ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಜ್ಞಾನಿ ಐಸಾಕ್ ನ್ಯೂಟನ್ ಷೇರು ಮಾರುಕಟ್ಟೆಯಲ್ಲಿ ಸೋತಿದ್ದು ಯಾಕೆ?

ಪ್ರತಿಯೊಂದು ವಿಚಾರದಲ್ಲಿ ಪ್ರತಿಯೊಬ್ಬರೂ ಪರ್ಫೆಕ್ಟ್ ಆಗಿರೋದಿಲ್ಲ. ಸೋಲು, ಗೆಲುವು ಅನ್ನೊದು ಪ್ರತಿಯೊಂದು ಕ್ಷೇತ್ರದಲ್ಲೂ ಇರುತ್ತದೆ. ದೊಡ್ಡ ದೊಡ್ಡ ಸಾಧನೆ ಮಾಡಿದವರು ಕೂಡ ಕೆಲವೊಮ್ಮೆ ತಪ್ಪು ಮಾಡುತ್ತಾರೆ. ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿದ ವಿಜ್ಞಾನಿ ಐಸಾಕ್ ನ್ಯೂಟನ್ ಒಮ್ಮೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೋಗಿ ಸೋತಿದ್ದಾರೆ. ಇದರ ಕಥೆ ಏನು ಗೊತ್ತೆ?

ಷೇರು ಮಾರುಕಟ್ಟೆಯಲ್ಲಿ ಸೋತ ವಿಜ್ಞಾನಿ ಯಾರು ಗೊತ್ತೆ?

ಅಶೋಕ್ ದೇವಾನಾಂಪ್ರಿಯ -

ಬೆಂಗಳೂರು, ಮಾ. 24: ಪ್ರತಿಯೊಬ್ಬರಲ್ಲೂ ತಮ್ಮದೇ ಆದ ವಿಶೇಷ ಸಾಮರ್ಥ್ಯ ಇದ್ದೇ ಇರುತ್ತದೆ. ಎಲ್ಲರೂ ಎಲ್ಲ ವಿಚಾರದಲ್ಲೂ ಪರ್ಫೆಕ್ಟ್ ಆಗಿರಬೇಕಿಲ್ಲ. ಕೆಲವೊಮ್ಮೆ ದೊಡ್ಡ ದೊಡ್ಡ ಸಾಧನೆ ಮಾಡಿದವರೂ ಕೂಡ ತಪ್ಪು ಮಾಡುತ್ತಾರೆ. ಅದಕ್ಕೆ ಸಾಕ್ಷಿ ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿದ ವಿಜ್ಞಾನಿ ಐಸಾಕ್ ನ್ಯೂಟನ್ (scientist Isaac Newton). ಆದರೆ ಇವರು ಸ್ಟಾಕ್ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡಲು ಹೋಗಿ ಅಪಾರ ನಷ್ಟ ಅನುಭವಿಸಿದ್ದರು ಎಂದು ಕೌಟಿಲ್ಯ ಕ್ಯಾಪಿಟಲ್‌ನ ಸ್ಥಾಪಕ ಅಶೋಕ್ ದೇವಾನಾಂಪ್ರಿಯ (founder of Kautilya Capital Ashok Devanampriya) ತಿಳಿಸಿದರು.

'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಶಾರುಖ್ ಕ್ರಿಕೆಟ್ ಆಡಿದರೆ ಏನಾಗುತ್ತೆ, ವಿರಾಟ್ ಕೊಹ್ಲಿ ನಟನೆ ಮಾಡಲು ಹೋದರೆ ಏನಾಗುತ್ತೆ ಎಂದು ಪ್ರಶ್ನಿಸಿದರು. ಅದೇ ರೀತಿ ವಿಜ್ಞಾನಿ ಐಸಾಕ್ ನ್ಯೂಟನ್ ತಮ್ಮ ಅರಿವಿಗೆ ಬಾರದ ಕೆಲಸ ಮಾಡಲು ಹೋಗಿ ಸೋತರು ಎಂದರು.

ವಿಡಿಯೊ ಇಲ್ಲಿದೆ ನೋಡಿ:



ಸುಮಾರು 305 ವರ್ಷಗಳ ಹಿಂದಿನ ಕಥೆಯಿದು. ಸೌತ್ ಸೀ ಬಬಲ್ ಎಂಬ ಕಂಪೆನಿಯಲ್ಲಿ ಹೂಡಿಕೆ ಮಾಡಿ ಅಪಾರ ನಷ್ಟ ಅನುಭವಿಸಿದರು. ಸೌತ್ ಸೀ ಬಬಲ್ ಕಂಪೆನಿಯು ಆಗಿನ ಕಾಲದಲ್ಲಿ ಬಹುದೊಡ್ಡ ಕಂಪೆನಿಯಾಗಿತ್ತು. ದೊಡ್ಡ ದೊಡ್ಡ ಹಡಗುಗಳ ಮೂಲಕ ಇದು ಇಂಗ್ಲೆಂಡ್‌ನಿಂದ ದಕ್ಷಿಣ ಅಮೆರಿಕ ಜತೆ ವ್ಯಾಪಾರ ನಡೆಸುತ್ತಿತ್ತು ಎಂದು ಹೇಳಿದರು.

ಎಟಿಎಂನಲ್ಲಿ ಹಣ ಬಾರದೇ ಇರುವುದಕ್ಕೆ ಸಿಕ್ಕಿತು 3.28 ಲಕ್ಷ ರೂ. ಪರಿಹಾರ

ಆ ಕಂಪೆನಿ ಚೆನ್ನಾಗಿದೆ ಎಂದುಕೊಂಡ ಐಸಾಕ್ ನ್ಯೂಟನ್ ಅದರ ಷೇರುಗಳನ್ನು ಖರೀದಿಸಿದರು. ಕೆಲವೇ ಸಮಯದಲ್ಲಿ ಹಣ ಎರಡು ಪಟ್ಟು ಹೆಚ್ಚಾಯಿತು. ತನಗೆ ಇಷ್ಟು ಸಾಕೆಂದುಕೊಂಡ ಐಸಾಕ್ ಅದನ್ನು ಮರಳಿ ಪಡೆದರು. ಆದರೆ ಅವರೊಂದಿಗೆ ಹೂಡಿಕೆ ಮಾಡಿದ್ದ ಅವರ ಸ್ನೇಹಿತರು ಹಣ ಮರಳಿ ಪಡೆಯಲಿಲ್ಲ. ಇದರಿಂದ ಅವರು ಅತ್ಯಧಿಕ ಲಾಭ ಮಾಡಿಕೊಂಡರು. ಇದನ್ನು ತಿಳಿದ ಐಸಾಕ್ ಕಂಪೆನಿಯ ಷೇರುಗಳು ಹೆಚ್ಚು ಎತ್ತರದಲ್ಲಿದ್ದಾಗ ಮತ್ತೆ ಹೂಡಿಕೆ ಮಾಡಿದರು. ಆದರೆ ಬಳಿಕ ಕಂಪೆನಿ ಭಾರಿ ನಷ್ಟ ಅನುಭವಿಸಿ ದಿವಾಳಿಯಾಯಿತು. ಇದರಿಂದ ಐಸಾಕ್ ಆಗಿನ ಕಾಲದಲ್ಲಿ ಸುಮಾರು 20 ಸಾವಿರ ಪೌಂಡು ಹಣ ಕಳೆದುಕೊಂಡರು. ಇದು ಈಗಾದರೆ ಕೋಟ್ಯಂತರ ರೂಪಾಯಿಗಳಾಗಿವೆ ಎಂದು ತಿಳಿಸಿದರು.

ಬಳಿಕ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ತಪ್ಪು ಮಾಡಿದೆ ಎನ್ನುತ್ತಿದ್ದರು. ಅವರು ಇನ್ನೊಂದು ತಪ್ಪು ಮಾಡಿದ್ದರು. ಮನೆಯಲ್ಲಿ ಸಾಕಿದ್ದ ಬೆಕ್ಕು ಮತ್ತು ಅದರ ಮರಿ ಒಳಗೆ ಹೊರಗೆ ಹೋಗಲು ಗೋಡೆಯ ಮೇಲೆ ಎರಡು ರಂಧ್ರಗಳನ್ನು ಮಾಡಿದರು. ಇದರಲ್ಲಿ ಬೆಕ್ಕುಗಳು ಒಳಗೆ ಹೊರಗೆ ಹೋಗುತ್ತಿತ್ತು. ಒಂದು ದಿನ ಮನೆಯ ಕೆಲಸದವನು ಅದನ್ನು ನೋಡಿ ಒಂದೇ ರಂಧ್ರ ಮಾಡಬಹುದಿತ್ತಲ್ಲ. ಎರಡು ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದ್ದನು. ಇದರಿಂದ ಐಸಾಕ್ ಅವರಿಗೆ ಹೌದೆನಿಸಿತು. ಆಗ ಅವರು ಕೆಲವೊಮ್ಮೆ ಬುದ್ಧಿವಂತರು ಕೂಡ ತಪ್ಪು ಮಾಡುತ್ತಾರೆ ಎಂದರು.

ಭಾರತದ ವಾರೆನ್ ಬಫೆಟ್ ರಾಕೇಶ್ ಜುಂಜುನ್ವಾಲಾ ಯಶಸ್ಸಿನ ಗುಟ್ಟೇನು?

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಗೆಲುವು ಖಚಿತ ಎಂಬ ನಂಬಿಕೆ ಬೇಡ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದ ಭಾರಿ ನಷ್ಟ ಕೂಡ ಉಂಟಾಗುತ್ತದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಮುಖ್ಯ ಎನ್ನುತ್ತಾರೆ ಅಶೋಕ್.