ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೈಕ್ರೋ ಲೋನ್ಸ್ ಪೂರೈಸಲು ಮತ್ತು ಎಲ್ಲರಿಗೂ ಜೀವವಿಮೆ: ಎಚ್‌ಡಿಎಫ್‌ಸಿ ಲೈಫ್ ಮತ್ತು ದಿಗಂಬರ್ ಕ್ಯಾಪ್‌ಫಿನ್ ಲಿ.,ಸಹಯೋಗ

ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾ ಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಗಳ 120 ಜಿಲ್ಲೆ ಗಳಾದ್ಯಂತ ದಿಗಂಬರ್ ಕ್ಯಾಪ್‌ಫಿನ್ ಲಿ.,ನ ವ್ಯಾಪಕ ಕಾರ್ಯಜಾಲವನ್ನು ವರ್ಧಿಸುವ ಮೂಲಕ ಭಾಗಶಃ ನಗರ ಹಾಗೂ ಗ್ರಾಮೀಣ ಮಾರುಕಟ್ಟೆ ಗಳೊಳಗೆ ಜೀವ ವಿಮೆಯನ್ನು ಸುದೀರ್ಘವಾಗಿ ತರಲು ನೆರವಾಗಲಿದೆ

ಎಚ್‌ಡಿಎಫ್‌ಸಿ ಲೈಫ್ ಮತ್ತು ದಿಗಂಬರ್ ಕ್ಯಾಪ್‌ಫಿನ್ ಲಿ.,ಸಹಯೋಗ

Profile Ashok Nayak Jun 18, 2025 11:14 PM

ಬೆಂಗಳೂರು: ಭಾರತದ ಮುಂಚೂಣಿ ಜೀವ ವಿಮಾ ಸಂಸ್ಥೆಗಳ ಪೈಕಿ ಒಂದಾದ ಎಚ್‌ಡಿಎಫ್‌ಸಿ ಲೈಫ್ (HDFC Life) ಮತ್ತು ದಿಗಂಬರ್ ಕ್ಯಾಪ್‌ಫಿನ್ ಲಿ., ಮೈಕ್ರೋ ಲೋನ್ಸ್ ಪೂರೈಸುವ ಗುರಿಯೊಂದಿಗೆ ಹಣಕಾಸು ಒಳಗೊಳ್ಳುವಿಕೆಯನ್ನು ವರ್ಧಿಸುವುದಕ್ಕಾಗಿ ಒಂದುಗೂಡಿವೆ. ಈ ಸಹಭಾಗಿತ್ವವು, ಭಾರತದ ವಿವಿಧ ಸೇವಾವಂಚಿತ ಪ್ರದೇಶಗಳಾದ್ಯಂತ ಜೀವ ವಿಮೆಗೆ(life insurance) ಪ್ರವೇಶಾವಕಾಶ ಒದಗಿಸಲಿದೆ.

ಈ ಸಹಯೋಗವು, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಗಳ 120 ಜಿಲ್ಲೆ ಗಳಾದ್ಯಂತ ದಿಗಂಬರ್ ಕ್ಯಾಪ್‌ಫಿನ್ ಲಿ.,ನ ವ್ಯಾಪಕ ಕಾರ್ಯಜಾಲವನ್ನು ವರ್ಧಿಸುವ ಮೂಲಕ ಭಾಗಶಃ ನಗರ ಹಾಗೂ ಗ್ರಾಮೀಣ ಮಾರುಕಟ್ಟೆಗಳೊಳಗೆ ಜೀವ ವಿಮೆಯನ್ನು ಸುದೀರ್ಘವಾಗಿ ತರಲು ನೆರವಾಗಲಿದೆ.

ಇದು ಎರಡೂ ಸಂಸ್ಥೆಗಳ ಸಾಮಾನ್ಯ ಧ್ಯೇಯೋದ್ದೇಶ-ಅಂದರೆ, ವೈವಿಧ್ಯಮಯವಾದ ಹಾಗೂ ಈ ಮೊದಲು ಉಪಯೋಗಕ್ಕೆ ತರದ ಸಮುದಾಯಗಳನ್ನು ತಲುಪುವ ಮೂಲಕ ಹಣಕಾಸು ಒಳಗೊಳ್ಳುವಿಕೆಯಲ್ಲಿ ಇರುವ ಅಂತರವನ್ನು ಕಡಿಮೆ ಮಾಡುವ ಧ್ಯೇಯೋದ್ದೇಶಕ್ಕೆ ಇನ್ನಷ್ಟು ಒತ್ತು ನೀಡಲಿದೆ. ಈ ಉಪಕ್ರಮವು, ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಗೆ ಅವಕಾಶ ಒದಗಿಸಬೇಕೆನ್ನುವ ಎಚ್‌ಡಿಎಫ್‌ಸಿ ಲೈಫ್‌ನ ಬದ್ಧತೆಗೆ ಅನುಗುಣವಾಗಿದ್ದು, ಬೃಹತ್ ಪ್ರಮಾಣದ ಹಣಕಾಸು ಭದ್ರತೆಯ ದೊಡ್ಡ ಗುರಿ ಮತ್ತ ಎಲ್ಲರನ್ನೂ ಸಬಲಗೊಳಿಸುವ ಗುರಿಗೆ ಕೊಡುಗೆ ಸಲ್ಲಿಸಿದೆ.

ಕುರಿತು ಮಾತನಾಡುತ್ತಾ, ಎಚ್‌ಡಿಎಫ್‌ಸಿ ಲೈಫ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಚೀಫ್ ಬಿಜಿನೆಸ್ ಆಫಿಸರ್ ವಿನೀತ್ ಅರೋರ, “ದಿಗಂಬರ್ ಕ್ಯಾಪ್‌ಫಿನ್ ಲಿ.,ನೊಪ್ಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಜೀವ ವಿಮಾ ಉದ್ದಿಮೆಯು, “2047 ವೇಳೆಗೆ ಎಲ್ಲರಿಗೂ ಜೀವವಿಮೆ” ಯ ಗುರಿಯನ್ನು ಸಾಧಿಸಲು ಸಜ್ಜಾಗಿದೆ. ಎಚ್‌ಡಿಎಫ್‌ಸಿ ಲೈಫ್‌ನಲ್ಲಿ ನಾವು ವಿವಿಧ ಭೌಗೋಳಿಕ ಪ್ರದೇಶಗಳಾದ್ಯಂತ ನಮ್ಮ ಹೆಜ್ಜೆಗುರುತನ್ನು ವರ್ಧಿಸುವ ಮೂಲಕ ಈ ಸಂಘಟಿತ ಗುರಿಯನ್ನು ಸಾಧಿಸುವ ಪ್ರಯತ್ನ ನಡೆಸಿದ್ದೇವೆ. ಈ ಸಹಯೋಗವು, ವಿಶೇಷವಾಗಿ, ಸಮಾಜದ ಆರ್ಥಿಕವಾಗಿ ದುರ್ಬಲವಾದ ವರ್ಗಕ್ಕೆ ಸೇರಿದವರಿಗೆ ವಿಮೆ ಒದಗಿಸುವಲ್ಲಿ ಮತ್ತು ಆ ಮೂಲಕ ಅವರು ಹಾಗೂ ಅವರ ಕುಟುಂಬಗಳನ್ನು ಸುಭದ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಾವು ನಂಬಿದ್ದೇವೆ.” ಎಂದು ಹೇಳಿದರು.

ಸಹಯೋಗದ ಬಗ್ಗೆ ಮಾತನಾಡುತ್ತಾ, ದಿಗಂಬರ್ ಕ್ಯಾಪ್‌ಫಿನ್ ಲಿ.,ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜಿವ್ ಜೈನ್, “ಸೇವಾವಂಚಿತ ಉದ್ದಿಮೆದಾರರು ಪಡೆದುಕೊಳ್ಳುವ ಪ್ರತಿಯೊಂದು ಸಾಲವೂ ಅವರಿಗೆ ಸಾಮಾಜಿಕ ಸುಭದ್ರತೆ ಒದಗಿಸುವುದನ್ನು ಖಾತರಿಪಡಿಸುವ ಸಲುವಾಗಿ ಎಚ್‌ಡಿಎಫ್‌ಸಿದೊಂದಿಗೆ ಸಹಯೋಗ ಏರ್ಪಡಿಸಿಕೊಂಡಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಈ ಸಹಯೋಗವು ಸಾಲಗಾರರು ಮರಣ ಹೊಂದಿದ ದುರಾದೃಷ್ಟಕರ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಹಣಕಾಸು ರಕ್ಷಣೆ ಒದಗಿಸಲಿದೆ. ಗ್ರಾಹಕ ಗಮನ ಕೇಂದ್ರೀ ಕರಣದ ಮೇಲೆ ಎಚ್‌ಡಿಎಫ್‌ಸಿ ಲೈಫ್‌ನ ಪ್ರಬಲ ಗಮನ ಕೇಂದ್ರೀಕರಣ ಹಾಗೂ ಅದರ ಸರಳ, ಮೊದಲಿನಿಂದ-ಕೊನೆಯವರೆಗಿನ ಪ್ರಕ್ರಿಯೆಗಳು, ಆರ್ಥಿಕಸ್ತರದ ತಳಭಾಗದಲ್ಲಿರುವ ಕಡಿಮೆ-ಆದಾಯದ ವ್ಯಕ್ತಿಗಳಿಗೆ ವಿಮಾ ಕವರೇಜ್‌ಅನ್ನು ಪರಿಣಾಮಕಾರಿಯಾಗಿ ಒದಗಿಸಲು ದಿಗಂಬರ್ ಕ್ಯಾಪ್‌ಫಿನ್ ಲಿ.,ಗೆ ನೆರವಾಗಲಿದೆ.” ಎಂದು ಹೇಳಿದರು.