ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HDFC Life: ಜ ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಬಾಧಿತ ಕುಟುಂಬಗಳಿಗೆ ಹಕ್ಕು ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಿದ ಎಚ್.ಡಿ.ಎಫ್.ಸಿ. ಲೈಫ್

ಭಾರತದ ಅತಿ ದೊಡ್ಡ ಜೀವ ವಿಮಾದಾರ ಸಂಸ್ಥೆಗಳಲ್ಲಿ ಒಂದಾದ ಎಚ್.ಡಿ.ಎಫ್.ಸಿ. ಲೈಫ್ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೀವ ಕಳೆದುಕೊಂಡ ಪಾಲಿಸಿದಾರರ ಕುಟುಂಬ ಸದಸ್ಯರು/ನಾಮನಿರ್ದೇಶಿತರಿಗೆ ಹಕ್ಕು ಸಲ್ಲಿಕೆ ಪ್ರಕ್ರಿಯೆ ಯನ್ನು ಸರಳೀಕರಿಸಿದೆ

ಉಗ್ರರ ದಾಳಿ ಬಾಧಿತ ಕುಟುಂಬಗಳಿಗೆ ಹಕ್ಕು ಸಲ್ಲಿಕೆ ಪ್ರಕ್ರಿಯೆ ಸರಳ

Profile Ashok Nayak Apr 28, 2025 12:21 AM

ಬೆಂಗಳೂರು: ಭಾರತದ ಅತಿದೊಡ್ಡ ಜೀವ ವಿಮಾದಾರ ಸಂಸ್ಥೆಗಳಲ್ಲಿ ಒಂದಾದ ಎಚ್.ಡಿ.ಎಫ್.ಸಿ. ಲೈಫ್ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೀವ ಕಳೆದುಕೊಂಡ ಪಾಲಿಸಿದಾರರ ಕುಟುಂಬ ಸದಸ್ಯರು/ನಾಮನಿರ್ದೇಶಿತರಿಗೆ ಹಕ್ಕು ಸಲ್ಲಿಕೆ ಪ್ರಕ್ರಿಯೆ ಯನ್ನು ಸರಳೀಕರಿಸಿದೆ. ಎಚ್.ಡಿ.ಎಫ್.ಸಿ. ಲೈಫ್‌ನೊಂದಿಗೆ ಪಾಲಿಸಿ ಹೊಂದಿದ್ದು ಮರಣಿಸಿದವರ ಹಕ್ಕನ್ನು ಸಲ್ಲಿಸಲು ಅವರ ನಾಮಿನಿ/ಕಾನೂನುಬದ್ಧ ಉತ್ತರಾಧಿಕಾರಿಗಳು: ಸ್ಥಳೀಯ ಸರ್ಕಾರ, ಪೊಲೀಸ್, ಆಸ್ಪತ್ರೆ ಅಥವಾ ಸಂಬಂಧಿತ ಅಧಿಕಾರಿಗಳಿಂದ ಭಯೋತ್ಪಾದಕ ದಾಳಿಯಿಂದ ಸಾವಾಗಿದೆ ಎಂದು ಪುರಾವೆಯನ್ನು ಒದಗಿಸಬೇಕಾಗುತ್ತದೆ.

ಇದನ್ನೂ ಓದಿ: HDFC Life: ನಿವೃತ್ತಿ ಯೋಜನೆ ಪ್ರಾರಂಭ ಮಾಡಲು ಇದುವೇ ಸೂಕ್ತ ಸಮಯ ಎಂದು ಸಾರಿದ ಹೆಚ್‌ಡಿಎಫ್‌ಸಿ ಲೈಫ್‌ನ ಹೊಸ ಜಾಹೀರಾತು ಅಭಿಯಾನ

ಈ ಸಂಬಂಧ, ನಾಮನಿರ್ದೇಶಿತರು ಎಚ್.ಡಿ.ಎಫ್.ಸಿ. ಲೈಫ್ ಅನ್ನು ಈ ಕೆಳಗಿನವುಗಳ ಮೂಲಕ ಸಂಪರ್ಕಿಸಬಹುದು: ಕಾಲ್ ಸೆಂಟರ್ ಸಂಖ್ಯೆ: 022-68446530 ಗೆ ಕರೆ ಅಥವಾ service@hdfclife.comor ಗೆ ಇಮೇಲ್ ಮಾಡಬಹುದು ಅಥವಾ ಅದರ ಯಾವುದೇ ಶಾಖಾ ಕಚೇರಿ ಗಳಿಗೆ ಭೇಟಿ ನೀಡಬಹುದು. ಪೀಡಿತ ಕುಟುಂಬಗಳಿಗೆ ಎಲ್ಲ ಬಗೆಯ ಸಹಾಯ ಮತ್ತು ಬೆಂಬಲವನ್ನು ನೀಡಲು ನಮ್ಮ ಕಂಪನಿಯ ಯಾವುದೇ ಸ್ಥಳೀಯ ಶಾಖೆಯ ಸಿಬ್ಬಂದಿ ಸಿದ್ಧರಿದ್ದಾರೆ.

ಎಚ್.ಡಿ.ಎಫ್.ಸಿ. ಲೈಫ್‌ನ ಚೀಫ್ ಆಪರೇಟಿಂಗ್ ಆಫೀಸರ್, ಸಮೀರ್ ಯೋಗೀಶ್ವರ್: "ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಮ್ಮ ಹೃದಯ ತುಂಬಿದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅವರು ಅನುಭವಿಸಿದ ನಷ್ಟವನ್ನು ಯಾವುದೂ ತುಂಬಲು ಸಾಧ್ಯವಿಲ್ಲವಾದರೂ, ಹಕ್ಕು ಸಲ್ಲಿಕೆ ಪ್ರಕ್ರಿಯೆಗಳನ್ನು ಸರಳೀಕರಿಸುವ ಮೂಲಕ ಹಕ್ಕು ಸಲ್ಲಿಕೆಗೆ ಅವರು ಹೆಚ್ಚಿನ ಶ್ರಮ ಪಡದಂತೆ ಮಾಡಬೇಕೆನ್ನುವುದು ನಮ್ಮ ಈ ಪುಟ್ಟ, ಕಳಕಳಿಯ ಪ್ರಯತ್ನ ವಾಗಿದೆ."