ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Rate Today 28th February 2026: ಮತ್ತೆ ಗ್ರಾಹಕರ ನಿದ್ದೆಗೆಡಿಸಿದ ಬಂಗಾರ; ದರದಲ್ಲಿ ಭಾರಿ ಏರಿಕೆ

Gold Silver Rate Today: ಶನಿವಾರ (ಫೆಬ್ರವರಿ 28) ಆಭರಣಪ್ರಿಯರ ನಿದ್ದೆಗೆಡಿಸಿ ಚಿನ್ನದ ಬೆಲೆ ಭಾರಿ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 290 ರುಪಾಯಿ ಏರಿಕೆಯಾಗಿ 15,100 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 316 ಅಧಿಕವಾಗಿದ್ದು, 16,473 ರುಪಾಯಿ ಇದೆ.

ಮತ್ತೆ ಗ್ರಾಹಕರ ನಿದ್ದೆಗೆಡಿಸಿದ ಬಂಗಾರ

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 28, 2026 1:55 PM

ಬೆಂಗಳೂರು, ಫೆ. 28: ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿರುವ ಚಿನ್ನದ ದರ ಇಂದು ಕೂಡ ಗಗನಮುಖಿಯಾಗಿದೆಯಾಗಿದೆ. ಶನಿವಾರ (ಫೆಬ್ರವರಿ 28) ಆಭರಣಪ್ರಿಯರ ನಿದ್ದೆಗೆಡಿಸಿ ಹಳದಿಲೋಹದ ಬೆಲೆ ಭಾರಿ ಹೆಚ್ಚಳ ಕಂಡಿದೆ (Gold Price Today On 28th February 2026). ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 290 ರುಪಾಯಿ ಏರಿಕೆಯಾಗಿ 15,100 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 316 ಅಧಿಕವಾಗಿದ್ದು, 16,473 ರುಪಾಯಿ ಇದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,20,800 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,51,000 ರುಪಾಯಿ ಹಾಗೂ 100 ಗ್ರಾಂಗೆ ನೀವು 15,10,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,31,784 ರುಪಾಯಿ ಹಾಗೂ 10 ಗ್ರಾಂಗೆ ನೀವು 1,64,730 ರುಪಾಯಿ ಹಾಗೂ 100 ಗ್ರಾಂಗೆ ನೀವು 16,47,300 ರುಪಾಯಿ ನೀಡಬೇಕಾಗುತ್ತದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,200 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,582 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,100 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,473 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,115 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,488 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,100 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,473 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,100 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,473 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 15,200 ರುಪಾಯಿ 16,582 ರುಪಾಯಿ
ಮುಂಬೈ 15,100 ರುಪಾಯಿ 16,473 ರುಪಾಯಿ
ದೆಹಲಿ 15,115 ರುಪಾಯಿ 16,488 ರುಪಾಯಿ
ಕೋಲ್ಕತ್ತಾ 15,100 ರುಪಾಯಿ 16,473 ರುಪಾಯಿ
ಹೈದರಾಬಾದ್‌ 15,100 ರುಪಾಯಿ 16,473 ರುಪಾಯಿ

ಪರಿಷ್ಕರಣೆ ಬಳಿಕ ಜಿಡಿಪಿ ಇಳಿದರೂ, ನಿರೀಕ್ಷೆ ಮೀರಿದ ಶೇಕಡಾ 7.8ರ ಪ್ರಗತಿ

ಬೆಳ್ಳಿ ದರ

ಬೆಳ್ಳಿ ದರದಲ್ಲಿಯೂ ಇಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 10 ರುಪಾಯಿ ಹೆಚ್ಚಾಗಿದ್ದು, 295 ರುಪಾಯಿಗೆ ತಲುಪಿದೆ. 10 ಗ್ರಾಂ ಬೆಳ್ಳಿಗೆ 2,950 ರುಪಾಯಿ ಹಾಗೂ 1 ಕೆಜಿಗೆ 2,95,000 ರುಪಾಯಿ ಇದೆ.