ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೋದಿ ಕರೆಯಂತೆ ಒಂದು ವರ್ಷ ನೀವು ಚಿನ್ನ ಖರೀದಿಸದಿದ್ದರೆ ಏನಾಗುತ್ತದೆ? ದೇಶದ ಆರ್ಥಿಕತೆ ಮೇಲೆತ್ತಲು ನೀವು ಹೇಗೆಲ್ಲ ಕೊಡುಗೆ ನೀಡಬಹುದು?

ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದ ಕಾರಣದಿಂದ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮದಿಂದ ಭಾರತದ ಕಚ್ಚಾ ತೈಲ ಆಮದು ತೀವ್ರವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯರು ಚಿನ್ನ ಖರೀದಿ ಸೇರಿದಂತೆ ಹಲವು ವೆಚ್ಚ ಕಡಿತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಚಿನ್ನಕ್ಕೂ ಇದಕ್ಕೂ ಏನು ಸಂಬಂಧ ಈ ಕುರಿತು ಇಲ್ಲಿದೆ ಮಾಹಿತಿ.

ಚಿನ್ನ ಖರೀದಿ ಮಾಡಬೇಡಿ ಎಂದು ಪ್ರಧಾನಿ ಮೋದಿ ಹೇಳಿದ್ದೇಕೆ ?

ಸಂಗ್ರಹ ಚಿತ್ರ -

ಹೈದರಾಬಾದ್‌: ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದ (US-Iran war) ಕಾರಣದಿಂದ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮದಿಂದ ಕಚ್ಚಾ ತೈಲದ (crude oil) ಬೆಲೆ ಗಗನಕ್ಕೇರುತ್ತಿದೆ. ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಗಳಲ್ಲಿ ಶೇ. 88ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ವೆಚ್ಚ ಕಡಿತದ ಭಾಗವಾಗಿ ಭಾರತೀಯರು ಚಿನ್ನ ಖರೀದಿ (gold buy) ಮಾಡದೇ ಇರುವುದು, ವಿದೇಶಿ ಪ್ರಯಾಣವನ್ನು (Foreign travel) ಮುಂದೂಡುವುದು ಮತ್ತು ಮನೆಯಿಂದ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra modi) ಅವರು ಕರೆ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಬಿಜೆಪಿ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ಸರಪಳಿಗಳು ಒತ್ತಡದಲ್ಲಿದೆ. ಹೀಗಾಗಿ ಭಾರತ ವಿದೇಶಿ ವಿನಿಮಯ ಮೀಸಲುಗಳನ್ನು ಸಂರಕ್ಷಿಸಬೇಕು ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಬೇಕಿದೆ ಎಂದರು.

ಲೈವ್ ಮ್ಯಾಚ್‌ ನೋಡುತ್ತಲೇ ಮಾಡಿ ಫುಡ್‌ ಆರ್ಡರ್‌! ಸ್ಟ್ರೀಮಿಂಗ್ ಲೋಕದಲ್ಲಿ ಜಿಯೋಹಾಟ್‌ಸ್ಟಾರ್-ಸ್ವಿಗ್ಗಿ ಕ್ರಾಂತಿ

ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಳವಡಿಸಿಕೊಂಡಿದ್ದ ಅಭ್ಯಾಸಗಳನ್ನು ಮಾಡುವಂತೆ ತಿಳಿಸಿದ ಅವರು, ಕರೋನಾ ಸಂದರ್ಭದಲ್ಲಿ ನಾವು ಮನೆಯಿಂದ ಕೆಲಸ, ವರ್ಚುವಲ್ ಸಭೆಗಳು, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಇತರ ಹಲವು ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಾವು ಅವುಗಳಿಗೆ ಒಗ್ಗಿಕೊಂಡಿದ್ದೇವೆ. ಆ ವಿಧಾನಗಳನ್ನು ಪುನರಾರಂಭಿಸುವುದು ಈಗಿನ ಅಗತ್ಯವಾಗಿದೆ ಎಂದರು.

ಜನರು ಸಾಧ್ಯವಿರುವಲ್ಲಿ ಮೆಟ್ರೋ ರೈಲು ಸೇವೆಗಳು, ಕಾರ್‌ಪೂಲಿಂಗ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಿತವಾಗಿ ಬಳಸಬೇಕಿದೆ. ಸರಕು ಸಾಗಣೆಗೆ ಹೆಚ್ಚಾಗಿ ಇಂಧನ ಬಯಸುವ ರಸ್ತೆ ಸಾರಿಗೆ ಬದಲು ರೈಲು ಬಳಸುವಂತೆ ತಿಳಿಸಿದರು.

ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನದ ಆಮದು ಕೂಡ ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಹೀಗಾಗಿ ಕನಿಷ್ಠ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ಭಾರತೀಯರು ತಪ್ಪಿಸಬೇಕಿದೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ, ನಾವು ಒಂದು ವರ್ಷ ಚಿನ್ನವನ್ನು ಖರೀದಿಸದಿರಲು ಸಂಕಲ್ಪ ಮಾಡಬೇಕು. ಇದರೊಂದಿಗೆ ವಿದೇಶಿ ಕರೆನ್ಸಿಯನ್ನು ಸಂರಕ್ಷಿಸಲು ಅನಗತ್ಯ ವಿದೇಶಿ ಪ್ರಯಾಣ, ಪ್ರವಾಸ, ವಿವಾಹಗಳನ್ನು ಒಂದು ವರ್ಷದವರೆಗೆ ಮುಂದೂಡುವಂತೆ ತಿಳಿಸಿದರು.

ಒಂದು ಅಂದಾಜಿನ ಪ್ರಕಾರ ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣಗೊಂಡ ಬಳಿಕ ಭಾರತಕ್ಕೆ ಇಂಧನ ಆಮದು ಹೊರೆ ತೀವ್ರವಾಗಿ ಹೆಚ್ಚಾಗಿದೆ. ಇದರಿಂದ ತೈಲ ಬೆಲೆಗಳು ಏರಿಕೆಯಾಗಬಹುದು. ಇಂಧನ ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈಗಾಗಲೇ ಭಾರಿ ನಷ್ಟವನ್ನು ಅನುಭವಿಸುತ್ತಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಈ ವರ್ಷದ ಆರಂಭದಲ್ಲೇ ಹೇಳಿದ್ದರು.

ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವೇನು?

ಯುಎಸ್ ಮತ್ತು ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಚಿನ್ನ, ಬೆಳ್ಳಿ ದರಗಳಲ್ಲಿ ತೀವ್ರ ಹೆಚ್ಚಳವಾಗಿದೆ. ಯುದ್ಧಗಳು ಅಥವಾ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಈ ರೀತಿ ಆಗುವುದು ಸಾಮಾನ್ಯವಾದರೂ ಕೂಡ ಇದು ದೀರ್ಘಾವಧಿಯ ಪರಿಣಾಮವನ್ನು ಉಂಟು ಮಾಡುತ್ತದೆ. ಇದು ಹಣದುಬ್ಬರ ಮತ್ತು ಹೆಚ್ಚಿನ ಬಡ್ಡಿದರಗಳ ಆತಂಕವನ್ನು ಉಂಟು ಮಾಡುತ್ತದೆ.

ಹೊರ್ಮುಜ್ ಜಲ ಮಾರ್ಗದಲ್ಲಿ ಅಡೆತಡೆಗಳು ಉಂಟಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಇದು ವಿಶ್ವಾದ್ಯಂತ ಹಣದುಬ್ಬರದ ಅಪಾಯಗಳನ್ನು ಹೆಚ್ಚಿಸುತ್ತವೆ. ಯುಎಸ್ ಫೆಡರಲ್ ರಿಸರ್ವ್‌ನಂತಹ ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ದೀರ್ಘಕಾಲದವರೆಗೆ ಹೆಚ್ಚಿಸಲು ಪ್ರೇರೇಪಿಸುತ್ತವೆ. ಇದು ಚಿನ್ನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.

2026ರಲ್ಲಿ ಅಮೆಜಾನ್‌ ಆಶ್ರಯ್ ಕೇಂದ್ರಗಳ ಸಂಖ್ಯೆ 250ಕ್ಕೆ ಹೆಚ್ಚಳ

ಏರುತ್ತಿರುವ ಕಚ್ಚಾ ತೈಲ, ಜಾಗತಿಕ ಚಿನ್ನದ ಬೆಲೆಗಳು ಭಾರತದಂತಹ ದೇಶಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ತಪ್ಪಿಸಲು ಮತ್ತು ಅನಿವಾರ್ಯವಲ್ಲದ ಆಮದುಗಳನ್ನು ಕಡಿಮೆ ಮಾಡಲು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರವು ಇಂಧನ ಬಿಕ್ಕಟ್ಟನ್ನು ಎದುರಿಸಲು ಸಮರ್ಪಕವಾಗಿ ತಯಾರಿ ನಡೆಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.