ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Indian Economy Growth: ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಭಾರತ; ಇದು ಸುಳ್ಳು ಸುದ್ದಿಯಲ್ಲ-ಇಲ್ಲಿದೆ ಪ್ರೂಫ್‌

ಕಳೆದ ಒಂದು ದಶಕದಿಂದ ದೇಶದ ಜಿಡಿಪಿ ದರ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಇದೀಗ ಜಿಡಿಪಿ ಗಾತ್ರದ ದೃಷ್ಟಿಯಿಂದ ಭಾರತ ವಿಶ್ವದಲ್ಲೇ 4ನೇ ಸ್ಥಾನಕ್ಕೇರಿದೆ. ಈ ಮೂಲಕ ವಿಶ್ವದ ಪ್ರಭಾವಿ ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿರುವುದು ನಿಜವೇ ? ಏನು ಹೇಳುತ್ತದೆ ಈ ಕುರಿತಾದ ಅಂಕಿ ಅಂಶಗಳು? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಕಲಿಯಲ್ಲ

ಕೇಶವ್ ಪ್ರಸಾದ್ -

ಬೆಂಗಳೂರು, ಜ. 10: ಕಳೆದ ಒಂದು ದಶಕದಿಂದ ಭಾರತವು (India GDP growth) ವಿಶ್ವದ ಪ್ರಭಾವಿ ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಆರ್ಥಿಕ ಬೆಳವಣಿಗೆ. 2014ರಲ್ಲಿ ಜಿಡಿಪಿ (GDP) ಗಾತ್ರದ ದೃಷ್ಟಿಯಿಂದ 10ನೇ ಸ್ಥಾನದಲ್ಲಿದ್ದ ಭಾರತ ಇದೀಗ 2025ರಲ್ಲಿ 4ನೇ ಸ್ಥಾನಕ್ಕೇರಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ದೇಶವಾಗಿದೆ ಗುರುತಿಸಿಕೊಂಡಿದೆ. ಇದೊಂದು ಐತಿಹಾಸಿಕ ಸಾಧನೆ. ಈ ಬಗ್ಗೆ 'ವಿಶ್ವವಾಣಿ ಮನಿ' (Vishwavani Money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಡಿಪಿ ಬೆಳವಣಿಗೆ ಬಗ್ಗೆ ಕೆಲವರು ನಕಾರಾತ್ಮಕ ಅಂಶಗಳನ್ನು ಎತ್ತಿದ್ದರೂ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌- ಅಭಿವೃದ್ಧಿ ಎಂದರೆ ನಿಜವಾದ ಸ್ವಾತಂತ್ರ್ಯ ಆಗಿರಬೇಕು. ಕೇವಲ ಜಿಡಿಪಿ ಬೆಳವಣಿಗೆಯಲ್ಲ . ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಖರ್ಚು ಮಾಡುತ್ತಿಲ್ಲ ಎಂದಿದ್ದರು. ಅದೇ ರೀತಿ ಜೆಎnffಯು ನಿವೃತ್ತ ಪ್ರೊಫೆಸರ್ ಅರುಣ್ ಕುಮಾರ್ ಭಾರತದ ಜೆಡಿಪಿ ಅಂಕಿ ಅಂಶಗಳನ್ನು ಉತ್ಪ್ರೇಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಇವರೆಲ್ಲ ತಲಾ ಆದಾಯದ ಮೇಲೆ ದೇಶದ ಆರ್ಥಿಕತೆ ನಿರ್ಧಾರವಾಗಬೇಕು ಎನ್ನುತ್ತಾರೆ. ಆದರೆ ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಜಿಡಿಪಿಯನ್ನೇ ಮೊದಲು ಪರಿಗಣಿಸಲಾಗುತ್ತದೆ ಎನ್ನುತ್ತಾರೆ ಕೇಶವ್ ಪ್ರಸಾದ್.

ದೇಶದ ಜಿಡಿಪಿ ದರ 2023-24ರಲ್ಲಿ ಶೇ. 8.2ರಷ್ಟಾಗಿದೆ. ಈ ಮೂಲಕ ಇದೀಗ ದೇಶ ವಿಶ್ವದ ನಾಲ್ಕನೇ ಅತೀ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತಕ್ಕಿಂತ ಮೊದಲು ಅಮೆರಿಕ, ಚೀನಾ, ಜರ್ಮನಿ ಇದ್ದು, ಇತ್ತೀಚಿಗೆ ಭಾರತವು ಜಿಡಿಪಿ ದರದಲ್ಲಿ ಜಪಾನ್ ಅನ್ನು ಹಿಂದಿಕ್ಕಿದೆ ಎಂದರು.

ವಿಡಿಯೊ ಇಲ್ಲಿದೆ:



ಭಾರತದ ಆರ್ಥಿಕತೆಯು ಫ್ರಾನ್ಸ್, ಬ್ರಿಟನ್‌ನ ಆರ್ಥಿಕತೆಯನ್ನು ಸೇರಿಸಿದರೂ ಸರಿ ಹೊಂದಲು ಸಾಧ್ಯವಿಲ್ಲ ಎಂದ ಅವರು, ಇದೀಗ ಭಾರತ 4.8 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದೆ. ಇದು ಮುಂದಿನ ಎರಡು ಮೂರು ವರ್ಷಗಳಲ್ಲಿ 7.3 ಟ್ರಿಲಿಯನ್ ಡಾಲರ್ ಅಗಲಿದ್ದು, ಆಗ ದೇಶ ಜರ್ಮನಿಯನ್ನು ಕೂಡ ಹಿಂದಿಕ್ಕಲಿದೆ ಎನ್ನುತ್ತದೆ ಅಂಕಿಅಂಶಗಳು ಎನ್ನುತ್ತಾರೆ ಕೇಶವ್ ಪ್ರಸಾದ್.

ಜಾಗತಿಕ ತಲ್ಲಣಗಳ ನಡುವೆಯೂ ಭಾರತದ ಅರ್ಥ ವ್ಯವಸ್ಥೆಯು ವೇಗವಾಗಿ ಬೆಳವಣಿಗೆಯನ್ನು ಹೊಂದುತ್ತಿದೆ. ಆಫ್ರಿಕಾ ಖಂಡದಲ್ಲಿ ಸದ್ಯ ಭಾರತದ ಆರ್ಥಿಕತೆಯೇ ದೊಡ್ಡದಾಗಿದೆ ಎಂದು ಅವರು ತಿಳಿಸಿದರು.

ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡ್ತಾರಾ ಸಚಿವೆ ನಿರ್ಮಲಾ ಸೀತಾರಾಮನ್ ?

ಐಎಂಎಫ್ ಮಾಹಿತಿ ಪ್ರಕಾರ ಭಾರತವು 2028-29ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಲಿದೆ. ಭಾರತದ ಆರ್ಥಿಕತೆ ಮೊದಲ ಟ್ರಿಲಿಯನ್ ಡಾಲರ್ ಗೆ ತಲುಪಲು 60 ವರ್ಷ ಬೇಕಾಯಿತು. ಬಳಿಕ ಎರಡನೇ ಟ್ರಿಲಿಯನ್ ಗೆ ತಲುಪಲು 7 ವರ್ಷ, ಮೂರನೇ ಟ್ರಿಲಿಯನ್ ಡಾಲರ್ ಗೆ ತಲುಪಲು 7 ವರ್ಷ, ನಾಲ್ಕನೇ ಟ್ರಿಲಿಯನ್ ಡಾಲರ್ ಗೆ 4 ವರ್ಷ ಬೇಕಾಯಿತು. ಮುಂದಿನ ನಾಲ್ಕು ವರ್ಷದಲ್ಲಿ ಇದು 5 ಟ್ರಿಲಿಯನ್ ಡಾಲರ್ ಗೆ ತಲುಪುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಚಿನ್ನ, ಬೆಳ್ಳಿ ದರ ಇಳಿಕೆ ಸದ್ಯದಲ್ಲೇ ಇಳಿಕೆಯಾಗುತ್ತಾ? ಹೂಡಿಕೆ ಮಾಡೋದು ಸುರಕ್ಷಿತವೇ?

ಜಾಗತಿಕ ತಲ್ಲಣಗಳ ನಡುವೆಯು ದೇಶದ ಸರಾಸರಿ ವಾರ್ಷಿಕ ಜಿಡಿಪಿ ದರ 1999- 2023ರ ನಡುವೆ ಶೇ. 6.7ರಷ್ಟಿದೆ. ಇದು ಹಲವಾರು ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಹೆಚ್ಚು. ಜಾಗತಿಕ ಆರ್ಥಿಕ ಹಿಂಜರಿತ, ಕೋವಿಡ್ ಸಾಂಕ್ರಾಮಿಕ, ರಷ್ಯಾ. ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯ ಬಿಕ್ಕಟ್ಟು, ಯೂರೋಪಿನ ಮಂದಗತಿ, ಅಮೆರಿಕದ ಸುಂಕ ಬೆದರಿಕೆ, ಭಾರತ ಚೀನಾ, ಪಾಕಿಸ್ತಾನ ಗಡಿ ವಿವಾದದ ನಡುವೆಯೂ ಭಾರತದ ಈ ಸಾಧನೆ ಬಹುದೊಡ್ಡದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಯ ನಡುವೆಯೂ ದೇಶದ ರಫ್ತಿನಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಇದು ಮುಂದಿನ ದಿನಗಳಲ್ಲಿ ದೇಶದ ಜಿಡಿಪಿ ದರವನ್ನು ಮತ್ತಷ್ಟು ಹೆಚ್ಚು ಮಾಡುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಕೇಶವ್ ಪ್ರಸಾದ್.