ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Meesho IPO: ಸ್ಟಾಕ್‌ ಮಾರ್ಕೆಟ್‌ನಲ್ಲಿ ಬೆಂಗಳೂರಿನ ಮೀಶೊ IPO ಹವಾ

ಬೆಂಗಳೂರು ಮೂಲದ ಇ-ಕಾಮರ್ಸ್‌ ಕಂಪನಿಯಾದ ಮೀಶೊ ಲಿಮಿಟೆಡ್‌ ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.‌ ಫ್ಯಾಷನ್‌, ಕಿಚನ್‌, ಹೋಮ್‌ ಗೂಡ್ಸ್‌, ಬ್ಯೂಟಿ, ಪರ್ಸನಲ್‌ ಕೇರ್‌ , ಎಲೆಕ್ಟ್ರಾನಿಕ್‌ ಅಸ್ಸೆಸರೀಸ್ ಉತ್ಪನ್ನಗಳನ್ನು ವಿತರಿಸುತ್ತದೆ. ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಬೆಂಬಲಿತ ಮೀಶೊ, 5,421 ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸಲು ಉದ್ದೇಶಿಸಿದೆ. ಸಾರ್ವಜನಿಕರು ಡಿಸೆಂಬರ್‌ 3 ರಿಂದ ಬಿಡ್‌ ಸಲ್ಲಿಸಬಹುದು.

ಮೀಶೋ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ಮೂಲದ ಇ-ಕಾಮರ್ಸ್‌ ಕಂಪನಿಯಾದ ಮೀಶೊ ಲಿಮಿಟೆಡ್‌ ಐಪಿಒ (Meesho IPO) ಮೂಲಕ ಷೇರು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.‌ ಫ್ಯಾಷನ್‌, ಕಿಚನ್‌, ಹೋಮ್‌ ಗೂಡ್ಸ್‌, ಬ್ಯೂಟಿ, ಪರ್ಸನಲ್‌ ಕೇರ್‌ , ಎಲೆಕ್ಟ್ರಾನಿಕ್‌ ಅಸ್ಸೆಸರೀಸ್ ಉತ್ಪನ್ನಗಳನ್ನು ವಿತರಿಸುತ್ತದೆ. ನಿಮಗೆ ಅಚ್ಚರಿಯಾಗಬಹುದು. ಕೇವಲ 9 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎರಡು ರೂಮ್‌ಗಳ ಫ್ಲ್ಯಾಟ್‌ನಲ್ಲಿ ಆರಂಭವಾಗಿದ್ದ ಮೀಶೊ ಇದೀಗ ಸ್ಟಾಕ್‌ ಮಾರ್ಕೆಟ್‌ ನಲ್ಲಿ ಸಾವಿರಾರು ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸುವಷ್ಟು ದೊಡ್ಡ ಇ-ಕಾಮರ್ಸ್‌ ಕಂಪನಿಯಾಗಿ ಹೊರಹೊಮ್ಮಿದೆ. ವಿಶೇಷವೇನೆಂದರೆ ಭಾರತದ ಸಣ್ಣ ಪುಟ್ಟ ಪಟ್ಟಣಗಳೇ ಇದರ ಮಾರುಕಟ್ಟೆ. ಮೆಟ್ರೋ ನಗರಗಳಿಂದಾಚೆಗೆ ಇದು ಯಶಸ್ವಿಯಾಗಿದೆ.

ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಬೆಂಬಲಿತ ಮೀಶೊ, 5,421 ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸಲು ಉದ್ದೇಶಿಸಿದೆ. ಸಾರ್ವಜನಿಕರು ಡಿಸೆಂಬರ್‌ 3 ರಿಂದ ಬಿಡ್‌ ಸಲ್ಲಿಸಬಹುದು. ಡಿಸೆಂಬರ್‌ 5ಕ್ಕೆ ಐಪಿಒ ಮುಕ್ತಾಯವಾಗುತ್ತಿದೆ. ಪ್ರತಿ ಷೇರಿನ ದರ ಶ್ರೇಣಿ 105 ರುಪಾಯಿ ಮತ್ತು 111 ರುಪಾಯಿ ನಡುವೆ ಇದೆ. ಕಂಪನಿಯ ಮಾರುಕಟ್ಟೆ ಮೌಲ್ಯ 50,100 ಕೋಟಿ ರುಪಾಯಿಗಳಾಗಿದೆ.

ಗ್ರೇ ಮಾರುಕಟ್ಟೆಯಲ್ಲಿ ಪ್ರೀಮಿಯಂ ದರ ಅಥವಾ ಜಿಎಂಪಿಯು 35 ರುಪಾಯಿಗಳಾಗಿದ್ದು, ಷೇರು ಲಿಸ್ಟ್‌ ಆದ ಬಲಿಕ 146 ರುಪಾಯಿಗೆ ಏರಿಕೆಯಾಗುವ ನಿರೀಕ್ಷೆ ಇದೆ. 32% ಗಳಿಕೆ ನಿರೀಕ್ಷಿಸಲಾಗಿದೆ. ಜಿಎಂಪಿ ಖಾತರಿಯಲ್ಲದಿದ್ದರೂ, ಆರಂಭಿಕ ಹಂತದ ಸೆಂಟಿಮೆಂಟ್‌ ಅನ್ನು ಬಿಂಬಿಸುತ್ತಿದೆ. ಮೀಶೋ ಪಾಲಿಗೆ ಭಾವನೆಗಳು ಸಕಾರಾತ್ಮಕವಾಗಿದೆ. ಭಾರತದ ವಾಲ್ಯೂ-ಕಾಮರ್ಸ್‌ ಸೆಗ್ಮೆಂಟ್‌ನಲ್ಲಿ ಮೀಶೊ ತನ್ನ ಛಾಪು ಮೂಡಿಸಿದೆ. ಮೀಶೋದಲ್ಲಿ ಲಕ್ಷಾಂತರ ಸಣ್ಣಪುಟ್ಟ ವ್ಯಾಪಾರಸ್ಥರು ಪ್ರೈಸ್-ಸೆನ್ಸಿಟಿವ್‌ ಗ್ರಾಹಕರನ್ನು ಟೈರ್-‌2 ಮತ್ತು ಟೈರ್‌ 3 ನಗರಗಳಲ್ಲಿ ಸಂಪರ್ಕಿಸುತ್ತಿದೆ. ಇದನ್ನು ಸಾಂಪ್ರದಾಯಿಕ ಇ-ಕಾಮ್ಸ್‌ ಕಂಪನಿಗಳು ಮಾಡುವುದಿಲ್ಲ. ಎರಡನೆಯದಾಗಿ ಮೀಶೋ ಥರ್ಡ್‌ ಪಾರ್ಟಿ ಸೆಲ್ಲರ್ಸ್‌ ಮತ್ತು ಲಾಜಿಸ್ಟಿಕ್ಸ್‌ ಪಾರ್ಟ್‌ ನರ್ಸ್ ಮೇಲೆ ಅವಲಂಬಿತವಾಗಿದೆ.

ಮೀಶೊ ತನ್ನ ತಂತ್ರಜ್ಞಾನ ಮೂಲಸೌಕರ್ಯವನ್ನು ಹೆಚ್ಚಿಸಲು ಯೋಜಿಸಿದೆ. ಲಾಜಿಸ್ಟಿಕ್ಸ್‌ ಸಾಮರ್ಥ್ಯ ಅಭಿವೃದ್ಧಿ, ಡೆಲಿವರಿ ಸ್ಪೀಡ್‌ ಹೆಚ್ಚಿಸಲು ಉದ್ದೇಶಿಸಿದೆ. ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಇ-ಕಾಮರ್ಸ್‌ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಮೀಶೊದ ಬೆಳವಣಿಗೆಗೆ ಅವಕಾಶಗಳು ಸೃಷ್ಟಿಯಾಗಿದೆ. ಬೆಳವಣಿಗೆ ಹೆಚ್ಚಿಸಿಕೊಳ್ಳುತ್ತಿದ್ದರೂ, ವ್ಯಾಪಕವಾದ ಬಳಕೆದಾರರ ನೆಲೆ ಇದ್ದರೂ, ಈಗಲೂ ಮೀಶೊ ನಷ್ಟದಲ್ಲಿದೆ. ದೊಡ್ಡ ಇ-ಕಾಮರ್ಸ್‌ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ.

E-Commerce: ಇ-ಕಾಮರ್ಸ್‌ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ

ಐಐಟಿ ದಿಲ್ಲಿಯಲ್ಲಿ ಪದವಿ ಪಡೆದಿರುವ ವಿದಿತ್‌ ಆಟ್ರೆ ಮತ್ಯು ಸಂಜೀವ್‌ ಬರ್ನ್‌ ವಾಲ್‌ ಅವರು 2015ರ ಡಿಸೆಂಬರ್‌ನಲ್ಲಿ ಮೀಶೊ ಅನ್ನು ಸ್ಥಾಪಿಸಿದ್ದರು. ಮೀಶೋದಲ್ಲಿ ಎತ್ನಿಕ್‌ ವೇ, ವೆಸ್ಟರ್ನ್‌ ಡ್ರೆಸ್‌, ಮೆನ್ಸ್‌ವೇರ್‌, ಫುಟ್‌ವೇರ್‌, ಹೋಮ್‌ ಡೆಕೋರ್‌, ಬ್ಯೂಟಿ, ಮೇಕಪ್‌, ಗ್ರೋಶರಿ, ಅಸ್ಸೆಸರೀಸ್‌ ಉತ್ಪನ್ನಗಳು ಜನಪ್ರಿಯವಾಗಿವೆ. ಫಿಡಿಲಿಟಿ, ಸಾಪ್ಟ್‌ಬ್ಯಾಂಕ್‌, ಪ್ರೊಸಸ್‌, ಬಿ ಕ್ಯಾಪಿಟಲ್‌, ಮೆಟಾ ಇದರಲ್ಲಿ ಹೂಡಿಕೆ ಮಾಡಿವೆ.

ಮೀಶೊ ಷೇರು ಡಿಸೆಂಬರ್‌ 8ರಂದು ಮಂಜೂರಾಗುವ ಹಾಗೂ ಡಿಸೆಂಬರ್‌ 10ಕ್ಕೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಆಗಲಿದೆ. ಸ್ಮಾರ್ಟ್‌ ಫೋನ್‌ಗಳ ಹೆಚ್ಚಳ, ಅಗ್ಗದ ಡೇಟಾ, ಡಿಜಿಟಲ್‌ ಪೇಮೆಂಟ್ಸ್‌, ಮಧ್ಯಮ ವರ್ಗದ ಜನರ ಹೆಚ್ಚಳದ ಪರಿಣಾಮ ಮೀಶೊ ಬೆಳೆದಿದೆ. ಜೈಪುರ, ಸೂರತ್‌, ಪಾನಿಪತ್‌, ಲುಧಿಯಾನಾ, ಕಾನ್ಪುರದ ಮೊದಲಾದ ನಗರಗಳ ಸಣ್ಣ ಉತ್ಪಾದಕರ ಜತೆಗೆ ಮೀಶೊ ಸಂಪರ್ಕ ಸಾಧಿಸಿದ್ದು, ಯಶಸ್ಸಿಗೆ ಕಾರಣವಾಗಿದೆ.

ಕೇಶವ ಪ್ರಸಾದ್​ ಬಿ

View all posts by this author