ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪುಣೆಯಲ್ಲಿ ಹೊಸ ಅತ್ಯಾಧುನಿಕ ಘಟಕ ಪ್ರಾರಂಭಿಸಿದ ಅಟ್ಲಾಸ್ ಕಾಪ್ಕೊ ಗ್ರೂಪ್(Atlas Copco Group)

ಉತ್ಪಾದನಾ ಘಟಕವನ್ನು Industry 4.0 ನೀತಿಗಳ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದ್ದು, ಸ್ಮಾರ್ಟ್ ಆದ ಉತ್ಪಾದನಾ ತಂತ್ರಜ್ಞಾನಗಳು ಹಾಗೂ ದೀರ್ಘಸ್ಥಾಯಿತ್ವವನ್ನು ಸಂಯೋಜಿಸುತ್ತದೆ. ಘಟಕದ ಕಾರ್ಯಾಚರಣೆಗಳಿಗೆ ಅಗತ್ಯವಾದ ವಿದ್ಯುತ್ತಿನ ಸರಿಸುಮಾರು ಶೇಕಡ 80ರಷ್ಟನ್ನು, 1.3 MW ರೂಫ್‌ಟಾಪ್ ಸೋಲಾರ್ ಸಿಸ್ಟಮ್ ಮತ್ತು ಗ್ರಿಡ್ ಸಪ್ಲೈನಿಂದ ಪಡೆದುಕೊಳ್ಳಲಾಗುತ್ತದೆ.

ಉತ್ಪಾದನಾ ಘಟಕಗಳ Industry 4.0 ನೀತಿಗಳ ಆಧಾರದ ಮೇಲೆ ನಿರ್ಮಾಣ

Profile Ashok Nayak Mar 19, 2025 1:30 PM

ಬೆಂಗಳೂರು: ಅಟ್ಲಾಸ್ ಕಾಪ್ಕೊ ಗ್ರೂಪ್, ಪುಣೆಯ ತಲೆಗಾಂವ್‌ನಲ್ಲಿ ಹೊಸ ಉತ್ಪಾದನಾ ಘಟಕ ಪ್ರಾರಂಭಿಸಿದೆ. ಸರಿಸುಮಾರು 270,000 ಚದರಡಿಗಳ ಜಾಗದಲ್ಲಿರುವ ಹೊಸ ಅತ್ಯಾಧುನಿಕ ಘಟಕವು, CNG (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್), ಜೈವಿಕ ಅನಿಲ, ಹೈಡ್ರೋಜನ್ ಕಂಪ್ರೆಸರ್ಸ್, ಏರ್ ಡ್ರೈಯರ್ಸ್, N2 ಮತ್ತು O2 ಜನರೇಟರ್ಸ್ ಹಾಗೂ ವೈದ್ಯಕೀಯ ಫಿಲ್ಟರ್ಸ್ ಮತ್ತು ಆಕ್ಸಸರೀಸ್ ಒಳಗೊಂಡಂತೆ ಏರ್ ಮತ್ತು ಗ್ಯಾಸ್ ಕಂಪ್ರೆಸರ್ಸ್ ಮತ್ತು ಸಿಸ್ಟಮ್‍೬ಗಳ ಉತ್ಪಾದನೆ ಕೈಗೊಳ್ಳಲಿದೆ. 2023ರಲ್ಲಿ ಸೂಚಿಸಲಾಗಿದ್ದ ಈ ಪರಿಚಯವು, ಸ್ಥಳೀಯ ಮಾರುಕಟ್ಟೆಗಳಿಗೆ ಅನುಗುಣವಾದ ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಸಮಯದಲ್ಲೇ ವಿನೂತನ ಪರಿಹಾರಗ ಳನ್ನು ಆಧುನೀಕರಣಗೊಳಿಸುವ ಗ್ರೂಪ್‌ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

Image 2 ok

ಉತ್ಪಾದನಾ ಘಟಕವನ್ನು Industry 4.0 ನೀತಿಗಳ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದ್ದು, ಸ್ಮಾರ್ಟ್ ಆದ ಉತ್ಪಾದನಾ ತಂತ್ರಜ್ಞಾನಗಳು ಹಾಗೂ ದೀರ್ಘಸ್ಥಾಯಿತ್ವವನ್ನು ಸಂಯೋಜಿಸುತ್ತದೆ. ಘಟಕದ ಕಾರ್ಯಾಚರಣೆಗಳಿಗೆ ಅಗತ್ಯವಾದ ವಿದ್ಯುತ್ತಿನ ಸರಿಸುಮಾರು ಶೇಕಡ 80ರಷ್ಟನ್ನು, 1.3 MW ರೂಫ್‌ಟಾಪ್ ಸೋಲಾರ್ ಸಿಸ್ಟಮ್ ಮತ್ತು ಗ್ರಿಡ್ ಸಪ್ಲೈನಿಂದ ಪಡೆದುಕೊಳ್ಳಲಾಗುತ್ತದೆ. ಘಟಕವು ಮಳೆನೀರು ಕೊಯ್ಲು ಮತ್ತು ಆಧುನಿಕ ಕೂಲಿಂಗ್ ಸಿಸ್ಟಮ್‍ಅನ್ನು ಕೂಡ ಒಳಗೊಂಡಿದೆ.

ಇದನ್ನೂ ಓದಿ: E-Commerce: ಇ-ಕಾಮರ್ಸ್‌ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ

ಅಟ್ಲಾಸ್ ಕಾಪ್ಕೊ ಗ್ರೂಪ್‌ನಿಂದ ಸಂಶೋಧನೆ ಹಾಗೂ ಅಭಿವೃದ್ಧಿಗೆ ಬೆಂಬಲದ ಕುರಿತು ಪ್ರಬಲ ವಾದ ಗಮನ ಕೇಂದ್ರೀಕರಣದೊಂದಿಗೆ, ಘಟಕವು, ಪ್ರಸ್ತುತದ ಹಾಗೂ ಭವಿಷ್ಯತ್ತಿನ ಉತ್ಪಾದನೆ ಮತ್ತು ಉತ್ಪನ್ನ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ಅನೇಕ ಪರೀಕ್ಷಾ ಸಾಮರ್ಥ್ಯಗಳೊಂದಿಗೆ ಸಜ್ಜುಗೊಂಡಿದೆ. ಸಂಸ್ಥೆಯು ISO 9001, ISO 45001, ISO 14001 ಮತ್ತು ISO 50001 ಪ್ರಮಾಣ ಪತ್ರಗಳನ್ನು ಪಡೆದಿದ್ದು, ತಪ್ಪುಗಳನ್ನು ಕಡಿಮೆ ಮಾಡಿ ಸಾಮರ್ಥ್ಯವನ್ನು ಹೆಚ್ಚಿಸಿ ವ್ಯಾಪಾರ ಪ್ರಕ್ರಿಯೆಗಳನ್ನು ಸುಧಾರಿಸುವುದಕ್ಕೆ ನೆರವಾಗುವಂತಹ ಪ್ರಬಲವಾದ ಆಂತರಿಕ ಶೋಧನಾ ವ್ಯವಸ್ಥೆ, ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಹಾಗೂ ಸಿಕ್ಸ್ ಸಿಗ್ಮ (Six Sigma)ವಿಧಾನಗಳ ಬೆಂಬಲ ದೊಂದಿಗೆ ಅತ್ಯುನ್ನತ ಗುಣಮಟ್ಟ, ಸುರಕ್ಷತೆ ಮತ್ತು ಶಕ್ತಿ ಮಾನದಂಡಗಳನ್ನು ಖಾತರಿಪಡಿಸುತ್ತದೆ.

Image 1 ok

ಹೊಸ ಘಟಕದ ಘೋಷಣೆಯ ಕುರಿತು ಮಾತನಾಡುತ್ತಾ, ಕಂಪ್ರೆಸರ್ ಟೆಕ್ನಿಕ್ ಬಿಜಿನೆಸ್ ಏರಿಯಾದ ಅಧ್ಯಕ್ಷ ಫಿಲಿಪ್ ಎರ್ನೆನ್ಸ್(Philippe Ernens), “ಈ ಹೊಸ ಘಟಕವು ಸ್ಥಳೀಯ ಬೇಡಿಕೆಯನ್ನು ಪೂರೈ ಸುವುದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡು, ಕಡಿಮೆ ಲೀಡ್ ಟೈಮ್ಸ್ ಮತ್ತು ಹೆಚ್ಚಿನ ಸಾಮರ್ಥ್ಯವನ್ನು ಖಾತರಿಪಡಿಸುತ್ತದೆ. ಇದು, ವಿಶಾಲ ಶ್ರೇಣಿಯ ಉತ್ಪನ್ನಗಳನ್ನು ಒದಗಿ ಸಲು, ಮಾರುಕಟ್ಟೆ ನಿರೀಕ್ಷೆಗಳನ್ನು ಪೂರೈಸಲು ಹಾಗೂ ಉತ್ತಮ ಜೀವನಾವರ್ತನ ಬೆಂಬಲ ಒದಗಿಸಲು ನಮಗೆ ನೆರವಾಗುವ ಮೂಲಕ ಅತ್ಯುತ್ಕೃಷ್ಟ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ.” ಎಂದು ಹೇಳಿದರು.

ಅಟ್ಲಾಸ್ ಕಾಪ್ಕೊ (ಇಂಡಿಯಾ) ಪ್ರೈ ಲಿ,ನ ಉಪಾಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಥಿಯೆರಿ ಮೊನಾರ್ಟ್(Thierry Monart), “Tನಮ್ಮ ಹೊಸ ಉತ್ಪಾದನಾ ಘಟಕದ ಪ್ರಾರಂಭವು, ಭಾರತದಲ್ಲಿ ಅಟ್ಲಾಸ್ ಕಾಪ್ಕೊ ಗ್ರೂಪ್‌ನ ಬೆಳವಣಿಗೆ ಪಯಣದಲ್ಲಿ ಮಹತ್ತರವಾದ ಮೈಲಿಗಲ್ಲಾಗಿದೆ. ಈ ಘಟಕವು, ಸ್ಥಳೀಕರಣಕ್ಕೆ ನಮ್ಮ ಬದ್ಧತೆಯನ್ನು ಬಲಪಡಿಸುವುದು ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವನ್ನು ಕೂಡ ವಹಿಸಲಿದೆ. ಸ್ಥಳೀಯ ಪ್ರತಿಭೆ ಮತ್ತು ಆವಿಷ್ಕಾರವನ್ನು ಪ್ರೋತ್ಸಾಹಿಸುವ ಮೂಲಕ, ಭಾರ ತದ ಉತ್ಪಾದನಾ ಪರಿಸರವ್ಯವಸ್ಥೆಗೆ ಅರ್ಥಪೂರ್ಣವಾಗಿ ಕೊಡುಗೆ ಸಲ್ಲಿಸುವುದು ನಮ್ಮ ಗುರಿ ಯಾಗಿದೆ.” ಎಂದರು.