ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA S.N.Subbareddy: ತಾಲ್ಲೂಕಿಗೆ ಹೆಬ್ಬಾಳ-ನಾಗವಾರ ಹೆಚ್.ಎನ್. ವ್ಯಾಲಿಯಿಂದ 24 ಕೆರೆಗಳಿಗೆ ನೀರು, ನೀರಾವರಿ ಸಚಿವರಿಂದ ಉದ್ಘಾಟನೆ

ತಾಲ್ಲೂಕಿಗೆ ಹೆಬ್ಬಾಳ-ನಾಗವಾರ ವ್ಯಾಲಿ ಯಿಂದ ಕೆರೆಗಳಿಗೆ ನೀರು ಹರಿಸಬೇಕು, ಇಲ್ಲವಾದರೆ ರಾಜೀನಾಮೆ ನೀಡಲು ಸಿದ್ಧ ಎಂದು ಅಂದಿನ ಕುಮಾರಸ್ವಾಮಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದೆ. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ₹83 ಕೋಟಿ ಬಿಡುಗಡೆ ಮಾಡಿದ್ದರು

ಕಾರ್ಯಕ್ರಮದ ಸಿದ್ಧತೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪರಿಶೀಲನೆ

-

Ashok Nayak
Ashok Nayak Nov 17, 2025 11:03 PM

ಬಾಗೇಪಲ್ಲಿ: ಹೆಬ್ಬಾಳ-ನಾಗವಾರದಿಂದ ಏತ ನೀರಾವರಿ ಮೂಲಕ ತಾಲ್ಲೂಕಿನ 24 ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ನ.18ರಂದು ಬಾಗೇಪಲ್ಲಿ ತಾಲ್ಲೂಕಿನ ಆಚೇಪಲ್ಲಿ ಕೆರೆಯ ಬಳಿ ನೆಡೆಯುವ ಬಾಗೇಪಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹೆಚ್ ಎನ್ ವ್ಯಾಲಿ ಯೋಜನೆಯ ಉದ್ಗಾಟನೆ ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಸಚಿವ ಬೋಸರಾಜ್ ರವರು ಮತ್ತು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಆಗಮಿಸುವ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮಾತನಾಡಿ, ತಾಲ್ಲೂಕಿಗೆ ಹೆಬ್ಬಾಳ-ನಾಗವಾರ ವ್ಯಾಲಿ ಯಿಂದ ಕೆರೆಗಳಿಗೆ ನೀರು ಹರಿಸಬೇಕು, ಇಲ್ಲವಾದರೆ ರಾಜೀನಾಮೆ ನೀಡಲು ಸಿದ್ಧ ಎಂದು ಅಂದಿನ ಕುಮಾರಸ್ವಾಮಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದೆ. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ₹83 ಕೋಟಿ ಬಿಡುಗಡೆ ಮಾಡಿದ್ದರು.

ಇದೀಗ ತಾಲ್ಲೂಕಿನ ಕಸಬಾ, ಮಿಟ್ಟೇಮರಿ ಹಾಗೂ ಗೂಳೂರಿನ 24 ಕೆರೆಗಳಿಗೆ ಎಚ್.ಎನ್. ವ್ಯಾಲಿಯಿಂದ 2ನೇ ಹಂತದಲ್ಲಿ ಸಂಸ್ಕರಿಸಿದ ನೀರು ಇರಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: MLA Subbareddy: ಕನಕದಾಸರ ವಚನಗಳು ಸರ್ವಕಾಲಿಕವಾದುದು, ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ: ಶಾಸಕ ಸುಬ್ಬಾರೆಡ್ಡಿ

ಯಾವ ಕೆರೆಗೆ ನೀರು: ತಾಲ್ಲೂಕಿನ ಕೊತ್ತಕೋಟೆ 1 ಮತ್ತು 2, ಕೋಡಿಪಲ್ಲಿ, ಮಲ್ಲಿಗುರ್ಕಿ, ಮೇರುವಪಲ್ಲಿ, ನಲ್ಲಮಲ್ಲೇಪಲ್ಲಿ 1 ಮತ್ತು 2, ಬೂರಗಮಡಗು ಕೆರೆ, ಆಚೇಪಲ್ಲಿ ಕೆರೆ, ಯಲ್ಲಂಪಲ್ಲಿ ಊರ ಮುಂದಿನ ಕೆರೆ, ಪಾಕಮಾಕಲಪಲ್ಲಿ, ಸಂಜೀವ ಕೆರೆ, ಕಾರಕೂರು ಕೆರೆ, ಮರವಪಲ್ಲಿ, ಮಲ್ಲಸಂದ್ರ, ಕೊಂಡಂವಾರಿಪಲ್ಲಿ, ತೀಮಾಕಲಪಲ್ಲಿ, ಬಾಲರೆಡ್ಡಿಪಲ್ಲಿ, ಸಿದ್ದನಪಲ್ಲಿ, ಚರ್ಲೋಪಲ್ಲಿ, ಮೊಟಕಪಲ್ಲಿ 1 ಮತ್ತು 2 ಹಾಗೂ ನಲ್ಲಪರೆಡ್ಡಿಪಲ್ಲಿಯ 24 ಕೆರೆಗಳಿಗೆ ನೀರು ಹರಿಸುವ ಯೋಜನೆ ಆಗಿದೆ.

ತಾಲ್ಲೂಕಿನಲ್ಲಿ ಈಗಾಗಲೇ 10 ಕೆರೆಗಳಿಗೆ ನೀರು ಹರಿದಿದೆ. ಉಳಿದ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸಿದ್ಧತೆ ನಡೆದಿವೆ. ತಾಲ್ಲೂಕಿನ ಮಲ್ಲಿಗುರ್ಕಿ ಕೆರೆಯಲ್ಲಿ ನೀರು ತುಂಬಿದೆ. ಇದೀಗ ಆಚೇಪಲ್ಲಿ ಗ್ರಾಮದ ಕೆರೆಗೆ ಪೈಪ್‌ ಮೂಲಕ ನೀರು ಸರಬರಾಜು ಆಗುತ್ತಿದೆ.

ಇದರ ಹಿನ್ನೆಲೆಯಲ್ಲಿ ಇಂದು ಆಚೇಪಲ್ಲಿ ಗ್ರಾಮದ ಕೆರೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಮುಖಂಡರು, ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಿ.ಮಂಜುನಾಥ ರೆಡ್ಡಿ, ಪೂಜಪ್ಪ, ಬೂರಗಮಡಗು ಲಕ್ಷ್ಮೀನರಸಿಂಹಪ್ಪ, ಪ್ರಭಾಕರರೆಡ್ಡಿ, ನಾರಾಯಣ ಸ್ವಾಮಿ, ಹೆಚ್.ಎಸ್. ನರೇಂದ್ರ, ಕೃಷ್ಣಪ್ಪ, ಶ್ರೀನಿವಾಸ್, ಕೋಟಪ್ಪ,ಹಾಗೂ ಅಧಿಕಾರಿಗಳು ಹಾಜರಿದ್ದರು.