ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೀಪಾವಳಿ ಬಳಿಕ ಜಾರಿಯಾಗಲಿದೆ ಯುಪಿಐ ವಹಿವಾಟು ವ್ಯಾಪಾರಿ ಶುಲ್ಕ

ವ್ಯಾಪಾರಿಗಳು ನಡೆಸುವ ಯುಪಿಐ ವಹಿವಾಟುಗಳಿಗೆ ವ್ಯಾಪಾರಿ ಶುಲ್ಕಗಳು ದೀಪಾವಳಿಯ ಅನಂತರ ಜಾರಿಯಾಗಲಿದೆ. ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ಆಯ್ದ ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್ ಅನ್ನು ದೀಪಾವಳಿಯ ಅನಂತರ ತಕ್ಷಣ ಜಾರಿಗೆ ತರಲು ಯುಪಿಐ ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿಯು ಮಂಗಳವಾರ ನಿರ್ಧರಿಸಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತಿಳಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಯುಪಿಐ ವಹಿವಾಟುಗಳ ಮೇಲಿನ ಶುಲ್ಕವನ್ನು (UPI transaction charges) ದೀಪಾವಳಿಯ (deepavali) ಬಳಿಕ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಿಳಿಸಿದೆ. ವಾರ್ಷಿಕ 20,000 ಕೋಟಿ ರೂ. ಯುಪಿಐ (UPI) ಮೂಲ ಸೌಕರ್ಯಕ್ಕೆ ಹಣಕಾಸು ಒದಗಿಸಲು ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರಕಾರ ಪ್ರಸ್ತಾಪಿಸಿರುವ ಎಂಡಿಆರ್ ಶುಲ್ಕವು (MDR charges) 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಅನ್ವಯವಾಗಲಿದೆ. ಇದನ್ನು ಈಗ ನವೆಂಬರ್‌ ತಿಂಗಳ ಎರಡನೇ ವಾರದಲ್ಲಿ ಅಂದರೆ ದೀಪಾವಳಿಯ ಅನಂತರ ಜಾರಿಗೆ ತರಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ಆಯ್ದ 'ವ್ಯಕ್ತಿಯಿಂದ ವ್ಯಾಪಾರಿಗೆ' (Person-to-Merchant) ನಡೆಯುವ ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್ ಅನ್ನು ದೀಪಾವಳಿಯ ಅನಂತರ ತಕ್ಷಣ ಜಾರಿಗೆ ತರಲು ಯುಪಿಐ ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿ ಮಂಗಳವಾರ ನಿರ್ಧರಿಸಿದೆ ಎಂದು ತಿಳಿಸಿದೆ.

ಬೆಂಗಳೂರು ಬೆಳೆದಂತೆ, ವಾಸಯೋಗ್ಯ ಮನೆ ಖರೀದಿಯಲ್ಲಿ ಪ್ರಕೃತಿಯ ಇರುವಿಕೆ ಪ್ರಮುಖವಾಗುತ್ತಿದೆಯೇ ?

ಎಂಡಿಆರ್ ಶುಲ್ಕ ಜಾರಿಗೊಳಿಸಲಾಗುವ ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಈ ಮೊದಲು ಎಂಡಿಆರ್ ಶುಲ್ಕವನ್ನು ಅಕ್ಟೋಬರ್ 15 ರಂದು ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಹಬ್ಬದ ಶಾಪಿಂಗ್ ಅವಧಿಯಾಗಿರುವುದರಿಂದ ಪಾವತಿ ಸಂಸ್ಥೆಗಳು ಮತ್ತು ಗ್ರಾಹಕರಿಗೆ ತಮ್ಮ ವ್ಯವಸ್ಥೆಗಳನ್ನು ನವೀಕರಿಸಲು ಹೆಚ್ಚಿನ ಸಮಯ ನೀಡಲು ಈ ದಿನಾಂಕದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಯುಪಿಐ ಸ್ಟೀರಿಂಗ್ ಸಮಿತಿಯು 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಯುಪಿಐ ಎಂಡಿಆರ್ ಅನ್ನು ಶೇಕಡಾ 0.4 ರಷ್ಟು ನಿಗದಿಪಡಿಸಿದೆ. ಎಂಡಿಆರ್ ಶುಲ್ಕವು ಡಿಜಿಟಲ್ ಪಾವತಿ ಪ್ರಕ್ರಿಯೆಗಳಿಗಾಗಿ ವ್ಯಾಪಾರಿಗಳಿಗೆ ವಿಧಿಸಲಾಗುವ ಶುಲ್ಕವಾಗಿದೆ. ಶೇಕಡಾ 0.4ರಷ್ಟು ಅಂದರೆ ಪ್ರತಿ 10,000 ರೂ. ಗೆ 40 ರೂ. ಶುಲ್ಕ ವಿಧಿಸಲಾಗುವುದು. ಇದರಲ್ಲಿ ರೈಲ್ವೆ, ಟೆಲಿಕಾಂ, ವಿಮೆ, ಇಂಧನ ಮತ್ತು ಕೃಷಿ ಪರಿಕರಗಳಂತಹ ಆಯ್ದ ವಲಯಗಳಲ್ಲಿ 2,000 ರೂ.ಗಿಂತ ಹೆಚ್ಚಿನ ಪಾವತಿಗಳಿಗೆ 5 ರೂ. ಗಳ ನಿರ್ಧಿಷ್ಟ ಮೊತ್ತದ ಶುಲ್ಕ ವಿಧಿಸಲಾಗುವುದು ಎಂದು ತಿಳಿಸಿದೆ.

ಟಾಟಾ ಸ್ಟೀಲ್ ಕಲರ್ಸ್‌ನಿಂದ ಭಾರತದಲ್ಲಿ ಕಲರ್‌ಕೋಟ್ ಪ್ರಿ-ಪೇಂಟೆಡ್ ಸ್ಟೀಲ್ ಪರಿಚಯ

ಎಂಡಿಆರ್ ಶುಲ್ಕವು ಯುಪಿಐ ಕಾರ್ಯಾಚರಣೆಗೆ ಅಗತ್ಯವಿರುವ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಇದನ್ನು ಗ್ರಾಹಕರ ಬದಲಿಗೆ ವ್ಯಾಪಾರಿಗಳು ಭರಿಸಬೇಕಾಗುತ್ತದೆ. 75,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಇದನ್ನು ಗರಿಷ್ಠ 300 ರೂ.ಗೆ ಸೀಮಿತಗೊಳಿಸಲಾಗುತ್ತದೆ. ಜನರ ನಡುವಿನ ಪಾವತಿಗಳು, ಹೆಚ್ಚಿನ ದೈನಂದಿನ ವ್ಯಾಪಾರಿ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಿದ್ಯಾ ಇರ್ವತ್ತೂರು

View all posts by this author