ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 20th January 2026: ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ; ಬೆಲೆ ನೋಡಿದ್ರೆ ಶಾಕ್‌ ಗ್ಯಾರಂಟಿ

ಚಿನ್ನದ ದರದಲ್ಲಿ ಸತತ ಏರಿಕೆ ಕಂಡು ಬರುತ್ತಲೇ ಇದೆ. ಇಂದೂ ಸಹ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಬಂಗಾರ ಏರಿಕೆಯಾಗಿದೆ. ಮಂಗಳವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 95 ರೂ. ಏರಿಕೆಯಾಗಿ 13,500 ರೂ. ಇದೆ.

ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ; ಬೆಲೆ ನೋಡಿದ್ರೆ ಶಾಕ್‌ ಗ್ಯಾರಂಟಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) - -

Vishakha Bhat Heggar
Vishakha Bhat Heggar Jan 20, 2026 12:05 PM

ಬೆಂಗಳೂರು: ಚಿನ್ನದ ದರದಲ್ಲಿ ಸತತ ಏರಿಕೆ ಕಂಡು ಬರುತ್ತಲೇ ಇದೆ. ಇಂದೂ ಸಹ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಬಂಗಾರ ಏರಿಕೆಯಾಗಿದೆ. ಮಂಗಳವಾರ 22 ಕ್ಯಾರಟ್‌ನ 1 (Gold Price Today on 20th January 2026) ಗ್ರಾಂ ಚಿನ್ನದ ಬೆಲೆಯಲ್ಲಿ 95 ರೂ. ಏರಿಕೆಯಾಗಿ 13,500 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 104 ರೂ. ಏರಿಕೆಯಾಗಿ 14,728 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,08,000 ರೂ. ಹಾಗೂ 10 ಗ್ರಾಂಗೆ ನೀವು 1,35,000 ರೂ. ಮತ್ತು 100 ಗ್ರಾಂ ಬಂಗಾರದ ದರ 13,50,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,17,824 ರೂ. ಮತ್ತು 10 ಗ್ರಾಂಗೆ ನೀವು 1,47,280 ರೂ. ಮತ್ತು 100 ಗ್ರಾಂಗೆ ನೀವು 14,72,800 ರೂ. ಪಾವತಿ ಮಾಡಬೇಕಿದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ಚೆನ್ನೈ 13,500 ರೂ. 14,728 ರೂ.
ಮುಂಬೈ 13,500 ರೂ. 14,728 ರೂ.
ದೆಹಲಿ 13,500 ರೂ. 14,728 ರೂ.
ಕೋಲ್ಕತ್ತಾ 13,500 ರೂ. 14,728 ರೂ.
ಹೈದರಾಬಾದ್‌ 13,500 ರೂ. 14,728 ರೂ.

ಬೆಳ್ಳಿ ದರದಲ್ಲಿ ಬರೋಬ್ಬರಿ ಏರಿಕೆ ಕಂಡು ಬಂದಿದ್ದು, ಒಂದು ಗ್ರಾಂ ಬೆಳ್ಳಿ ದರದಲ್ಲಿ 10 ರೂ. ಏರಿಕೆಯಾಗಿ, 315 ರೂ. ಇದೆ. 10 ಗ್ರಾಂ ಬೆಳ್ಳಿಗೆ ನೀವು 3,150 ರೂ. ಹಾಗೂ 100 ಗ್ರಾಂಗೆ 3,15,000 ರೂ. ಪಾವತಿ ಮಾಡಬೇಕು.