ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock market: ಆಪರೇಷನ್‌ ಸಿಂಧೂರ; ಸೆನ್ಸೆಕ್ಸ್‌, ನಿಫ್ಟಿ ಸ್ಥಿರ!

ಸಾಮಾನ್ಯವಾಗಿ ಯುದ್ಧದ ಸಂದರ್ಭ, ಜಿಯೊಪೊಲಿಟಿಕಲ್‌ ಟೆನ್ಷನ್‌ ಆದಾಗ, ಸ್ಟಾಕ್‌ ಮಾರ್ಕೆಟ್‌ಗಳಲ್ಲಿ (Stock market) ಭಾರಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಯುದ್ಧ ಸೃಷ್ಟಿಸುವ ಅನಿಶ್ಚಿತತೆ ಅದಕ್ಕೆ ಕಾರಣ. ಆದರೆ ಭಾರತವು ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲು ಆಪರೇಷನ್‌ ಸಿಂಧೂರ ನಡೆಸಿದ ಬೆನ್ನಲ್ಲೇ ಬುಧವಾರ ಬೆಳಗ್ಗೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ಅಲ್ಪ ಏರಿಳಿತ ಸಂಭವಿಸಿದರೂ, ಭಾರಿ ಕುಸಿತವೇನೂ ಆಗಲಿಲ್ಲ.

ಆಪರೇಷನ್‌ ಸಿಂಧೂರ; ಸೆನ್ಸೆಕ್ಸ್‌, ನಿಫ್ಟಿ ಸ್ಥಿರ

Profile Vishakha Bhat May 7, 2025 3:41 PM

ಕೇಶವ ಪ್ರಸಾದ.ಬಿ

ಮುಂಬೈ: ಸಾಮಾನ್ಯವಾಗಿ ಯುದ್ಧದ ಸಂದರ್ಭ, ಜಿಯೊಪೊಲಿಟಿಕಲ್‌ ಟೆನ್ಷನ್‌ ಆದಾಗ, ಸ್ಟಾಕ್‌ ಮಾರ್ಕೆಟ್‌ಗಳಲ್ಲಿ (Stock market) ಭಾರಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಯುದ್ಧ ಸೃಷ್ಟಿಸುವ ಅನಿಶ್ಚಿತತೆ ಅದಕ್ಕೆ ಕಾರಣ. ಆದರೆ ಭಾರತವು ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲು ಆಪರೇಷನ್‌ ಸಿಂಧೂರ ನಡೆಸಿದ ಬೆನ್ನಲ್ಲೇ ಬುಧವಾರ ಬೆಳಗ್ಗೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ಅಲ್ಪ ಏರಿಳಿತ ಸಂಭವಿಸಿದರೂ, ಭಾರಿ ಕುಸಿತವೇನೂ ಆಗಲಿಲ್ಲ. ಸೆನ್ಸೆಕ್ಸ್‌ ಮತ್ತು ನಿಫ್ಟಿ ಒಟ್ಟಾರೆಯಾಗಿ ಸ್ಥಿರವಾಗಿತ್ತು. ಪಾಸಿಟಿವ್‌ ಆಗಿತ್ತು. ಮಧ್ಯಾಹ್ನ 2.35ರ ವೇಳೆಗೆ ಸೆನ್ಸೆಕ್ಸ್‌ 79 ಅಂಕಗಳ ಏರಿಕೆಯೊಂದಿಗೆ 80,747ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 35 ಅಂಕಗಳ ಏರಿಕೆಯೊಂದಿಗೆ 24,415ರಲ್ಲಿ ವಹಿವಾಟು ನಡೆಸುತ್ತಿತ್ತು.

ಇದರೊಂದಿಗೆ ಭಾರತದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಷೇರು ಪೇಟೆ ಸ್ವಾಗತಿಸಿದೆ. ಸ್ಟಾಕ್‌ ಮಾರ್ಕೆಟ್‌ ಅಚಲವಾಗಿದ್ದಕ್ಕೆ ಕೆಲ ಕಾರಣಗಳೂ ಇವೆ. ಅವುಗಳನ್ನು ತಿಳಿಯೋಣ. ಜತೆಗೆ ಬೆಂಗಳೂರು ಮೂಲದ ಪ್ರಸಿದ್ಧ ಗಾರ್ಮೆಟ್ಸ್‌ ಕಂಪನಿಯಾದ ಗೋಕಲ್‌ ದಾಸ್‌ ಎಕ್ಸ್‌ಪೋರ್ಟ್ಸ್‌ ಷೇರಿನ ದರದಲ್ಲಿ ಬರೋಬ್ಬರಿ 12% ತನಕ ಏರಿಕೆ ಆಯಿತು. ಆ ಬೆಳವಣಿಗೆ ಬಗ್ಗೆಯೂ ತಿಳಿದುಕೊಳ್ಳೋಣ.

ಪ್ರಿ-ಓಪನಿಂಗ್‌ ಟ್ರೇಡ್‌ನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಕುಸಿತಕ್ಕೀಡಾದರೂ, ಅಷ್ಟೇ ವೇಗವಾಗಿ ಚೇತರಿಸಿತು. 9.45ರ ವೇಳೆಗೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಗ್ರೀನ್‌ ಆಗಿತ್ತು. ಕಳೆದ ಏಪ್ರಿಲ್‌ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್‌ ಪ್ರೇರಿತ ಉಗ್ರರು 26 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ ಬಳಿಕ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ಬುಧವಾರ ಮುಂಜಾನೆಗೂ ಮುನ್ನ ರಾತ್ರಿಯಲ್ಲೇ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 9 ಉಗ್ರರ ನೆಲೆಗಳನ್ನು ಗುರಿಯಾಗಿಟ್ಟು ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯು ಫೋಕಸ್ಡ್‌ ಆಗಿತ್ತು. ಆದರೆ ನಾನ್-‌ ಎಸ್ಕಲೇಟರಿ ನೇಚರ್‌ನಲ್ಲಿತ್ತು. ಹೀಗಾಗಿ ಸ್ಟಾಕ್‌ ಮಾರ್ಕೆಟ್‌ ಕುಸಿಯಲಿಲ್ಲ ಎಂದು ಜಿಯೊಜಿತ್‌ ಫೈನಾನ್ಷಿಯಲ್‌ ಸರ್ವೀಸ್‌ನ ಸಲಹೆಗಾರರಾದ ಡಾ. ವಿಕೆ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

ಜತೆಗೆ ಮತ್ತೊಂದು ಇಂಟರೆಸ್ಟಿಂಗ್‌ ಕಾರಣವೂ ಇದೆ. ಅದೇನೆಂದರೆ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ವಿದೇಶಿ ಸಾಂಸ್ಥಿತ ಹೂಡಿಕೆದಾರರು ಅಪಾರವಾದ ಭರವಸೆ ಇಟ್ಟಿದ್ದಾರೆ. ಇತ್ತೀಚೆಗೆ ಮತ್ತೆ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ ಬಳಿಕ ನಿರಂತರವಾಗಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌, ಹೋದಷ್ಟೇ ವೇಗವಾಗಿ ಮತ್ತೆ ಹಿಂತಿರುಗುತ್ತಿದ್ದಾರೆ. ಇದು ಷೇರು ಮರುಕಟ್ಟೆಯಲ್ಲಿ ಸೂಚ್ಯಂಕಗಳ ಜಿಗಿತಕ್ಕೆ ಭಾರಿ ಪುಷ್ಟಿ ನೀಡಿದೆ. ಈ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ಗಳನ್ನು ಭಾರತದ ಷೇರು ಮಾರುಕಟ್ಟೆಯ ಪವರ್‌ ಬ್ರೋಕರ್ಸ್‌ ಎಂದೇ ಕರೆಯಲಾಗುತ್ತಿದೆ. ಅಷ್ಟೊಂದು ಪ್ರಭಾವಿ ಅವರು.

ಷೇರು ಮಾರುಕಟ್ಟೆ ಇತ್ತೀಚೆಗೆ ವಿದೇಶಿ ಹೂಡಿಕೆಯ ಒಳ ಹರಿವಿನಲ್ಲಿ ಉಂಟಾಗಿರುವ ಹೆಚ್ಚಳದ ಪರಿಣಾಮವೂ ಗಣನೀಯವಾಗಿ ಚೇತರಿಸುತ್ತಿದೆ. ಕಳೆದ 14 ಟ್ರೇಡಿಂಗ್‌ ಸೆಶನ್ಸ್‌ಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 43,940 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಡಾಲರ್‌ ದುರ್ಬಲವಾಗುತ್ತಿರುವುದರಿಂದ ಅಂತಾರಾಷ್ಟ್ರೀಯ ಹೂಡಿಕೆದಾರರು ಭಾರತದಂತಹ ಪ್ರಗತಿಶೀಲ ರಾಷ್ಟ್ರದ ಸ್ಟಾಕ್‌ ಮಾರ್ಕೆಟ್‌ಗೆ ಮರಳುತ್ತಿದ್ದಾರೆ. ಜಿಯೊ ಪೊಲಿಟಿಕಲ್‌ ರಿಸ್ಕ್‌ ಇದ್ದರೂ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಭವಿಷ್ಯದ ಬೆಳವಣಿಗೆ ಬಗ್ಗೆ ಅಪಾರವಾದ ವಿಶ್ವಾಸ ಇಟ್ಟುಕೊಂಡಿದ್ದಾರೆ. ಹೀಗಾಗಿ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಇದ್ದರೂ ಹೂಡಿಕೆಗೆ ಹಿಂದೇಟು ಹಾಕುತ್ತಿಲ್ಲ. ಜತೆಗೆ ವಿದೇಶಿ ಹೂಡಿಕೆದಾರರು ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಆದ್ದರಿಂದ ಈ ಟ್ರೆಂಡ್‌ ಮುಂದುವರಿಯಬಹುದು ಎನ್ನುತ್ತಾರೆ ತಜ್ಞರು.

ಹಾಗಾದರೆ ಮುಂದೇನಾಗಬಹುದು? ತಜ್ಞರು ಏನೆನ್ನುತ್ತಿದ್ದಾರೆ? 1999ರಿಂದೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಿಲಿಟರಿ ಕಾರ್ಯಾಚರಣೆಯ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ ಒಂದು ಅಂಶವನ್ನು ಗಮನಿಸಬಹುದು. ಪ್ರತಿ ಬಾರಿಯೂ ಭಾರತದಲ್ಲಿ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕ ಸೆನ್ಸೆಕ್ಸ್‌, ನಿಫ್ಟಿ 5% ತನಕ ಇಳಿಕೆಯಾಗಿದೆ. ಆದರೆ ಬಳಿಕ 6 ತಿಂಗಳೊಳಗೆ ಸ್ಟ್ರಾಂಗ್‌ ಆಗಿ ಚೇತರಿಸಿವೆ. ಸೂಚ್ಯಂಕ ಇಳಿಕೆ ತಾತ್ಕಾಲಿಕವಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು. ಆದ್ದರಿಂದ ಆಪರೇಷನ್‌ ಸಿಂಧೂರದ ಬಳಿಕ ಭಾರತದ ಸ್ಟಾಕ್‌ ಮಾರ್ಕೆಟ್‌ ಒಂದಷ್ಟು ಚಂಚಲವಾಗಿದೆಯೇ ಹೊರತು ಆತಂಕದಿಂದ ತೀರಾ ಕಂಪಿಸಿಲ್ಲ. ಬಿದ್ದಿಲ್ಲ.

1999ರ ಕಾರ್ಗಿಲ್‌ ಯುದ್ಧವಾಗಿರಬಹುದು, 2001ರಲ್ಲಿ ಪಾರ್ಲಿಮೆಂಟ್‌ ಅಟ್ಯಾಕ್‌ ಇರಬಹುದು, 2008ರಲ್ಲಿ ಮುಂಬಯಿ ಮೇಲಿನ ಉಗ್ರ ದಾಳಿ, 2016ರ ಉರಿ ಸರ್ಜಿಕಲ್‌ ಸ್ಟ್ರೈಕ್‌, 2019ರ ಬಾಲಾಕೋಟ್‌ ವೈಮಾನಿಕ ದಾಳಿಯ ಸಂದರ್ಭ ನಿಫ್ಟಿ ಸರಾಸರಿ ಕೇವಲ 5.27% ಇಳಿದಿತ್ತು.

ಒಂದು ಕಡೆ ಸ್ಟಾಕ್‌ ಮಾರ್ಕೆಟ್‌ ಪ್ರಬುದ್ಧ ರೀತಿಯಲ್ಲಿ ಆಪರೇಷನ್‌ ಸಿಂಧೂರವನ್ನು ಮನವರಿಕೆ ಮಾಡಿಕೊಂಡಿದೆ. ಎರಡನೆಯದಾಗಿ ವಿದೇಶಿ ಹೂಡಿಕೆದಾರರು ಹೂಡಿಕೆಯನ್ನು ಹೆಚ್ಚಿಸಿ ಭಾರತದ ಸ್ಟಾಕ್‌ ಮಾರುಕಟ್ಟೆಯ ಭವಿಷ್ಯದ ಬಗೆಗಿನ ನಂಬಿಕೆಯನ್ನು ಹೆಚ್ಚಿಸಿದ್ದಾರೆ. ಮೂರನೆಯದಾಗಿ ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ ನಡೆದಿರುವುದು, ಚೀನಾದಲ್ಲಿನ ಬಡ್ಡಿ ದರ ಕಡಿತ ಪಾಸಿಟಿವ್‌ ಪ್ರಭಾವ ಬೀರಿದೆ. ಅನಿಶ್ಚಿತತೆ ಇದ್ದರೂ, ಹೂಡಿಕೆದಾರರಲ್ಲಿ ಅಂಥ ಭೀತಿ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇಂದು ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಭ ಗಳಿಸಿರುವ ಷೇರುಗಳು:

ಗೋಕಲ್‌ದಾಸ್‌ ಎಕ್ಸ್‌ಪೋರ್ಟ್ಸ್:‌ 12%

ಬಿಎಸ್‌ಇ: 10%

ಟಾಟಾ ಮೋಟಾರ್ಸ್:‌ 4%

ಪೇಟಿಎಂ : 7.52%

ವೆಲ್ಸ್‌ಪನ್‌ ಇಂಡಿಯಾ: 13%

ನಷ್ಟಕ್ಕೀಡಾಗಿರುವ ಷೇರುಗಳು:

ಸನ್‌ ಫಾರ್ಮಾ: 2%

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಅಥವಾ ಬಿಎಸ್‌ಇ ತನ್ನ ಜನವರಿ-ಮಾರ್ಚ್‌ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟು 23 ರುಪಾಯಿ ಡಿವಿಡೆಂಡ್‌ ಘೋಷಿಸಿದೆ. ಷೇರಿನ ದರದಲ್ಲಿ ಮಧ್ಯಂತರದಲ್ಲಿ 10% ಏರಿಕೆ ಆಯಿತು. 6,847 ರುಪಾಯಿಗೆ ಏರಿತು. ಬಿಎಸ್‌ಇ 107 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ.

ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿಯ ಬಳಿಕ, ಡಿಫೆನ್ಸ್‌ ಸ್ಟಾಕ್ಸ್‌ಗಳ ದರಗಳಲ್ಲಿ ಗಣನೀಯ ಏರಿಕೆಯಾಗಿರುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ಉಗ್ರರ ದಾಳಿಯ ಬಳಿಕ 10 ಇಂಡಿಯನ್‌ ಡಿಫೆನ್ಸ್‌ ಕಂಪನಿಗಳ ಷೇರುಗಳ ದರದಲ್ಲಿ 4% ತನಕ ಏರಿಕೆಯಾಗಿದೆ. ಇವುಗಳ ಮಾರುಕಟ್ಟೆ ಮೌಲ್ಯದಲ್ಲಿ 500 ಕೋಟಿ ಡಾಲರ್‌ ಹೆಚ್ಚಳವಾಗಿದೆ.

ಏಪ್ರಿಲ್‌ 22ರ ಬಳಿಕ ಡಿಫೆನ್ಸ್‌ ಸ್ಟಾಕ್ಸ್‌ಗಳ ದರ 4% ಏರಿಕೆ:

ಎಚ್‌ಎಎಲ್‌ : 2%

ಸೋಲಾರ್‌ ಇಂಡಸ್ಟ್ರೀಸ್‌ ಇಂಡಿಯಾ: 2%

ಮಝಗಾಂವ್‌ ಡೊಕ್‌ ಶಿಪ್‌ ಬಿಲ್ಡರ್ಸ್:‌ 4.6%

ಕೊಚ್ಚಿನ್‌ ಶಿಪ್‌ ಯಾರ್ಡ್:‌ 2%

ಡಿಫೆನ್ಸ್‌ ಸೆಕ್ಟರ್‌ಗೆ ಸೇರಿದ 7 ಸ್ಟಾಕ್ಸ್‌ಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದ್ರೆ ಗಣನೀಯ ಲಾಭ ಗಳಿಸಬಹುದು ಎನ್ನುತ್ತಾರೆ ತಜ್ಞರು. ಬಿಸಿನೆಸ್‌ ಸ್ಟ್ಯಾಂಡರ್ಡ್‌, ತಜ್ಞರ ಶಿಫಾರಸುಗಳನ್ನು, ಟೆಕ್ನಿಕಲ್‌ ಅಂಶಗಳನ್ನು ಅಧರಿಸಿ ಈ ಕುರಿತ ವರದಿ ಮಾಡಿದ್ದು, ಹೂಡಿಕೆದಾರರಿಗೆ ಉಪಯುಕ್ತವಾದೀತು. ಯಾವುದು ಆ 7 ಷೇರುಗಳು ಅಂತ ನೋಡೋಣ.

ಬಿಇಎಲ್‌

ಬಿಡಿಎಲ್‌

ಮಝಗಾಂವ್‌ ಡೊಕ್‌

ಎಚ್‌ಎಎಲ್‌

ಸೋಲಾರ್‌ ಇಂಡ್ಸ್‌

ಅಸ್ಟ್ರಾ ಮೈಕ್ರೊ

ಡೇಟಾ ಪ್ಯಾಟರ್ನ್ಸ್‌

ಭಾರತ್‌ ಎಲೆಕ್ಟ್ರಾನಿಕ್ಸ್‌

Bharat Electronics (BEL)

ಈಗಿನ ದರ: 308/-

ಏರಿಕೆ ಸಾಧ್ಯತೆ : 19%

ಸಪೋರ್ಟ್:‌ 280/-

ರೆಸಿಸ್ಟೆನ್ಸ್‌ : 320/- 336/-

ಭಾರತ್‌ ಡೈನಾಮಿಕ್ಸ್‌

Bharat Dynamics (BDL)

ಈಗಿನ ದರ: 1,451/-

ಏರಿಕೆ ಸಾಧ್ಯತೆ : 11%

ಸಪೋರ್ಟ್:‌ 1,420/-

ರೆಸಿಸ್ಟೆನ್ಸ್‌ : 1,575/-

ಮಝಗಾಂವ್‌ ಡೊಕ್‌

Mazagon Dock

ಈಗಿನ ದರ: 2,817/-

ಏರಿಕೆ ಸಾಧ್ಯತೆ : 38%

ಸಪೋರ್ಟ್:‌ 2,725/-

ರೆಸಿಸ್ಟೆನ್ಸ್‌ : 3,770/-

ಹಿಂದೂಸ್ತಾನ್‌ ಏರೊನಾಟಿಕ್ಸ್‌

Hindustan Aeronautics (HAL)

ಈಗಿನ ದರ: 4,441/-

ಏರಿಕೆ ಸಾಧ್ಯತೆ :16%

ಸಪೋರ್ಟ್:‌ 4,450/-

ರೆಸಿಸ್ಟೆನ್ಸ್‌ : 5,100/-

ಸೋಲಾರ್‌ ಇಂಡಸ್ಟ್ರೀಸ್‌

Solar Industries

ಈಗಿನ ದರ: 13,281/-

ಏರಿಕೆ ಸಾಧ್ಯತೆ : 27%

ಸಪೋರ್ಟ್:‌ 12,145/-

ರೆಸಿಸ್ಟೆನ್ಸ್‌ : 15,260/-

ಅಸ್ತ್ರ ಮೈಕ್ರೊವೇವ್‌ ಪ್ರಾಡಕ್ಸ್ಟ್‌

Astra Microwave Products

ಈಗಿನ ದರ: 842/-

ಏರಿಕೆ ಸಾಧ್ಯತೆ : 19%

ಸಪೋರ್ಟ್:‌ 750/-

ರೆಸಿಸ್ಟೆನ್ಸ್‌ : 945/-

ಡೇಟಾ ಪ್ಯಾಟರ್ನ್ಸ್‌ (ಇಂಡಿಯಾ)

Data Patterns (India)

ಈಗಿನ ದರ: 2,177/-

ಏರಿಕೆ ಸಾಧ್ಯತೆ : 29%

ಸಪೋರ್ಟ್:‌ 2,090/-

ರೆಸಿಸ್ಟೆನ್ಸ್‌ : 2,400/-

ಇವತ್ತು ಪೇಟಿಎಂನ ಪೇರೆಂಟ್‌ ಕಂಪನಿಯಾದ ವನ್‌ 97 ಕಮ್ಯುನಿಕೇಶನ್ಸ್‌ ಷೇರು ದರದಲ್ಲಿ 5% ತನಕ ಏರಿಕೆ ದಾಖಲಾಯಿತು. ಇದಕ್ಕೆ ಕಾರಣವೇನು? ಎಂಬುದನ್ನು ನೋಡೋದಿದ್ರೆ, ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ಪೇಟಿಎಂ ನಷ್ಟ ಕಡಿಮೆಯಾಗಿದೆ. 550 ಕೋಟಿಯಿಂದ 540 ಕೋಟಿಗೆ ನಷ್ಟ ಇಳಿಕೆಯಾಗಿದೆ.

ಬೆಂಗಳೂರು ಮೂಲದ ಪ್ರಸಿದ್ಧ ಗಾರ್ಮೆಂಟ್ಸ್‌ ಕಂಪನಿಯಾದ, ಗೋಕಲ್‌ ದಾಸ್‌ ಎಕ್ಸ್‌ಪೋರ್ಟ್ಸ್‌ ಷೇರಿನ ದರದಲ್ಲಿ 12% ದರ ಏರಿಕೆಯಾಗಿದೆ. 954 ರುಪಾಯಿಗೆ ಏರಿತು. ಹಾಗೆಯೇ ಕೆಪಿಆರ್‌ ಮಿಲ್‌ ಷೇರು ದರ 10% ಹೆಚ್ಚಳವಾಯಿತು. 1,122 ರುಪಾಯಿಗೆ ವೃದ್ಧಿಸಿತು. ಅರವಿಂದ್‌ ಲಿಮಿಟೆಡ್‌ ಷೇರು ದರದಲ್ಲಿ 6% ಏರಿದ್ದು, 387/-ಕ್ಕೆ ಹೆಚ್ಚಳವಾಯಿತು. ಇದಕ್ಕೆ ಕಾರಣವೇನು ಎಂದರೆ- ಬ್ರಿಟನ್‌ನ ಮಾರುಕಟ್ಟೆಗೆ ಭಾರತೀಯ ಗಾರ್ಮೆಟ್ಸ್‌ ಉತ್ಪನ್ನಗಳು ಝೀರೊ ಡ್ಯೂಟಿ ಪದ್ಧತಿಯಲ್ಲಿ ರಫ್ತಾಗಬಹುದು ಎಂಬ ನಿರೀಕ್ಷೆ. ಏಕೆಂದರೆ ಭಾರತ-ಬ್ರಿಟನ್‌ ನಡುವೆ ಈಗ ಮುಕ್ತ ವ್ಯಾಪಾರ ಒಪ್ಪಂದ ಆಗಿದೆ. ಜತೆಗೆ ಬಾಂಗ್ಲಾದೇಶ ಮತ್ತು ವಿಯೆಟ್ನಾಂಗೆ ಹೋಲಿಸಿದರೆ ಭಾರತದ ಗಾರ್ಮೆಂಟ್ಸ್‌ ರಫ್ತಿಗೆ ಹೆಚ್ಚಿನ ಅನುಕೂಲ ಸಿಗಲಿದೆ.

ಕೆಲವು ತಜ್ಞರು ಎಚ್ಚರಿಕೆಯ ಮಾತುಗಳನ್ನೂ ಆಡಿದ್ದಾರೆ. ಆರ್ಥಿಕ ತಜ್ಞ ಸ್ವಾಮಿನಾಥನ್‌ ಅಯ್ಯರ್‌ ಅವರ ಪ್ರಕಾರ, ಪಾಕಿಸ್ತಾನ ಭಾರತಕ್ಕೆ ತಿರುಗೇಟು ನೀಡುವ ಸಲುವಾಗಿ ಯತ್ನಿಸಬಹುದು. ಅದರ ಟಾರ್ಗೆಟ್‌ ಯಾವುದು ಎಂಬುದು ತಿಳಿದಿಲ್ಲ. ಅಪಾಯವಂತೂ ಇದ್ದೇ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಖ್ಯಾತ ಹೂಡಿಕೆದಾರ ವಿಜಯ್‌ ಕೇಡಿಯಾ ಅವರು ಎಕ್ಸ್‌ ಖಾತೆಯನ್ನು ಹನಿಗವನದ ಮೂಲಕ ಆಪರೇಷನ್‌ ಸಿಂಧೂರವನ್ನು ಸಮರ್ಥಿಸಿಕೊಂಡಿದ್ದಾರೆ. ಬೆಂಬಲಿಸಿದ್ದಾರೆ. ಆ ಹನಿಗವನ ಹೀಗಿದೆ.

ಈ ಸುದ್ದಿಯನ್ನೂ ಓದಿ: Operation Sindoor: ಭಾರತ- ಪಾಕಿಸ್ತಾನ ಯುದ್ಧ ಆರಂಭ; ಇದರ ಹೆಸರು ಆಪರೇಶನ್‌ ಸಿಂಧೂರ್! ಪಾಕ್‌ನ 9 ನೆಲೆಗಳ ಮೇಲೆ ವಾಯುದಾಳಿ

Pahalgam cried — and India rose with flame,

Operation Sindoor struck in the enemy's name.

This isn’t revenge - it’s justice that flies —

When terror dares, a soldier replies.

ಈ ಸಾಲುಗಳ ಅರ್ಥ ಏನೆಂದರೆ-

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಅಟ್ಟಹಾಸ ನಡೆಯಿತು.

ಪ್ರತಿಯಾಗಿ ಭಾರತ ಅಗ್ನಿಯಂತೆ ಪ್ರಜ್ವಲಿಸಿತು.

ಶತ್ರು ಸಂಹಾರಕ್ಕೆ ಆಪರೇಷನ್‌ ಸಿಂಧೂರ ನಡೆಯಿತು.

ಇದು ಪ್ರತೀಕಾರವಲ್ಲ, ಇದು ನ್ಯಾಯಬದ್ಧ

ಉಗ್ರರು ದಾಳಿ ನಡೆಸಿದರೆ, ಯೋಧರು ಅದಕ್ಕೆ ಉತ್ತರಿಸುತ್ತಾರೆ.