕೆ ಕಂಡಿದ್ದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,375 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 207 ರೂ. ಇಳಿಕೆಯಾಗಿ 14,591 ರೂಪಾಯಿ ಕಂಡು ಬಂದಿದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
ಬೆಂಗಳೂರು: ಚಿನ್ನ ಖರೀದಿಸುವವರಿಗೆ ಇಂದು ಗುಡ್ ನ್ಯೂಸ್ ದೊರಕಿದ್ದು, ಚಿನ್ನದ ಬೆಲೆಯಲ್ಲಿಂದು ಇಳಿಕೆ ಕಂಡಿದೆ. ಮಂಗಳವಾರ 190 ರೂ. ಇಳಿಕೆ ಕಂಡಿದ್ದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,375 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 207 ರೂ. ಇಳಿಕೆಯಾಗಿ 14,591 ರೂಪಾಯಿ ಕಂಡು (Gold Rate Today on 23rd June 2026) ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,07,000 ರೂ. ಇದ್ದರೆ, 10 ಗ್ರಾಂಗೆ 1,33,750 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 13,37,500 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,16,728 ರೂ. ಇದ್ದರೆ 10 ಗ್ರಾಂಗೆ ನೀವು 1,45,910 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,59,100 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,375 ರೂ. | 14,591 ರೂ |
| ಮುಂಬೈ | 13,375 ರೂ. | 14,591 ರೂ |
| ದೆಹಲಿ | 13,375 ರೂ. | 14,591 ರೂ |
| ಕೋಲ್ಕತಾ | 13,375 ರೂ. | 14,591 ರೂ |
| ಹೈದರಾಬಾದ್ | 13,375 ರೂ. | 14,591 ರೂ |
ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 245 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,450 ರುಪಾಯಿ ಹಾಗೂ 1 ಕೆಜಿಗೆ 2,45,000 ರುಪಾಯಿ ಕಂಡು ಬಂದಿದೆ.