ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MDR ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ: ಪಂಜಾಬ್ & ಸಿಂಧ್ ಬ್ಯಾಂಕ್ ಎಂಡಿ

UPI ಮೂಲಕ ಪಾವತಿಗಳನ್ನು ಸ್ವೀಕರಿಸುವ ವ್ಯಾಪಾರಿಗಳು ವ್ಯಾಪಾರಿ ರಿಯಾಯಿತಿ ದರ (MDR) ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ. ಅ.15ರ ನಂತರವೂ ಗ್ರಾಹಕರು ವ್ಯಾಪಾರಿ ಪ್ರಕಟಿಸಿರುವ ಬೆಲೆಯನ್ನೇ ಪಾವತಿಸಬೇಕು ಎಂದು ಪಂಜಾಬ್ & ಸಿಂಧ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸ್ವರೂಪ್ ಕುಮಾರ್ ಸಾಹಾ ತಿಳಿಸಿದ್ದಾರೆ.

MDR ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ

-

Profile
Ashok Nayak Oct 7, 2026 8:11 PM

ಬೆಂಗಳೂರು: UPI ಮೂಲಕ ಪಾವತಿಗಳನ್ನು ಸ್ವೀಕರಿಸುವ ವ್ಯಾಪಾರಿಗಳು ವ್ಯಾಪಾರಿ ರಿಯಾಯಿತಿ ದರ (MDR) ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ. ಅ.15ರ ನಂತರವೂ ಗ್ರಾಹಕರು ವ್ಯಾಪಾರಿ ಪ್ರಕಟಿಸಿರುವ ಬೆಲೆಯನ್ನೇ ಪಾವತಿಸಬೇಕು ಎಂದು ಪಂಜಾಬ್ & ಸಿಂಧ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸ್ವರೂಪ್ ಕುಮಾರ್ ಸಾಹಾ ತಿಳಿಸಿದ್ದಾರೆ.

ಅ.15ರಿಂದ ₹2 ₹2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳಿಗೆ (P2M) ಶೇ.0.4ರಷ್ಟು MDR ಅನ್ವಯವಾಗಲಿದ್ದು, ಪ್ರತಿ ವಹಿವಾಟಿಗೆ ಗರಿಷ್ಠ ₹300ಕ್ಕೆ ಸೀಮಿತವಾಗಿರುತ್ತದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ UPI ವಹಿವಾಟುಗಳಿಗೆ ಯಾವುದೇ ಮೊತ್ತದ ಮೇಲೂ ಶುಲ್ಕ ಇರುವುದಿಲ್ಲ.

₹2 ಸಾವಿರದವರೆಗಿನ ಸಣ್ಣ ಮೊತ್ತದ UPI ಪಾವತಿಗಳ ಮೇಲೆ ಯಾವುದೇ ಬದಲಾವಣೆ ಇರುವುದಿಲ್ಲ. ಇಂತಹ ವಹಿವಾಟುಗಳು ಒಟ್ಟು UPI ವ್ಯಾಪಾರಿ ಪಾವತಿಗಳ ಶೇ.95ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ ಎಂದು ಸಾಹಾ ಹೇಳಿದರು.

ಇದನ್ನೂ ಓದಿ:ತನ್ನ ಪ್ರಮುಖ ಕ್ರೆಡಿಟ್ ಕಾರ್ಡ್ ಮತ್ತು ಭಾರತದ ಮೊದಲ UPI-ಚಾಲಿತ ಬ್ಯಾಂಕ್ ಶಾಖೆ ಪ್ರಾರಂಭಿಸುತ್ತಿರುವ ಸ್ಲೈಸ್

“UPI ಮೂಲಕ ಪಾವತಿಗಳನ್ನು ಸ್ವೀಕರಿಸುವಾಗ ನೋಂದಾಯಿತ ವ್ಯಾಪಾರಿಗಳು MDR ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವಂತಿಲ್ಲ. ಗ್ರಾಹಕರು ವ್ಯಾಪಾರಿ ಪ್ರದರ್ಶಿಸಿರುವ ಬೆಲೆಯನ್ನೇ ಪಾವತಿಸುವು ದನ್ನು ಈ ವ್ಯವಸ್ಥೆ ಖಚಿತಪಡಿಸುತ್ತದೆ,” ಎಂದು ಹೇಳಿದರು.

ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ಹಿಂದಿನ ಡಿಜಿಟಲ್ ಪಾವತಿ ಮಾದರಿಗಳನ್ನು ಗಮನಿಸಿದರೆ, ಹೆಚ್ಚಿನ ವಹಿವಾಟು ಪ್ರಮಾಣವನ್ನು ಪಡೆಯುವ ಉದ್ದೇಶದಿಂದ ವ್ಯಾಪಾರಿಗಳು ಸಣ್ಣ ಪ್ರಮಾಣದ ಪಾವತಿ ಸಂಸ್ಕರಣಾ ವೆಚ್ಚವನ್ನು ತಮ್ಮ ಕಾರ್ಯಾಚರಣಾ ವೆಚ್ಚದ ಭಾಗವಾಗಿ ಭರಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಹೆಚ್ಚಿದ ಗ್ರಾಹಕರ ಭೇಟಿ, ಸರಾಸರಿ ವಹಿವಾಟು ಮೌಲ್ಯ ಹಾಗೂ ನಗದು ನಿರ್ವಹಣೆಯ ಅಪಾಯ ಕಡಿಮೆಯಾಗುವುದರಿಂದ ಈ ವೆಚ್ಚವನ್ನು ಸರಿದೂಗಿಸಬಹುದು ಎಂದರು.

ಕ್ರೆಡಿಟ್ ಕಾರ್ಡ್ ಶುಲ್ಕಗಳಿಗೆ ಹೋಲಿಸಿದರೆ ಪ್ರಸ್ತಾವಿತ UPI MDR ಕಡಿಮೆಯಿದ್ದು, ನಿರ್ದಿಷ್ಟ ವಹಿವಾಟು ಮಿತಿಯನ್ನು ಮೀರಿದಾಗ ಮಾತ್ರ ಅನ್ವಯವಾಗುವುದರಿಂದ, ಚಿಲ್ಲರೆ ಬೆಲೆ ಹೆಚ್ಚಿಸಲು ವ್ಯಾಪಾರಿಗಳಿಗೆ ಹೆಚ್ಚಿನ ಆರ್ಥಿಕ ಪ್ರೇರಣೆ ಇರುವುದಿಲ್ಲ ಎಂದು ಸಾಹಾ ಹೇಳಿದರು.

ರೈಲ್ವೆ, ಟೆಲಿಕಾಂ, ವಿಮೆ ಮತ್ತು ಇಂಧನ ಸೇರಿದಂತೆ ಕೆಲವು ನಿರ್ದಿಷ್ಟ ವ್ಯಾಪಾರಿ ವರ್ಗಗಳಲ್ಲಿ ₹2 ಸಾವಿರಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ ₹5ರ ನಿಗದಿತ MDR ಅನ್ವಯವಾಗಲಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ₹2 ಸಾವಿರಕ್ಕಿಂತ ಕಡಿಮೆ ಇಂಧನ ಪಾವತಿಗಳಿಗೆ MDR ಶೇ.0ರಷ್ಟೇ ಮುಂದುವರಿಯಲಿದ್ದು, ದೈನಂದಿನ ಇಂಧನ ಖರೀದಿಗೆ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.