ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಚಿನ್ನ ಕಡಿಮೆ ಖರೀದಿಸುವಂತೆ ಕರೆ ನೀಡಿದ್ದರಿಂದ ಬೆಲೆ ಇಳಿಕೆಯಾಗಿದೆʼʼ: ಪ್ರಧಾನಿ ನರೇಂದ್ರ ಮೋದಿ 'ಬಂಗಾರʼದ ಮಾತು

Narendra Modi: ತಾವು ಕೆಲವು ದಿನಗಳ ಹಿಂದೆ ಜಾಸ್ತಿ ಚಿನ್ನ ಖರೀದಿಸದಂತೆ ನೀಡಿದ ಕರೆ ಈಗ ಫಲ ನೀಡುತ್ತಿದ್ದು, ಚಿನ್ನ ಬೆಲೆ ಇಳಿಕೆಗೆ ಇದೂ ಒಂದು ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಆಹಾರದ ಕೊರತೆಯಿದ್ದ ಸಂದರ್ಭದಲ್ಲಿ ಒಂದು ಹೊತ್ತಿನ ಊಟವನ್ನು ತ್ಯಜಿಸುವಂತೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನರಿಗೆ ನೀಡಿದ್ದ ಕರೆಯನ್ನೂ ಅವರು ಉಲ್ಲೇಖಿಸಿದರು.

ಸಾಂದರ್ಭಿಕ ಚಿತ್ರ

ಲಖನೌ, ನ. 21: ತಾವು ಕೆಲವು ದಿನಗಳ ಹಿಂದೆ ಜಾಸ್ತಿ ಚಿನ್ನ (Gold Price) ಖರೀದಿಸದಂತೆ ನೀಡಿದ ಕರೆ ಈಗ ಫಲ ನೀಡುತ್ತಿದ್ದು, ಚಿನ್ನ ಬೆಲೆ ಇಳಿಕೆಗೆ ಇದೂ ಒಂದು ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು. ಉತ್ತರ ಪ್ರದೇಶದ ಲಖನೌನಲ್ಲಿ ನಡೆದ 'ಕೌಶಲ ದೀಕ್ಷಾಂತ ಸಮಾರೋಹ'ದಲ್ಲಿ (Kaushal Deekshant Samaroh) ಮೋದಿ ಮಾತನಾಡಿದರು. ಇದೇ ವೇಳೆ ಅವರು, ಆಹಾರದ ಕೊರತೆಯಿದ್ದ ಸಂದರ್ಭದಲ್ಲಿ ಒಂದು ಹೊತ್ತಿನ ಊಟವನ್ನು ತ್ಯಜಿಸುವಂತೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನರಿಗೆ ನೀಡಿದ್ದ ಕರೆಯನ್ನು ಉಲ್ಲೇಖಿಸಿದರು. ಅನಗತ್ಯವಾಗಿ ಚಿನ್ನವನ್ನು ಖರೀದಿಸುವುದನ್ನು ತಪ್ಪಿಸುವಂತೆ ತಾವು ಮಾಡಿದ ಮನವಿಗೂ ಭಾರತೀಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

"ಕೆಲವು ತಿಂಗಳ ಹಿಂದೆ ಅಗತ್ಯವಿಲ್ಲದಿದ್ದರೆ ದಯವಿಟ್ಟು ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸಬೇಡಿ ಎಂದು ಕರೆ ನೀಡಿದ್ದೆ. ಅದನ್ನು ಜನರು ಪಾಲಿಸಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಒಂದು ಹೊತ್ತಿನ ಊಟವನ್ನು ತ್ಯಜಿಸುವಂತೆ ಕೋರಿದಾಗ ಈ ದೇಶವು ಅವರ ಕರೆಯನ್ನು ಪಾಲಿಸಿತ್ತು. ನನ್ನ ದೇಶವು ಇಂದಿಗೂ ಅದೇ ಗುಣಲಕ್ಷಣವನ್ನು ಹೊಂದಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ" ಎಂದು ತಿಳಿಸಿದರು.

ಚಿನ್ನದ ದರದ ಬಗ್ಗೆ ಮೋದಿ ಮಾತು:



ಜನ ಸಾಮಾನ್ಯರು ಹೇಳಿದ್ದೇನು?

ತಮ್ಮ ಸಲಹೆಯನ್ನು ಪಾಲಿಸಿದ್ದರಿಂದ ಹಣ ಉಳಿತಾಯ ಮಾಡಲು ಸಾಧ್ಯವಾಯಿತು ಎಂದು ಅನೇಕರು ತಮಗೆ ತಿಳಿಸಿದ್ದಾಗಿ ಹೇಳಿದರು. "ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿ ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡೆ. ಅದರಂತೆ ಗ್ರಾಹಕರು ಚಿನ್ನದ ಖರೀದಿ ಕಡಿಮೆ ಮಾಡಿದರು. ಪರಿಣಾಮವಾಗಿ ಚಿನ್ನದ ಬೆಲೆ ಇಳಿದವು. ಇಂದು ಜನರು ನನಗೆ, ಮೋದಿ ಜಿ, ನೀವು ಹೇಳಿದಿರಿ, ನಾವು ನಿಮ್ಮ ಸಲಹೆಯನ್ನು ಪಾಲಿಸಿದೆವು, ಇದರಿಂದ ನಮ್ಮ ಹಣ ಉಳಿತಾಯವಾಯಿತು ಎಂದು ಹೇಳುತ್ತಿದ್ದಾರೆ" ಎಂಬುದಾಗಿ ವಿವರಿಸಿದರು.

ಚಿನ್ನ ಖರೀದಿಸದಂತೆ ಇಂದಿರಾ ಗಾಂಧಿ ಹೇಳಿದ್ದು ನಿಜವೇ? ವೈರಲ್‌ ಪತ್ರಿಕಾ ತುಣುಕಿನ ಅಸಲಿಯತ್ತೇನು?

ಮೋದಿ ಹೇಳಿದ್ದೇನು?

ಕೆಲವು ತಿಂಗಳ ಹಿಂದೆ ಪ್ರಧಾನಿ ಮೋದಿ ಮಹತ್ವದ ಸಂದೇಶ ನೀಡಿ, ತೀರಾ ಅಗತ್ಯವಿಲ್ಲದಿದ್ದರೆ ಚಿನ್ನ ಖರೀದಿಸಬೇಡಿ ಎಂದು ಮನವಿ ಮಾಡಿದ್ದರು. ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಜಗತ್ತು ಜಾಗತಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವಾಗ ಅವರು ಈ ಕರೆ ನೀಡಿದ್ದರು. ಸಾರ್ವಜನಿಕ ಸಾರಿಗೆಯ ಬಳಕೆ ಮೂಲಕ ಇಂಧನವನ್ನು ಸಂರಕ್ಷಿಸಲು ಪ್ರಯತ್ನಿಸುವುದು, ಸಾಧ್ಯವಾದಲ್ಲೆಲ್ಲ ವರ್ಕ್‌ ಫ್ರಮ್‌ ಹೋಂ ಅಳವಡಿಸಿಕೊಳ್ಳುವುದು ಮತ್ತು ವಿದೇಶಿ ವಿನಿಮಯ ಹೊರಹರಿವುಗಳನ್ನು ಕಡಿಮೆ ಮಾಡುವುದು ಸೇರಿ ಹಲವು ಸಲಹೆ ನೀಡಿದ್ದರು. ಜತೆಗೆ ವಿದೇಶದಲ್ಲಿ ಮದುವೆಯಾಗುವುದನ್ನು ತಪ್ಪಿಸುವಂತೆ, ಅನಿವಾರ್ಯವಲ್ಲದ ಹೊರತು ವಿದೇಶಿ ಪ್ರವಾಸ ತ್ಯಜಿಸುವಂತೆ ಸೂಚಿಸಿದ್ದರು.

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಜಾಗತಿಕವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಶನಿವಾರದ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಜಾಗತಿಕ ದರಗಳು ಸತತ ಐದನೇ ದಿನವೂ ಕುಸಿದಿದ್ದು, ಮಾರ್ಚ್ ನಂತರದ ಅತಿ ದೊಡ್ಡ ಕುಸಿತವನ್ನು ದಾಖಲಿಸಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author