ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಾತುಕತೆಗೆ ಇರಾನ್ ಸಿದ್ಧವಾದರೂ ನಮಗೆ ಯುದ್ಧ ತೃಪ್ತಿ ಕೊಟ್ಟಿಲ್ಲ ಎಂದ ದೊಡ್ಡಣ್ಣ

ಕಳೆದ ಎರಡು ವಾರಗಳಿಂದ ಇರಾನ್ ಮೇಲೆ ನಿರಂತರ ಆಕ್ರಮಣ ಮಾಡುತ್ತಿರುವ ಅಮೆರಿಕಗೆ ಯುದ್ಧ ಇನ್ನೂ ತೃಪ್ತಿ ಕೊಟ್ಟಿಲ್ಲವಂತೆ. ಅದಕ್ಕಾಗಿ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಮತ್ತಷ್ಟು ದಾಳಿ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೀಗಾಗಿ ಇರಾನ್ ಈಗ ಮಾತುಕತೆಗೆ ಸಿದ್ಧವಾಗಿದ್ದರೂ ಕೂಡ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಸಂಗ್ರಹ ಚಿತ್ರ -

ವಾಷಿಂಗ್ಟನ್: ಇರಾನ್‌ನ ಖಾರ್ಗ್ ದ್ವೀಪದ (Irans Kharg Island) ಮೇಲೆ ಅಮೆರಿಕ (America) ಮತ್ತಷ್ಟು ಹೊಸ ದಾಳಿಗಳನ್ನು ನಡೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ. ಇರಾನ್ (Iran) ಈಗ ಮಾತುಕತೆಗೆ ಸಿದ್ಧವಾಗಿದ್ದರೂ ಸದ್ಯದ ನಿಯಮಗಳು ಅತೃಪ್ತಿಕರವಾಗಿದೆ. ಹೀಗಾಗಿ ನಾವು ಇರಾನ್ ವಿರುದ್ಧ ಯುದ್ಧವನ್ನು ಮುಂದುವರಿಸುತ್ತೇವೆ. ಇರಾನ್‌ನ ತೈಲ ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಮತ್ತಷ್ಟು ಮಿಲಿಟರಿ ಕ್ರಮಕೈಗೊಳ್ಳಲಿದೆ ಎಂದರು. ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಶನಿವಾರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಜಾಗತಿಕ ತೈಲ ಪೂರೈಕೆ ಸಮಸ್ಯೆ ಮುಂದುವರಿಯುವ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಡೊನಾಲ್ಡ್ ಟ್ರಂಪ್ ಅವರು, ಈಗಾಗಲೇ ನಡೆಸಿರುವ ದಾಳಿಗಳಲ್ಲಿ ಇರಾನ್ ನ ಹಲವಾರು ತೈಲ ಕೇಂದ್ರ ನಾಶವಾಗಿದೆ. ಆದರೆ ಅದು ಕೇವಲ ತಮಾಷೆಗಾಗಿ ನಡೆದಿರುವುದು. ಇನ್ನು ಕೆಲವು ಮುಂದಿನ ದಾಳಿಗಳಲ್ಲಿ ಗುರಿಯಾಗಲಿದೆ. ಇದು ನಿಜವಾದ ಸಂಘರ್ಷದ ಪರಿಣಾಮವನ್ನು ತೋರಿಸಲಿದೆ ಎಂದು ತಿಳಿಸಿದ್ದಾರೆ.

LPG vs PNG: ದೇಶದಲ್ಲಿ ಎಲ್‌ಪಿಜಿಗೆ ಕೊರತೆಯಾಗಿದ್ದರೂ ಪಿಎನ್‌ಜಿ ಪೂರೈಕೆ ಸರಾಗ; ಇದು ಸಾಧ್ಯವಾಗಿದ್ದು ಹೇಗೆ? ಏನು ಇವೆರಡರ ವ್ಯತ್ಯಾಸ?

ಅಮೆರಿಕ ನಡೆಸಿರುವ ಇತ್ತೀಚಿನ ವಾಯುದಾಳಿಯಿಂದ ಇರಾನ್‌ನ ಪ್ರಮುಖ ತೈಲ ರಫ್ತು ಟರ್ಮಿನಲ್ ಖಾರ್ಗ್ ದ್ವೀಪದ ಹೆಚ್ಚಿನ ಭಾಗವನ್ನು ಸಂಪೂರ್ಣವಾಗಿ ಕೆಡವಲಾಗಿದೆ. ಸಂಘರ್ಷವನ್ನು ಕೊನೆಗೊಳಿಸಲು ಟೆಹರಾನ್ ಸಿದ್ಧವಾಗಿದ್ದರೂ ಇರಾನ್ ವಿಧಿಸಿರುವ ಷರತ್ತುಗಳು ವಾಷಿಂಗ್ಟನ್‌ಗೆ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ನಿಯಮಗಳು ಸರಿಯಾಗಿಲ್ಲ. ಮೋಜಿಗಾಗಿ ಇನ್ನೂ ಕೆಲವು ಬಾರಿ ನಾವು ದಾಳಿ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್‌ನ ದಕ್ಷಿಣ ಕರಾವಳಿಯಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಖಾರ್ಗ್ ದ್ವೀಪವು ದೇಶದ ಕಚ್ಚಾ ತೈಲ ರಫ್ತಿನ ಸುಮಾರು ಶೇ. 90 ಅನ್ನು ನಿರ್ವಹಿಸುತ್ತದೆ. ಇದು ಹೊರ್ಮುಜ್ ಜಲಸಂಧಿಯ ಬಳಿ ಇದೆ. ಇದರ ಮೂಲಕ ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗ ಸಾಗುತ್ತದೆ. ಇಲ್ಲಿ ಕಚ್ಚಾ ತೈಲ ಪೂರೈಕೆಗೆ ಉಂಟಾಗುವ ನಿರಂತರ ಅಡಚಣೆಯು ಜಾಗತಿಕ ಇಂಧನ ಸಮಸ್ಯೆ, ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಬಹುದು.

dnsp1

ಯುಎಸ್ ಪಡೆಗಳು ಖಾರ್ಗ್ ದ್ವೀಪದಲ್ಲಿನ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಆದರೆ ಉದ್ದೇಶಪೂರ್ವಕವಾಗಿ ಪ್ರಮುಖ ತೈಲ ಸೌಲಭ್ಯಗಳನ್ನು ನಾಶಮಾಡುವುದನ್ನು ತಪ್ಪಿಸಿಟಿಟ್ಟು ಎಂದು ಶ್ವೇತಭವನ ಇತ್ತೀಚೆಗೆ ಹೇಳಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಕೆಲವು ನಿಮಿಷಗಳ ಹಿಂದೆ, ನನ್ನ ನಿರ್ದೇಶನದ ಮೇರೆಗೆ ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದನ್ನು ಕಾರ್ಯಗತಗೊಳಿಸಿತು ಮತ್ತು ಇರಾನ್‌ನ ಕಿರೀಟ ರತ್ನವಾದ ಖಾರ್ಗ್ ದ್ವೀಪದಲ್ಲಿನ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ನಾಶಮಾಡಿತು ಎಂದು ಹೇಳಿದ್ದಾರೆ.

ದ್ವೀಪದ ತೈಲ ಮೂಲಸೌಕರ್ಯವನ್ನು ಹೊಡೆಯದೆ ವಾಷಿಂಗ್ಟನ್ ಸಂಯಮವನ್ನು ತೋರಿಸಿದೆ. ಸಭ್ಯತೆಯ ಕಾರಣಗಳಿಗಾಗಿ ಇದನ್ನು ಅಳಿಸಿ ಹಾಕದಿರಲು ನಿರ್ಧರಿಸಿದೆ. ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರಕ್ಕೆ ಅಡ್ಡಿ ಮಾಡಿದರೆ ನಾವು ಈ ನಿರ್ಧಾರವನ್ನು ಬದಲಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಇರಾನ್ ಶನಿವಾರ, ಬಾಗ್ದಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಆವರಣದೊಳಗಿನ ಹೆಲಿಪ್ಯಾಡ್‌ಗೆ ಕ್ಷಿಪಣಿ ದಾಳಿ ನಡೆಸಿದೆ.ಇರಾನಿನ ಡ್ರೋನ್‌ನ ಅವಶೇಷಗಳು ಫುಜೈರಾದಲ್ಲಿನ ತೈಲ ಕೇಂದ್ರದಲ್ಲಿ ಬಿದ್ದವು. ಇರಾನ್ ದಾಳಿಯ ಪರಿಣಾಮ ಕೊಲ್ಲಿಯಲ್ಲಿ ಇಂಧನ ಮೂಲಸೌಕರ್ಯ ಮತ್ತು ಹಡಗು ಮಾರ್ಗಗಳ ಸುರಕ್ಷತೆ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.

ಇರಾನ್‌ನ ಬೆದರಿಕೆ

ಯುಎಸ್ ಮತ್ತು ಇಸ್ರೇಲ್ ದಾಳಿಯನ್ನು ಮುಂದುವರಿಸಿದರೆ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದಾಗಿ ಇರಾನ್ ಬೆದರಿಕೆ ಹಾಕಿದ್ದು, ಇದರಿಂದ ಯುಎಸ್ ಪಡೆಗಳಿಗೆ ಆತಿಥ್ಯ ವಹಿಸುವ ನೆರೆಯ ರಾಜ್ಯಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ.

ಮೋದಿಯನ್ನು ಪ್ರೀತಿಸುತ್ತೇನೆ, ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆ ಎಂದ ಡೊನಾಲ್ಡ್ ಟ್ರಂಪ್

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್‌ನ ಮಿಲಿಟರಿ ಸಾಮರ್ಥ್ಯಗಳು ಈಗಾಗಲೇ ನಾಶವಾಗಿವೆ. ಅವರು ಸುಮ್ಮನೆ ಬೆದರಿಕೆ ಹಾಕುತ್ತಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿರಿಸಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಯುದ್ಧನೌಕೆಗಳಿವೆ. ಒಂದು ವೇಳೆ ಮತ್ತೆ ಅವರು ದಾಳಿ ಮಾಡಿದರೆ ನಾವು ಇನ್ನೊಂದು ರೀತಿಯಲ್ಲಿ ಈ ಭಾಗವನ್ನು ಮುಕ್ತ ಮತ್ತು ಹೆಚ್ಚು ಸುರಕ್ಷಿತಗೊಳಿಸುತ್ತೇವೆ ಎಂದರು.

ಗಲ್ಫ್ ತೈಲವನ್ನು ಅವಲಂಬಿಸಿರುವ ರಾಷ್ಟ್ರಗಳು ಈ ಜಲಮಾರ್ಗವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುವಂತೆ ಕರೆ ನೀಡಿರುವ ಟ್ರಂಪ್, ಇದಕ್ಕಾಗಿ ನಾವು ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.