ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World’s Richest Families: ವಿಶ್ವದ ಶ್ರೀಮಂತ ಕುಟುಂಬಗಳ ಪೈಕಿ ಒಂದೇ ಒಂದು ಭಾರತೀಯ ಕುಟುಂಬಕ್ಕೆ ಸ್ಥಾನ!

ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಬ್ಲೂಮ್ ಬರ್ಗ್ ನ 2025ರ ವಿಶ್ವದ 25 ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಕುಟುಂಬ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಾಹಿತಿಗಳ ಪ್ರಕಾರ ಅಂಬಾನಿ ಕುಟುಂಬದ ಅಂದಾಜು ಆಸ್ತಿ ಮೌಲ್ಯ, 105.06 ಬಿಲಿಯನ್ ಡಾಲರ್ ಗಳಿಷ್ಟಿದ್ದು, ವಿಶ್ವದ ಪ್ರತಿಷ್ಠಿತ ಉದ್ಯಮಿ ಕುಟುಂಬಗಳ ಸಾಲಿನಲ್ಲಿ ಗುರುತಿಸಲ್ಪಟ್ಟಿದೆ. ಎಂಬುದರ ಬಗ್ಗೆ ತಿಳಿಯೋಣ.

ಇಲ್ಲಿದೆ ವಿಶ್ವದ ಟಾಪ್ ರಿಚ್ಚೆಸ್ಟ್ ಕುಟುಂಬಗಳ ಮಾಹಿತಿ

ಅಂಬಾನಿ -

Profile
Sushmitha Jain Dec 17, 2025 11:30 PM

ಬೆಂಗಳೂರು: ವಿಶ್ವದ ಅತೀ ಶ್ರೀಮಂತ( World’s Richest Families) ಕುಟುಂಬಗಳ ಪಟ್ಟಿ ಹೊರಬಿದ್ದಿದ್ದು, ಈ ಕುಬೇರರ ಲಿಸ್ಟ್ ನಲ್ಲಿ ಒಂದೇ ಒಂದು ಭಾರತೀಯ ಕುಟುಂಬ(Indian family) ಸ್ಥಾನ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಆ ಕುಟುಂಬ ಯಾವುದೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ನ(Reliance Industries)
ಅಧ್ಯಕ್ಷರಾಗಿರುವ ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಅವರ ಕುಟುಂಬ(Ambani)
ಬ್ಲೂಮ್ ಬರ್ಗ್ ನ 2025ರ ವಿಶ್ವದ 25 ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಕುಟುಂಬ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಾಹಿತಿಗಳ ಪ್ರಕಾರ ಅಂಬಾನಿ ಕುಟುಂಬದ ಅಂದಾಜು ಆಸ್ತಿ ಮೌಲ್ಯ, 105.06 ಬಿಲಿಯನ್ ಡಾಲರ್ ಗಳಿಷ್ಟಿದ್ದು, ವಿಶ್ವದ ಪ್ರತಿಷ್ಠಿತ ಉದ್ಯಮಿ ಕುಟುಂಬಗಳ ಸಾಲಿನಲ್ಲಿ ಗುರುತಿಸಲ್ಪಟ್ಟಿದೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವ್ಯವಹಾರ ವ್ಯಾಪ್ತಿಯನ್ನು, ಎನರ್ಜಿ, ಪೆಟ್ರೋಕೆಮಿಕಲ್ಸ್ ಮತ್ತು ಟೆಲಿಕಮ್ಯುನಿಕೇಶನ್ ವಲಯದಲ್ಲಿ ವಿಸ್ತರಿಸಿಕೊಂಡಿದೆ. ಇಷ್ಟು ಮಾತ್ರವಲ್ಲದೇ ಡಿಜಿಟಲ್ ಸೇವೆಗಳಲ್ಲಿ ಮತ್ತು ಸ್ಥಿರ-ಗೋಚರ ವ್ಯವಹಾರಗಳಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಛಾಪನ್ನು ಮೂಡಿಸುತ್ತಿದೆ.

ಧೀರೂಬಾಯ್ ಅಂಬಾನಿಯವರು ರಿಲಯನ್ಸ್ ಉದ್ಯಮವನ್ನು 1950ರಲ್ಲಿ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ಭಾರತೀಯ ಉದ್ಯಮ ವಲಯದಲ್ಲಿ ರಿಲಯನ್ಸ್ ಹಿಂದಿರುಗಿ ನೋಡಿದ್ದೇ ಇಲ್ಲ. ಮಾತ್ರವಲ್ಲದೇ ಜಾಗತಿಕ ಉದ್ಯಮದಲ್ಲೂ ಬಲವಾದ ಛಾಪನ್ನು ಮೂಡಿಸುವಲ್ಲಿ ರಿಲಯನ್ಸ್ ಉದ್ಯಮ ಯಶಸ್ವಿಯಾಗಿದೆ.

ಭವ್ಯ ಇತಿಹಾಸವನ್ನು ಹೊಂದಿರುವ ಉದ್ಯಮ ಕುಟುಂಬಗಳು ಮತ್ತು ಹೊಸ ಉದ್ದಿಮೆದಾರರು ಈ ಶ್ರೀಮಂತ ಉದ್ಯಮಿ ಕುಟುಂಬಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವುದು ಬ್ಲೂಮ್ ಬರ್ಗ್ ಪಟ್ಟಿಯಲ್ಲಿ ಕಾಣಬಹುದಾಗಿದೆ.

Shamanur Shivashankarappa: ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಶಾಮನೂರು ಶಿವಶಂಕರಪ್ಪ

ಇನ್ನು ವಿಶ್ವದ ಶ್ರೀಮಂತ ಉದ್ಯಮಿಗಳ ಕುಟುಂಬದ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಅಮೆರಿಕಾದ ರಿಟೇಲ್ ದೈತ್ಯ ವಾಲ್ ಮಾರ್ಟ್ ನ ಮಾಲಕರಾಗಿರುವ ವಾಲ್ಟನ್ ಕುಟುಂಬ ಪಡೆದುಕೊಂಡಿದೆ. ಈ ಕುಟುಂಬದ ನಿವ್ವಳ ಆಸ್ತಿ ಮೌಲ್ಯ 513.4 ಬಿಲಿಯನ್ ಡಾಲರ್ ಗಳಿಷ್ಟಿದೆ. ಈ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಇದೇ ಮೊದಲ ಸಲ ಅರ್ಧ ಟ್ರಿಲಿಯನ್ ಡಾಲರ್ ಗಳಷ್ಟಾಗಿದೆ. ಇತ್ತೀಚಿನ ಆರ್ಥಿಕ ವರ್ಷದಲ್ಲಿ ವಾಲ್ ಮಾರ್ಟ್ ನ ಒಟ್ಟು ಆದಾಯ 681 ಬಿಲಿಯನ್ ಡಾಲರ್ ಗಳಿಗೇರಿತ್ತು.

ವಾಲ್ ಮಾರ್ಟ್ ವಿಶ್ವಾದ್ಯಂತ 10,750 ಸ್ಟೋರ್ ಗಳನ್ನು ಹೊಂದಿದೆ.
ಈ ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿರುವ ಇತರೇ ಕುಬೇರ ಕುಟುಂಬಗಳ ಮಾಹಿತಿ ಇಲ್ಲಿದೆ:
ಅಲ್ ನಹ್ಯಾನ್ ಕುಟುಂಬ: ಒಟ್ಟು 335.9 ಬಿಲಿಯನ್ ಡಾಲರ್ ಗಳಷ್ಟು ಆಸ್ತಿ ಮೌಲ್ಯವನ್ನು ಹೊಂದಿರುವ ಅಲ್ ನಹ್ಯಾನ್ ಕುಟುಂಬವು ವಿಶ್ವದ ಅತೀ ಶ್ರೀಮಂತ ಕುಟುಂಬಗಳ ಪೈಕಿ ಒಂದಾಗಿದೆ. ಇದು ಅಬುದಾಬಿಯ ರಾಜ ಮನೆತನವೂ ಹೌದು.

ಅಲ್ ಸೌದಿ ಕುಟುಂಬ:

ಸೌದಿಯ ರಾಜ ಕುಟುಂಬ ಅಲ್ ಸೌದ್ ಕುಟುಂಬದ ನಿವ್ವಳ ಆಸ್ತಿ ಮೊತ್ತ 213.6 ಬಿಲಿಯನ್ ಡಾಲರ್ ಗಳಿಷ್ಟಿದೆ. ಈ ಕುಟುಂಬದಲ್ಲಿ ಸುಮಾರು 15 ಸಾವಿರ ಸದಸ್ಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಆಸ್ತಿಯ ಹೆಚ್ಚಿನ ಪಾಲು ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ನಂತಹ ಪ್ರಮುಖರ ಕಡೆಯಲ್ಲಿದೆ.


ಅಲ್ ಥಾನಿ ಕುಟುಂಬ:

ಕತಾರ್ ನ ರಾಜ ಮನೆತನವಾಗಿರುವ ಈ ಕುಟುಂಬದ ನಿವ್ವಳ ಆಸ್ತಿ ಮೌಲ್ಯ 199.5 ಬಿಲಿಯನ್ ಡಾಲರ್ ಗಳಿಷ್ಟಿದೆ. 1940ರಲ್ಲಿ ಈ ಪ್ರದೇಶದಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದ ಬಳಿಕ ಈ ಕುಟುಂಬದ ಆಸ್ತಿ ಮೌಲ್ಯ ಏರಿಕೆ ಕಾಣುತ್ತಲೇ ಬಂದಿದೆ. ಕತಾರಿನ ಈ ರಾಜ ಕುಟುಂಬ ಇತ್ತೀಚೆಗಷ್ಟೇ ಟ್ರಂಪ್ ಆಡಳಿತಕ್ಕೆ ಅತ್ಯಾಧುನಿಕ, ಸರ್ವ ಸೌಲಭ್ಯಗಳಿರುವ ಬೋಯಿಂಗ್ 747 ವಿಮಾನವನ್ನು ತಾತ್ಕಾಲಿಕ ಏರ್ ಫೋರ್ಸ್ ವನ್ ಆಗಿ ಬಳಸಲು ಕೊಡುಗೆಯಾಗಿ ನೀಡಿದೆ.
ಇನ್ನುಳಿದಂತೆ, ಹರ್ಮೆಸ್ ಕುಟುಂಬ, ಕೊಚ್ ಕುಟುಂಬ, ಮಾರ್ಸ್ ಕುಟುಂಬ, ವರ್ತೆಮಿರ್ ಕುಟುಂಬ, ಥಾಮ್ಸನ್ ಕುಟುಂಬ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.