Bharat Taxi: ಗ್ರಾಹಕರಿಗೆ ಸಿಹಿ ಸುದ್ದಿ; ಡಿಸೆಂಬರ್‌ನಲ್ಲಿ ಬರಲಿದೆ ಭಾರತ್ ಟ್ಯಾಕ್ಸಿ
ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ಸಹಕಾರ ವಲಯದ ಒಂದು ಕ್ಯಾಬ್ ಸೇವೆಯನ್ನು ಡಿಸೆಂಬರ್‌ನಲ್ಲಿ ಆರಂಭಿಸುತ್ತಿದೆ. ಭಾರತ್ ಟ್ಯಾಕ್ಸಿ ಎಂಬುದು ಇದರ ಹೆಸರಾಗಿದೆ. ಅತ್ಯಂತ ಪಾರದರ್ಶಕ ಮತ್ತು ಪಾರ್ಟಿಸಿಪೇಟಿವ್ ಮಾಡೆಲ್‌ನಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ. ಕೇಂದ್ರ ಸಹಕಾರ ಸಚಿವಾಲಯ ಮತ್ತು ನ್ಯಾಶನಲ್ ಇ-ಗವರ್ನೆನ್ಸ್ ಡಿವಿಶನ್ ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಸಾಂದರ್ಭಿಕ ಚಿತ್ರ -
ಕೇಶವಪ್ರಸಾದ.ಬಿ
ನವದೆಹಲಿ: ಕೇಂದ್ರ ಸರಕಾರ (Central Government) ಇದೇ ಮೊದಲ ಬಾರಿಗೆ ಸಹಕಾರ ವಲಯದ ಒಂದು ಕ್ಯಾಬ್ ಸೇವೆಯನ್ನು ಡಿಸೆಂಬರ್‌ನಲ್ಲಿ ಆರಂಭಿಸುತ್ತಿದೆ. ಭಾರತ್ ಟ್ಯಾಕ್ಸಿ (Bharat Taxi) ಎಂಬುದು ಇದರ ಹೆಸರಾಗಿದೆ. ಅತ್ಯಂತ ಪಾರದರ್ಶಕ ಮತ್ತು ಪಾರ್ಟಿಸಿಪೇಟಿವ್ ಮಾಡೆಲ್‌ನಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ. ಕೇಂದ್ರ ಸಹಕಾರ ಸಚಿವಾಲಯ ಮತ್ತು ನ್ಯಾಶನಲ್ ಇ-ಗವರ್ನೆನ್ಸ್ ಡಿವಿಶನ್ ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. ಅಮಿತ ಶಾ ಅವರು ಕೇಂದ್ರ ಸಹಕಾರ ಸಚಿವರಾಗಿ ಇಲಾಖೆಯ ಸಾರಥ್ಯ ವಹಿಸಿದ್ದಾರೆ.
ದಿಲ್ಲಿಯಲ್ಲಿ ಮೊದಲು ಆರಂಭವಾಗಲಿದ್ದು, ನಂತರ ದೇಶವ್ಯಾಪಿ ಅಸ್ತಿತ್ವಕ್ಕೆ ಬರಲಿದೆ. ಭಾರತ್ ಟ್ಯಾಕ್ಸಿ ಸೇವೆಯಿಂದ ಜನರಿಗೆ ಟ್ಯಾಕ್ಸಿ ಕ್ಯಾಬ್ ಸರ್ವೀಸ್ ದರದಲ್ಲಿ ಇಳಿಕೆಯಾಗಲಿದೆ. ದರಗಳು ಪಾರದರ್ಶಕವಾಗಿರುತ್ತದೆ. ಗ್ರಾಹಕರಿಗೆ ಪೀಕ್ ಅವರ್ಸ್‌ನಲ್ಲಿ ರೇಟ್ ಜಾಸ್ತಿ ಆಗಲ್ಲ. ಅಪಾಯದ ಸಮಯದಲ್ಲಿ ಸಮೀಪದ ಪೊಲೀಸ್ ಸ್ಟೇಶನ್‌ಗೆ ಅಲರ್ಟ್ ಮಾಡಬಹುದು. ಈ ಭಾರತ್ ಟ್ಯಾಕ್ಸಿ ಸರ್ವೀಸ್ ಸಲುವಾಗಿ ಸಹಕಾರ ಟ್ಯಾಕ್ಸಿ ಕೋಪರೇಟಿವ್ ಲಿಮಿಟೆಡ್ ಎಂಬ ಸಹಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಇಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರ 300 ಕೋಟಿ ರುಪಾಯಿಯ ಆರಂಭಿಕ ಬಂಡವಾಳ ನೀಡುತ್ತಿದೆ.
ಇಲ್ಲಿ ಕ್ಯಾಬ್ ಚಾಲಕರು ಯಾವುದೇ ಅಗ್ರಿಗೇಟರ್ ಕಂಪನಿಗಳಿಗೆ ಕೊಡುವಂತೆ 25-30% ಕಮಿಶನ್ ಕೊಡಬೇಕಿಲ್ಲ. 100 ಪರ್ಸೆಂಟ್ ಆದಾಯ ಚಾಲಕರಿಗೇ ಸಿಗಲಿದೆ. ಇಲ್ಲಿ ಚಾಲಕರಿಗೆ ಮೆಂಬರ್ ಶಿಪ್ ಮಾಡೆಲ್ ಇರುತ್ತದೆ. ಅವರು ಸಾಮಾನ್ಯ ಮಾಸಿಕ ಶುಲ್ಕವನ್ನು ಕೊಡಬಹುದು. ಹೀಗಾಗಿ ಚಾಲಕರು ಭಾರತ್ ಟ್ಯಾಕ್ಸಿಅಡಿಯಲ್ಲಿ ಹೆಚ್ಚು ಸಂಪಾದಿಸಬಹುದು ಎಂಬ ನಿರೀಕ್ಷೆ ಇದೆ.
ಇಫ್ಕೊ, ನಬಾರ್ಡ್, ಅಮುಲ್, ಕೆಎಂಎಫ್ ಇರುವಂತೆ ಸಹಕಾರ ವಲಯದ ಕಂಪನಿ ಇದಾಗಲಿದೆ. ಈ ಕುರಿತ ಆಪ್ ಮೊದಲು ಹಿಂದಿಯಲ್ಲಿ ಬರಲಿದೆ. ಬಳಿಕ ಹಿಂದಿ-ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಿಗಲಿದೆ. ಓಲಾ-ಉಬರ್ , ರಾಪಿಡೋ ಮೊದಲಾದ ಕಾರ್ಪೊರೇಟ್ ಟ್ಯಾಕ್ಸಿ ಸರ್ವೀಸ್ ಪ್ರೊವೈಡರ್ಸ್‌ಗೆ ಪ್ರತಿಸ್ಪರ್ಧಿಯಾಗಿ ರಾಜ್ಯ ಸರಕಾರದ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೊಲಾಬರೇಟಿವ್ ಟ್ಯಾಕ್ಸಿ ಸರ್ವೀಸ್‌ಗಳು ಇವೆ. ಉದಾಹರಣೆಗೆ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಇದೆ. ಗೋವಾದಲ್ಲಿ ಗೋವಾ ಮೈಲ್ಸ್ ಇದೆ. ಪಶ್ಚಿಮ ಬಂಗಾಳದಲ್ಲಿ ಯಾತ್ರಿ ಸಾಥಿ ಇದೆ. ಇದೀಗ ಕೇಂದ್ರ ಸರಕಾರದಿಂದ ಸಹಕಾರ ವಲಯದ ಭಾರತ್ ಟ್ಯಾಕ್ಸಿ ಸೇವೆ ತೀವ್ರ ಕುತೂಹಲ ಮೂಡಿಸಿದೆ.
ಜಿಎಸ್‌ಟಿ ಸಂಗ್ರಹ ಗ್ರೋತ್ ರೇಟ್ ಏರಿಕೆ:
ಈ ಸಲ ದಸರಾ ಹಬ್ಬದ ಸಂದರ್ಭ ಜಿಎಸ್‌ಟಿ ಕಲೆಕ್ಷನ್‌ನ ಬೆಳವಣಿಗೆಯ ದರದಲ್ಲಿ ಅಥವಾ ಗ್ರೋತ್ ರೇಟ್ ನಲ್ಲಿ ಮೊದಲ ಸ್ಥಾನಕ್ಕೇರಿದೆ. ಅಕ್ಟೋಬರ್ ಅಂಕಿ ಅಂಶಗಳ ಪ್ರಕಾರ ಒಟ್ಟು 14,395 ಕೋಟಿ ರುಪಾಯಿ ಜಿಎಸ್ ಟಿಯೊಂದಿಗೆ 10% ಹೆಚ್ಚಳ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 13,080 ಕೋಟಿ ಕಲೆಕ್ಷನ್ ಆಗಿತ್ತು. ಇದರೊಂದಿಗೆ ಜಿಎಸ್‌ಟಿ ಸಂಗ್ರಹದ ಬೆಳವಣಿಗೆಯ ದರದಲ್ಲಿ ಟಾಪ್ 5 ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಷ್ಟ್ರಮಟ್ಟದಲ್ಲಿ ಸರಾಸರಿ 2% ಗ್ರೋತ್ ಇದ್ದು, ಕರ್ನಾಟಕ ಗಮನ ಸೆಳೆದಿದೆ.
ಅಕ್ಟೋಬರ್ ತಿಂಗಳಿನ ಜಿಎಸ್‌ಟಿ ಅಂಕಿ ಅಂಶಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಸಂಗ್ರಹವಾದ ಜಿಎಸ್ಟಿಯನ್ನು ತೋರಿಸುತ್ತದೆ. ಇದರಲ್ಲಿ ಸೆಂಟ್ರಲ್ ಜಿಎಸ್‌ಟಿ, ಅಂತರ ರಾಜ್ಯ ವರ್ಗಾವಣೆ ಮೇಲಿನ ತೆರಿಗೆ, ಸೆಸ್ ಕಳೆದರೆ, ರಾಜ್ಯ ಸರಕಾರಕ್ಕೆ 7,065 ಕೋಟಿ ರುಪಾಯಿ ಸಿಗಲಿದೆ.
ಮಹಾರಾಷ್ಟ್ರ 32,025 ಕೋಟಿ ಜಿಎಸ್ ಟಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಆದರೆ ಇದರ ಬೆಳವಣಿಗೆಯ ದರ ಕೇವಲ 2% ಆಗಿದೆ. ಗುಜರಾತ್ 12,113 ಕೋಟಿಯೊಂದಿಗೆ 6% ಗ್ರೋತ್ ದಾಖಲಿಸಿದೆ. ಉತ್ತರಪ್ರದೇಶ 9,806 ಕೋಟಿ ಕಲೆಕ್ಷನ್ ಮಾಡಿದ್ದು 2% ಗ್ರೋತ್ ದಾಖಲಿಸಿದೆ.
ಕರ್ನಾಟಕ 10% ಗೂ ಹೆಚ್ಚು ಗ್ರೋತ್ ದಾಖಲಿಸಲು ಕಾರಣವೇನು?ಕೇಂದ್ರ ಸರಕಾರ ಸೆಪ್ಟೆಂಬರ್ 22ರ ಬಳಿಕ ಜಿಎಸ್ ಟಿ ಕಡಿತ ಮಾಡಿದ್ದರಿಂದ ಹಬ್ಬದ ಸಂದರ್ಭ ಶಾಪಿಂಗ್ ಏರಿಕೆಯಾಗಿತ್ತು. ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಗಣನೀಯ ಏರಿಕೆ ಆಗಿತ್ತು. ಈ ಟ್ರೆಂಡ್ ಅಕ್ಟೋಬರ್-ನವೆಂಬರ್‌ನಲ್ಲೂ ಮುಂದುವರಿಯುವ ಸಾಧ್ಗತೆ ಇದೆ.
ಕೇಂದ್ರ ಸರಕಾರ ಸೆಪ್ಟೆಂಬರ್ 22ಕ್ಕೆ ಜಿಎಸ್‌ಟಿ ದರವನ್ನು ಗಣನೀಯ ಇಳಿಸಿದ್ದರಿಂದ ಜನ ಶಾಪಿಂಗ್ ಮಾಡಲು ಉತ್ಸಾಹದಿಂದ ಕಾಯುತ್ತಿದ್ದರು. ಹೊಸ ಕಾರುಗಳ ಖರೀದಿ ಸೆಪ್ಟೆಂಬರ್ ಕೊನೆ ವಾರ ಏರಿಕೆಯಾಗಿತ್ತು. ಜತೆಗೆ ಹಬ್ಬದ ಸೀಸನ್ ಶಾಪಿಂಗ್ ಹೆಚ್ಚಳವಾಗಿತ್ತು.