ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಐ ಕ್ರಾಂತಿಯಿಂದ ಉದ್ಯೋಗವೇ ಅನಗತ್ಯ: ಉದ್ಯಮಿ ಎಲಾನ್‌ ಮಸ್ಕ್

Elon Musk: ಪೀಪಲ್‌ ಬೈ WTF ಎಂಬ ಪಾಡ್‌ ಕಾಸ್ಟ್‌ನಲ್ಲಿ ನಿಖಿಲ್‌ ಕಾಮತ್‌ ವಿಶ್ವ ಪ್ರಸಿದ್ಧ ವ್ಯಕ್ತಿಗಳನ್ನು ಸುದೀರ್ಘ ಸಂದರ್ಶನ ನಡೆಸುತ್ತಾರೆ. ಈ ಸರಣಿಯಲ್ಲಿ ಇದೀಗ ಎಲಾನ್‌ ಮಸ್ಕ್‌ ಮಾತನಾಡಿದ್ದಾರೆ. ಈ ಪಾಡ್‌ ಕಾಸ್ಟ್‌ನಲ್ಲಿ ಎಲಾನ್‌ ಮಸ್ಕ್‌ ಹೂಡಿಕೆಯ ಫಿಲಾಸಫಿ, ಎಐ ತಂತ್ರಜ್ಞಾನದ ಮಹತ್ವ, ರೊಬಾಟಿಕ್ಸ್‌, ಭವಿಷ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚಿಸಿದ್ದಾರೆ. ಭಾರತದ ಯುವ ಉದ್ಯಮಿಗಳಿಗೆ ಸಲಹೆಯನ್ನು ಕೊಟ್ಟಿದ್ದಾರೆ.

ಭಾರತದಲ್ಲಿನ ಯುವ ಉದ್ಯಮಿಗಳಿಗೆ ಎಲಾನ್‌ ಮಸ್ಕ್‌ ಸಲಹೆ ಏನು?

ಉದ್ಯಮಿ ಎಲಾನ್‌ ಮಸ್ಕ್ -

Profile
Pushpa Kumari Dec 1, 2025 4:01 PM

ಬೆಂಗಳೂರು, ಡಿ. 1: ಜೆರೋಧಾ ಆನ್‌ಲೈನ್‌ ಬ್ರೋಕರೇಜ್‌ ಕಂಪನಿಯ ಸ್ಥಾಪಕ ನಿಖಿಲ್‌ ಕಾಮತ್‌ ವಿಶ್ವದ ಅತ್ಯಂತ ಶ್ರೀಮಂತ ಟೆಕ್‌ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಅವರ ಜತೆ ನಡೆಸಿದ ಪಾಡ್‌ ಕಾಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಟೆಸ್ಲಾ ಸ್ಥಾಪಕ ಎಲಾನ್‌ ಮಸ್ಕ್‌ ಒಂದೂವರೆ ಗಂಟೆಗಳ ಕಾಲ ನಡೆಸಿದ ಈ ಪಾಡ್‌ ಕಾಸ್ಟ್‌ ಅನ್ನು 14 ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಪೀಪಲ್‌ ಬೈ WTF ಎಂಬ ಪಾಡ್‌ ಕಾಸ್ಟ್‌ನಲ್ಲಿ ನಿಖಿಲ್‌ ಕಾಮತ್‌ ವಿಶ್ವ ಪ್ರಸಿದ್ಧ ವ್ಯಕ್ತಿಗಳನ್ನು ಸುದೀರ್ಘ ಸಂದರ್ಶನ ನಡೆಸುತ್ತಾರೆ. ಈ ಸರಣಿಯಲ್ಲಿ ಇದೀಗ ಎಲಾನ್‌ ಮಸ್ಕ್‌ ಮಾತನಾಡಿದ್ದಾರೆ. ಇದರಲ್ಲಿ WTF ಎಂದರೆ What's The Flow. ಈ ಪಾಡ್‌ ಕಾಸ್ಟ್‌ ನಲ್ಲಿ ಎಲಾನ್‌ ಮಸ್ಕ್‌ ಹೂಡಿಕೆಯ ಫಿಲಾಸಫಿ, ಎಐ ತಂತ್ರಜ್ಞಾನದ ಮಹತ್ವ, ರೊಬಾಟಿಕ್ಸ್‌, ಭವಿಷ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚಿಸಿದ್ದಾರೆ. ಭಾರತದ ಯುವ ಉದ್ಯಮಿಗಳಿಗೆ ಸಲಹೆಯನ್ನು ಕೊಟ್ಟಿದ್ದಾರೆ.

ಎಂಥಾ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆಗೆ, ದೀರ್ಘಾವಧಿಗೆ ಹೂಡಿಕೆ ಮಾಡ ಬಹುದಾದ ಕಂಪನಿಗಳಲ್ಲಿ ಇನ್ವೆಸ್ಟ್‌ ಮಾಡಬೇಕು. ಅಂಥ ಕಂಪನಿಯ ಉತ್ಪನ್ನಗಳು ಅಥವಾ ಸೇವೆಗಳು ಉತ್ತಮವಾಗಿ ಇವೆಯೇ? ಭವಿಷ್ಯದಲ್ಲಿ ಶ್ರೇಷ್ಠವಾದ ಉತ್ಪನ್ನಗಳನ್ನು ಅದು ನೀಡುವ ಸಾಧ್ಯತೆ ಇದೆಯೇ? ಎಂಬುದನ್ನು ಯೋಚಿಸಬೇಕು. ಹಾಗಿದ್ದರೆ ಆ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಬಹುದು ಎಂದು ವಿವರಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರ ಸಂದರ್ಶನ:



ಕಂಪನಿ ಎಂದರೆ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು ಸಿದ್ಧವಾಗಿ ಸೇರಿರುವ ವ್ಯಕ್ತಿಗಳ ಗುಂಪು. ಒಂದು ಒಳ್ಳೆಯ ಟೀಮ್‌ ಇದ್ದರೆ ಅದ್ಭುತ ಎನ್ನಿಸುವ ಪ್ರಾಡಕ್ಟ್‌ ಗಳನ್ನು ನೀಡಲು ಸಾಧ್ಯ ವಿದೆ. ಪ್ರತಿಭಾವಂತ ಮತ್ತು ಕಠಿಣ ಪರಿಶ್ರಮ ಪಡುವ ಟೀಮ್‌ ಇದ್ದಾಗ ಅತ್ಯುತ್ತಮ ಪ್ರಾಡಕ್ಟ್‌ ಹೊರಬರುತ್ತದೆ. ಅಂಥ ಟೀಮ್‌ ಕಂಪನಿಗಳಲ್ಲಿ ಇದ್ದರೆ, ಹೂಡಿಕೆ ಮಾಡಬಹುದು.

ಎಲಾನ್‌ ಮಸ್ಕ್‌ ತಮ್ಮದಲ್ಲದ ಬೇರೆ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡುವುದಿದ್ದರೆ, ಯಾವ ಕಂಪನಿಯನ್ನು ಆಯ್ಕೆ ಮಾಡುತ್ತಾರೆ? ಈ ಪ್ರಶ್ನೆಗೆ ಉತ್ತರಿಸಿದ ಮಸ್ಕ್‌, ನಾನು ನಿಜಕ್ಕೂ ಷೇರುಗಳನ್ನು ಖರೀದಿಸುವುದಿಲ್ಲ, ನಾನೊಬ್ಬ ಹೂಡಿಕೆದಾರ ಅಲ್ಲ, ನಾನು ಹೂಡಿಕೆಗೋಸ್ಕರ ಯಾವ ಷೇರುಗಳನ್ನೂ ನೋಡುವುದಿಲ್ಲ. ಬದಲಿಗೆ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಸೃಷ್ಟಿ ಸುತ್ತೇನೆ. ಅದೇ ನನ್ನ ಆದ್ಯತೆ. ನಂತರ ನಾನು ನಿರ್ಮಿಸುವ ಕಂಪನಿಯ ಷೇರುಗಳು ಉಂಟಾಗುತ್ತವೆ. ಆದರೆ ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ಹೀಗಿದ್ದರೂ, ವಿಶಾಲಾರ್ಥದಲ್ಲಿ ಹೇಳುವುದಿದ್ದರೆ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ರೊಬಾಟಿಕ್ಸ್‌ ಮಹತ್ವ ಪಡೆಯಲಿದೆ. ಗೂಗಲ್‌, ಎನ್‌ ವಿಡಿಯಾ ಎಐ ನಿಟ್ಟಿನಲ್ಲಿ ಗಣನೀಯ ಗ್ರೌಂಡ್‌ ವರ್ಕ್‌ ಮಾಡಿವೆ. ಭವಿಷ್ಯದ ದಿನಗಳಲ್ಲಿ ಎಐ ಮತ್ತು ರೊಬಾಟಿಕ್ಸ್‌ ತಂತ್ರಜ್ಞಾನ ಅತ್ಯಂತ ಮಹತ್ವದ್ದಾಗಲಿದೆ.

ಕೇವಲ ಕಾಲೇಜು ಡಿಗ್ರಿಗಳಿಗೆ ಬೆಲೆ ಇಲ್ಲ: ಎಲಾನ್‌ ಮಸ್ಕ್

ನಿಖಿಲ್‌ ಕಾಮತ್‌ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ, ನಿಮಗೆ 25 ವರ್ಷವಾಗಿದ್ದು, ಈಗಲೂ ಎಂಬಿಎ ಮಾಡುತ್ತಿದ್ದರೆ ಮೂರ್ಖರು ಎನ್ನಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಾಲೇಜುಗಳ ಡಿಗ್ರಿ ಪಡೆಯುವುದರ ಬಗ್ಗೆ ಮಸ್ಕ್‌ ಬಳಿ ಕೇಳಿದಾಗ, ಸಾಮಾಜಿಕ ಕಾರಣಕ್ಕೋಸ್ಕರ ಕಾಲೇಜಿಗೆ ಹೋಗುವುದಿದ್ದರೆ ಹೋಗಿ. ನಿಮ್ಮದೇ ವಯಸ್ಸಿನವರು ಕಾಲೇಜಿಗೆ ಹೋಗುತ್ತಿರುವಾಗ, ಕಲಿಕೆಯ ವಾತಾವರಣದಲ್ಲಿರುವಾಗ ನೀವೂ ಹೋಗಿ. ಆದರೆ ಅಲ್ಲಿ ಕಲಿಯುವಂಥದ್ದು ಭವಿಷ್ಯ ದಲ್ಲಿ ಬದುಕಿಗೆ ಅಗತ್ಯವಾಗಲಿದೆಯೇ? ಎಂಬ ಪ್ರಶ್ನೆಗೆ ಬಹುಶಃ ಇಲ್ಲ ಎಂಬುದೇ ಉತ್ತರವಾಗಿದೆ.

ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್, ಪೀಟರ್ ಹೊವಿಟ್‌ಗೆ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ

ಭವಿಷ್ಯದಲ್ಲಿ ಕೆಲಸ ಎನ್ನುವುದು ಆಯ್ಕೆಯಾಗಲಿದೆ

ಎಐ, ರೊಬಾಟಿಕ್ಸ್‌ ಬೆಳವಣಿಗೆಯ ಪರಿಣಾಮವಾಗಿ ನಾವು ಪೋಸ್ಟ್-ವರ್ಕ್‌ ಸೊಸೈಟಿಗೆ ಹೋಗು ತ್ತಿದ್ದೇವೆ. ಮುಂದಿನ 20 ವರ್ಷಗಳಲ್ಲಿ ಸಾಂಪ್ರದಾಯಿಕ ಕೆಲಸಗಳು ಅವರವರ ಐಚ್ಛಿಕವಾಗಿರುತ್ತವೆ. ಉದ್ಯೋಗ ಎನ್ನುವುದು ಜನರ ಹವ್ಯಾಸವಾಗಲಿದೆ. ಬೇಕಿದ್ದರೆ ಹೋಗಬಹುದು, ಇಲ್ಲವಾದರೆ ಬೇಡ ಎಂಬ ಅನುಕೂಲ ಆಗಲಿದೆ. ಎಐ ಅಷ್ಟೊಂದು ಮುಂದುವರಿಯಲಿದ್ದು, ಅದೇ ಎಲ್ಲ ಕೆಲಸ ಗಳನ್ನೂ ಮಾಡಿಕೊಡಲಿದೆ. ಜನರಿಗೆ ಬೇಕಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಎಐ ಮತ್ತು ರೊಬಾಟಿಕ್ಸ್‌ಗಳು ನೀಡಲಿವೆ. ಆದ್ದರಿಂದ ಕಲೆ-ವಿಜ್ಞಾನ ಇತ್ಯಾದಿ ನಿಮ್ಮ ಆಸಕ್ತಿಯ ವಿಷಯಗಳನ್ನು ಕಲಿಯಲು ಪದವಿ ಓದಬಹುದು ಎನ್ನುತ್ತಾರೆ ಮಸ್ಕ್. ಏನಿದು ಪೋಸ್ಟ್‌ ವರ್ಕ್‌ ಸೊಸೈಟಿ? ಅಂದರೆ ಆಟೊಮೇಶನ್‌ ಮತ್ತು ಎಐ ಪರಿಣಾಮ ಕೆಲಸ ಮಾಡಲು ಮನುಷ್ಯರ ಅಗತ್ಯ ಅತ್ಯಂತ ಕಡಿಮೆಯಾಗುವುದು. ಸಾಂಪ್ರದಾಯಿಕ ಉದ್ಯೋಗಗಳು ಬೇಕಾಗುವುದಿಲ್ಲ. ಆದ್ದರಿಂದ ಜನ ಅದೇ ಸಮಯವನ್ನು ಬೇರೆ ಚಟುವಟಿಕೆಗಳಿಗೆ ಬಳಸಬಹುದು. ಅಗತ್ಯಗಳಿಗೆ ಕೆಲಸ ಮಾಡುವುದರ ಬದಲಿಗೆ ಹೆಚ್ಚು ಸೃಜನಶೀಲ ಕೆಲಸಗಳಿಗೆ ಸಮಯ ಸಿಗಲಿದೆ ಎಂಬ ಭವಿಷ್ಯದ ಜೀವನಶೈಲಿಯ ವಿಚಾರವಿದು.ನೀವು ಕಾಲೇಜಿಗೆ ಹೋಗುವುದಿದ್ದರೆ ಹಲವಾರು ಕೋರ್ಸ್‌ ಗಳನ್ನು ಕಲಿಯಿರಿ. ಎಷ್ಟು ಕಲಿತರೂ ಕಡಿಮೆ. ಆದರೆ ಎಐ ಮತ್ತು ರೊಬಾಟಿಕ್ಸ್‌ ಸುನಾಮಿಯಂತೆ ಆವರಿಸಿಕೊಳ್ಳಲಿದೆ.

ಭಾರತದಲ್ಲಿನ ಯುವ ಉದ್ಯಮಿಗಳಿಗೆ ಎಲಾನ್‌ ಮಸ್ಕ್‌ ಸಲಹೆ

ಸಮಾಜದಿಂದ ನೀವು ಪಡೆಯುವುದಕ್ಕಿಂತ ಹೆಚ್ಚಿನ ಉಪಯುಕ್ತವಾದ ಉತ್ಪನ್ನಗಳು, ಸೇವೆಯನ್ನು ಸೃಷ್ಟಿಸಿ ಕೊಡಿ. ಅದರಿಂದ ಸಮಾಜಕ್ಕೂ ಒಳಿತಾಗುತ್ತದೆ, ಉದ್ಯಮಿಯಾಗಿ ನೀವು ಕೂಡ ಬೆಳೆಯುತ್ತೀರಿ. ಸಹಜವಾಗಿ ಹಣ ಕೂಡ ಆಗ ನಿಮಗೆ ಸಿಗುತ್ತದೆ. ನೇರವಾಗಿ ಹಣ ಗಳಿಕೆಯನ್ನೇ ಆಲೋಚಿಸದಿರಿ. ಕಂಪನಿಯ ಯಶಸ್ಸಿನ ಹಾದಿಯಲ್ಲಿ ಕೆಲವೊಮ್ಮೆ ವೈಫಲ್ಯಗಳೂ ಎದುರಾಗುತ್ತವೆ. ಆದರೆ ಇನ್‌ಪುಟ್‌ಗಿಂತ ಔಟ್‌ಪುಟ್‌ ಹೆಚ್ಚು ಮೌಲ್ಯದ್ದಾಗಿರಬೇಕು. ಅದು ನಿರ್ಣಾಯಕವಾಗುತ್ತದೆ. ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನದ್ದನ್ನು ಕೊಡಿ ಎನ್ನುತ್ತಾರೆ ಎಲಾನ್‌ ಮಸ್ಕ್.‌