ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 15th January 2026: ಸಂಕ್ರಾತಿಗೆ ಇಳಿಕೆ ಕಂಡ ಚಿನ್ನ; ಬಂಗಾರದ ಬೆಲೆಯಷ್ಟು ಗೊತ್ತಾ?

Gold Rate Today: ಹಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನ ಇಂದು ಕೊಂಚ ಇಳಿಕೆ ಕಂಡಿದೆ. ಸಂಕ್ರಾತಿಯಂದು ಚಿನ್ನ ಕೊಳ್ಳುವವರಿಗೆ ಸ್ಪಲ್ಪ ಹೊರೆ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 75 ರೂ. ಇಳಿಕೆಯಾಗಿ 13,125 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ 82 ರೂ. ಇಳಿಕೆ ಕಂಡು ಬೆಲೆ 14,318 ರೂ. ಇದೆ.

ಸಂಕ್ರಾತಿಗೆ ಇಳಿಕೆ ಕಂಡ ಚಿನ್ನ; ಇಂದಿನ ರೇಟ್‌ ಇಲ್ಲಿದೆ.

ಚಿನ್ನದ ದರದಲ್ಲಿ ಕೊಂಚ ಇಳಿಕೆ (ಸಂಗ್ರಹ ಚಿತ್ರ) -

Vishakha Bhat
Vishakha Bhat Jan 15, 2026 1:10 PM

ಬೆಂಗಳೂರು: ಹಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನ ಇಂದು ಕೊಂಚ ಇಳಿಕೆ ಕಂಡಿದೆ. ಸಂಕ್ರಾತಿಯಂದು ಚಿನ್ನ ಕೊಳ್ಳುವವರಿಗೆ ಸ್ಪಲ್ಪ ಹೊರೆ ಕಡಿಮೆಯಾಗಲಿದೆ. (Gold Price Today on 15th January 2026) ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 75 ರೂ. ಇಳಿಕೆಯಾಗಿ 13,125 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ 82 ರೂ. ಇಳಿಕೆ ಕಂಡು ಬೆಲೆ 14,318 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,000 ರೂ. ಇದ್ದರೆ, 10 ಗ್ರಾಂಗೆ ನೀವು 1,31,250 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 13,12,500 ರೂ. ಪಾವತಿ ಮಾಡಬೇಕು. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,14,544 ರೂ. ಇದ್ದರೆ, 10 ಗ್ರಾಂಗೆ ನೀವು 1,43,180 ರೂ. ಮತ್ತು 100 ಗ್ರಾಂಗೆ ನೀವು 14,31,800 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,125 ರೂ. 14,318 ರೂ
ಮುಂಬೈ 13,125 ರೂ. 14,318 ರೂ
ದೆಹಲಿ 13,125 ರೂ. 14,318 ರೂ
ಕೋಲ್ಕತ್ತಾ 13,125 ರೂ. 14,318 ರೂ

ಬೆಳ್ಳಿದರದಲ್ಲಿ ಇಂದು ಮತ್ತೆ ಏರಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿಗೆ 295 ರೂ. ಇದ್ದರೆ, 10 ಗ್ರಾಂಗೆ ನೀವು 2,950 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 2,95,000 ರೂ. ಪಾವತಿಸಬೇಕು.