ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಮಾರ್ಗದಲ್ಲಿ ಆತಂಕವಿದ್ದರೂ ಭಾರತಕ್ಕೆ ರಸಗೊಬ್ಬರ ಪೂರೈಕೆ ನಿರಾತಂಕ

ಹೊರ್ಮುಜ್ ಜಲ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿ ಇದ್ದರೂ ಭಾರತಕ್ಕೆ ರಸಗೊಬ್ಬರ ಪೂರೈಕೆ ಖಚಿತವಾಗಿದೆ. ಹೀಗಾಗಿ ಹಿಂಗಾರು ಬೆಳೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸರಕುಗಳು ಭಾರತೀಯ ಬಂದರುಗಳನ್ನು ತಲುಪುವ ನಿರೀಕ್ಷೆ ಇದೆ ಎನ್ನಲಾಗಿದೆ.

ನವದೆಹಲಿ: ಅಮೆರಿಕ (america) ಮತ್ತು ಇರಾನ್ ನಡುವಿನ ಸಂಘರ್ಷದ ಕಾರಣದಿಂದ ಹೊರ್ಮುಜ್ ಜಲ ಮಾರ್ಗದಲ್ಲಿ (Strait of Hormuz) ಹಡಗುಗಳ ಸಂಚಾರಕ್ಕೆ ಅಡ್ಡಿ ಇದ್ದರೂ ಕೂಡ ಭಾರತಕ್ಕೆ ಹಿಂಗಾರು ಬೆಳೆಗೆ (Rabi season) ಬೇಕಾದ ರಸಗೊಬ್ಬರಗಳ (Fertilizer supply) ಪೂರೈಕೆಯಾಗಲಿದೆ. ಗರಿಷ್ಠ ಬೇಡಿಕೆ ಆರಂಭಕ್ಕೂ ಮುನ್ನವೇ ಸರಕುಗಳು ಭಾರತೀಯ ಬಂದರು ತಲುಪಲಿದೆ. ರಸಗೊಬ್ಬರ ಕಂಪೆನಿಗಳು ಈಗಾಗಲೇ ಭಾರತಕ್ಕೆ ಕಳುಹಿಸಬೇಕಾದ ರಸಗೊಬ್ಬರಗಳನ್ನು ಕಳುಹಿಸಿಕೊಡುವ ಸಿದ್ಧತೆಯಲ್ಲಿದೆ ಎನ್ನಲಾಗಿದೆ. ಇದು ಸೆಪ್ಟೆಂಬರ್- ಅಕ್ಟೋಬರ್‌ ವೇಳೆಗೆ ಭಾರತೀಯ ಬಂದರುಗಳನ್ನು ತಲುಪಲಿದೆ.

ಹೊರ್ಮುಜ್ ಜಲಮಾರ್ಗದಲ್ಲಿ ನಿರಂತರ ಅಡ್ಡಿಯಿದ್ದರೂ ಹಿಂಗಾರು ಋತು ಆರಂಭಕ್ಕೂ ಮೊದಲೇ ಭಾರತಕ್ಕೆ ರಸಗೊಬ್ಬರ ಸರಬರಾಜು ಆಗಲಿದೆ. ಯೂರಿಯಾ ಆಮದು ಟೆಂಡರ್ ಅಗತ್ಯಕ್ಕಿಂತ ಹೆಚ್ಚಿನ ಬಿಡ್‌ಗಳನ್ನು ಆಕರ್ಷಿಸಿದ್ದು, ಇದು ಚಳಿಗಾಲದ ಬಿತ್ತನೆ ಋತುವಿಗೆ ಮುಂಚಿತವಾಗಿ ದೇಶದ ಬಂದರು ತಲುಪಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

Shahapur Accident: ಶಹಾಪುರದಲ್ಲಿ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ; ಮೂವರು ಕೂಲಿ ಕಾರ್ಮಿಕರ ದುರ್ಮರಣ

ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ಲಿಮಿಟೆಡ್ 1.7 ಮಿಲಿಯನ್ ಟನ್ ಬೃಹತ್ ಯೂರಿಯಾವನ್ನು ಆಮದು ಮಾಡಿಕೊಳ್ಳಲು ಜುಲೈ 29 ರಂದು ಟೆಂಡರ್ ಕರೆದಿತ್ತು. ಪಶ್ಚಿಮ ಕರಾವಳಿ ಭಾಗದ ದೇಶಗಳಿಂದ 1 ಮಿಲಿಯನ್ ಟನ್ ಮತ್ತು ಪೂರ್ವ ಕರಾವಳಿ ಭಾಗದ ದೇಶಗಳಿಂದ 0.7 ಮಿಲಿಯನ್ ಟನ್ ಪೂರೈಕೆಯಾಗಲಿದೆ.

ಆಗಸ್ಟ್ 11ರಂದು ಇದರ ಬಿಡ್ಡಿಂಗ್ ಮುಕ್ತಾಯವಾಗಿದ್ದು, ಸೆಪ್ಟೆಂಬರ್ ವೇಳೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ದೇಶವನ್ನು ತಲುಪಲಿದೆ ಎಂದು ಎಸ್ ಆಂಡ್ ಪಿ ಗ್ಲೋಬಲ್ ಕಮಾಡಿಟಿ ಇನ್‌ಸೈಟ್ಸ್‌ನ ಕೃಷಿ ವ್ಯವಹಾರ ಸಲಹಾ ವಿಭಾಗದ ಅಸೋಸಿಯೇಟ್ ನಿರ್ದೇಶಕಿ ಸ್ವಾತಿ ಮಾಥುರ್ ತಿಳಿಸಿದ್ದಾರೆ.

ದೇಶಕ್ಕೆ ವಾರ್ಷಿಕವಾಗಿ ಸುಮಾರು 39 ಮಿಲಿಯನ್ ಟನ್ ಯೂರಿಯಾ ಅಗತ್ಯವಿರುತ್ತದೆ. ದೇಶದಲ್ಲಿ ಇದರ ಸುಮಾರು ನಾಲ್ಕನೇ ಮೂರು ಭಾಗದಷ್ಟು ಮಾತ್ರ ಉತ್ಪಾದಿಸಲಾಗುತ್ತದೆ. ಉಳಿದ 8 ಮಿಲಿಯನ್ ಟನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಪೂರೈಕೆ ಬಗ್ಗೆ ಆತಂಕವಿತ್ತು. ಯಾಕೆಂದರೆ ದೇಶಕ್ಕೆ ಪೂರೈಕೆಯಾಗುವ ಶೇಕಡಾ 70ರಷ್ಟು ಯೂರಿಯಾ ಹೊರ್ಮುಜ್ ಜಲ ಮಾರ್ಗದ ಮೂಲಕವೇ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ಸಂಪ್ರದಾಯವನ್ನು ಮುರಿದು ಗಲ್ಫ್ ದೇಶಗಳನ್ನು ಹೊರತುಪಡಿಸಿ ಬೇರೆ ದೇಶಗಳಿಂದ ಯೂರಿಯಾ ಆಮದಿಗೆ ಮುಂದಾಗಿತ್ತು.ಇದರಿಂದಾಗಿ ಈ ವರ್ಷ ಭಾರತವು 5 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಯೂರಿಯಾವನ್ನು ಬೇರೆ ಕಡೆಗಳಿಂದ ಆಮದು ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದೆ.

ಮಾನ್ವಿ: 360 ಪುರಾತನ ತಾಮದ ನಾಣ್ಯಗಳು ಪತ್ತೆ

ಇದರಿಂದ ಒಂದು ಪ್ರದೇಶದ ಮೇಲಿನ ಅವಲಂಬನೆ ಭಾರತಕ್ಕೆ ಕಡಿಮೆಯಾಗಲಿದೆ. ಅಲ್ಲದೆ ರಸಗೊಬ್ಬರ ಇಲಾಖೆಯು ಖರೀದಿ ಪ್ರಯತ್ನಗಳನ್ನುಇನ್ನಷ್ಟು ವಿಸ್ತರಿಸಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author