Gold Price Today on 15th December 2025: ಮತ್ತೆ ಹೆಚ್ಚಾಯ್ತು ಚಿನ್ನದ ದರ; ಇಂದು ದುಬಾರಿಯಾಗಿದ್ದು ಇಷ್ಟು
Gold Rate Today: ಕೆಲವು ದಿನಗಳಿಂದ ಗ್ರಾಹಕರ ನೆಮ್ಮದಿ ಗೆಡಿಸಿದ ಚಿನ್ನದ ದರ ಇಂದು ಕೂಡ ಹೆಚ್ಚಾಗಿದೆ. ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 75 ರೂ. ಹೆಚ್ಚಾದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 82 ರೂ. ದುಬಾರಿಯಾಗಿದೆ.
ಸಪ್ತಮಿ ಗೌಡ (ಇನ್‌ಸ್ಟಾಗ್ರಾಂ ಚಿತ್ರ). -
ಬೆಂಗಳೂರು, ಡಿ. 15: ಕೆಲವು ದಿನಗಳಿಂದ ಗ್ರಾಹಕರ ನೆಮ್ಮದಿ ಗೆಡಿಸಿದ ಚಿನ್ನದ ದರ ಇಂದು ಕೂಡ (ಡಿಸೆಂಬರ್ 15) ತನ್ನ ಮೇಲ್ಮುಖ ಓಟವನ್ನು ಮುಂದುವರಿಸಿದೆ (Gold Price Today on 15th December 2025). ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 75 ರೂ. ಹೆಚ್ಚಾದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 82 ರೂ. ದುಬಾರಿಯಾಗಿದೆ. ಆ ಮೂಲಕ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,350 ರೂ.ಗೆ ತಲುಪಿದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ ನೀವು 13,473 ರೂ. ಪಾವತಿಸಬೇಕಾಗುತ್ತದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 98,800 ರೂ., 10 ಗ್ರಾಂಗೆ 1,23,500 ರೂ. ಮತ್ತು 100 ಗ್ರಾಂಗೆ 12,35,000 ರೂ. ಇದೆ. 24 ಕ್ಯಾರಟ್‌ನ 8 ಗ್ರಾಂನ ಬೆಲೆ 1,07,784 ರೂ., 10 ಗ್ರಾಂನ ಬೆಲೆ 1,34,730 ರೂ. ಮತ್ತು 100 ಗ್ರಾಂನ ಬೆಲೆ 13,47,300 ರೂ.ಗೆ ಬಂದು ತಲುಪಿದೆ.
ಪ್ರಮುಖ ನಗರಗಳಾದ ಚೆನ್ನೈಯಲ್ಲಿ ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 12,460 ರೂ. ಇದ್ದರೆ, ಮುಂಬೈಯಲ್ಲಿ 12,350 ರೂ., ದೆಹಲಿಯಲ್ಲಿ 12,365 ರೂ., ಕೋಲ್ಕತ್ತಾದಲ್ಲಿ 12,350 ರೂ., ಹೈದರಾಬಾದ್‌ನಲ್ಲಿ 12,350 ರೂ. ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,460 ರೂ. | 13,593 ರೂ. |
| ಮುಂಬೈ | 12,350 ರೂ. | 13,473 ರೂ. |
| ದೆಹಲಿ | 12,365 ರೂ. | 13,488 ರೂ. |
| ಕೋಲ್ಕತ್ತಾ | 12,350 ರೂ. | 13,473 ರೂ. |
| ಹೈದರಾಬಾದ್ | 12,350 ರೂ. | 13,473 ರೂ. |
ಬೆಳ್ಳಿ ದರ
ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರದಲ್ಲಿಯೂ ಹೆಚ್ಚಳ ಕಂಡಿದೆ. 1 ಗ್ರಾಂ ಬೆಳ್ಳಿಗೆ 200.90 ರೂ. ಇದೆ. 8 ಗ್ರಾಂಗೆ 1,607.20 ರೂ., 10 ಗ್ರಾಂಗೆ ನೀವು 2,009 ರೂ. ಮತ್ತು 1 ಕೆಜಿಗೆ 2,00,900 ರೂ. ಪಾವತಿಸಬೇಕು.
ಮ್ಯೂಚುವಲ್ ಫಂಡ್‌ನಲ್ಲಿ ಕೋಟಿ ರೂ. ಗಳಿಸೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ
ಬೆಲೆ ಏರಿಕೆಗೆ ಕಾರಣವೇನು?
ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕಗಳು, ತೆರಿಗೆಗಳು ಮತ್ತು ವಿನಿಮಯ ದರಗಳಲ್ಲಿನ ಏರಿಳಿತಗಳು ಪ್ರಾಥಮಿಕವಾಗಿ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ.