ಏಟ್ರಿಯಾ ಗ್ರೂಪ್ನಿಂದ ಏಟ್ರಿಯಾ ಮೊಬಿಲಿಟಿ ಆರಂಭ; ವಿಶ್ವದ ಮೊದಲ ಮೆಗಾವ್ಯಾಟ್-ಪ್ರಮಾಣದ ವೇಗದ ಚಾರ್ಜಿಂಗ್ ಕಾರಿಡಾರ್ ಕಾರ್ಯಾರಂಭ
ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಗಳ ದೂರದ ಪ್ರಯಾಣವು ದೀರ್ಘಕಾಲದಿಂದ ಪ್ರಮುಖ ಸವಾಲಾಗಿದೆ. ಸಾಂಪ್ರದಾಯಿಕ ಚಾರ್ಜಿಂಗ್ ವ್ಯವಸ್ಥೆಯಲ್ಲಿ 45–60 ನಿಮಿಷಗಳವರೆಗೆ ಸಮಯ ಬೇಕಾಗುವುದರಿಂದ, ಅಂತರನಗರ ಎಲೆಕ್ಟ್ರಿಕ್ ಬಸ್ಗಳು ಸಾಮಾನ್ಯವಾಗಿ ಸುಮಾರು 300–350 ಕಿ.ಮೀ. ವ್ಯಾಪ್ತಿಯ ಮಾರ್ಗ ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.
-
ಭಾರತದ ಅತ್ಯಂತ ವಿಶ್ವಾಸಾರ್ಹ ಎಲೆಕ್ಟ್ರಿಕ್ ವಾಹನ (EV) ಚಾರ್ಜಿಂಗ್ ಜಾಲ ನಿರ್ಮಿಸುವ ಮತ್ತು ಪ್ರಯಾಣಿಕರ ಬಸ್ಗಳು ಹಾಗೂ ಭಾರೀ ವಾಣಿಜ್ಯ ವಾಹನಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ದೂರದ ಪ್ರಯಾಣದ ವಿದ್ಯುತ್ ಚಲನಶೀಲತೆ ಸಾಧ್ಯವಾಗಿಸುವ ಉದ್ದೇಶ ದೊಂದಿಗೆ, ಏಟ್ರಿಯಾ ಗ್ರೂಪ್ ತನ್ನ ಹೊಸ ಕಂಪನಿಯಾದ ಏಟ್ರಿಯಾ ಮೊಬಿಲಿಟಿಯನ್ನು ಆರಂಭಿಸಿದೆ.
ದೂರದ ಅಂತರನಗರ ಎಲೆಕ್ಟ್ರಿಕ್ ಬಸ್ಗಳಿಗಾಗಿ ವಿಶ್ವದ ಮೊದಲ ಮೆಗಾವ್ಯಾಟ್-ಪ್ರಮಾಣದ ವೇಗದ ಚಾರ್ಜಿಂಗ್ ಕಾರಿಡಾರ್ ಅನ್ನು ಕಂಪನಿಯು ಕಾರ್ಯಾರಂಭಗೊಳಿಸಿದೆ. ಇದರಿಂದ 600ಕ್ಕೂ ಹೆಚ್ಚು ಕಿಲೋಮೀಟರ್ಗಳ ಬೆಂಗಳೂರು–ಹೈದರಾಬಾದ್ ಮಾರ್ಗದಲ್ಲಿ ವಾಣಿಜ್ಯ ಎಲೆಕ್ಟ್ರಿಕ್ ಬಸ್ಗಳ ಸಂಚಾರ ಸಾಧ್ಯವಾಗಿದೆ.
ಈ ಕಾರಿಡಾರ್ ಆಂಧ್ರಪ್ರದೇಶದ ಸಿಕೆ ಪಲ್ಲಿ (CK Palli) ಮತ್ತು ತೆಲಂಗಾಣದ ಉಂಡವೆಲ್ಲಿ (Undavelly) ಯಲ್ಲಿರುವ ಎರಡು ಚಾರ್ಜಿಂಗ್ ಕೇಂದ್ರಗಳನ್ನು ಒಳಗೊಂಡಿದೆ. ಪ್ರತಿ ಕೇಂದ್ರದಲ್ಲೂ 1.5 ಮೆಗಾವ್ಯಾಟ್ ಸಾಮರ್ಥ್ಯದ ವೇಗದ ಚಾರ್ಜರ್ ಅಳವಡಿಸಲಾಗಿದ್ದು, 13.5 ಮೀಟರ್ ಉದ್ದದ ಎಲೆಕ್ಟ್ರಿಕ್ ಎಸಿ ಸ್ಲೀಪರ್ ಬಸ್ ಅನ್ನು ಸುಮಾರು 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಮಾರ್ಗದಲ್ಲಿ ಫ್ರೆಶ್ ಬಸ್ (Fresh Bus) ನಿರ್ವಾಹಕ ಸಂಸ್ಥೆಯಾಗಿ ಸೆಪ್ಟೆಂಬರ್ 11, 2026ರಂದು ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಿದೆ.
ಇದನ್ನೂ ಓದಿ: ಭಾರತೀಯ ಕಾಲೇಜುಗಳಲ್ಲಿ ಉಚಿತ AI ಪ್ರಮಾಣೀಕರಣಗಳನ್ನು ನೀಡಲು AI CERTs® ‘ಮಿಷನ್ AI-ಸಕ್ಷಮ್’ ಎಂಬ ಉಪಕ್ರಮ ಪ್ರಾರಂಭ
ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಗಳ ದೂರದ ಪ್ರಯಾಣವು ದೀರ್ಘಕಾಲದಿಂದ ಪ್ರಮುಖ ಸವಾಲಾಗಿದೆ. ಸಾಂಪ್ರದಾಯಿಕ ಚಾರ್ಜಿಂಗ್ ವ್ಯವಸ್ಥೆಯಲ್ಲಿ 45–60 ನಿಮಿಷಗಳವರೆಗೆ ಸಮಯ ಬೇಕಾಗುವು ದರಿಂದ, ಅಂತರನಗರ ಎಲೆಕ್ಟ್ರಿಕ್ ಬಸ್ಗಳು ಸಾಮಾನ್ಯವಾಗಿ ಸುಮಾರು 300–350 ಕಿ.ಮೀ. ವ್ಯಾಪ್ತಿಯ ಮಾರ್ಗಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.
ದೀರ್ಘ ಪ್ರಯಾಣಗಳಲ್ಲಿ ಚಾರ್ಜಿಂಗ್ಗಾಗಿ ನಿಲ್ಲಿಸುವ ಸಮಯವು ಒಟ್ಟು ಪ್ರಯಾಣದ ಅವಧಿಗೆ ಎರಡು ಗಂಟೆಗಳವರೆಗೆ ಹೆಚ್ಚುವರಿ ಸಮಯವನ್ನು ಸೇರಿಸಬಹುದು. ಇದರಿಂದ ಡೀಸೆಲ್ ಬಸ್ಗಳಿಗೆ ಸಮಾನವಾದ ವೇಳಾಪಟ್ಟಿಯಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ಕಾರ್ಯನಿರ್ವಹಿಸುವುದು ಕಷ್ಟಕರ ವಾಗಿತ್ತು.
ಏಟ್ರಿಯಾ ಮೊಬಿಲಿಟಿಯ ಮೆಗಾವ್ಯಾಟ್-ಪ್ರಮಾಣದ ಚಾರ್ಜಿಂಗ್ ಮೂಲಸೌಕರ್ಯವು ಮಾರ್ಗದ ಪ್ರಮುಖ ಸ್ಥಳಗಳಲ್ಲಿ ಚಾರ್ಜಿಂಗ್ ವಿರಾಮವನ್ನು ಸುಮಾರು 20 ನಿಮಿಷಗಳಿಗೆ ಇಳಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಇದರಿಂದ ವಾಣಿಜ್ಯ ಅಂತರನಗರ ಸಾರಿಗೆಯ ಕಾರ್ಯಾ ಚರಣಾ ಅವಶ್ಯಕತೆಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ, 600 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಎಲೆಕ್ಟ್ರಿಕ್ ಬಸ್ಗಳು ಕ್ರಮಿಸಲು ಸಾಧ್ಯವಾಗುತ್ತದೆ.
ಪ್ರಸ್ತುತ, ಈ ಕಾರಿಡಾರ್ನಲ್ಲಿ ಎರಡೂ ದಿಕ್ಕುಗಳಲ್ಲಿ ಪ್ರತಿದಿನ ಬಸ್ ಸೇವೆಗಳು ಕಾರ್ಯ ನಿರ್ವಹಿಸುತ್ತಿವೆ. ಏಟ್ರಿಯಾ ಮೊಬಿಲಿಟಿಯ ಹಣಕಾಸು ನೆರವಿನೊಂದಿಗೆ ಫ್ರೆಶ್ ಬಸ್ 12 ಎಲೆಕ್ಟ್ರಿಕ್ ಬಸ್ಗಳನ್ನು ನಿರ್ವಹಿಸುತ್ತಿದೆ. ಶೀಘ್ರದಲ್ಲೇ ಇನ್ನೂ 8 ಬಸ್ಗಳು ಕಾರ್ಯಾಚರಣೆ ಆರಂಭಿಸಲಿವೆ. ಇತರ ನಿರ್ವಾಹಕರ ಬಸ್ಗಳನ್ನೂ ಸೇರಿಸಿದರೆ, ಈ ಮಾರ್ಗದಲ್ಲಿ ಪ್ರತಿದಿನ ಸುಮಾರು 30 ಬಸ್ಗಳು ಸಂಚರಿಸಲಿವೆ.
ಈ ಬಸ್ಗಳು ವೀರಾ ವಿದ್ಯುತ್ ವಾಹನ (Veera Vidyut Vahana) ಸಂಸ್ಥೆಯ 13.5 ಮೀಟರ್ ಉದ್ದದ MAHAsamrat Electric AC Sleeper ಮಾದರಿಯ ಬಸ್ಗಳಾಗಿದ್ದು, 420 kWh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ.
“ನಗರದೊಳಗಿನ ಮಾರ್ಗಗಳನ್ನು ಮೀರಿ ಎಲೆಕ್ಟ್ರಿಕ್ ಚಲನಶೀಲತೆಯನ್ನು ವಿಸ್ತರಿಸಬೇಕಾದರೆ, ಚಾರ್ಜಿಂಗ್ ಮೂಲಸೌಕರ್ಯವು ವಾಣಿಜ್ಯ ಸಾರಿಗೆಯ ನೈಜ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ದೂರದ ಪ್ರಯಾಣದ ಬಸ್ಗಳಿಗೆ ಗಂಟೆಗಟ್ಟಲೆ ಚಾರ್ಜಿಂಗ್ಗಾಗಿ ನಿಲ್ಲಲು ಸಾಧ್ಯವಿಲ್ಲ. ಮೆಗಾವ್ಯಾಟ್-ಪ್ರಮಾಣದ ಚಾರ್ಜಿಂಗ್ ಈ ಪರಿಸ್ಥಿತಿಯನ್ನು ಬದಲಾಯಿಸುತ್ತದೆ. ಕಡಿಮೆ ಅವಧಿಯ ಕಾರ್ಯಾಚರಣಾ ವಿರಾಮದಲ್ಲೇ ಬಸ್ಗಳನ್ನು ಮರುಚಾರ್ಜ್ ಮಾಡಿ ಪ್ರಯಾಣ ಮುಂದುವರಿಸಲು ಇದು ನೆರವಾಗುತ್ತದೆ.
ಬೆಂಗಳೂರು–ಹೈದರಾಬಾದ್ ಕಾರಿಡಾರ್ ಮೂಲಕ, ಅಂತರನಗರ ಪ್ರಯಾಣಕ್ಕೆ ಅಗತ್ಯವಿರುವ ಸಮಯದ ಮಿತಿಗಳನ್ನು ಪಾಲಿಸುತ್ತಲೇ ಎಲೆಕ್ಟ್ರಿಕ್ ಬಸ್ಗಳು 600 ಕಿಲೋಮೀಟರ್ಗಿಂತಲೂ ಹೆಚ್ಚಿನ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಬಲ್ಲವು ಎಂಬುದನ್ನು ನಾವು ಪ್ರದರ್ಶಿಸುತ್ತಿದ್ದೇವೆ. ಇದು ನಮ್ಮ ವಿಶಾಲ ಗುರಿಯ ಆರಂಭವೂ ಹೌದು.
ನವೀಕರಿಸಬಹುದಾದ ಇಂಧನ ಮತ್ತು ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಏಟ್ರಿಯಾ ಗ್ರೂಪ್ ಹೊಂದಿರುವ ಅನುಭವವನ್ನು ವಿಶ್ವಾಸಾರ್ಹ ಚಾರ್ಜಿಂಗ್ ವ್ಯವಸ್ಥೆಯೊಂದಿಗೆ ಸಂಯೋಜಿಸಿ, ಪರಿಸರಸ್ನೇಹಿ ದೂರದ ಪ್ರಯಾಣಕ್ಕೆ ನೆರವಾಗುವ ಇಂಧನದಿಂದ ಚಲನಶೀಲತೆಯವರೆಗಿನ ಸಮಗ್ರ ಜಾಲವನ್ನು ನಿರ್ಮಿಸುವುದು ನಮ್ಮ ಉದ್ದೇಶ ವಾಗಿದೆ,” ಎಂದು ಏಟ್ರಿಯಾ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕ್ ರಾಜು ಹೇಳಿದರು.
1.5 ಮೆಗಾವ್ಯಾಟ್ ವೇಗದ ಚಾರ್ಜರ್ಗಳ ಜೊತೆಗೆ, ಪ್ರತಿ ಚಾರ್ಜಿಂಗ್ ಕೇಂದ್ರದಲ್ಲೂ 360 ಕಿಲೋ ವ್ಯಾಟ್ ಸಾಮರ್ಥ್ಯದ CCS2 ಚಾರ್ಜರ್ ಅಳವಡಿಸಲಾಗಿದೆ. ಇದರಿಂದ CCS2 ತಂತ್ರಜ್ಞಾನಕ್ಕೆ ಹೊಂದಿಕೆಯಾಗುವ ಇತರ ಎಲೆಕ್ಟ್ರಿಕ್ ವಾಹನಗಳೂ ಈ ಮೂಲಸೌಕರ್ಯವನ್ನು ಬಳಸಿಕೊಳ್ಳ ಬಹುದು. ಕಾರ್ಯಾರಂಭಗೊಂಡಿರುವ ಎರಡೂ ಕೇಂದ್ರಗಳು ಒಟ್ಟಾಗಿ ಸುಮಾರು 3.7 ಮೆಗಾ ವ್ಯಾಟ್ ಸ್ಥಾಪಿತ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿವೆ.
ಏಟ್ರಿಯಾ ಮೊಬಿಲಿಟಿ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಾದ್ಯಂತ ತನ್ನ ಚಾರ್ಜಿಂಗ್ ಜಾಲ ವನ್ನು ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ಮತ್ತು ಹೈದರಾಬಾದ್ನಲ್ಲಿ ಇನ್ನೂ ಎರಡು ಚಾರ್ಜಿಂಗ್ ಕೇಂದ್ರಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ 24 ತಿಂಗಳುಗಳಲ್ಲಿ ಸುಮಾರು 20 ಪ್ರಮುಖ ಚಾರ್ಜಿಂಗ್ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕಂಪನಿ ಹೊಂದಿದೆ.
ಪ್ರಮುಖ ಅಂತರನಗರ ಮಾರ್ಗಗಳಲ್ಲಿ ಆಯ್ದ ಸ್ಥಳಗಳಲ್ಲಿ 1.5 ಮೆಗಾವ್ಯಾಟ್ ವೇಗದ ಚಾರ್ಜರ್ಗಳ ಜೊತೆಗೆ ಸಾಮಾನ್ಯ CCS2 ಚಾರ್ಜಿಂಗ್ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ವಾಣಿಜ್ಯ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ವೇಗಗೊಳಿಸಲು ಪ್ರಯಾಣಿಕರ ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ವಿತರಣಾ ಸೇವೆಗಳ ವಾಹನ ಸಮೂಹಗಳೊಂದಿಗೆ ಸಹಭಾಗಿತ್ವವನ್ನೂ ಕಂಪನಿ ಬೆಳೆಸಲಿದೆ.
ಏಟ್ರಿಯಾ ಮೊಬಿಲಿಟಿ ತನ್ನ ಚಾರ್ಜಿಂಗ್ ಜಾಲವನ್ನು ಹಂತಹಂತವಾಗಿ ಶೇಕಡಾ 100ರಷ್ಟು ನವೀಕರಿಸಬಹುದಾದ ಇಂಧನದ ಮೂಲಕ ಕಾರ್ಯನಿರ್ವಹಿಸುವಂತೆ ಪರಿವರ್ತಿಸಲು ಯೋಜಿಸಿದೆ. ಏಟ್ರಿಯಾ ಗ್ರೂಪ್ನ ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಮರ್ಥ್ಯವನ್ನು ಬಳಸಿಕೊಂಡು, ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಬೇಡಿಕೆಯೊಂದಿಗೆ ಸಂಪರ್ಕಿಸುವುದು ಇದರ ಉದ್ದೇಶವಾಗಿದೆ