Gold Price Today On 18th February 2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಚೆಕ್ ಮಾಡಿ
ಕೆಲವು ದಿನಗಳಿಂದ ಏರಿಳಿತದ ಹಾದಿಯಲ್ಲಿ ಸಾಗುತ್ತಿರುವ ಚಿನ್ನದ ಬೆಲೆಯಲ್ಲಿ ಇಂದು ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 14,200 ರೂ. ಹಾಗೂ ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 15,491 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,600 ರುಪಾಯಿ ಆಗಿದೆ.
ಚಿನ್ನದ ದರದಲ್ಲಿ ಯಥಾಸ್ಥಿತಿ (ಸಂಗ್ರಹ ಚಿತ್ರ) -
Vishakha Bhat Heggar
Feb 18, 2026 12:57 PM
ಚಿನ್ನದ ಬೆಲೆಯಲ್ಲಿ ಇಂದು ಯಥಾಸ್ಥಿತಿ ಕಂಡು ಬಂದಿದೆ. (Gold Price Today On 18th February 2026) ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 14,200 ರೂ. ಹಾಗೂ ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 15,491 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,600 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,42,000 ರುಪಾಯಿ ಹಾಗೂ 100 ಗ್ರಾಂಗೆ ನೀವು 14,20,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,23,928 ರುಪಾಯಿ ಹಾಗೂ 10 ಗ್ರಾಂಗೆ ನೀವು 1,54,910 ರುಪಾಯಿ ಹಾಗೂ 100 ಗ್ರಾಂಗೆ ನೀವು 15,49,100 ರುಪಾಯಿ ನೀಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,200 ರೂ | 15,491 ರುಪಾಯಿ |
| ಮುಂಬೈ | 14,200 ರೂ | 15,491 ರುಪಾಯಿ |
| ದೆಹಲಿ | 14,200 ರೂ | 15,506 ರುಪಾಯಿ |
| ಕೋಲ್ಕತ್ತಾ | 14,200 ರೂ | 15,491 ರುಪಾಯಿ |
| ಹೈದರಾಬಾದ್ | 14,200 ರೂ | 15,491 ರುಪಾಯಿ |
ಬೆಳ್ಳಿ ದರದಲ್ಲಿಯೂ ಇಂದು ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರುಪಾಯಿ ಕಡಿಮೆಯಾಗಿದ್ದು, 255 ರುಪಾಯಿಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ 2550 ರುಪಾಯಿ ಹಾಗೂ 1 ಕೆಜಿ ಬೆಳ್ಳಿಗೆ ನೀವು 2,55,000 ರುಪಾಯಿ ಪಾವತಿಸಬೇಕು.