Gold Price Today On 30th July 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ ನೋಡಿ
ಇಳಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂ. ಏರಿಕೆಯಾಗಿ 13,230 ರೂ. ಆಗಿರುತ್ತದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 82 ರೂ. ಇಳಿಕೆಯಾಗಿ 14,433 ರೂ. ಇದೆ.
ಸಂಗ್ರಹ ಚಿತ್ರ -
Vishakha Bhat Heggar
Jul 30, 2026 12:15 PM
ಬೆಂಗಳೂರು: ಇಳಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 (Gold Price Today On 30th July 2026) ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂ. ಏರಿಕೆಯಾಗಿ 13,230 ರೂ. ಆಗಿರುತ್ತದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 82 ರೂ. ಇಳಿಕೆಯಾಗಿ 14,433 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,840 ರೂ. ಇದ್ದರೆ, 10 ಗ್ರಾಂಗೆ 1,32,300 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 13,23,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,15,464 ರೂ. ನೀಡಿದರೆ 10 ಗ್ರಾಂ ಬಂಗಾರದ ಬೆಲೆ 1,44,330ರೂ. ಮತ್ತು 100 ಗ್ರಾಂಗೆ ನೀವು 14,43,300 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,230 ರೂ. | 14,433 ರೂ. |
| ಮುಂಬೈ | 13,230 ರೂ. | 14,433 ರೂ. |
| ದೆಹಲಿ | 13,230 ರೂ. | 14,433 ರೂ. |
| ಕೋಲ್ಕತಾ | 13,230 ರೂ. | 14,433 ರೂ. |
| ಹೈದರಾಬಾದ್ | 13,230 ರೂ. | 14,433 ರೂ. |
ಇತ್ತ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ 235 ರುಪಾಯಿಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,350 ರುಪಾಯಿ ಹಾಗೂ 1 ಕೆಜಿಗೆ 2,35,000 ರುಪಾಯಿ ಇದೆ.