ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Rate Today: ಹಲವು ದಿನಗಳ ಬಳಿಕ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ಇಂದಿನ ರೇಟ್‌ ಇಲ್ಲಿದೆ ನೋಡಿ

Gold And Silver Rate on 23rd November 2025: ಚಿನ್ನದ ದರ ಇಂದು ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,535 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು 12,584 ರೂ. ಇದೆ.

ಹಲವು ದಿನಗಳ ಬಳಿಕ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

ಚಿನ್ನದ ದರದಲ್ಲಿ ಇಂದು ಯಥಾಸ್ಥಿತಿ ಕಂಡುಬಂದಿದೆ (ಸಂಗ್ರಹ ಚಿತ್ರ) -

Vishakha Bhat
Vishakha Bhat Nov 23, 2025 1:32 PM

ಬೆಂಗಳೂರು: ಚಿನ್ನದ ದರ ಇಂದು ಯಾವುದೇ ಬದಲಾವಣೆ ಇಲ್ಲದೆ (Gold Price Today on 23rd November 2025) ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,535 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು 12,584 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ಇಂದು, 92,280 ರೂ. ಇದ್ದರೆ, 10 ಗ್ರಾಂಗೆ ನೀವು 1,15350 ರೂ. ಪಾವತಿ ಮಾಡಬೇಕು. ಇನ್ನು 100 ಗ್ರಾಂ ಚಿನ್ನಕ್ಕೆ 11, 53500 ರೂ. ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,00,672 ರೂ. ಇದ್ದರೆ, 10 ಗ್ರಾಂಗೆ 1,25,840 ರೂ. ಪಾವತಿಸಬೇಕಾಗಿದೆ. 100 ಗ್ರಾಂಗೆ ನೀವು 12,58,400 ರೂ. ನೀಡಬೇಕು.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯೆಷ್ಟಿದೆ ಎಂದು ನೋಡುವುದಾದರೆ, ಚೆನ್ನೈ, ಮುಂಬೈ, ಕೊಲ್ಕತ್ತಾ, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಚಿನ್ನದ ಬೆಲೆ ಯತಾಸ್ಥಿತಿ ಕಾಯ್ದುಕೊಂಡಿದ್ದು, 22 ಕ್ಯಾರಟ್‌ 1 ಗ್ರಾಂಗೆ 11,535 ಹಾಗೂ 24 ಕ್ಯಾರಟ್‌ ಚಿನ್ನಕ್ಕೆ 12,584 ರೂ. ಇದೆ.

ಬೆಳ್ಳಿ ದರ

ಇಂದು ಬೆಳ್ಳಿ ದರವೂ ಯಥಾಸ್ಥಿತಿಯಲ್ಲಿದೆ. 1 ಗ್ರಾಂ ಗೆ 164 ರೂ ಇದ್ದು, 8 ಗ್ರಾಂ ಬೆಳ್ಳಿಗೆ 1,312 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,64000 ರೂ. ಪಾವತಿಸಬೇಕು. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಳ್ಳಿ ಸ್ಥಿತಿಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ.

ಚಿನ್ನದ ಬೆಲೆಯೇರಿಕೆಗೆ ಕಾರಣವೇನು?

ಚಿನ್ನದ ಬೆಲೆಯೇರಿಕೆಗೆ ಹಲವು ಅಂಶಗಳು ಪ್ರಭಾವ ಬೀರುತ್ತವೆ. ಅದರಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅನಿಶ್ಚತತೆ ಹಾಗೂ ಸುಂಕ ಮತ್ತ ಆಮದುಗಳು ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಭಾರತ ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶ. ಹೀಗಾಗಿ ಅದರ ಮೇಲಿನ ಸುಂಕದ ಹೊರೆಯೂ ಗ್ರಾಹಕರ ಮೇಲೆ ಬೀರಲಿದೆ. ಷೇರು ಮಾರುಕಟ್ಟೆ ಕುಸಿತ ಕಂಡಾಗಲೂ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.