ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

ಉದ್ಯಮಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಈಗ ಗೌತಮ್ ಅದಾನಿ ಗುರುತಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪ್ರಕಟಿಸಿರುವ ಸೂಚ್ಯಂಕದಲ್ಲಿ ಗೌತಮ್ ಅದಾನಿ ಅವರು 92.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿದ್ದಾರೆ. ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯ 90.8 ಬಿಲಿಯನ್ ಡಾಲರ್ ಆಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರನ್ನು ಹಿಂದಿಕ್ಕಿ ಗೌತಮ್ ಅದನಿಯವರು (Gautam Adani) ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ (Asia's richest man) ಗುರುತಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪ್ರಕಟಿಸಿರುವ ಸೂಚ್ಯಂಕದ (Bloomberg Billionaires Index) ಪ್ರಕಾರ ಗೌತಮ್ ಅದಾನಿ ಅವರು 92.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದರೆ ಮುಖೇಶ್ ಅಂಬಾನಿ 90.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಬಂದರು, ಶಕ್ತಿ ಸಮೂಹದ ಷೇರುಗಳು ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.

ಅದಾನಿ ಗ್ರೂಪ್ ನ ಸ್ಥಾಪಕ ಗೌತಮ್ ಅದಾನಿ ಅವರು ಭಾರತದ ಅತಿದೊಡ್ಡ ಖಾಸಗಿ ಬಂದರು, ದೇಶದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ಮತ್ತು ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಾಗಿದ್ದಾರೆ. ಇವರು ವಿಶ್ವದ ಅತಿದೊಡ್ಡ ಕಲ್ಲಿದ್ದಲು ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದಾರೆ. ಬ್ಲೂಮ್‌ಬರ್ಗ್ ಪ್ರಕಟಿಸಿರುವ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ವಿಶ್ವದ 500 ಶ್ರೀಮಂತ ವ್ಯಕ್ತಿಗಳಲ್ಲಿ ಗೌತಮ್ ಅದಾನಿ 19ನೇ ಸ್ಥಾನದಲ್ಲಿದ್ದಾರೆ.

ಗೌತಮ್ ಅದನಿಯವರ ಸಂಪತ್ತು ಹೆಚ್ಚಾಗಿ ಷೇರುಗಳಿಂದ ಬಂದಿದೆ. ಅದಾನಿ ಗ್ರೂಪ್ ಷೇರುಗಳಲ್ಲಿ ಇತ್ತೀಚೆಗೆ ಏರಿಕೆಯಾಗಿರುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಇನ್ನು ಇಂಧನ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರ ಉದ್ಯಮದಾರರಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್‌ ನ ಮುಖೇಶ್ ಅಂಬಾನಿ ಸಂಪತ್ತು ಸಾಧಾರಣ ಲಾಭವನ್ನು ಗಳಿಸಿದೆ.

ಎಂದಿನಂತೆ ಸ್ಪೇಸ್‌ಎಕ್ಸ್‌ನ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರು ಬಿಲಿಯನೇರ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯ 656 ಬಿಲಿಯನ್ ಡಾಲರ್. ಅವರ ಬಳಿಕ ಸ್ಥಾನ ಪಡೆದಿರುವ ಗೂಗಲ್‌ನ ಹೋಲ್ಡಿಂಗ್ ಕಂಪನಿಯಾದ ಆಲ್ಫಾಬೆಟ್‌ನ ಸಹ-ಸಂಸ್ಥಾಪಕರಾಗಿರುವ ಲ್ಯಾರಿ ಪೇಜ್‌ ಅವರ 286 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ 269 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಅದಾನಿ, ಅಂಬಾನಿ ಪೈಪೋಟಿ

ವಿಶ್ವದ ಬಿಲಿಯನೇರ್ಸ್ ಗಳ ಟಾಪ್ 50ರಲ್ಲಿ ಭಾರತದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಮಾತ್ರ ಸ್ಥಾನ ಪಡೆದಿದ್ದಾರೆ. 2022ರಲ್ಲಿ ಗೌತಮ್ ಅದಾನಿ ಅಗ್ರ ಸ್ಥಾನಕ್ಕೆ ಏರಿದರು. ಅದಕ್ಕೂ ಮೊದಲು ಒಂದು ದಶಕಕ್ಕೂ ಹೆಚ್ಚು ಕಾಲ ಮುಖೇಶ್ ಅಂಬಾನಿಯವರೇ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು.

"ಆಪರೇಷನ್ ಸಿಂದೂರ್‌, ಬಾಲಾಕೋಟ್‌ ದಾಳಿಯ ಮಾಂತ್ರಿಕ"; ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ಕಿಡಿ

ಬಳಿಕ ಪ್ರಕಟವಾದ ಹಿಂಡೆನ್‌ಬರ್ಗ್ ವರದಿಯ ಕಾರಣದಿಂದ ಅದಾನಿ ಗುಂಪಿನ ಷೇರುಗಳ ಮೌಲ್ಯ ಕುಸಿತವಾಗಿ ಅಂಬಾನಿ ಮತ್ತೆ ಮೊದಲ ಸ್ಥಾನಕ್ಕೆ ಏರಿದರು. ಇದಾದ ಬಳಿಕ 2024ರಲ್ಲಿ ಮತ್ತೆ ಅದಾನಿಯವರು ಅಂಬಾನಿಯವರನ್ನು ಹಿಂದಿಕ್ಕಿದರು. 2025ರಲ್ಲಿ ಅಂಬಾನಿ ಮತ್ತೆ ಮೊದಲ ಸ್ಥಾನ ಪಡೆದಿದ್ದು, ಇದೀಗ ಮತ್ತೆ ಅದಾನಿ ಅಗ್ರ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author