ಎಚ್.ಡಿ.ಎಫ್.ಸಿ. ಬ್ಯಾಂಕ್ `ಭಾರತದ ಅತ್ಯಂತ ಸುರಕ್ಷಿತ ಖಾಸಗಿ ಬ್ಯಾಂಕ್’ ಮತ್ತು `ಪ್ರೀಮಿಯರ್ ಬ್ಯಾಂಕಿಂಗ್ ಗೆ ಭಾರತದ ಅತ್ಯುತ್ತಮ’ ಎಂಬ ಪುರಸ್ಕಾರಗಳಿಗೆ ಭಾಜನ
ಎಚ್.ಡಿ.ಎಫ್.ಸಿ. ಬ್ಯಾಂಕ್ನ ಇನ್ವೆಸ್ಟ್ ಮೆಂಟ್ ಬ್ಯಾಕಿಂಗ್, ಪ್ರೈವೇಟ್ ಬ್ಯಾಂಕಿಂಗ್, ಇಂಟರ್ನ್ಯಾ ಷನಲ್ ಬ್ಯಾಂಕಿಂಗ್, ಡಿಜಿಟಲ್ ಇಕೊಸಿಸ್ಟಮ್ಸ್ ಅಂಡ್ ಬಾಸ್ ನ ಗ್ರೂಪ್ ಹೆಡ್ ರಾಕೇಶ್ ಕೆ. ಸಿಂಗ್, “ನಾವು ಭಾರತದ ಅತ್ಯಂತ ಸುರಕ್ಷಿತ ಖಾಸಗಿ ಬ್ಯಾಂಕ್ ಹಾಗೂ ಪ್ರೀಮಿಯರ್ ಬ್ಯಾಂಕಿಂಗ್ ಗೆ ಭಾರತದ ಅತ್ಯುತ್ತಮ ಬ್ಯಾಂಕ್ ಎಂಬ ಮಾನ್ಯತೆ ಪಡೆಯಲು ಬಹಳ ಸಂತೋಷ ಹೊಂದಿದ್ದೇವೆ.
-
ಮುಂಬೈ: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಯೂರೋಮನಿ ಪ್ರೈವೇಟ್ ಬ್ಯಾಂಕಿಂಗ್ ಅವಾರ್ಡ್ಸ್ 2026ರಿಂದ `ಭಾರತದ ಅತ್ಯಂತ ಸುರಕ್ಷಿತ ಖಾಸಗಿ ಬ್ಯಾಂಕ್’ ಮತ್ತು `ಪ್ರೀಮಿಯಂ ಬ್ಯಾಂಕಿಂಗ್ ಗೆ ಅತ್ಯುತ್ತಮ’ ಎಂಬ ಪುರಸ್ಕಾರಕ್ಕೆ ಭಾಜನವಾಗಿದೆ. ಈ ಪ್ರಶಸ್ತಿಗಳನ್ನು ಯೂರೋಮನಿ ಪತ್ರಿಕೆಯು ಆಯೋಜಿಸುತ್ತದೆ.
ತನ್ನ ವೆಬ್ಸೈಟ್ ನಲ್ಲಿ ಯೂರೋಮನಿಯು ಹೀಗೆ ವಿವರಿಸಿದೆ:
ಅತ್ಯುತ್ತಮ ಸುರಕ್ಷಿತ ಖಾಸಗಿ ಬ್ಯಾಂಕ್: ಎಚ್.ಡಿ.ಎಫ್.ಸಿ. ಬ್ಯಾಂಕ್ ಭಾರತದಲ್ಲಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಅತ್ಯಂತ ಸುರಕ್ಷಿತ ಖಾಸಗಿ ಬ್ಯಾಂಕ್ ಎಂದು ಮಾನ್ಯತೆ ಪಡೆದಿರುವುದು ಮೂರು ಕೇಂದ್ರ ಕ್ಷೇತ್ರಗಳಲ್ಲಿ ಸಾಮರ್ಥ್ಯ ತೋರಿದೆ: ಇದರ ಬಂಡವಾಳ ಸದೃಢತೆ, ಶಿಸ್ತುಬದ್ಧ ಸಾಲದ ರಿಸ್ಕ್ ನಿರ್ವಹಣೆ ಮತ್ತು ಸದೃಢ ರಿಸ್ಕ್ ತಳಹದಿಗಳಿಗೆ ಸಾಂಸ್ಥಿಕ ಬದ್ಧತೆ.
ಪ್ರೀಮಿಯರ್ ಬ್ಯಾಂಕಿಂಗ್ ಗೆ ಅತ್ಯುತ್ತಮ: ಎಚ್.ಡಿ.ಎಫ್.ಸಿ. ಬ್ಯಾಂಕ್ ಪ್ರೀಮಿಯರ್ ಬ್ಯಾಂಕಿಂಗ್ ಗೆ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಶೀರ್ಷಿಕೆ ಪಡೆದಿದ್ದು ಅದಕ್ಕೆ ಕಾರ್ಯಕ್ಷಮತೆಯಲ್ಲಿ ಬ್ಯಾಂಕಿನ ಸ್ಥಿರವಾದ ಪ್ರಗತಿ, ಉತ್ಪನ್ನದ ಆಳ, ಡಿಜಿಟಲ್ ಸಾಮರ್ಥ್ಯ ಮತ್ತು ಜನರ ಅಭಿವೃದ್ಧಿಯ ಬೆಂಬಲ ಪಡೆದಿದೆ.
ಇದನ್ನೂ ಓದಿ: HDFC Bank: ಎಚ್.ಡಿ.ಎಫ್.ಸಿ. ಬ್ಯಾಂಕ್ ನಿಂದ ಗೌಹಾಟಿಯಲ್ಲಿ ಹೊಸ ಟೆಕ್ ಅಂಡ್ ಡಿಜಿಟಲ್ ಫ್ಯಾಕ್ಟರಿಗೆ ಚಾಲನೆ
ಎಚ್.ಡಿ.ಎಫ್.ಸಿ. ಬ್ಯಾಂಕ್ನ ಇನ್ವೆಸ್ಟ್ ಮೆಂಟ್ ಬ್ಯಾಕಿಂಗ್, ಪ್ರೈವೇಟ್ ಬ್ಯಾಂಕಿಂಗ್, ಇಂಟರ್ನ್ಯಾಷನಲ್ ಬ್ಯಾಂಕಿಂಗ್, ಡಿಜಿಟಲ್ ಇಕೊಸಿಸ್ಟಮ್ಸ್ ಅಂಡ್ ಬಾಸ್ ನ ಗ್ರೂಪ್ ಹೆಡ್ ರಾಕೇಶ್ ಕೆ. ಸಿಂಗ್, “ನಾವು ಭಾರತದ ಅತ್ಯಂತ ಸುರಕ್ಷಿತ ಖಾಸಗಿ ಬ್ಯಾಂಕ್ ಹಾಗೂ ಪ್ರೀಮಿಯರ್ ಬ್ಯಾಂಕಿಂಗ್ ಗೆ ಭಾರತದ ಅತ್ಯುತ್ತಮ ಬ್ಯಾಂಕ್ ಎಂಬ ಮಾನ್ಯತೆ ಪಡೆಯಲು ಬಹಳ ಸಂತೋಷ ಹೊಂದಿದ್ದೇವೆ. ಈ ಪ್ರಶಸ್ತಿಗಳು ಗ್ರಾಹಕರಿಗೆ ಸೇವೆ ಒದಗಿಸಲು ನಮ್ಮ ತಂಡದ ಸರಿಸಾಟಿ ಇರದ ಬದ್ಧತೆಯನ್ನು ಬಿಂಬಿಸುತ್ತದೆ ಮತ್ತು ಅವರು ಸುಮಾರು ಮೂರು ದಶಕಗಳಿಂದ ಎಚ್.ಡಿ.ಎಫ್.ಸಿ. ಬ್ಯಾಂಕ್ ಮೇಲೆ ವಿಶ್ವಾಸ ಇರಿಸಿದ್ದಾರೆ.
ನಮ್ಮ ರಿಲೇಷನ್ ಶಿಪ್ ಮ್ಯಾನೇಜರ್ ಗಳು ನಮ್ಮ ಗ್ರಾಹಕರ ವಿಶಿಷ್ಟ ಹೂಡಿಕೆಯ ಅಗತ್ಯ ಗಳು ಮತ್ತು ಗುರಿಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಪೂರೈಸಲು ಸನ್ನದ್ಧರಾಗಿದ್ದಾರೆ. ನಾವು ಸಂಪತ್ತು ನಿರ್ವಹಣೆಗೆ ತಂತ್ರಜ್ಞಾನವನ್ನು ನಮ್ಮ ಸ್ಮಾರ್ಟ್ ವೆಲ್ತ್ ಅಪ್ಲಿಕೇಷನ್ ಮೂಲಕ ಅಳವಡಿಸುತ್ತೇವೆ. ಅದು ಅತ್ಯಂತ ವೈಯಕ್ತಿಕಗೊಳಿಸಿದ ಅನುಭವ ನೀಡುತ್ತದೆ ಮತ್ತು ಹಲವು ಗ್ರಾಹಕ ವಲಯಗಳಲ್ಲಿ ಸಂಪತ್ತು ನಿರ್ವಹಣೆಯನ್ನು ಪ್ರಜಾಸತ್ತೀಯ ಗೊಳಿಸುತ್ತದೆ” ಎಂದರು.
ಯೂರೋಮನಿಯ ಪ್ರೈವೇಟ್ ಬ್ಯಾಂಕಿಂಗ್ ಅವಾರ್ಡ್ಸ್ ವಿಶ್ವದಾದ್ಯಂತ ಖಾಸಗಿ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣೆಯ ಉದ್ಯಮದ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ ಗಳಲ್ಲಿ ಒಂದಾಗಿವೆ. ಕಳೆದ ಎರಡು ದಶಕಗಳಿಂದಲೂ ಈ ಕಾರ್ಯಕ್ರಮವು ಖಾಸಗಿ ಬ್ಯಾಂಕುಗಳನ್ನು ಪ್ರಮುಖ ವಿಭಾಗಗಳಲ್ಲಿ ಮಾನ್ಯತೆ ನೀಡುತ್ತಿದೆ. ಇದರಲ್ಲಿ ಅತ್ಯಂತ ಹೆಚ್ಚಿನ ನಿವ್ವಳ ಮೌಲ್ಯವುಳ್ಳವರು, ಕುಟುಂಬ ಕಛೇರಿ ಸೇವೆಗಳು, ಉತ್ತರಾಧಿಕಾರ ಯೋಜನೆ, ಡಿಜಿಟಲ್ ಸೇವೆಗಳು, ವಿವೇಚನೆಯ ಪೋರ್ಟ್ ಫೋಲಿಯೊ ಮ್ಯಾನೇಜ್ಮೆಂಟ್, ಸುಸ್ಥಿರತೆ ಮತ್ತಿತರೆ ಒಳಗೊಂಡಿವೆ.