ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸ್ವಂತ ಸೂರಿನ ಕನಸು ನನಸು ಮಾಡಿಕೊಳ್ಳುವುದು ಹೇಗೆ?

ಸ್ವಂತ ಮನೆಯಲ್ಲಿರಬೇಕು ಎಂಬುದು ಬಾಡಿಗೆ ಮನೆಯಲ್ಲಿರುವವರೆಲ್ಲರ ಕನಸು. ಆದರೆ ಇದನ್ನು ಈಡೇರಿಸಿಕೊಳ್ಳಲು ಹಗಲಿರುಳೆನ್ನದೆ ಹಲವರು ದುಡಿಯುತ್ತಾರೆ, ಇನ್ನು ಕೆಲವರು ಇದ್ದ ಹಣವೆಲ್ಲ ಹಾಕಿ ಕೊನೆಗೆ ಏನೂ ಕೈಯಲ್ಲಿ ಇಲ್ಲದೆ ಒದ್ದಾಡುತ್ತಾರೆ. ಹೀಗಿರುವಾಗ ಸ್ವಂತ ಮನೆ ಬೇಕೇ ಅಥವಾ ಬಾಡಿಗೆ ಮನೆಯಲ್ಲೇ ವಾಸ ಮಾಡುವುದು ಸಾಕೇ ಏನು ಹೇಳುತ್ತಾರೆ ತಜ್ಞರು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಅಶೋಕ್ ದೇವಾನಾಂಪ್ರಿಯ

ಬೆಂಗಳೂರು: ಸ್ವಂತ ಮನೆ (Own house) ಎಲ್ಲರ ಕನಸು ಹೌದು. ಆದರೆ ಇದಕ್ಕಾಗಿ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವಂತಾದರೆ ಈ ಕನಸನ್ನು ಬಿಟ್ಟು ಬಿಡುವುದು ಒಳ್ಳೆಯದು ಎನ್ನುತ್ತಾರೆ ಹಣಕಾಸು ತಜ್ಞರು, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕರಾದ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಸ್ವಂತ ಮನೆ ಖರೀದಿ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ.

ಒಬ್ಬ ವ್ಯಕ್ತಿಯ ಸಂಬಳ ಒಂದು ಲಕ್ಷ ರೂ. ಆಗಿದ್ದು, 30-40 ಸಾವಿರ ರೂ. ಖರ್ಚು ಕಳೆದರೆ ಉಳಿತಾಯ ಮೊತ್ತ 60 ಸಾವಿರ ರೂ. ಆಗಿದ್ದು, ಅದರಲ್ಲಿ 30 ಸಾವಿರ ರೂ. ಇಎಂಐಗೆ ಇಡಬಹುದು ಎನ್ನುವವರು ಸ್ವಂತ ಸೂರಿನ ಕನಸನ್ನು ನನಸು ಮಾಡಿಕೊಳ್ಳಬಹುದು. ಆದರೆ ಸಂಬಳ 2 ಲಕ್ಷ ರೂ. ಇದ್ದು, ಇಎಂಐ ಒಂದೂವರೆ ಲಕ್ಷ ರೂ. ಆಗೋದಾದರೆ ಆಗ ಮನೆ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ಅವರು.

ಚಿನ್ನ, ಬೆಳ್ಳಿ ದರ ಇಳಿಕೆ ಸದ್ಯದಲ್ಲೇ ಇಳಿಕೆಯಾಗುತ್ತಾ? ಹೂಡಿಕೆ ಮಾಡೋದು ಸುರಕ್ಷಿತವೇ? ಈ ಬಗ್ಗೆ ಏನು ಹೇಳುತ್ತಾರೆ ತಜ್ಞರು?

ಸಾಮಾನ್ಯವಾಗಿ ಸ್ವಂತ ಮನೆಯಾದರೆ, ಮದುವೆಯಾದರೆ, ಮಕ್ಕಳಾದರೆ ಜೀವನದಲ್ಲಿ ಸೆಟಲ್ ಆದ ಹಾಗೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಎಷ್ಟೋ ಮನೆಗಳಲ್ಲಿ ಇವತ್ತು ಒಬ್ಬೊಬ್ಬರೇ ವಾಸ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು ಕೆಲವು ದೊಡ್ಡ ದೊಡ್ಡ ಬಂಗಲೆಗಳು ಖಾಲಿ ಬಿದ್ದಿವೆ. ಹೀಗಿರುವಾಗ ಅಗತ್ಯವಿದ್ದರೆ ಮತ್ತು ನಮ್ಮ ಸಾಮರ್ಥ್ಯವಿದ್ದರೆ ಮಾತ್ರ ಮನೆ ಖರೀದಿ ಮಾಡುವುದು ಒಳ್ಳೆಯದು ಎನ್ನುತ್ತಾರೆ ಅಶೋಕ್ ದೇವಾನಾಂಪ್ರಿಯ.



ಅಕ್ಕಪಕ್ಕದವರು, ಬಂಧು ಬಳಗವನ್ನು ಮೆಚ್ಚಿಸಲು ಮನೆ ಕಟ್ಟುವ ಸಾಹಸಕ್ಕೆ ಯಾರೂ ಇಳಿಯಬಾರದು. ಸಾಮರ್ಥ್ಯ ಇದ್ದರೆ ಮಾತ್ರ ಮಾಡಬೇಕು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಸಂಬಳದ ಶೇ. 70ರಷ್ಟು ಇಎಂಐ ಹೋದರೆ ಅದು ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದರು.

ಭಾರತದಲ್ಲಿ ಶೇ. 6ಕ್ಕಿಂತ ಹೆಚ್ಚು ಬಾಡಿಗೆ ಇಲ್ಲ. ಸ್ವಂತ ಮನೆಗಿಂತ ಹಣಕಾಸಿನಲ್ಲಿ ಸ್ವಾತಂತ್ರ್ಯ ನಮಗೆ ಬಹಳ ಮುಖ್ಯ. ನಿವೃತ್ತಿಯಾಗುವ ವೇಳೆ ಒಂದು ಮನೆ ಎಲ್ಲರಿಗೂ ಬೇಕು. ಅದನ್ನು ಶಾಂತಿಯುತವಾಗಿ ಈಡೇರಿಸುವ ಗುರಿಯನ್ನು ನಾವು ಹೊಂದಿರಬೇಕು. ಇದಕ್ಕಾಗಿ ಹಣವನ್ನು ಉಳಿಸಿ ಮಾರುಕಟ್ಟೆಯಲ್ಲಿ ಹಾಕಿ. ಆಗ ಲೋನ್ ಮಾಡದೇ ಮನೆ ಕಟ್ಟಬಹುದು ಎನ್ನುತ್ತಾರೆ ಅಶೋಕ್.

Indian Economy Growth: ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಭಾರತ; ಇದು ಸುಳ್ಳು ಸುದ್ದಿಯಲ್ಲ-ಇಲ್ಲಿದೆ ಪ್ರೂಫ್‌

ನಿವೃತ್ತಿ ಬಳಿಕ ಒಂದು ಮನೆಯಲ್ಲಿ ಒಂದಿಬ್ಬರು ಮಾತ್ರ ಇರಬೇಕಾದ ಸನ್ನಿವೇಶ ಇದ್ದರೆ ಅದಕ್ಕಾಗಿ ಸ್ವತಂತ್ರ ಮನೆಗಿಂತ ಫ್ಲಾಟ್ ತಗೊಳ್ಳುವುದು ಒಳ್ಳೆಯದು. ಒಂದು ವೇಳೆ ಸ್ವತಂತ್ರ ಮನೆ ಬೇಕೆಂದಾದರೆ ಸ್ವಂತ ಊರಿನಲ್ಲಿ ಮಾಡಿಕೊಳ್ಳಬಹುದು. ನಿವೃತ್ತಿಯ ಬಳಿಕ ನಮಗೆ ಬೇಕಿರುವುದು ಆರೋಗ್ಯ ಕಾಳಜಿ ಮತ್ತು ಮನಸ್ಸಿಗೆ ಶಾಂತಿ. ಇದನ್ನು ನಾವು ಆದ್ಯತೆಯನ್ನಾಗಿ ಮಾಡಿಕೊಳ್ಳಬೇಕು ಎಂದರು.

ಬಾಡಿಗೆ ಮನೆ, ಸ್ವಂತ ಮನೆ ಇದರಲ್ಲಿ ಯಾವುದು ಒಳ್ಳೆಯದು ಎಂಬುದಿಲ್ಲ. ನಮ್ಮ ಬಜೆಟ್ ನೋಡಿ, ಸರಿಯಾದ ಲೆಕ್ಕಾಚಾರ ಮಾಡಿ ತೆಗೆದುಕೊಳ್ಳಬೇಕು. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಸ್ವಂತ ಮನೆ ಮಾಡಿಕೊಳ್ಳಲು ಹೋಗಬೇಡಿ ಎನ್ನುತ್ತಾರೆ ಅಶೋಕ್.

ವಿದ್ಯಾ ಇರ್ವತ್ತೂರು

View all posts by this author