ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಜ್ರಾಭರಣಗಳ ಕಲಾತ್ಮಕತೆ, ಸೊಬಗು ಮತ್ತು ನವೀನತೆಯ ಅಪೂರ್ವ ಸಂಗಮ: ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಭವ್ಯವಾದ ವಿವಾಹದ ಆಭರಣಗಳಿಂದ ಹಿಡಿದು ದೈನಂದಿನ ಬಳಕೆಗೆ ಸೂಕ್ತವಾದ ಸಮಕಾಲೀನ ವಿನ್ಯಾಸಗಳವರೆಗೆ ವೈವಿಧ್ಯಮಯ ಆಭರಣಗಳ ಸಂಗ್ರಹ ಈ ಪ್ರದರ್ಶನದಲ್ಲಿರಲಿದೆ. ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಅಭಿರುಚಿಯನ್ನು ಒಗ್ಗೂಡಿಸುವ ಈ ಸಂಗ್ರಹದ ಪ್ರತಿಯೊಂದು ಆಭರಣವೂ ಅತ್ಯುತ್ತಮ ವಿನ್ಯಾಸ ಹಾಗೂ ಸೂಕ್ಷ್ಮ ಕಲಾಕೌಶಲವನ್ನು ಪ್ರತಿಬಿಂಬಿಸುತ್ತದೆ. ಈ ವಿಶೇಷ ಸಂಗ್ರಹವು ಪ್ರದರ್ಶನದ ಅವಧಿಯಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ.

‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

-

Profile
Ashok Nayak Oct 23, 2026 9:57 AM

ಬೆಂಗಳೂರು: ಜಗತ್ತಿನ ಅಚ್ಚುಮೆಚ್ಚಿನ ಆಭರಣ ಮಳಿಗೆ ತನ್ನ ಶೋರೂಮ್‌ನಲ್ಲಿ ಅ.16ರಿಂದ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಆಯೋಜಿಸಿದೆ. ಈ ವಿಶೇಷ ಪ್ರದರ್ಶನವು ವಜ್ರಾಭರಣಗಳ ಕಲಾತ್ಮಕತೆ, ಸೊಬಗು ಮತ್ತು ನವೀನತೆಯ ಅಪೂರ್ವ ಸಂಗಮವನ್ನು ಪರಿಚಯಿಸಲಿದೆ.

ಭವ್ಯವಾದ ವಿವಾಹದ ಆಭರಣಗಳಿಂದ ಹಿಡಿದು ದೈನಂದಿನ ಬಳಕೆಗೆ ಸೂಕ್ತವಾದ ಸಮಕಾಲೀನ ವಿನ್ಯಾಸಗಳವರೆಗೆ ವೈವಿಧ್ಯಮಯ ಆಭರಣಗಳ ಸಂಗ್ರಹ ಈ ಪ್ರದರ್ಶನದಲ್ಲಿರಲಿದೆ. ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಅಭಿರುಚಿಯನ್ನು ಒಗ್ಗೂಡಿಸುವ ಈ ಸಂಗ್ರಹದ ಪ್ರತಿಯೊಂದು ಆಭರಣವೂ ಅತ್ಯುತ್ತಮ ವಿನ್ಯಾಸ ಹಾಗೂ ಸೂಕ್ಷ್ಮ ಕಲಾಕೌಶಲವನ್ನು ಪ್ರತಿಬಿಂಬಿಸುತ್ತದೆ. ಈ ವಿಶೇಷ ಸಂಗ್ರಹವು ಪ್ರದರ್ಶನದ ಅವಧಿಯಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ.

ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಜೋಯ್ ಮಾತನಾಡಿ, “ವಜ್ರಾಭರಣ ಗಳಲ್ಲಿನ ಶ್ರೇಷ್ಠತೆ, ಸೊಬಗು ಮತ್ತು ವಿಶಿಷ್ಟತೆಯನ್ನು ಪ್ರತಿಬಿಂಬಿಸುವ ವಿನ್ಯಾಸ ಗಳನ್ನು ರೂಪಿಸುವ ನಮ್ಮ ಉತ್ಸಾಹವನ್ನು ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಸಂಭ್ರಮಿಸುತ್ತದೆ. ಬೆಂಗಳೂರು ನಮಗೆ ಸದಾ ವಿಶೇಷವಾದ ನಗರವಾಗಿದೆ. ವಜ್ರಗಳ ಆಕರ್ಷಕ ಹೊಳಪು ಮತ್ತು ಸೌಂದರ್ಯವನ್ನು ಮತ್ತಷ್ಟು ಹತ್ತಿರದಿಂದ ಅನುಭವಿಸುವ ಅವಕಾಶವನ್ನು ಗ್ರಾಹಕರಿಗೆ ಒದಗಿಸುವುದರ ಜೊತೆಗೆ, ಈ ವಿಶೇಷ ಸಂಗ್ರಹವನ್ನು ಅವರ ಮುಂದಿಡಲು ನಮಗೆ ಸಂತೋಷವಾಗುತ್ತಿದೆ,” ಎಂದು ಹೇಳಿದರು.

ಪ್ರದರ್ಶನದ ಅವಧಿಯಲ್ಲಿ ₹1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯವನ್ನು ನೀಡಲಾಗುತ್ತದೆ. ಈ ಕೊಡುಗೆಯು ಗ್ರಾಹಕರ ಶಾಪಿಂಗ್ ಅನುಭವವನ್ನು ಇನ್ನಷ್ಟು ವಿಶೇಷವಾಗಿಸಲಿದೆ.

‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಶೋರೂಮ್‌ನಲ್ಲಿ ನವೆಂಬರ್ 1, 2026ರವರೆಗೆ ನಡೆಯಲಿದೆ. ಆಭರಣಪ್ರಿಯರು ಮತ್ತು ಗ್ರಾಹಕರು ಈ ಪ್ರದರ್ಶನಕ್ಕೆ ಭೇಟಿ ನೀಡಿ, ಐಷಾರಾಮಿ ವಿನ್ಯಾಸ, ವೈಯಕ್ತಿಕ ಅಭಿವ್ಯಕ್ತಿ ಮತ್ತು ಕಾಲಾತೀತ ಸೌಂದರ್ಯವನ್ನು ಪ್ರತಿಬಿಂಬಿಸುವ ವಜ್ರಾಭರಣಗಳ ವಿಶೇಷ ಜಗತ್ತನ್ನು ಅನ್ವೇಷಿಸುವಂತೆ ಶೋರೂಮ್‌ ಆಹ್ವಾನಿಸುತ್ತದೆ.