ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ವ್ಯಾಪಾರ ವೃತ್ತಿಪರರು ಮತ್ತು ತಂತ್ರಜ್ಞಾನ ನಾಯಕರನ್ನು ಒಂದೆಡೆ ಸೇರಿಸಲಿರುವ ಬ್ಲೂಹೋಸ್ಟ್‌ನ ಸ್ಮಾಲ್ ಬಿಸಿನೆಸ್ ಎಐ ಬಿಲ್ಡರ್ ಟೂರ್
ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ವ್ಯಾಪಾರ ವೃತ್ತಿಪರರು, ಉದ್ಯಮಿಗಳು, ಡೆವಲಪರ್‌ಗಳು, ತಂತ್ರಜ್ಞಾನ ಕ್ಷೇತ್ರದ ನಾಯಕರು ಮತ್ತು ಎಐ ಆಸಕ್ತರು ಒಂದೆಡೆ ಸೇರುವ ನಿರೀಕ್ಷೆಯಿದೆ. ವ್ಯಕ್ತಿಗಳು ಮತ್ತು ವ್ಯವಹಾರಗಳು ತಮ್ಮ ಕಲ್ಪನೆಗಳನ್ನು ಕಾರ್ಯರೂಪದ ಡಿಜಿಟಲ್ ಪರಿಹಾರಗಳಾಗಿ ಹೇಗೆ ಪರಿವರ್ತಿಸಲು ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ ಎಂಬುದನ್ನು ಅನ್ವೇಷಿಸಲು ಇದು ಉತ್ತಮ ವೇದಿಕೆಯನ್ನು ಒದಗಿಸಲಿದೆ.
-
ಬೆಂಗಳೂರು: ಕೃತಕ ಬುದ್ಧಿಮತ್ತೆಯು ವ್ಯವಹಾರಗಳು ಕಾರ್ಯನಿರ್ವಹಿಸುವ, ನಾವೀನ್ಯತೆ ಅಳವಡಿಸಿಕೊಳ್ಳುವ ಮತ್ತು ವಿಸ್ತರಿಸುವ ವಿಧಾನವನ್ನು ನಿರಂತರವಾಗಿ ಮರು ರೂಪಿಸುತ್ತಿರುವ ಈ ಸಂದರ್ಭದಲ್ಲಿ, ಪ್ರಮುಖ ವೆಬ್ ಹೋಸ್ಟಿಂಗ್ ಮತ್ತು ಡಿಜಿಟಲ್ ಪರಿಹಾರಗಳ ವೇದಿಕೆ ಬ್ಲೂಹೋಸ್ಟ್ ತನ್ನ ಜಾಗತಿಕ ಸ್ಮಾಲ್ ಬಿಸಿನೆಸ್ ಎಐ ಬಿಲ್ಡರ್ ಟೂರ್ ಕಾರ್ಯಕ್ರಮವನ್ನು ನ.24 ರಂದು ಬೆಂಗಳೂರಿಗೆ ತರುತ್ತಿದೆ.
ಈ ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ವ್ಯಾಪಾರ ವೃತ್ತಿಪರರು, ಉದ್ಯಮಿಗಳು, ಡೆವಲಪರ್‌ಗಳು, ತಂತ್ರಜ್ಞಾನ ಕ್ಷೇತ್ರದ ನಾಯಕರು ಮತ್ತು ಎಐ ಆಸಕ್ತರು ಒಂದೆಡೆ ಸೇರುವ ನಿರೀಕ್ಷೆಯಿದೆ. ವ್ಯಕ್ತಿಗಳು ಮತ್ತು ವ್ಯವಹಾರಗಳು ತಮ್ಮ ಕಲ್ಪನೆಗಳನ್ನು ಕಾರ್ಯರೂಪದ ಡಿಜಿಟಲ್ ಪರಿಹಾರಗಳಾಗಿ ಹೇಗೆ ಪರಿವರ್ತಿಸಲು ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ ಎಂಬುದನ್ನು ಅನ್ವೇಷಿಸಲು ಇದು ಉತ್ತಮ ವೇದಿಕೆಯನ್ನು ಒದಗಿಸಲಿದೆ.
ಸ್ಮಾಲ್ ಬಿಸಿನೆಸ್ ಎಐ ಬಿಲ್ಡರ್ ಟೂರ್ ವ್ಯವಹಾರಗಳಿಗೆ ಕೃತಕ ಬುದ್ಧಿಮತ್ತೆಯ ಪ್ರಾಯೋಗಿಕ ಅನ್ವಯಿಕೆಗಳನ್ನು ಪ್ರದರ್ಶಿಸುವ ಬ್ಲೂಹೋಸ್ಟ್ ನ ಜಾಗತಿಕ ಉಪಕ್ರಮದ ಒಂದು ಭಾಗವಾಗಿದೆ.
ಬ್ರೆಜಿಲ್‌ನ ಫ್ಲೋರಿಯಾನೋಪೊಲಿಸ್ ಮತ್ತು ಅಮೆರಿಕದ ಆಸ್ಟಿನ್ ನಲ್ಲಿ ನಡೆದ ಆರಂಭಿಕ ಆವೃತ್ತಿ ಗಳ ನಂತರ, ಈ ಪ್ರವಾಸವು ಈಗ ಭಾರತಕ್ಕೆ ಬರುತ್ತಿದೆ. ಇದು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಮತ್ತು ಎಐ ಅಳವಡಿಕೆ ಹಾಗೂ ನಾವೀನ್ಯತೆಯ ಪ್ರಮುಖ ಕೇಂದ್ರವಾಗಿ ದೇಶವು ಹೊರಹೊಮ್ಮುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
ಈ ಶೃಂಗಸಭೆಯಲ್ಲಿ ಉದ್ಯಮದ ಪ್ರಮುಖ ನಾಯಕರು ಮತ್ತು ತಂತ್ರಜ್ಞಾನ ತಜ್ಞರ ಗಣ್ಯ ಸಮೂಹವು ಭಾಗವಹಿಸಲಿದೆ. ಇದರಲ್ಲಿ ಬ್ಲೂಹೋಸ್ಟ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಸಲೀಂ ಅಲಿ; ಗ್ರೋತ್ ಸ್ಕೂಲ್ ಮತ್ತು ಔಟ್‌ಸ್ಕಿಲ್ ಸಂಸ್ಥಾಪಕ ವೈಭವ್ ಸಿಸಿಂಟಿ; ಎಇಒಎಸ್ ಸಂಸ್ಥಾಪಕ ಮತ್ತು ಸಿಇಒ ವರುಣ್ ಮಯ್ಯ; ಹಾಗೂ ಸ್ವಿಗ್ಗಿಯ ವಿನ್ಯಾಸ ವಿಭಾಗದ ಮುಖ್ಯಸ್ಥ ಸಪ್ತರ್ಷಿ ಪ್ರಕಾಶ್ ಅವರು ಸೇರಿದ್ದಾರೆ. ಇವರೊಂದಿಗೆ ಬ್ಲೂಹೋಸ್ಟ್ ನ ಹಿರಿಯ ತಂತ್ರಜ್ಞಾನ ನಾಯಕರಾದ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಬಿರ್ಜು ಶಾ ಮತ್ತು ಎಐ ಉತ್ಪನ್ನ ವ್ಯವಸ್ಥಾಪಕ ರಾಮ್ ಪ್ರಮೋದ್ ಕೂಡ ಪಾಲ್ಗೊಳ್ಳಲಿದ್ದಾರೆ. ಈ ಗೋಷ್ಠಿಗಳು ಎಐ-ಆಧಾರಿತ ನಾವೀನ್ಯತೆ, ಉದ್ಯಮ ಶೀಲತೆ, ಉತ್ಪನ್ನ ಅಭಿವೃದ್ಧಿ ಮತ್ತು ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಕ್ಷೇತ್ರದ ಕುರಿತು ಮಹತ್ವದ ಒಳನೋಟಗಳನ್ನು ನೀಡಲಿವೆ.
ಬೆಂಗಳೂರು ಆವೃತ್ತಿಯ ಕುರಿತು ಮಾತನಾಡಿದ ಬ್ಲೂಹೋಸ್ಟ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಸಲೀಂ ಅಲಿ, “ಭಾರತವು ಯಾವಾಗಲೂ ನಾವೀನ್ಯಕಾರರು ಮತ್ತು ಉದ್ಯಮಿಗಳ ನಾಡಾಗಿದೆ. ಜುಗಾಡ್ ನ ಚತುರತೆಯಿಂದ ಹಿಡಿದು ಸಾಫ್ಟ್‌ವೇರ್ ಮತ್ತು ಸೇವಾ ವ್ಯವಹಾರಗಳ ಉದಯದವರೆಗೆ, ಇಲ್ಲಿನ ಉದ್ಯಮಶೀಲತೆಯ ಮನೋಭಾವ ಅಸಾಧಾರಣವಾಗಿದೆ.
ಸಾಂಪ್ರದಾಯಿಕ ತಾಂತ್ರಿಕ ಸಂಕೀರ್ಣತೆ ಅಥವಾ ಸೀಮಿತ ಸಂಪನ್ಮೂಲಗಳ ಅಡೆತಡೆಯಿಲ್ಲದೆ ಸಣ್ಣ ವ್ಯವಹಾರಗಳನ್ನು ನಿರ್ಮಿಸಲು, ಪ್ರಾರಂಭಿಸಲು ಮತ್ತು ಬೆಳೆಸಲು ಅವುಗಳಿಗೆ ಶಕ್ತಿ ತುಂಬುವುದು ಹಾಗೂ ಅನಿಯಮಿ ತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ಬ್ಲೂಹೋಸ್ಟ್ ನಲ್ಲಿ ನಮ್ಮ ಧ್ಯೇಯವಾಗಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಸ್ಮಾಲ್ ಬಿಸಿನೆಸ್ ಎಐ ಬಿಲ್ಡರ್ ಟೂರ್ ಮೂಲಕ, ಎಐ ಮೂಲಕ ಏನೆಲ್ಲಾ ಸಾಧ್ಯವಿದೆ ಎಂಬುದನ್ನು ಅನ್ವೇಷಿಸಲು, ಪರಸ್ಪರ ಕಲಿಯಲು ಮತ್ತು ಕಲ್ಪನೆಗಳನ್ನು ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ನೈಜ-ಜಗತ್ತಿನ ಪರಿಹಾರಗಳಾಗಿ ಪರಿವರ್ತಿಸಲು ನಾವು ಡೆವಲಪರ್ ಗಳು, ಸಂಸ್ಥಾಪಕರು ಮತ್ತು ವ್ಯಾಪಾರ ಮಾಲೀಕರನ್ನು ಒಂದೆಡೆ ಸೇರಿಸುತ್ತಿದ್ದೇವೆ,” ಎಂದು ಹೇಳಿದರು.