Jio AI Classroom: ಜಿಯೋದಿಂದ ಎಐ ಕ್ಲಾಸ್ ರೂಮ್ ಫೌಂಡೇಷನ್ ಕೋರ್ಸ್ ಆರಂಭ
JioPC: ಇಂಡಿಯಾ ಮೊಬೈಲ್ ಕಾಂಗ್ರೆಸ್- 2025 ಉದ್ಘಾಟನೆ ದಿನದಂದು ಜಿಯೋದಿಂದ ಎಐ ಕ್ಲಾಸ್ ರೂಮ್- ಫೌಂಡೇಷನ್ ಕೋರ್ಸ್ ಆರಂಭದ ಘೋಷಣೆ ಮಾಡಲಾಯಿತು. ಇದನ್ನು ಜಿಯೋಪಿಸಿ ರೂಪಿಸಿದೆ. ಇದು ಉಚಿತ ಹಾಗೂ ಆರಂಭಿಕ ಸ್ನೇಹಿ ಪ್ರೋಗ್ರಾಂ ಆಗಿದ್ದು, ಪ್ರತಿ ಕಲಿಕಾರ್ಥಿಯೂ ಎಐ- ಸಿದ್ಧವಾಗಿರುವಂತೆ ಈ ಪ್ರೋಗ್ರಾಂ ರೂಪಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

-

ನವದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್- 2025 ಉದ್ಘಾಟನೆ ದಿನದಂದು ಜಿಯೋದಿಂದ ಎಐ ಕ್ಲಾಸ್ ರೂಮ್- ಫೌಂಡೇಷನ್ ಕೋರ್ಸ್ ಆರಂಭದ ಘೋಷಣೆ ಮಾಡಲಾಯಿತು. ಇದನ್ನು ಜಿಯೋಪಿಸಿ (JioPC) ರೂಪಿಸಿದೆ. ಇದು ಉಚಿತ ಹಾಗೂ ಆರಂಭಿಕ ಸ್ನೇಹಿ ಪ್ರೋಗ್ರಾಂ ಆಗಿದ್ದು, ಪ್ರತಿ ಕಲಿಕಾರ್ಥಿಯೂ ಎಐ- ಸಿದ್ಧವಾಗಿರುವಂತೆ ಈ ಪ್ರೋಗ್ರಾಂ ರೂಪಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮಕ್ಕಳು ಹೇಗೆ ಕಲಿಯುತ್ತಾರೆ, ಕೆಲಸ ಮಾಡುತ್ತಾರೆ ಮತ್ತು ಸೃಷ್ಟಿಸುತ್ತಾರೆ ಎಂಬುದರಲ್ಲಿ ಪರಿವರ್ತನೆ ತರುತ್ತಿದೆ. ಸರಿಯಾದ ಜ್ಞಾನ, ಕೌಶಲ ಮತ್ತು ಸಲಕರಣೆ ಮೂಲಕ ಸಬಲಗೊಳಿಸುತ್ತದೆ. ಅವಕಾಶಗಳ ಬಾಗಿಲು ತೆರೆದು, ಭವಿಷ್ಯವನ್ನು ರೂಪಿಸುತ್ತಿದೆ. ಜಿಯೋ ಇನ್‌ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಜಿಯೋಪಿಸಿ ಎಐ ಕ್ಲಾಸ್ ರೂಮ್ ಪರಿಚಯಿಸುತ್ತಿದೆ. ಈ ರೀತಿಯದ್ದು ಒಂದು ಬಗೆಯ, ರಚನಾತ್ಮಕವಾದ, ಪ್ರಮಾಣಿಕೃತವಾದ ಮತ್ತು ಉಚಿತ ಎಐ ಫೌಂಡೇಷನ್ ಕೋರ್ಸ್ ಆಗಿದ್ದು, ಅದರಲ್ಲೂ ವಿಶೇಷವಾಗಿ ಆರಂಭಿಕ ಹಂತದದ ಕಲಿಕೆಗೆ ರೂಪಿಸಲಾಗಿದೆ.
ಪಿಸಿ (ಪರ್ಸನಲ್ ಕಂಪ್ಯೂಟರ್), ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಬಳಸಿಕೊಂಡು ಯಾರು ಬೇಕಾದರೂ ಇದರ ಪ್ರವೇಶ ಪಡೆಯಬಹುದು. ಕಲಿಯುವಂಥವರು ಈ ಕೋರ್ಸ್ ಅನ್ನು ತಮ್ಮ ಜಿಯೋಸೆಟ್ ಟಾಪ್ ಬಾಕ್ಸ್‌ನಲ್ಲಿ ಇರುವಂಥ ಜಿಯೋಪಿಸಿಯಲ್ಲಿ ತಮ್ಮ ಟೀವಿಗಳ ಮೂಲಕ ಕಲಿತುಕೊಳ್ಳಬಹುದು. ಜಿಯೋಪಿಸಿ ಎಂಬುದು ಮುಂದಿನ ತಲೆಮಾರಿನ ಎಐ ಸಿದ್ಧವಾದ ಕಂಪ್ಯೂಟರ್ ಮತ್ತು ಜತೆಗೆ ಚಂದಾದಾರಿಕೆ ವಿಧಾನವನ್ನು ಆರಿಸಿಕೊಂಡರೆ ವಿಶಿಷ್ಟ ಪಾವತಿ ವಿಧಾನ ಸಹ ಇದೆ. ಇದು ಯಾವುದೇ ಸ್ಕ್ರೀನ್ ಅನ್ನು ಸದಾ ಉತ್ಕೃಷ್ಟ ಮಟ್ಟದ, ಸುರಕ್ಷಿತ ಕಂಪ್ಯೂಟರ್ ಮಾಡುತ್ತದೆ ಹಾಗೂ ಅದಕ್ಕೆ ಯಾವುದೇ ರಿಪೇರಿ ಮತ್ತು ನಿರ್ವಹಣೆ ಅಗತ್ಯ ಇರುವುದಿಲ್ಲ. ಪ್ರೊಡಕ್ಟಿವಿಟಿ, ಕಲಿಕೆ, ಶಿಕ್ಷಣ, ಸೃಜನಾತ್ಮಕತೆ, ಡಿಸೈನ್ ಎಲ್ಲಕ್ಕೂ ಅಪ್ಲಿಕೇಷನ್‌ಗಳು ಇರುತ್ತವೆ.
ಜಿಯೋಪಿಸಿ ಬಳಕೆದಾರರಿಗೆ ವಿಶಿಷ್ಟವಾದ ಅನುಕೂಲಗಳಿವೆ. ಉನ್ನತ ಮಟ್ಟದ ಎಐ ಸಲಕರಣೆಗಳ ಬಳಕೆ ಮಾಡುವುದಕ್ಕೆ ಹೆಚ್ಚುವರಿಯಾಗಿ ಅವಕಾಶ ಇರುತ್ತದೆ. ಇದು ವಿಸ್ತೃತವಾದ ಕಲಿಕಾ ರೋಡ್ ಮ್ಯಾಪ್ ಆಗಿದ್ದು, ಜಿಯೋ ಇನ್‌ಸ್ಟಿಟ್ಯೂಟ್‌ನಿಂದ ಪ್ರಮಾಣಪತ್ರ ದೊರೆಯುತ್ತದೆ. ಇತರ ಬಳಕೆದಾರರಿಗೆ ಕೋರ್ಸ್ ಪೂರ್ಣಗೊಳಿಸಿದ ನಂತರ ಪೂರ್ಣ ಮಾಡಿರುವಂಥ ಬ್ಯಾಡ್ಜ್ ದೊರೆಯುತ್ತದೆ.
ಈ ಕೋರ್ಸ್ ಎಐ ಬಗ್ಗೆ ಪ್ರಾಥಮಿಕ ಜ್ಞಾನವನ್ನು ನೀಡುತ್ತದೆ. ಮಾಹಿತಿಯನ್ನು ಸಂಕ್ಷಿಪ್ತಗೊಳಿಸುತ್ತದೆ ಹಾಗೂ ತಮ್ಮ ಕಲಿಕಾ ಯೋಜನೆ ಉತ್ತಮವಾಗಿ ಸಂಯೋಜಿಸಲು ಸಹಾಯ ಮಾಡುತ್ತದೆ. ಸ್ಟೋರಿಗಳು- ಪ್ರಸಂಟೇಷನ್‌ಗಳು ಹಾಗೂ ಡಿಸೂನ್ ಸೃಷ್ಟಿಸಲು ಕಲಿತುಕೊಳ್ಳಬಹುದು, ನೈಜ ಸಮಸ್ಯೆಗಳನ್ನು ಹೇಗೆ ಎಐ ಬಳಸಿ ಪರಿಹರಿಸಬಹುದು ಎಂಬುದು ತಿಳಿಯುತ್ತದೆ. ಇದು ಒಟ್ಟು ನಾಲ್ಕು ವಾರದ ಕಲಿಕೆ ಹಾದಿಯಾಗಿದೆ.
ಈ ಸುದ್ದಿಯನ್ನೂ ಓದಿ | CDAC Recruitment 2025: ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್‌ನಲ್ಲಿದೆ 687 ಹುದ್ದೆ; ಡಿಪ್ಲೊಮಾ ಪಾಸಾದವರು ಅಪ್ಲೈ ಮಾಡಿ
ಕೋರ್ಸ್ ಪಠ್ಯಕ್ರಮ
ವಾರ ಒಂದು: ಎಐ ಬೇಸಿಕ್ಸ್ ಹಾಗೂ ಪ್ರಾಂಪ್ಟ್ ಎಂಜಿನಿಯರಿಂಗ್
ವಾರ ಎರಡು: ಎಐ ಫಾರ್ ಲರ್ನಿಂಗ್ ಹಾಗೂ ಕ್ರಿಯೇಟಿವಿಟಿ
ವಾರ ಮೂರು: ಎಐ ಫಾರ್ ಬಿಲ್ಡಿಂಗ್ ಮತ್ತು ಕಮ್ಯುನಿಕೇಷನ್
ವಾರ ನಾಲ್ಕು: ಎಐ ಕ್ಯಾಪ್ ಸ್ಟೋನ್ ಪ್ರಾಜೆಕ್ಟ್
ಈ ಪ್ರೋಗ್ರಾಂ ಮೂಲಕ ಎಐ ಅರ್ಥವಾಗುವುದು ಮಾತ್ರವಲ್ಲ, ಅದನ್ನು ವಿಶ್ವಾಸದಿಂದ ಹೇಗೆ ಅನುಷ್ಠಾನಕ್ಕೆ ತರುವುದು ಎಂಬುದು ಸಹ ತಿಳಿದುಕೊಳ್ಳುತ್ತಾರೆ. ಸ್ಮಾರ್ಟ್ ಆಗಿ ವ್ಯಾಸಂಗ ಮಾಡುವುದು ಹಾಗೂ ಪ್ರಾಬ್ಲಮ್ಸ್ ಸಾಲ್ವಿಂಗ್ ನಿಂದ ಪರಿಣಾಮಕಾರಿ ಡಿಜಿಟಲ್ ಪ್ರಾಜೆಕ್ಟ್‌ಗಳ ಸೃಷ್ಟಿಯ ತನಕ ಎಲ್ಲೆಡೆ ಎಐ ಅನುಷ್ಠಾನದ ಬಗ್ಗೆ ಕಲಿಯುವುದು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.