ಭಾರೀ ಮಳೆಗೆ ಮೆಕ್ಕೆಜೋಳ ಶೇ, 40 ಇಳುವರಿ ಕುಸಿತ
ಹೆಚ್ಚು ಮೆಕ್ಕೆಜೋಳ ಬೆಳೆಯುವ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆದಿದ್ದ ರೈತರು ಈ ಬಾರಿ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿಉತ್ತಮ ಆದಾಯ ಬರುತ್ತದೆ, ಸಾಲ-ಸೋಲ ತೀರಿಸಿಕೊಂಡು ನೆಮ್ಮಂದಿಯಿಂದಿರಬಹುದು ಎಂಬ ಕನಸು ಇಟ್ಟು ಕೊಂಡಿದ್ದರು. ಆದರೆ ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಈ ಬಾರಿಯೂ ಮೆಕ್ಕೆಜೋಳ ಬೆಳೆದಿದ್ದ ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
-
ಹೂವಪ್ಪ ಐ ಹೆಚ್.
*ಈ ಸಾರಿ ಬೆಲೆಯೂ ಇಲ್ಲ ಬೆಳೆಯೂ ಇಲ್ಲ
*ಮಳೆಯಿಂದ ಜೋಳದ ಗುಣಮಟ್ಟ ಹಾಳು
ಬೆಲೆ ಕಳೆದುಕೊಂಡಿದೆ.
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಬಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಮಕ್ಕೆಜೋಳ ಬೆಳೆಯ ಇಳುವರಿ ಕುಸಿದಿದ್ದು, ಗುಣಮಟ್ಟ ಕಳೆದುಕೊಂಡಿದೆ. ಜತೆಗೆ ಬೆಲೆಯಲ್ಲಿಯೂ ರೈತರು ನಷ್ಟಕ್ಕೀಡಾಗುತ್ತಿದ್ದಾರೆ.
ಇದರ ಪರಿಣಾವಾಗಿ ಕೃಷಿ ಇಲಾಖೆ ಮತ್ತು ಸರ್ಕಾರ ರೈತರ ನೆರವಿಗೆ ನಿಲ್ಲುವ ಮೂಲಕ ನಿರಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಮೇಲೆತ್ತಬೇಕು ಎಂದು ರೈತ ಸಮುದಾಗಳು ಹೋರಾಡುತ್ತಿವೆ.
ಹೆಚ್ಚು ಮೆಕ್ಕೆಜೋಳ ಬೆಳೆಯುವ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆದಿದ್ದ ರೈತರು ಈ ಬಾರಿ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿಉತ್ತಮ ಆದಾಯ ಬರುತ್ತದೆ, ಸಾಲ-ಸೋಲ ತೀರಿಸಿಕೊಂಡು ನೆಮ್ಮಂದಿಯಿಂದಿರಬಹುದು ಎಂಬ ಕನಸು ಇಟ್ಟುಕೊಂಡಿದ್ದರು. ಆದರೆ ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಈ ಬಾರಿಯೂ ಮೆಕ್ಕೆಜೋಳ ಬೆಳೆದಿದ್ದ ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಅದರಲ್ಲೂ ಅಲ್ಪಸ್ವಲ್ಪ ಬಂದಿದ್ದ ಬೆಳೆಯೂ ಕಳೆದೊಂದು ವಾರದಿದ ಹಿಂದೆ ಸುರಿದ ಮಳೆಗೆ ನೆಲಕ್ಕೆ ಬಿದ್ದು ಮೊಳಕೆಯೊಡೆದು ಹಾಳಾಗುವ ಪರಿಸ್ಥಿತಿಗೆ ತಲುಪಿದೆ. ಇದೀಗ ಆರ್ಥಿಕವಾಗಿ ನೆಲಕಚ್ಚಿರುವ ರೈತರನ್ನು ಮೇಲೆತ್ತುವವರು ಯಾರು ಎನ್ನುವ ಆತಂಕ ರೈತರಿಗೆ ಶುರುವಾಗಿದೆ.
ಇದನ್ನೂ ಓದಿ: Election commission: ಆಧಾರ್ ಕಾರ್ಡ್ ಪೌರತ್ವದ ಪುರಾವೆಯೇ? ಚುನಾವಣಾ ಆಯೋಗ ಹೇಳೋದೇನು?
ಈ ವರ್ಷಾರಂಭದಲ್ಲಿ ಮಳೆ ಉತ್ತಮ ಆರಂಭ ಕಂಡಿದ್ದು, ಇದರಿಂದಾಗಿ ಬೇಸಾಯದ ಚಟುವಟಿಕೆಗಳೂ ಕೂಡ ಉತ್ತಮವಾಗಿ ಪ್ರಾರಂಭಗೊಂಡಿದ್ದವು. ಸಕಾಲದಲ್ಲಿ ಉತ್ತಮ ಬಿತ್ತನೆಯೂ ಸಾಧ್ಯವಾಗಿತ್ತು. ಉತ್ತಮ ಮಳೆ ಮತ್ತು ಉಳುಮೆಯಿಂದ ಬೆಳೆಗಳು ಹುಲಸಾಗಿ ಬೆಳೆದಿದ್ದವು. ಈ ಹಿನ್ನೆಲೆಯಲ್ಲಿ ಉತ್ತಮ ಇಳುವರಿಯ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅಲ್ಲದೆ ಆರ್ಥಿಕವಾಗಿ ಈ ಬಾರಿ ಅಲ್ಪಸ್ವಲ್ಪ ಲಾಭಗಳಿಸುವ ಆಶಭಾವನೆಯಲ್ಲಿದ್ದೆವು ಆದರೆ ಯೂರಿಯಾ ರಸಗೊಬ್ಬರದ ಪೂರೈಕೆಯಿಲ್ಲದೇ ಅಭಾವ ಸೃಷ್ಟಿಯಾಗಿತ್ತೋ, ಆಗಿನಿಂದಲೇ ರೈತರ ಅದೃಷ್ಟ ಕೈ ಕೊಟ್ಟಿತ್ತು. ಹೇಗೋ ಕಾಡಿ ಬೇಡಿ ಕಷ್ಟಪಟ್ಟು ಗೊಬ್ಬರ ತಂದು ಹಾಕಿದ ನಂತರ ಬೆಳೆ ಹುಲುಸಾಗಿ ಬೆಳೆದು ಸೂಲಂಗಿಯೊಡೆದು ಹಸಿರಿನಿಂದ ಕಳೆಗಟ್ಟಿತ್ತು. ನಂತರ ಮಳೆ ಕೊಟ್ಟು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎನ್ನುತ್ತಾರೆ ಬಸವಪಟ್ಟಣ ರೈತ ಶ್ರೀಕಾಂತ.
ಮದ್ಯದಲ್ಲಿ ಕೈಕೊಟ್ಟ ಮಳೆ: ತೆನೆಗಟ್ಟುವ ಸಮಯದಲ್ಲಿ ಸರಿಸುಮಾರು 20ರಿಂದ 30 ದಿನಗಳ ಕಾಲ ಮಳೆ ಕಾಣದಂತೆ ಮಾಯವಾಗಿದ್ದರಿಂದ ಸಮರ್ಪಕ ನೀರಿನ ಪೂರೈಕೆ ಇಲ್ಲದೆ ತೆನೆ ಕಾಳುಗಟ್ಟುವ ಪ್ರಕ್ರಿಯೆ ಮೆಕ್ಕೆಜೋಳ ಬೆಳೆಯಲ್ಲಿ ಕುಂಠಿತವಾಗಿದೆ. ಬೆಳೆ ಹುಲುಸಾಗಿ ಬೆಳೆದಿದ್ದರೂ ತೆನೆಗಳು ಸರಿಯಾಗಿ ಕಾಳುಗಟ್ಟದೇ ಸಣ್ಣಗೆ ಬೆಳೆದಿವೆ. ತೆನೆಯ ಆರಂಭದಿಂದ
ತುದಿಯವರೆಗೂ ಕಾಳುಗಟ್ಟಿಲ್ಲ. ತೆನೆಗಳ ತೂಕ ಕಡಿಮೆಯಾಗಿದ್ದು ಇಳುವರಿ ಕುಂಠಿತ ವಾಗಿದೆ. ಇದರ ಹೆಚ್ಚಿನ ಬೆಲೆಯೂ ಸಿಗುತ್ತಿಲ್ಲ ಎಂದು ರೈತರೂ ಅಲವತ್ತುಕೊಳ್ಳುತ್ತಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಅತಿಹೆಚ್ಚು ಮೆಕ್ಕೆಜೋಳ ಆಶ್ರಿತ ಪ್ರದೇಶ. ಹಾವೇರಿ ದಾರವಾಡ, ಬಾಗಲಕೋಟ್ ನಂತರ ಜಿಲ್ಲೆಗಳಾಗಿವೆ.
ಐ ವರ್ಷ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ ಶೇ.40ಕ್ಕೂ ಅಧಿಕವಾಗಿ ಸಣ್ಣ ಮತ್ತು ಜೊಳ್ಳು ಕಾಳುಗಳೇ ತುಂಬಿವೆ.
ಬೆಳೆ ಹುಲುಸಾಗಿ ಬೆಳೆದಿದ್ದರೂ ಸಕಾಲಿಕ ಮಳೆ ಇಲ್ಲದೆ ನಂತರ ಬಾರೀ ಮಳೆಗೆ ಕಾಳು ಸಂಪೂರ್ಣ ತೆನೆಗಟ್ಟಿಲ್ಲ. ತೆನೆಯ ಅರ್ಧಭಾಗದಲ್ಲಿ ಮಾತ್ರ ಕಾಳುಗಟ್ಟಿದ್ದು, ಅವೂ ಕೂಡ ಸಣ್ಣದಾಗಿವೆ, ಬೆಂಡಾಗಿ ಹೋಗಿವೆ. ಕೆಲವು ಜಜಿಲ್ಲೆಗಳಲ್ಲಿ ಉತ್ತಮವಾಗಿರುವುದಾಗಿ ಕಂಡು ಬಂದರೂ ಇಳುವರಿಯ ವಿಷಯದಲ್ಲಿ ಹೆಚ್ಚುಕಡಿಮೆ ಇದೇ ಪರಿಸ್ಥಿತಿ ಇದೆ. ಇದರಿಂದಾಗಿ ರೈತರು ಇಟ್ಟುಕೊಂಡಿದ್ದ ಲಾಭದ ನಿರೀಕ್ಷೆ ಬಹುತೇಕ ಹುಸಿಯಾಗಿದೆ.
ಬೆಳೆಯ ವೆಚ್ಚ ದುಬಾರಿ: ಬಿತ್ತನೆಬೀಜ, ರಸಗೊಬ್ಬರ, ಕೃಷಿ ಕೂಲಿ ಆಳುಗಳು ಸೇರಿದಂತೆ ಕೃಷಿ ಒಳಸುರಿಗಳ ಬೆಲೆ ದುಪ್ಪಟ್ಟಾದರೂ ಇಳುವರಿ ಇಲ್ಲದೇ, ಮಾರುಕಟ್ಟೆ ಬೆಲೆ ಏರಿಳಿತ ವಾಗುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ. ಬಿತ್ತನೆಬೀಜ, ರಸಗೊಬ್ಬರದ ಬೆಲೆ ಗಗನಕ್ಕೇ ರುತ್ತಿದೆ. ಐದಾರು ವರ್ಷಗಳ ಹಿಂದೆ ಐದು ಕೆಜಿಗೆ ರೂ. 500ರಿಂದ 800 ರೂ. ರಷ್ಟಿದ್ದ ಉತ್ತಮ ಬಿತ್ತನೆಬೀಜದ ಬೆಲೆ ಇಂದು ನಾಲ್ಕು ಕೆಜಿಗೆ 1500 ರಿಂದ 2000ದಷ್ಟಾಗಿದೆ. ಒಟ್ಟಾರೆ ಎಕರೆಗೆ 20ರಿಂದ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಉತ್ಪನ್ನದಿಂದ ಮಾತ್ರ ರೈತನಿಗೆ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ ರೈತರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದು, ಇಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಮೆಕ್ಕೆಜೋಳ ಬೆಳೆದು ನಿಂತು ತೆನೆಕಟ್ಟುವ ವೇಳೆ ಗೌರಿಗಣೇಶ ಹಬ್ಬದ ಸಮಯದಲ್ಲಿ ಕೈಕೊಟ್ಟ ಮಳೆಯಿಂದಾಗಿ ಇಳುವರಿ ಕುಂಠಿತವಾಗಿದೆ. ಇದರೊಂದಿಗೆ ರೈತನಿಗೆ ಆರ್ಥಿಕ ಸಂಕಷ್ಟವೂ ಎದುರಾಗಿದೆ.
ಕೈಕೊಟ್ಟ ಇಳುವರಿ: ಎಕರೆಗೆ ಕನಿಷ್ಠ 30-ಕ್ವಿಂಟಲ್ ಇಳುವರಿ ನೀಡುತ್ತಿದ್ದ ಮೆಕ್ಕೆಜೋಳ ಅತಿವೃಷ್ಟಿ ಮಳೆಯಿಂದಾಗಿ ಎಕರೆಗೆ ಸರಾಸರಿ 15-20 ಕ್ವಿಂಟಲ್‌ಗೆ ಕೆಲವುಂದು ಪ್ರದೇಶ ದಲ್ಲಿ 8-10 ಕ್ವಿಂಟಲ್ ಬಂದಿದೆ. ಇದರಿಂದಾಗಿ ಎಕರೆಗೆ ಕನಿಷ್ಠ 15 ಸಾವಿರ ರೂಪಾಯಿ ನಷ್ಟ ಉಂಟಾಗಿದೆ. ಬೆಲೆಯೂ ಸಾಮಾನ್ಯವಾಗಿದ್ದು, ಖರ್ಚು ಸರಿದೂಗಿವುದೂ ಕೂಡ ಸಾಧ್ಯವಾಗುತ್ತಿಲ್ಲ. ಎನ್ನುತ್ತಾರೆ ರೈತರು.
ದೀಪಾವಳಿ ನಂತರ ಕೊಯ್ಲು ಆರಂಭವಾಗಬೇಕಿತ್ತು. ಆದರೆ ಸುರಿಯುತ್ತಿರುವ ಮಳೆ ಯಿಂದಾಗಿ, ಬೆಳೆದು ನಿಂತಿರುವ ಅಳಿದುಳಿದ ಮೆಕ್ಕೆಜೋಳದ ದಂಟುಗಳು ಕರಗುತ್ತಿದ್ದು, ಅಲ್ಲಲ್ಲಿ ನೆಲಕ್ಕೆ ಬೀಳುತ್ತಿವೆ. ಇದೇ ರೀತಿ ವಾತಾವರಣ ಮುಂದುವರೆದಲ್ಲಿ ನೆಲಕ್ಕೆ ಬಿದ್ದ ಮೆಕ್ಕೆಜೋಳ ಅಲ್ಲೇ ಮೊಳಕೆ ಬರಲಿದೆ. ಇದರಿಂದಾಗಿ ಅಳಿದುಳಿದ ಬೆಳೆ ಕೂಡ ರೈತನಿಗೆ ದಕ್ಕದಂತೆ ಮಣ್ಣು ಪಾಲಾಗಲಿದೆ” ಎಂದು ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿಯ ಯುವ ರೈತ ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.
ಬೆಳೆವಿಮೆ ಕಂತು ಕಟ್ಟಿದ್ದು, ನಷ್ಟದಲ್ಲಿರುವ ರೈತರಿಗೆ ಈ ಬಾರಿಯಾದರೂ ವಿಮೆ ಸೇರಿದಂತೆ ಸರ್ಕಾರ ಸೂಕ್ತ ಪರಿಹಾರ ನೀಡಲಿ” ಎಂದು ರೈತರೂ ಹೇಳುತ್ತಿದ್ದಾರೆ.
ಮೆಕ್ಕೆಜೋಳ ಖರೀದಿಯ ಬೆಲೆಯಲ್ಲಿಯೂ ರೈತರಿಗೆ ಸಂಕಷ್ಟ ಎದುರಾಗಿದೆ. ಸರ್ಕಾರ ರೂ. 2400 ಬೆಂಬಲ ಬೆಲೆ ಇದೆ. ಮೆಕ್ಕೆಜೋಳಕ್ಕೆ ದಾವಣಗೆರೆ ಪ್ರಮುಖ ಮಾರುಕಟ್ಟೆಯಾಗಿದ್ದು, ದಿನಾಂಪ್ರತಿ ಸುಮಾರು 4-5 ಸಾವಿರ ಚಿಲಾಗಳಷ್ಟು ಆವಕವಾಗುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ 2,000-2,200 ರೂ ವರೆಗೂ ಇತ್ತು ಈ ವರ್ಷ ತೆವಾoಸ ಇರುವ ,ಮೆಕ್ಕೆಜೋಳ ಕ್ವಿಂಟಲ್ ಗೆ 1600-1800 ಇದ್ದು ಒಣಗಿದ ಜೋಳಕ್ಕೆ 1900-2,000 ರುಗೆ ಮಾರಟವಾಗುತ್ತಿದೆ. ಇಳುವರಿಯೋ ಈ ಕಡೆ ಇಲ್ಲ ಬೆಲೆಯೂ ಕಡಿಮೆ ಇದರಿಂದಾಗಿ ಕೆರಳಿದ ರೈತಸಂಘದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
*
ಮಕ್ಕೆಜೋಳ ಬೆಳೆಯ ಇಳುವರಿ ಕುಸಿದಿರುವ ಜತೆಗೆ ಬೆಲೆಯಲ್ಲಿಯೂ ರೈತರು ನಷ್ಟ ಕ್ಕೀಡಾಗುತ್ತಿರುವುದರಿಂದ ಕೃಷಿ ಇಲಾಖೆ ಮತ್ತು ಸರ್ಕಾರ ರೈತರ ನೆರವಿಗೆ ನಿಲ್ಲುವ ಮೂಲಕ ನಿರಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಮೇಲೆತ್ತುವ ಕಾರ್ಯ ಆಗಬೇಕು ಎನ್ನುತ್ತಾರೆ ಚನ್ನಗಿರಿ ರೈತ ವಿರೂಪಾಕ್ಷಪ್ಪ.
*
ಈ ವರ್ಷ ಇಳುವರಿ ಕಡಿಮೆ ಇದೆ ಈಗ ಸದ್ಯ ಮೆಕ್ಕೆಜೋಳ ಹಸಿ ಕಾಳು ಇರುವುದರಿಂದ ಬೆಲೆ ಕಡಿಮೆ ಇದೆ ಮುಂದಿನ ದಿನಗಳಲ್ಲಿ ರೈತರು ಒಣಗಿಸಿ ತಂದರೆ ಬೆಲೆ ಇನ್ನೂ ಹೆಚ್ಚು ಸಿಗಲಿದೆ. ಎನ್ನುತ್ತಾರೆ ದಾವಣಗೆರೆ ಎಪಿಎಂಸಿ ಮೆಕ್ಕೆಜೋಳ ಮಂಡಿವ್ಯಾಪಾರಿ ರವೀಂದ್ರಗುಪ್ತ ಜೆ.