ಕಬ್ಬಿಗರ ಸಮಸ್ಯೆ ಪರಿಹಾರ: ಅ.26ಕ್ಕೆ ಸಿಎಂ ಸಭೆ ನಿಗದಿ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಆರಂಭಿಸಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ, ದಸರಾ ಮುಗಿಯುತ್ತಿ ದ್ದಂತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಈ ಭರವಸೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಪರಿಹಾರ ಕಂಡುಕೊಳ್ಳಲು ಸ್ವಲ್ಪ ಸಮಯ ಕೊಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ, ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಯನ್ನು ಹಿಂಪಡೆದಿದ್ದರು.
-
ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕಬ್ಬು ಬೆಳೆಗಾರ(Sugarcane Growers)ರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದಕ್ಕೆ ಹಾಗೂ ಕೇಂದ್ರ ಸರಕಾರದಿಂದ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ನೇತೃತ್ವದಲ್ಲಿ ಅ.26ರಂದು ಮಹತ್ವದ ಸಭೆ ನಿಗದಿಯಾಗಿದೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಆರಂಭಿಸಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ, ದಸರಾ ಮುಗಿಯುತ್ತಿ ದ್ದಂತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಈ ಭರವಸೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಪರಿಹಾರ ಕಂಡುಕೊಳ್ಳಲು ಸ್ವಲ್ಪ ಸಮಯ ಕೊಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ, ರೈತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಆದ್ದರಿಂದ ಇದೀಗ ಅ.26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ರೈತರು ಪಾದಯಾತ್ರೆ ಆರಂಭಿಸಿದಾಗಲೇ ಡಿ.ಕೆ.ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದು ಸಕ್ಕರೆ ಎಂಎಸ್ಪಿ ದರ ಏರಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಮನಿಸಲು ಮನವಿ ಮಾಡಿದ್ದಾರೆ. ಇದೀಗ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ, ಯಾವ ರೀತಿಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬಹುದು ಎನ್ನುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಅ.26ರಂದು ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ(Pralhad Joshi) ಅವರು ಕೂಡ ಬರಬೇಕಿತ್ತು. ಆದರೆ ಅವರು ಮೊದಲು ನೀವು ಸಭೆ ಮಾಡಿ ಎಂದಿದ್ದಾರೆ.
ಇದನ್ನೂ ಓದಿ: SAP for Sugarcane: ಕಬ್ಬಿಗೆ ರಾಜ್ಯ ಸಲಹಾ ಬೆಲೆ ಜಾರಿಗೊಳಿಸಿ; ಸಿಎಂ ಡಿಕೆಶಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ
ಇದು ಕರ್ನಾಟಕಕ್ಕೆ ಮಾತ್ರ ಸಮಸ್ಯೆ ಅಲ್ಲ. ಹಲವು ಭಾಗಗಳಲ್ಲಿ ಸಮಸ್ಯೆಯಿದೆ. ಅರಣ್ಯದ ಕುರಿತ ವಿಷಯವೂ ಇದೆ. ಮಹದಾಯಿ ಸಮಸ್ಯೆ ಇದೆ. ಗೋವಾ ಚುನಾವಣೆ ಬೇರೆ ಇದೆ. ಆಂಧ್ರದ ಜತೆ ಕೆಲ ವಿಚಾರ ಇದೆ. ಅಲ್ಲೂ ನೀರಿನ ಸಮಸ್ಯೆ ಇದೆ. ತುಂಗಭದ್ರಾದಲ್ಲೂ ನೀರು ಇಲ್ಲ. ಪ್ರಧಾನಿ, ಕೇಂದ್ರ ಗೃಹಸಚಿವರ ಜೊತೆ ಒಂದು ಸಭೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಸಭೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಜೋಶಿ ಅವರು, ರಾಜ್ಯ ಸರಕಾರದ ನೇತೃತ್ವದಲ್ಲಿ ಮೊದಲ ಸಭೆ ನಡೆಸಲು ತಿಳಿಸಿದ್ದಾರೆ. ನಾವು ಸಭೆ ನಡೆಸಿದ ಬಳಿಕ ಅವರು ಇನ್ನೊಂದು ಸುತ್ತಿನ ಸಭೆ ನಡೆಸುವು ದಾಗಿ ಭರವಸೆ ನೀಡಿದ್ದಾರೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರುವ ವಿಚಾರ ವಾಗದೇ ಇರುವುದರಿಂದ, ಈ ಕುರಿತು ಕೇಂದ್ರ ಮಟ್ಟದಲ್ಲಿ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳ ಲಾಗುವುದು ಎಂದರು.
ಹೊಸ ಮಾರ್ಗಸೂಚಿಗೆ ಸಿದ್ಧತೆ: ಈ ನಡುವೆ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಚಿಸಿದ್ದ ಜಂಟಿ ಸಮಿತಿ ಮೊದಲ ಸಭೆ ನಡೆಸಿದ್ದು, ಶೀಘ್ರವೇ ಸಕ್ಕರೆ ವಲಯದ ಹೊಸ ಮಾರ್ಗಸೂಚಿ ರೂಪಿಸಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ,.
ರಮೇಶ ಚಂದ್ರ ಅಧ್ಯಕ್ಷತೆಯ ಈ ಜಂಟಿ ಸಮಿತಿಯು ಬುಧವಾರ ತನ್ನ ಮೊದಲ ಸಭೆ ನಡೆಸಿದೆ. ರಾಜ್ಯ ಸರ್ಕಾರಗಳು, ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರು ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ಅಗತ್ಯ ಸಮಾಲೋಚನೆ ನಡೆಸಲು ನಿರ್ಧರಿಸಿದೆ. ವೈಜ್ಞಾನಿಕ ಸಲಹೆ-ಸೂಚನೆಗಳನ್ನು ಸ್ವೀಕರಿಸುವ ಜಂಟಿ ಸಮಿತಿ ಸಕ್ಕರೆ ವಲಯದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೊಸ ಮಾರ್ಗಸೂಚಿ ರೂಪಿಸುವ ಕುರಿತು ತನ್ನ ವರದಿಯಲ್ಲಿ ಉಲ್ಲೇಖಿಸುವ ನಿರೀಕ್ಷೆಯಿದೆ.
ಮೈಸೂರು ದಸರಾ ಯಶಸ್ವಿ: ಕೃತಜ್ಞತೆ ಸಲ್ಲಿಸಿದ ಸಿಎಂ: ಬುಧವಾರ ನಡೆದ ದಸರಾ ಜಂಬೂ ಸವಾರಿ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಇಡೀ ಭಾರತದ ವೈಭವವನ್ನು ಸಾರುವಂತಹ ಪಂಜಿನ ಕವಾಯತು ಹಾಗೂ ಸ್ತಬ್ಧಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಕೇರಳ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ದಸರಾಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಕ್ಕೂ ಅವರ ರಾಜ್ಯಗಳ ಕಲಾತಂಡಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಸಚಿವ ಕೆ.ಜೆ.ಜಾರ್ಜ್(K J Goerge) ಹಾಗೂ ಬಸವರಾಜ ರಾಯರಡ್ಡಿ(Basavaraja Raya Reddy) ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದ ಸಚಿವರು ಹಾಗೂ ಅಧಿಕಾರಿಗಳು ದಸರಾವನ್ನು ಯಶಸ್ವಿಗೊಳಿಸಲು ಶ್ರಮಿಸಿದ್ದಾರೆ. ರಾಯರೆಡ್ಡಿ ಅವರು ವಿದೇಶಿ ರಾಯಭಾರಿಗಳಿಗೆ ಅಚ್ಚುಕಟ್ಟಾಗಿ ಆತಿಥ್ಯ ನೀಡಿದರು. ಪರಿಷತ್ ಚುನಾವಣೆ ಇದ್ದ ಕಾರಣಕ್ಕೆ ಒಂದಷ್ಟು ಜನ ಸಚಿವರಿಗೆ ವಿನಾಯಿತಿ ನೀಡಲಾಗಿತ್ತು. ಡಿಸಿಎಂ ಪರಮೇಶ್ವರ(DCM Parameshwar) ಅವರು ತುಮಕೂರು ದಸರಾದಲ್ಲಿ ಭಾಗಿಯಾಗಿದ್ದರು. ಜಯಮಾಲಾ, ರಾಕ್ಲೈನ್ ವೆಂಕಟೇಶ್ ನೇತೃತ್ವದ ಚಲನಚಿತ್ರ ವಾಣಿಜ್ಯ ಮಂಡಳಿ ತಂಡ, ಪ್ರಸಿದ್ದ ಕ್ರೀಡಾಪಟುಗಳು, ಭಾರತೀಯ ಸೇನೆ, ವಾಯುಪಡೆ, ಎಚ್ಎಎಲ್, ಎಚ್ಎಂಟಿ ಮುಂತಾದ ಕೇಂದ್ರ ಸಂಸ್ಥೆಗಳು ತಮ್ಮ ಟ್ಯಾಬ್ಲೋಗಳ ಮೂಲಕ ಮೆರುಗು ತಂದವು. ಅವರಿಗೂ ನನ್ನ ಕೃತಜ್ಞತೆಗಳು. ಡ್ರೋನ್ ಪ್ರದರ್ಶನ ಹೊಸ ದಾಖಲೆ ಬರೆದಿದೆ ಎಂದು ಹೇಳಿದ್ದಾರೆ