ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಬೆಳೆದಂತೆ, ವಾಸಯೋಗ್ಯ ಮನೆ ಖರೀದಿಯಲ್ಲಿ ಪ್ರಕೃತಿಯ ಇರುವಿಕೆ ಪ್ರಮುಖವಾಗುತ್ತಿದೆಯೇ ?

ಗೃಹ ಸಮುಚ್ಚಯ ನಿರ್ಮಾಣ ಹಾಗೂ ಉದ್ಯೋಗಾವಕಾಶ ಸೃಷ್ಟಿ ಮುಂತಾದುವೇ ಬೆಂಗಳೂರಿನ ಆರ್ಥಿಕಾಭಿವೃದ್ದಿಯನ್ನು ನಿರ್ಧರಿಸುತ್ತಿವೆ. ಇದು ಅನುಕೂಲ ಒದಗಿಸುತ್ತದೆಯಾದರೂ, ಇದರೊಂದಿಗೆ ಹೆಚ್ಚಿನ ಸಾಂದ್ರತೆ, ಸಂಚಾರ ದಟ್ಟಣೆ ಮತ್ತು ಜನನಿಬಿಡತೆಯೂ ಉಂಟಾಗಿದೆ. ಇದರಿಂದಾಗಿ, ಮನೆ ಖರೀದಿದಾರರು ವಾಸಯೋಗ್ಯ ಜೀವನ ಶೈಲಿ ಅಳವಡಿಸಿಕೊಳ್ಳಲು ಸಾಧ್ಯ ವಾಗುವಂತಹ ಸ್ಥಳಾವಕಾಶ ಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಈ ಬೇಡಿಕೆ ಈಡೇರಿದರೆ, ಉದ್ಯೋಗಕ್ಕೆ ಹತ್ತಿರ ಹಾಗೂ ನೆಮ್ಮದಿ ಒದಗಿಸುವ ನಿವಾಸ ಎರಡೂ ಸುಲಭವಾದಂತೆ.

ವಾಸಯೋಗ್ಯ ಮನೆ ಖರೀದಿಯಲ್ಲಿ ಪ್ರಕೃತಿಯ ಇರುವಿಕೆ ಪ್ರಮುಖವಾಗುತ್ತಿದೆಯೇ ?

-

Profile
Ashok Nayak Oct 12, 2026 9:53 PM

ಶ್ರೀ ಶ್ರೀನಿವಾಸ್ ಮೊರಾಮ್ಚೆಟ್ಟಿ, ನಿರ್ದೇಶಕರು - ಮಾರಾಟ ಮತ್ತು ಮಾರುಕಟ್ಟೆ, ಸುಮಧುರ ಗ್ರೂಪ್

ಮನೆ ಖರೀದಿಸುವಲ್ಲಿ ಸ್ಥಳಾವಕಾಶ, ಉದ್ಯೋಗಕ್ಕೆ ತೆರಳಲು ಸುಲಭ ಸಾಧ್ಯವಾಗುವ, ಸಾಮಾಜಿಕ ಸೌಕರ್ಯವಿರುವ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಿ ಮನೆ ಖರೀದಿ ಮಾಡ ಬೇಕೆನ್ನುವುದನ್ನು ನಿರ್ಧರಿಸುವಷ್ಟರಲ್ಲಿ ಹಲವು ವರ್ಷಗಳೇ ಕಳೆದುಹೋಗುತ್ತವೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಗರೀಕರಣ ಎಂಬರ್ಥದಲ್ಲಿ ಅಭಿವೃದ್ದಿ ಕೆಲಸ ಎಲ್ಲೆಡೆ ಕಾಣುವಾಗ, ಹಸಿರೀಕರಣ ಹಾಗೂ ಲಭ್ಯ ಖಾಲಿ ಜಾಗದ ಇದೆಯೋ ಇಲ್ವೋ ಎಂಬ ಪ್ರಶ್ನೆ ಎದ್ದೇಳುತ್ತಿದೆ. ಕಾಲಿಯರ್ಸ್ ಸಂಸ್ಥೆ 2026 ನಡೆಸಿದ ಸಮೀಕ್ಷೆ ಪ್ರಕಾರ, ಗೃಹ ಸಮುಚ್ಚಯ ನಿರ್ಮಾಣ ಹಾಗೂ ಖರೀದಿ ಮಾಡುವಲ್ಲಿ ವಾಸ ಯೋಗ್ಯ ಹಾಗೂ ಜೀವನ ಶೈಲಿ ಎಂಬ ಅಂಶಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ.

ಈ ಬೆಳವಣಿಗೆಗೆ ಅರ್ಥಪೂರ್ಣ ಉತ್ತರ ಇಲ್ಲಿದೆ. ಪಣತ್ತೂರಿನಲ್ಲಿ ಸುಮಾರು 45 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣವು ಹಸಿರೀಕರಣಕ್ಕೆ ಅರ್ಥ ನೀಡುತ್ತಿದೆ. ಪಣತ್ತೂರಿನಂತಹ ಸಣ್ಣ ಪ್ರದೇಶ ದಲ್ಲಿ ಮನೆ ಖರೀದಿದಾರರಿಗೆ ವಾಸ ಯೋಗ್ಯ ನಿವಾಸವು ಹೆಚ್ಚು ಆಕರ್ಷಿಸುತ್ತಿದೆ.

ಇಲ್ಲಿಯ ಭೂಮಿ ದರವು ಕಳೆದ ಐದು ವರ್ಷಗಳಲ್ಲಿ ಶೇ.83ರಷ್ಟು ಹೆಚ್ಚಳ ಕಂಡಿದ್ದು, ಇಲ್ಲಿ ನಿರ್ಮಿತ ವಾಸ ಯೋಗ್ಯ ಮನೆಗಳ ಬಾಡಿಗೆಯಲ್ಲಿಯೂ 3 ರಿಂದ 5 ಶೇಕಡಾ ಹೆಚ್ಚಳವಾಗಿದೆ. ಮುಖ್ಯವಾಗಿ, ಇಲ್ಲಿನ ನಿವಾಸಿ ಗಳು ಮನೆ ಖರೀದಿಗಿಂತಲೂ ಹೆಚ್ಚು ಇಲ್ಲಿನ ಪರಿಸರದಿಂದ ತಮಗೇನು ಲಾಭವಿದೆ ಎಂಬುದನ್ನು ಗಮನಿಸಿದ್ದಾರೆ.

ಇದನ್ನೂ ಓದಿ: Real Estate at Chamundi Hills: ಚಾಮುಂಡಿ ಬೆಟ್ಟದ ನಿಷೇಧಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಿಯಲ್‌ ಏಸ್ಟೇಟ್

ಪ್ರಕೃತಿ ಜೊತೆಗಿನ ಬಾಂಧವ್ಯವೇ ವಾಸಯೋಗ್ಯ ನಿವಾಸಕ್ಕೆ ಅಗತ್ಯ

ಗೃಹ ಸಮುಚ್ಚಯ ನಿರ್ಮಾಣ ಹಾಗೂ ಉದ್ಯೋಗಾವಕಾಶ ಸೃಷ್ಟಿ ಮುಂತಾದುವೇ ಬೆಂಗಳೂರಿನ ಆರ್ಥಿಕಾಭಿವೃದ್ದಿಯನ್ನು ನಿರ್ಧರಿಸುತ್ತಿವೆ. ಇದು ಅನುಕೂಲ ಒದಗಿಸುತ್ತದೆಯಾದರೂ, ಇದರೊಂದಿಗೆ ಹೆಚ್ಚಿನ ಸಾಂದ್ರತೆ, ಸಂಚಾರ ದಟ್ಟಣೆ ಮತ್ತು ಜನನಿಬಿಡತೆಯೂ ಉಂಟಾಗಿದೆ. ಇದರಿಂದಾಗಿ, ಮನೆ ಖರೀದಿದಾರರು ವಾಸಯೋಗ್ಯ ಜೀವನ ಶೈಲಿ ಅಳವಡಿಸಿಕೊಳ್ಳಲು ಸಾಧ್ಯ ವಾಗುವಂತಹ ಸ್ಥಳಾವಕಾಶ ಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಈ ಬೇಡಿಕೆ ಈಡೇರಿದರೆ, ಉದ್ಯೋಗಕ್ಕೆ ಹತ್ತಿರ ಹಾಗೂ ನೆಮ್ಮದಿ ಒದಗಿಸುವ ನಿವಾಸ ಎರಡೂ ಸುಲಭವಾದಂತೆ.

ಸರೋವರಗಳು, ಪಾರ್ಕುಗಳು, ತೋಟಗಳು, ನೈಸರ್ಗಿಕವಾಗಿ ಸಮೃದ್ದಿಯಾದ ಸ್ಥಳಗಳು ಮುಖ್ಯವಾಗಿ ನೆಮ್ಮದಿ ನೀಡುವ ಸ್ಥಳಗಳು. ನಗರದ ಜಂಜಾಟದಿಂದ ದೂರವಿದ್ದು, ಗ್ರಾಮೀಣ ಬದುಕಿನ ನೆಮ್ಮದಿ ಕಾಣಲು ಹಸಿರೀಕರಣ ಹಾಗೂ ಸಮಯವಿದ್ದಾಗ ಪ್ರವಾಸಕ್ಕೆ ತೆರಳಲು ಇದು ಮುಖ್ಯ.

IT

ಸರೋವರಗಳು ಮುಕ್ತತೆಯ ಭಾವನೆ ಉಂಟು ಮಾಡಬಲ್ಲವು. ಇದು ನಗರದಲ್ಲಿ ಕಷ್ಟಸಾಧ್ಯ. ಅದರಲ್ಲೂ, ನಗರದಲ್ಲಿ ಕಾಣದವು ಹಸಿರು ತುಂಬಿದ ಪ್ರದೇಶದಲ್ಲಿ ದಕ್ಕುವುದು ಕಷ್ಟವಲ್ಲ. ಇಲ್ಲಿ ನಾವು ಪ್ರಕೃತಿ ಜೊತೆ ಪ್ರತಿದಿನ ಕಾಲ ಕಳೆಯಬಹುದು. ಒಟ್ಟಿನಲ್ಲಿ, ನಗರದಲ್ಲಿ ಈ ಜನದಟ್ಟಣೆ ನಡುವೆ ಕಾಲ ಕಳೆದ ಬಳಿಕ, ಹಸಿರೀಕರಣ ಇರುವಲ್ಲಿ ಸಮಯ ವ್ಯಯ ಮಾಡಿದಾಗ ಇನ್ನೂ ಹೆಚ್ಚು ಉಲ್ಲಾಸಮಯವಾಗಿ ಸಮಯ ಕಳೆಯಲು ಸಾಧ್ಯ. ನಗರದ ಜೀವನದಿಂದ ದೂರವಿರದೆ, ವಾಸ ಮಾಡುವ ಸ್ಥಳದಲ್ಲೇ ಪ್ರಕೃತಿಯ ಸೌಂದರ್ಯ ಅನುಭವಿಸುವುದನ್ನು ಪ್ರತಿದಿನ ಮಾಡಲು ಸಾಧ್ಯ.

ಪಣತ್ತೂರ್: ಪ್ರಕೃತಿ ಮಡಿಲಲ್ಲಿ ವಾಸ

ಬೆಂಗಳೂರಿನ ಮನೆ ಖರೀದಿದಾರರಿಗೆ ಹೆಚ್ಚು ಪ್ರಸ್ತುತವೆನಿಸುವಂತಹ ಸಂಯೋಜನೆಯನ್ನು ಪನಾಥೂರ್ ಒದಗಿಸುತ್ತದೆ. ಇಲ್ಲಿ ಉದ್ಯೋಗ ಕೇಂದ್ರಗಳು, ಅತ್ಯುತ್ತಮ ಅಂತರರಾಷ್ಟ್ರೀಯ ಶಾಲೆಗಳು, ಆರೋಗ್ಯ ಸೇವೆ ಹಾಗೂ ಮನರಂಜನಾ ಕೇಂದ್ರಗಳಿಗೆ ಹತ್ತಿರವಿರುವ ಅನುಕೂಲದ ಜೊತೆಗೆ, ಹಸಿರುಮಯ ವಾತಾವರಣ ದಲ್ಲಿ ವಾಸಿಸುವ ಅವಕಾಶವೂ ಲಭ್ಯವಿದೆ.

ಉದ್ಯೋಗದ ದೃಷ್ಟಿಯಿಂದ ಪೂರ್ವ ಬೆಂಗಳೂರು ಉತ್ತಮ, ಇಲ್ಲಿನ ಪ್ರಮುಖ ತಾಣಗಳಾದ ವೈಟ್ ಫೀಲ್ಡ್, ಬೆಳ್ಳಂದೂರು, ಹೊರಾಂಗಣ ವರ್ತುಲ ರಸ್ತೆ, ಸರ್ಜಾಪೂರ ರಸ್ತೆ ಮುಂತಾದವು. ಪ್ರಕೃತಿ ಸ್ನೇಹಿ ಎನಿಸಿಕೊಳ್ಳಲು ಪಣತ್ತೂರ್ ಸರೋವರ. 45 ಏಕರೆಯಲ್ಲಿ ನಿರ್ಮಿತ ಟ್ರೀ ಪಾರ್ಕ್, ಪಣತ್ತೂರ್ ಹಾಗೂ ಗುಂಜೂರ್ ಪಾಳ್ಯದ ಸುತ್ತಮುತ್ತಲೇ ಹರಡಿವೆ. 150 ಎಕರೆಯ ಕಾಡುದಾರಿ ಯಲ್ಲಿ ಸಿಡಿಪಿ ರಸ್ತೆ ನಿರ್ಮಾಣವಾಗಿದ್ದು, ಕಾರಿಡಾರಿಗೆ ಬಲ ನೀಡುವವು.

ಹಸಿರೀಕರಣಕ್ಕೆ ಹತ್ತಿರ: ಭವಿಷ್ಯದಲ್ಲಿ ಮನೆ ಖರೀದಿಗೆ ಹೆಚ್ಚು ಅವಕಾಶ

ಬೆಂಗಳೂರಿನ ವಸತಿ ಮಾರುಕಟ್ಟೆಯು ಬದಲಾವಣೆಯ ಹಾದಿಯಲ್ಲಿದ್ದು, ಮನೆ ಖರೀದಿದಾರರು ಕೇವಲ ಸಂಪರ್ಕ ಸೌಲಭ್ಯ ಮತ್ತು ಇತರ ಸೌಕರ್ಯಗಳನ್ನಷ್ಟೇ ಅಲ್ಲದೆ, ಆ ಪ್ರದೇಶದ ಒಟ್ಟಾರೆ ಗುಣಮಟ್ಟವನ್ನೂ ಪರಿಗಣಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಉದ್ಯೋಗ ಕೇಂದ್ರಗಳು, ಪಣತ್ತೂರು ಕೆರೆ, ಟ್ರೀ ಪಾರ್ಕ್ ಹಾಗೂ ಪಣತ್ತೂರು ಮತ್ತು ಗುಂಜೂರು ಪಾಳ್ಯದ ಸುತ್ತಮುತ್ತಲಿನ ಹಸಿರು ಹೊದಿಕೆಗೆ ಹತ್ತಿರವಾಗಿರುವುದು—ಈ ಅಂಶಗಳ ಸಂಗಮವು ಬದಲಾಗುತ್ತಿರುವ ವಸತಿ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.

ಆಸ್ತಿಯ ಬೇಡಿಕೆ ಮತ್ತು ಮೌಲ್ಯ ಹೆಚ್ಚಳಕ್ಕೆ ಹಲವು ಅಂಶಗಳು ಕಾರಣವಾಗಿದ್ದರೂ, ಹಸಿರುಮಯ ಹಾಗೂ ವಾಸಯೋಗ್ಯ ಬಡಾವಣೆಗಳಿಗೆ ನೀಡಲಾಗುತ್ತಿರುವ ಹೆಚ್ಚುತ್ತಿರುವ ಒತ್ತು ಪಣತ್ತೂರ್ನ ಆಕರ್ಷಣೆಗೆ ಮತ್ತೊಂದು ಆಯಾಮ ನೀಡುತ್ತದೆ.

ಒಟ್ಟಿನಲ್ಲಿ, ನಗರವು, ನಗರೀಕರಣಕ್ಕೆ ಒಗ್ಗಿ ಹೋಗುತ್ತಿರುವಾಗ ಹಸಿರೀಕರಣಕ್ಕೆ ಆದ್ಯತೆ ನೀಡುವುದು ಮನೆ ಖರೀದಿ ನಿರ್ಧರಿಸಲು ಪ್ರಮುಖ ಅಂಶವಾಗಿ ಕಾಣುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ತಾನು ವಾಸವಿರುವ ಮನೆಯಿಂದ ನನ್ನ ಕೆಲಸದ ಜಾಗ ಎಷ್ಟು ದೂರ ಇದೆ ಎಂಬುದಕ್ಕಿಂತ ಹಸಿರು ಮಯ ಪ್ರದೇಶಕ್ಕೆ ತನ್ನ ಮನೆ ಎಷ್ಟು ದೂರವಿದೆ ? ಎಂಬುದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳ ಬಹುದು.