ಬೆಂಗಳೂರು, ಏ. 14: ಹೂಡಿಕೆ (Investment tips) ಮಾಡುವಾಗ ಒಂದು ಕಂಪೆನಿ ಬಗ್ಗೆ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ. ಮುಖ್ಯವಾಗಿ ಅನ್ ಲಿಸ್ಟೆಡ್ (unlisted stocks) ಕಂಪೆನಿಗಳ ಷೇರು ಖರೀದಿ ವೇಳೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ಖ್ಯಾತ ಹೂಡಿಕೆ ತಜ್ಞ ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ (Founder of cautilya Capital) ಅಶೋಕ್ ದೇವನಾಂಪ್ರಿಯ. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಅನ್ ಲಿಸ್ಟೆಡ್ ಸ್ಟಾಕ್ ಬಗ್ಗೆ ತಿಳಿದುಕೊಂಡಿರಲೇಬೇಕಾದ ಮಾಹಿತಿಯನ್ನು ಹಂಚಿಕೊಂಡರು.
ಸಾಮಾನ್ಯವಾಗಿ ವ್ಯಾಪಾರವನ್ನು ಸಣ್ಣದಾಗಿ ಕುಟುಂಬ ಸದಸ್ಯರೇ ಸೇರಿಕೊಂಡು ಪ್ರಾರಂಭಿಸಲಾಗುತ್ತದೆ. ಲಾಭ ಹೆಚ್ಚಾಗುತ್ತಾ ಹೋದಂತೆ ನಿಧಾನಕ್ಕೆ ಅದು ಸ್ವಲ್ಪ ಎಲ್‌ಎಲ್‌ಬಿ ಕಂಪೆನಿಯಾಗಿ ಬಳಿಕ ಪ್ರೈವೇಟ್ ಲಿಮಿಟೆಡ್ ಹಂತಕ್ಕೆ ಏರುತ್ತದೆ. ಪ್ರೈವೇಟ್ ಲಿಮಿಟೆಡ್ ಹಂತಕ್ಕೆ ಏರಿದ ಬಳಿಕ ಅದು ಲಿಸ್ಟೆಡ್ ಕಂಪೆನಿಯಾಗಿ ಪರಿಗಣಿಸಲ್ಪಡುತ್ತದೆ ಎಂದು ಅವರು ತಿಳಿಸಿದರು.
ವಿಡಿಯೊ ಇಲ್ಲಿದೆ:
ಚಿನ್ನ ಅಥವಾ ಬೆಳ್ಳಿ ಹೂಡಿಕೆಗೆ ಯಾವುದು ಬೆಸ್ಟ್? ತಜ್ಞರು ಏನಂತಾರೆ?
ಯಾವುದೇ ಕಂಪೆನಿ ಷೇರು ಮಾರುಕಟ್ಟೆಯಲ್ಲಿ ತನ್ನ ಸ್ಟಾಕ್ ಕೊಳ್ಳಲು ಅವಕಾಶ ಕೊಟ್ಟರೆ ಅದು ಲಿಸ್ಟೆಡ್ ಕಂಪೆನಿಯಾಗಿರುತ್ತದೆ. ಕೆಲವು ಕಂಪೆನಿಗಳ ಷೇರುಗಳನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಲಭ್ಯವಿರುವುದಿಲ್ಲ. ಇವುಗಳು ಅನ್ ಲಿಸ್ಟೆಡ್ ಕಂಪೆನಿಯಾಗಿರುತ್ತದೆ ಎಂದರು.
ಮಾರುಕಟ್ಟೆಯಲ್ಲಿ ಲಿಸ್ಟ್ ಆದರೆ ಕಂಪೆನಿಗೆ ತನ್ನದೇ ಆದ ಒಂದು ಗುರುತು ಸಿಗುತ್ತದೆ. ಅದೇ ಅನ್ ಲಿಸ್ಟೆಡ್ ಕಂಪೆನಿಗಳು ಲಿಸ್ಟೆಡ್ ಆಗುವ ಹಿಂದಿನ ಹಂತದಲ್ಲಿರುತ್ತದೆ. ಯಾಕೆಂದರೆ ಇದು ಮೆಚ್ಯುರಿಟಿ ಹಂತವನ್ನು ತಲುಪಿರುವುದಿಲ್ಲ. ಕೆಲವು ಕಂಪೆನಿಗಳು ಲಿಸ್ಟಿಂಗ್‌ಗೆ ಬಂದ ಮೇಲೆ ಅದರ ಷೇರುಗಳು ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವುದಿಲ್ಲ. ಯಾಕೆಂದರೆ ಹೈ ರಿಸ್ಕ್ ಹೈ ರಿವಾರ್ಡ್ ಅದೇ ರೀತಿ ಲೋ ರಿಸ್ಕ್ ಲೋ ರಿವಾರ್ಡ್ ಎನ್ನುವುದು ಮಾರುಕಟ್ಟೆಯ ನಿಯಮವಾಗಿದೆ. ಲಿಸ್ಟೆಡ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದು ಅಪಾಯ ಕಡಿಮೆ ಮಾಡುತ್ತದೆ. ಅದೇ ಅನ್ ಲಿಸ್ಟೆಡ್ ಕಂಪೆನಿಗಳಲ್ಲಿ ಹೂಡಿಕೆ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಇದು ಕೆಲವೊಮ್ಮೆ ಹೆಚ್ಚಿನ ಲಾಭವನ್ನು ಕೂಡ ಕೊಡುತ್ತದೆ ಎಂದು ಅವರು ತಿಳಿಸಿದರು.
ಷೇರು ಮಾರುಕಟ್ಟೆಗೆ ಬರಬೇಕಾದರೆ ಅದಕ್ಕೆ ಆದ ಕೆಲವು ನಿಯಮಗಳಿವೆ. ಒಂದು ಫ್ಯಾಮಿಲಿ ನಡೆಸುವ ಕಂಪೆನಿ ಷೇರು ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಇವು ಅನ್ ಲಿಸ್ಟೆಡ್‌ನಲ್ಲಿರುತ್ತದೆ. ಇವುಗಳ ಷೇರುಗಳು ತುಂಬಾ ಡಿಸ್ಕೌಂಟ್‌ನಲ್ಲಿ ಸಿಗುತ್ತದೆ. ಆದರೆ ಇದರ ಮಾಹಿತಿ ಹೆಚ್ಚಾಗಿ ಸಿಗುವುದಿಲ್ಲ. ಹೊಸ ಹೊಸ ಕಂಪೆನಿಗಳು ಸಾಕಷ್ಟು ಬರ್ತಾನೆ ಇರುತ್ತವೆ. ಹೀಗಾಗಿ ಅನ್ ಲಿಸ್ಟೆಡ್ ಷೇರು ಕಂಪೆನಿಗಳ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಂಡು ಹೂಡಿಕೆ ಮಾಡುವುದು ಒಳ್ಳೆಯದು. ಅಲ್ಪಸ್ವಲ್ಪ ಮಾಹಿತಿ ಪಡೆದು ಹೂಡಿಕೆ ಮಾಡುವುದು ತುಂಬಾ ಅಪಾಯಕಾರಿಯಾಗಿರುತ್ತದೆ ಎಂದು ಅವರು ವಿವರಿಸಿದರು.
ವಿಜ್ಞಾನಿ ಐಸಾಕ್ ನ್ಯೂಟನ್ ಷೇರು ಮಾರುಕಟ್ಟೆಯಲ್ಲಿ ಸೋತಿದ್ದು ಯಾಕೆ?
ನಿರಂತರ ಪ್ರಾಫಿಟ್ ಇಲ್ಲದೆ ಯಾವುದೇ ಕಂಪೆನಿ ಕೂಡ ಲಿಸ್ಟ್ ಆಗೋದಿಲ್ಲ. ಹೀಗಾಗಿ ಹೂಡಿಕೆ ಮಾಡುವಾಗ ಒಟ್ಟು ಮೊತ್ತದ ಕೇವಲ ಶೇ. 10ರಷ್ಟನ್ನು ಮಾತ್ರ ಅನ್ ಲಿಸ್ಟೆಡ್‌ನಲ್ಲಿ ಹಾಕುವುದು ಒಳ್ಳೆಯದು. ಇಲ್ಲಿ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಇದನ್ನು ಎದುರಿಸಲು ಹೂಡಿಕೆದಾರರು ಕೂಡ ಸಿದ್ಧವಾಗಿರಬೇಕಾಗುತ್ತದೆ ಎಂದು ಅವರು ಹೇಳಿದರು.