ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಟೋಮೊಬೈಲ್‌ ಐಕಾನ್ ಟಾಟಾ ಏಸ್ ಗೆ 21ರ ಸಂಭ್ರಮ

ನಗರದೊಳಗಿನ ಸಾಗಣೆ ಮತ್ತು ಕೊನೆಯ ಹಂತದ ಸಾಗಣೆ ಅಗತ್ಯಗಳನ್ನು ಪೂರೈಸಲು ಈ ವಾಹನವು ಸತತವಾಗಿ ವಿಕಸನ ಹೊಂದುತ್ತಾ ಬಂದಿದೆ. ಹೆಚ್ಚಿನ ಹೊರೆ ಹೊರುವ ಸಾಮರ್ಥ್ಯಕ್ಕೆ ತಕ್ಕಂತೆ ಏಸ್ ನ ಪ್ರಸ್ತುತತೆಯನ್ನು ಸಾರುವ ಈ ಏಸ್ ಗೋಲ್ಡ್+ ಎಕ್ಸ್ಎಲ್ ಅನ್ನು ಇಂದಿನ ಉದ್ಯಮಿಗಳಿಗೆ ಹೆಚ್ಚಿನ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಸೊಗಸಾದ ಮಾಲೀಕತ್ವದ ಅನುಭವ ನೀಡುವಂತೆ ವಿನ್ಯಾಸಗೊಳಿಸ ಲಾಗಿದೆ" ಎಂದು ಹೇಳಿದರು.

ಆಟೋಮೊಬೈಲ್‌ ಐಕಾನ್ ಟಾಟಾ ಏಸ್ ಗೆ 21ರ ಸಂಭ್ರಮ

-

Profile
Ashok Nayak May 6, 2026 1:17 PM

ಟಾಟಾ ಮೋಟಾರ್ಸ್‌ ನಿಂದ ಹೊಚ್ಚ ಹೊಸ ಟಾಟಾ ಏಸ್ ಗೋಲ್ಡ್+ ಎಕ್ಸ್ಎಲ್ ಬಿಡುಗಡೆ; ‘ಇಕ್ಕೀಸ್ ಸಾಲ್ ಬೆಮಿಸಾಲ್' ಅಭಿಯಾನದ ಮೂಲಕ 21 ವರ್ಷಗಳ ಯಶಸ್ವಿ ಪಯಣದ ಸಂಭ್ರಮಾಚರಣೆ

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್, ತನ್ನ ಐತಿಹಾಸಿಕ ಉತ್ಪನ್ನವಾದ ಟಾಟಾ ಏಸ್ ಮಾರುಕಟ್ಟೆಗೆ ಬಿಡುಗಡೆಯಾಗಿ 21 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಈ ಸುಸಂದರ್ಭದಲ್ಲಿ ಸಂಸ್ಥೆಯು ಹೊಚ್ಚಹೊಸ ಟಾಟಾ ಏಸ್ ಗೋಲ್ಡ್+ ಎಕ್ಸ್ಎಲ್ ಅನ್ನು ಬಿಡುಗಡೆ ಮಾಡಿದೆ.

ಈ ಮೂಲಕ ಸಂಸ್ಥೆಯು ಕೊನೆಯ ಹಂತದ ಸರಕು ಸಾಗಣೆ ವಿಭಾಗದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದೆ. ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಉದ್ದವಾದ ದೇಹದ ವಾಹನ ಬಯಸುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಹೊಸ ಆವೃತ್ತಿಯು, ಬದಲಾಗುತ್ತಿರುವ ಲಾಜಿಸ್ಟಿಕ್ಸ್ ಕ್ಷೇತ್ರದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಮೂಡಿಬಂದಿದೆ. ಭಾರತದಲ್ಲಿ ಸಣ್ಣ ಸರಕು ಸಾಗಣೆಯ ಸ್ವರೂಪವನ್ನೇ ಬದಲಿಸಿದ ಕೀರ್ತಿ ಟಾಟಾ ಏಸ್ ಹೆಸರಿಗಿದೆ. ಬೆಳೆಯುತ್ತಿರುವ ಮತ್ತು ವಿವಿಧ ರೀತಿಯ ಉದ್ಯಮಿಗಳ ಆಕಾಂಕ್ಷೆಗಳ ಪೂರೈಕೆಗೆ ಇದು ಸತತವಾಗಿ ಬೆಂಬಲ ನೀಡುತ್ತಾ ಬಂದಿದೆ.

ಈ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸಲು ಟಾಟಾ ಮೋಟಾರ್ಸ್ ‘ಇಕ್ಕೀಸ್ ಸಾಲ್ ಬೆಮಿಸಾಲ್' ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಈ ಛೋಟಾ ಹಾಥಿ ಯನ್ನು ತಮ್ಮ ವ್ಯವಹಾರದ ಕೇಂದ್ರಬಿಂದುವನ್ನಾಗಿಸಿಕೊಂಡು ಜೀವನ ಕಟ್ಟಿಕೊಂಡಿರುವ ಉದ್ಯಮಿಗಳ ಯಶಸ್ಸನ್ನು ಗೌರವಿಸುತ್ತದೆ. ಈ ಅಭಿಯಾನದ ಅಡಿಯಲ್ಲಿ ಗ್ರಾಹಕ ಕೇಂದ್ರಿತ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳಾ ಉದ್ಯಮಿಗಳಿಗೆ Rs. 21,000 ವರೆಗಿನ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇದು ಒಳಗೊಳ್ಳುವಿಕೆಯ ಅಭಿವೃದ್ಧಿ ಸಾಧಿಸುವ ಕಡೆಗೆ ಟಾಟಾ ಮೋಟಾರ್ಸ್‌ ಹೊಂದಿರುವ ದೀರ್ಘಕಾಲದ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್

ಹೊಸ ಮಾದರಿ ಬಿಡುಗಡೆಗೊಳಿಸಿ ಮಾತನಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್‌ ನ ಎಸ್‌ಸಿವಿಪಿ ಯು ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಆದ ಶ್ರೀ ಪಿನಾಕಿ ಹಲ್ದಾರ್ ಅವರು, "ಹೊಚ್ಚ ಹೊಸ ಏಸ್ ಗೋಲ್ಡ್+ ಎಕ್ಸ್ಎಲ್ ಬಿಡುಗಡೆ ಮಾಡುವ ಮೂಲಕ ಟಾಟಾ ಮೋಟಾರ್ಸ್ ಭಾರತದ ಅತ್ಯಂತ ಕ್ರಾಂತಿಕಾರಿ ವಾಣಿಜ್ಯ ವಾಹನದ ಮುಂದಿನ ಅಧ್ಯಾಯವನ್ನು ಆರಂಭಿಸುತ್ತಿದೆ.

ನಗರದೊಳಗಿನ ಸಾಗಣೆ ಮತ್ತು ಕೊನೆಯ ಹಂತದ ಸಾಗಣೆ ಅಗತ್ಯಗಳನ್ನು ಪೂರೈಸಲು ಈ ವಾಹನವು ಸತತವಾಗಿ ವಿಕಸನ ಹೊಂದುತ್ತಾ ಬಂದಿದೆ. ಹೆಚ್ಚಿನ ಹೊರೆ ಹೊರುವ ಸಾಮರ್ಥ್ಯಕ್ಕೆ ತಕ್ಕಂತೆ ಏಸ್ ನ ಪ್ರಸ್ತುತತೆಯನ್ನು ಸಾರುವ ಈ ಏಸ್ ಗೋಲ್ಡ್+ ಎಕ್ಸ್ಎಲ್ ಅನ್ನು ಇಂದಿನ ಉದ್ಯಮಿಗಳಿಗೆ ಹೆಚ್ಚಿನ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಸೊಗಸಾದ ಮಾಲೀಕತ್ವದ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ" ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, "2005ರಲ್ಲಿ ಬಿಡುಗಡೆಯಾದ ಟಾಟಾ ಏಸ್, ಭಾರತದ ನಾಲ್ಕು ಚಕ್ರಗಳ ಸಣ್ಣ ವಾಣಿಜ್ಯ ವಾಹನ ವಿಭಾಗಕ್ಕೆ ನಾಂದಿ ಹಾಡಿತು ಮತ್ತು ಬೃಹತ್ ಪ್ರಮಾಣದಲ್ಲಿ ಉದ್ಯಮಶೀಲತೆಗೆ ಅವಕಾಶ ಮಾಡಿಕೊಡುವ ಮೂಲಕ ಕೊನೆಯ ಹಂತದ ಸಾಗಣೆ ವಿಭಾಗದಲ್ಲಿ ಸಂಚಲನ ಮೂಡಿಸಿತು. ಏಸ್ ವಾಹನದ ಈ ಸುದೀರ್ಘ ಯಶಸ್ಸು ಉದ್ಯಮದಲ್ಲೇ ಮೊದಲೆನ್ನ ಬಹುದಾದ ಒಂದು ಮೈಲಿಗಲ್ಲಾಗಿದೆ. ಕಳೆದ 21 ವರ್ಷಗಳಿಂದ ಪ್ರತಿ 4.25 ನಿಮಿಷಕ್ಕೆ ಒಂದು ಏಸ್ ಮಾರಾಟವಾಗುತ್ತಿದೆ. ಈ ಮೂಲಕ ದೇಶಾದ್ಯಂತ 26 ಲಕ್ಷಕ್ಕೂ ಹೆಚ್ಚು ಮಾಲೀಕರ ನಂಬಿಕೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಇದು ಗಳಿಸಿದೆ" ಎಂದು ಹೇಳಿದರು.

ಹೊಚ್ಚ ಹೊಸ ಟಾಟಾ ಏಸ್ ಗೋಲ್ಡ್+ ಎಕ್ಸ್ಎಲ್: ಹೆಚ್ಚು ಲೋಡ್. ಹೆಚ್ಚು ಗಳಿಕೆ. ಹೆಚ್ಚು ಮೌಲ್ಯ.

ಮಾಲೀಕರ ಲಾಭದಾಯಕತೆಯನ್ನು ನೇರವಾಗಿ ಹೆಚ್ಚಿಸುವ ಉದ್ದೇಶದಿಂದ ಏಸ್ ಗೋಲ್ಡ್+ ಎಕ್ಸ್ಎಲ್ ಅನ್ನು ವಿನ್ಯಾಸಗೊಳಿಸಲಾಗಿದೆ. 8 ಅಡಿ ಉದ್ದದ ಲೋಡ್ ಬಾಡಿ ಮತ್ತು 1 ಟನ್ ಪೇಲೋಡ್ ಸಾಮರ್ಥ್ಯದೊಂದಿಗೆ, ಇದು ಪ್ರತಿ ಟ್ರಿಪ್‌ ನಲ್ಲಿ ಹೆಚ್ಚಿನ ಪ್ರಮಾಣದ ಸರಕನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ. ಕಠಿಣ ಸಂದರ್ಭದಲ್ಲಿಯೂ ಉತ್ತಮ ಬಳಕೆಗೆ ಒದಗುವ ಮತ್ತು ಹೆಚ್ಚಿನ ಆದಾಯ ಗಳಿಸುವ ಸಾಮರ್ಥ್ಯ ಹೊಂದಿರುವ ವಾಹನವಾಗಿದೆ.

ಸುಧಾರಿತ ಲೀನ್ ಎನ್ಒಎಕ್ಸ್ ಟ್ರ್ಯಾಪ್ (ಎಲ್ ಎನ್ ಟಿ) ತಂತ್ರಜ್ಞಾನವನ್ನು ಹೊಂದಿರುವ ಏಸ್ ಗೋಲ್ಡ್+ ಎಕ್ಸ್ಎಲ್, ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ನ ಅಗತ್ಯವನ್ನು ನಿವಾರಿಸುತ್ತದೆ. ಇದು ಕಾರ್ಯಾಚರಣೆಯ ಸಂಕೀರ್ಣತೆ ಮತ್ತು ನಿರ್ವಹಣಾ ಶ್ರಮ ಎರಡನ್ನೂ ಕಡಿಮೆ ಮಾಡುತ್ತದೆ. ಇದರ ಫಲವಾಗಿ ಮಾಲೀಕತ್ವದ ಒಟ್ಟು ವೆಚ್ಚ ಕಡಿಮೆಯಾಗುತ್ತದೆ, ವಾಹನವು ಹೆಚ್ಚು ಸಮಯ ಬಳಕೆಗೆ ಲಭ್ಯವಿರುತ್ತದೆ ಮತ್ತು ದಿನನಿತ್ಯ ಈ ವಾಹನವನ್ನೇ ಅವಲಂಬಿಸಿರುವ ಉದ್ಯಮಿಗಳಿಗೆ ನಿಶ್ಚಿಂತೆಯನ್ನು ನೀಡುತ್ತದೆ. ಏಸ್ ಗೋಲ್ಡ್+ ಎಕ್ಸ್ಎಲ್ ವಾಹನವು 700 ಸಿಸಿ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 22 ಪಿಎಸ್ ಪವರ್ ಮತ್ತು 55 ಎನ್ಎಂ ಟಾರ್ಕ್ ಅನ್ನು ಉತ್ಪಾದಿ ಸುತ್ತದೆ. ಇದನ್ನು ಕೊನೆಯ ಹಂತದ ಕಠಿಣ ಸಾಗಾಣಿಕಾ ಕಾರ್ಯಾಚರಣೆಗಳಲ್ಲಿ ಸ್ಥಿರವಾದ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಎಲ್ಲ ಸುಧಾರಣೆಗಳು ಸೇರಿ ಏಸ್ ಗೋಲ್ಡ್+ ಎಕ್ಸ್ಎಲ್ ಅನ್ನು ಪ್ರಸ್ತುತ ಏಸ್ ಮಾಲೀಕರಿಗೆ ಒಂದು ಆಕರ್ಷಕ ಅಪ್‌ ಗ್ರೇಡ್ ಆಗಿ ಮತ್ತು ಭಾರತದ ವೇಗವಾಗಿ ಬೆಳೆಯುತ್ತಿರುವ ಸಾಗಣೆ ವ್ಯವಸ್ಥೆಗೆ ಸೇರಲು ಬಯಸುವ ಹೊಸ ಉದ್ಯಮಿಗಳಿಗೆ ಅತ್ಯುತ್ತಮ ಆರಂಭಿಕ ವಾಹನವಾಗಿ ಸಾಥ್ ನೀಡುತ್ತದೆ.

ಬಲಿಷ್ಠ ಎಸ್‌ಸಿವಿ ವ್ಯವಸ್ಥೆಯ ಬೆಂಬಲ

ಟಾಟಾ ಏಸ್ ಗೋಲ್ಡ್+ ಎಕ್ಸ್ಎಲ್ ವಾಹನವು ಟಾಟಾ ಮೋಟಾರ್ಸ್‌ ನ ಸಮಗ್ರ ಸಣ್ಣ ವಾಣಿಜ್ಯ ವಾಹನಗಳ ಜಾಲದ ಬೆಂಬಲವನ್ನು ಹೊಂದಿದೆ. ಏಸ್ ಪ್ರೊ, ಏಸ್, ಇಂಟ್ರಾ ಮತ್ತು ಯೋಧಾ ಒಳಗೊಂಡಿರುವ ಕಂಪನಿಯ ಈ ಪೋರ್ಟ್‌ಫೋಲಿಯೋ 750 ಕೆಜಿಯಿಂದ 2 ಟನ್‌ ಗಳವರೆಗಿನ ಪೇಲೋಡ್ ಅಗತ್ಯತೆಗಳನ್ನು ಪೂರೈಸುತ್ತದೆ. ಅಲ್ಲದೆ, ಇವು ಡೀಸೆಲ್, ಪೆಟ್ರೋಲ್, ಸಿಎನ್‌ಜಿ, ಬೈ-ಫ್ಯುಯೆಲ್ ಮತ್ತು ಎಲೆಕ್ಟ್ರಿಕ್ ಪವರ್‌ ಟ್ರೇನ್‌ ಗಳಲ್ಲಿ ಲಭ್ಯವಿವೆ.

ಇದಕ್ಕೆ ಪೂರಕವಾಗಿ ಟಾಟಾ ಮೋಟಾರ್ಸ್‌ ನ ‘Sampoorna Seva 2.0’ ಎಂಬ ಎಂಡ್-ಟು-ಎಂಡ್ ಲೈಫ್‌ ಸೈಕಲ್ ಸಪೋರ್ಟ್ ಪ್ರೋಗ್ರಾಂ ಇದೆ. ಜೊತೆಗೆ ದೇಶಾದ್ಯಂತ ಇರುವ 2,500ಕ್ಕೂ ಹೆಚ್ಚು ಸರ್ವಿಸ್ ಮತ್ತು ಬಿಡಿಭಾಗಗಳ ಕೇಂದ್ರಗಳು ಹಾಗೂ ತರಬೇತಿ ಪಡೆದ ತಂತ್ರಜ್ಞರ ಸ್ಟಾರ್ ಗುರು ಜಾಲವು ಗ್ರಾಹಕರಿಗೆ ಮಾಲೀಕತ್ವದ ಪ್ರತಿಯೊಂದು ಹಂತದಲ್ಲೂ ಬೆಂಬಲ ಸಿಗುವಂತೆ ನೋಡಿ ಕೊಳ್ಳುತ್ತದೆ.

ಹೊಚ್ಚಹೊಸ ಏಸ್ ಗೋಲ್ಡ್+ ಎಕ್ಸ್ಎಲ್ ಬಿಡುಗಡೆಯ ಮೂಲಕ ಟಾಟಾ ಮೋಟಾರ್ಸ್ ಭಾರತದ ಉದ್ಯಮಶೀಲತೆಯ ಬೆಳವಣಿಗೆಗೆ ಶಕ್ತಿ ತುಂಬುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದು, ಈ ಮೂಲಕ ಸಂಸ್ಥೆಯು ಜೀವನೋಪಾಯವನ್ನು ರೂಪಿಸಿದ, ಲಾಜಿಸ್ಟಿಕ್ಸ್ ಅನ್ನು ಬಲಪಡಿಸಿದ ಮತ್ತು ಪ್ರತಿ ಪ್ರಯಾಣದಲ್ಲೂ ಪ್ರಗತಿಗೆ ನೆರವಾಗುವ ತನ್ನ ಪರಂಪರೆಯನ್ನು ಮುಂದುವರಿಸುತ್ತಿದೆ.