ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 24th November 2025: ಗ್ರಾಹಕರಿಗೆ ಕೊಂಚ ನಿರಾಳ; ಚಿನ್ನದ ದರದಲ್ಲಿ ಇಳಿಕೆ

Gold and Silver Rate: ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದ್ದು, ಸ್ವರ್ಣಪ್ರಿಯರಿಗೆ ಸಂತಸ ತಂದಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ65 ರೂ. ಇಳಿಕೆ ಆಗಿದ್ದು, 11,470 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲಿ 71 ಇಳಿಕೆ ಆಗಿದ್ದು ಇಂದು 12,513 ರೂ. ಇದೆ.

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡಿದೆ(ಸಂಗ್ರಹ ಚಿತ್ರ) -

Rakshita Karkera
Rakshita Karkera Nov 24, 2025 12:41 PM

ಬೆಂಗಳೂರು: ನಿನ್ನೆ ಯಥಾಸ್ಥಿತಿ ಕಂಡುಬಂದಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಕೊಂಚ ಇಳಿಕೆ ಕಂಡಿದೆ (Gold Price Today on 24th November 2025). ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ65 ರೂ. ಇಳಿಕೆ ಆಗಿದ್ದು, 11,470 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲಿ 71 ಇಳಿಕೆ ಆಗಿದ್ದು ಇಂದು 12,513 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ಇಂದು, 91,760 ರೂ. ಇದ್ದರೆ, 10 ಗ್ರಾಂಗೆ ನೀವು 1,14,750 ರೂ. ಪಾವತಿ ಮಾಡಬೇಕು. ಇನ್ನು 100 ಗ್ರಾಂ ಚಿನ್ನಕ್ಕೆ 11,47,500 ರೂ. ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,00,104 ರೂ. ಇದ್ದರೆ, 10 ಗ್ರಾಂಗೆ 1,25,130 ರೂ. ಪಾವತಿಸಬೇಕಾಗಿದೆ. 100 ಗ್ರಾಂಗೆ ನೀವು 12,51,300 ರೂ. ನೀಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,470 ರೂ. 12,513 ರೂ.
ಮುಂಬೈ 11,470 ರೂ. 12,513 ರೂ.
ದಿಲ್ಲಿ 11,485 ರೂ. 12,528 ರೂ.
ಕೋಲ್ಕತಾ 11,470 ರೂ. 12,513 ರೂ.
ಹೈದರಾಬಾದ್‌ 11,470 ರೂ. 12,513 ರೂ.

ಇನ್ನು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 22 ಕ್ಯಾರಟ್‌ (1 ಗ್ರಾಂ) ಚಿನ್ನದ ಬೆಲೆ 11,470 ರೂ. ಆಗಿದ್ದರೆ, ದಿಲ್ಲಿಯಲ್ಲಿ 11,485 ರೂ.ಗಳಷ್ಟಿದೆ. ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 24 ಕ್ಯಾರಟ್‌ (1 ಗ್ರಾಂ) ಚಿನ್ನದ ದರ 12,513 ರೂ. ರಷ್ಟಿದ್ದು, ದಿಲ್ಲಿಯಲ್ಲಿ 12,528 ರೂ. ರಷ್ಟಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದ್ದು, 1 ಗ್ರಾಂ ಗೆ 163 ರೂ ಇದ್ದು, 8 ಗ್ರಾಂ ಬೆಳ್ಳಿಗೆ 1,304 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,63,000 ರೂ. ಪಾವತಿಸಬೇಕು. ಬೆಂಗಳೂರು, ದೆಹಲಿ, ಮುಂಬೈ ನಗರಗಳಲ್ಲಿಇದೇ ದರ ಮುಂದುವರಿದಿದೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ 1 ಗ್ರಾಂ ಗೆ 170 ರೂ ಇದ್ದು, ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,70,000 ರೂ. ಪಾವತಿಸಬೇಕು.

ದೇಶದಲ್ಲಿ ಏರಿಕೆ ಕಂಡು ಬರಲು ಕಾರಣ ಏನು?

ಚಿನ್ನದ ಬೆಲೆಯೇರಿಕೆಗೆ ಹಲವು ಅಂಶಗಳು ಪ್ರಭಾವ ಬೀರುತ್ತವೆ. ಅದರಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅನಿಶ್ಚತತೆ ಹಾಗೂ ಸುಂಕ ಮತ್ತ ಆಮದುಗಳು ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಭಾರತ ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶ. ಹೀಗಾಗಿ ಅದರ ಮೇಲಿನ ಸುಂಕದ ಹೊರೆಯೂ ಗ್ರಾಹಕರ ಮೇಲೆ ಬೀರಲಿದೆ. ಷೇರು ಮಾರುಕಟ್ಟೆ ಕುಸಿತ ಕಂಡಾಗಲೂ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.