ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಾನ್ವಿ: 360 ಪುರಾತನ ತಾಮದ ನಾಣ್ಯಗಳು ಪತ್ತೆ

ನಾಣ್ಯಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಅವುಗಳ ಮೇಲೆ ಉರ್ದು ಭಾಷೆಯ ಲಿಪಿಯ ಬರಹ ಗಳಿವೆ. ಹಿಂದೆ ಈ ಭಾಗದಲ್ಲಿ ಆಡಳಿತ ನಡೆಸಿದವರ ಕಾಲಮಾನದಲ್ಲಿ ಚಲಾವಣೆಯಲ್ಲಿದ್ದ ನಾಣ್ಯ ಗಳಾಗಿರಬಹುದು ಎಂದು ಶಂಕಿಸಲಾಗಿದೆ. ಅವುಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆಗೆ ಕಳುಹಿಸಿ ಕೋಡಲಾಗುವುದು

ಮಾನ್ವಿ: 360 ಪುರಾತನ ತಾಮದ ನಾಣ್ಯಗಳು ಪತ್ತೆ

-

Profile
Ashok Nayak Aug 23, 2026 10:27 AM

ಮಾನ್ವಿ: ಪಟ್ಟಣದ ಕಿಲ್ಲಾ ಪ್ರದೇಶದಲ್ಲಿರುವ ಮನೆಯೊಂದರ ಅಡಿಪಾಯ ಅಗಿಯುವಾಗ ಮನೆ ಯವರಿಗೆ ಪುರಾತನವಾದ 360 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ವಿಷಯ ತಿಳಿದು ತಹಶೀಲ್ದಾರ್ ಭೀಮರಾಯ ಬಿ. ರಾಮ ಸಮುದ್ರ ಅವರು, ಸ್ಥಳಕ್ಕೆ ಭೇಟಿ ನೀಡಿ ಮನೆಯ ಮಾಲೀಕರಿಂದ ನಾಣ್ಯಗಳನ್ನು ವಶಕ್ಕೆ ಪಡೆದರು.

ಇದನ್ನೂ ಓದಿ: Raichur News: ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್; ಬಾಲ್ಯ ವಿವಾಹ ಆರೋಪ, ತಾತಪ್ಪಗೆ ಸಂಕಷ್ಟ!

ನಂತರ ಮಾತನಾಡಿದ ಅವರು, ಪಟ್ಟಣದಲ್ಲಿ ಕಿಲ್ಲಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ 360 ತಾಮ್ರದ ನಾಣ್ಯಗಳು ದೊರೆ ತಿದ್ದು, ಅವುಗಳನ್ನು ವಶಕ್ಕೆ ಪಡೆದು ಪೊಲೀಸ್ ಇಲಾಖೆಯ ವಶಕ್ಕೆ ನೀಡಲಾಗಿದೆ.

ನಾಣ್ಯಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಅವುಗಳ ಮೇಲೆ ಉರ್ದು ಭಾಷೆಯ ಲಿಪಿಯ ಬರಹಗಳಿವೆ. ಹಿಂದೆ ಈ ಭಾಗದಲ್ಲಿ ಆಡಳಿತ ನಡೆಸಿದವರ ಕಾಲಮಾನದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಾಗಿರ ಬಹುದು ಎಂದು ಶಂಕಿಸಲಾಗಿದೆ. ಅವುಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆಗೆ ಕಳುಹಿಸಿ ಕೋಡಲಾಗುವುದು ಎಂದು ತಿಳಿಸಿದರು.