Central Government: ಏ.1ರಿಂದ ಕೇಂದ್ರ ಸರ್ಕಾರ ನಿಮ್ಮ ವಾಟ್ಸಾಪ್ ಮೆಸೇಜ್, ಇ-ಮೇಲ್ಸ್ ಚೆಕ್ ಮಾಡುತ್ತೆ! ಏನಿದು ಸ್ಟೋರಿ? ಇಲ್ಲಿದೆ ಡಿಟೇಲ್ಸ್
Central Government: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅಕ್ರಮ ಹಣ ವರ್ಗಾವಣೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಲು ಸರ್ಕಾರಕ್ಕೆ ಅನುವು ಮಾಡಿಕೊಡುವ ಈ ಮಸೂದೆ, ಕಿಡಿಗೇಡಿಗಳ ಹೆಚ್ಚಿನ ಡಿಜಿಟಲ್ ಪುರಾವೆಗಳ ಹುಡುಕಾಟಕ್ಕೆ ಸಹಾಯ ಮಾಡುತ್ತದೆ.


ನವದೆಹಲಿ: ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮುಂದಿನ ಹಣಕಾಸು ವರ್ಷ ಅಂದರೆ ಏಪ್ರಿಲ್1ರಿಂದ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇಮೇಲ್ ಗಳಂತಹ ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ(Central Government) ಮುಂದಾಗಿದೆ. ಆ ಮೂಲಕ ಏ. 1 ರಿಂದ ಕೇಂದ್ರ ಸರ್ಕಾರ ನಿಮ್ಮ ವಾಟ್ಸಾಪ್ ಸಂದೇಶಗಳು, ಇಮೇಲ್'ಗಳನ್ನು ನೋಡಲಿದೆ. ಆದಾಯ ತೆರಿಗೆ ಮಸೂದೆ, 2025 ರ ನಿಬಂಧನೆಗಳ ಅಡಿಯಲ್ಲಿ ಭಾರತದ ತೆರಿಗೆ ಅಧಿಕಾರಿಗಳು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇಮೇಲ್ ಗಳಂತಹ ನಿಮ್ಮ ಸೋಶಿಯಲ್ ಮೀಡಿಯಾದ ಖಾತೆಯನ್ನು ಸರಾಗವಾಗಿ ಪ್ರವೇಶಿಸಬಹುದು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅಕ್ರಮ ಹಣ ವರ್ಗಾವಣೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಲು ಸರ್ಕಾರಕ್ಕೆ ಅನುವು ಮಾಡಿಕೊಡುವ ಈ ಮಸೂದೆ, ಕಿಡಿಗೇಡಿಗಳ ಹೆಚ್ಚಿನ ಡಿಜಿಟಲ್ ಪುರಾವೆಗಳ ಹುಡುಕಾಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಒಬ್ಬ ವ್ಯಕ್ತಿಯ ಡಿಜಿಟಲ್ ಸ್ವತ್ತುಗಳನ್ನು ಟ್ರ್ಯಾಕ್ ಮಾಡಲು ಸಹಕಾರಿಯಾಗಿದೆ. ಅದಲ್ಲಿ ಕ್ರಿಪ್ಟೋ ಕರೆನ್ಸಿ ಕೂಡ ಸೇರಿದೆ. ಲೆಕ್ಕವಿಲ್ಲದ ಕಪ್ಪು ಹಣವನ್ನು ಹೊರತೆಗೆಯುವಲ್ಲಿ ಡಿಜಿಟಲ್ ವಿಧಿವಿಜ್ಞಾನವು ಪ್ರಮುಖ ಪಾತ್ರ ವಹಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Tax changes: ಏಪ್ರಿಲ್ 1ರಿಂದ ತೆರಿಗೆ ಬದಲಾವಣೆ ಯಾವುದು ದುಬಾರಿ-ಅಗ್ಗ? ಕಂಪ್ಲೀಟ್ ಡಿಟೇಲ್ಸ್
ತೆರಿಗೆ ಅಧಿಕಾರಿಗಳು ನೇರವಾಗಿ ಫೋನ್‌ಗೆ ಎಂಟ್ರಿ
ಮೊಬೈಲ್ ಫೋನ್‌ಗಳಲ್ಲಿ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳ ಮೂಲಕ 250 ಕೋಟಿ ರೂ.ಗಳಷ್ಟು ಅಕ್ರಮ ಹಣ ಪತ್ತೆಹಚ್ಚಲಾಗಿದೆ. ಇದನ್ನು ಪತ್ತೆ ಹಚ್ಚಲು ಸಹಾಯ ಮಾಡಿದ್ದು ವಾಟ್ಸಾಪ್ ಸಂದೇಶಗಳು. ವಾಟ್ಸಾಪ್ ಸಂವಹನದ ಮೂಲಕ ಲೆಕ್ಕವಿಲ್ಲದ 200 ಕೋಟಿ ರೂ.ಗಳನ್ನು ಪತ್ತೆಹಚ್ಚಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಣವನ್ನು ಅಡಗಿಸಿಡಲು ಆಗಾಗ್ಗೆ ಭೇಟಿ ನೀಡುವ ಸ್ಥಳಗಳನ್ನು ಗುರುತಿಸಲು ಗೂಗಲ್ ಮ್ಯಾಪ್ ಹಿಸ್ಟ್ರಿ ಸಹಾಯ ಮಾಡಿದೆ. ಬೇನಾಮಿ ಆಸ್ತಿಯ ಮಾಲೀಕತ್ವವನ್ನು ನಿರ್ಧರಿಸಲು ಇನ್ಸ್ಟಾಗ್ರಾಮ್ ಖಾತೆಗಳನ್ನು ಪರಿಶೀಲನೆ ನಡೆಸಲಾಗಿದೆ. ಹೊಸ ಮಸೂದೆಯು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇಮೇಲ್‌ಗಳಂತಹ ಡಿಜಿಟಲ್ ಸಂವಹನ ವೇದಿಕೆಗಳನ್ನು ಪ್ರವೇಶಿಸುವ ಹಕ್ಕನ್ನು ಅಧಿಕಾರಿಗಳಿಗೆ ನೀಡುತ್ತದೆ ಎಂದು ಹಣಕಾಸು ಸಚಿವರು ವಿವರಿಸಿದರು.