ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Repo Rate: ಆರ್‌ಬಿಐ ರೆಪೋ ದರ ಕಡಿತ: ಗೃಹ ಸಾಲಗಾರರಿಗೆ EMIನಲ್ಲಿ ಉಳಿತಾಯ ಎಷ್ಟು? ಇಲ್ಲಿದೆ ಲೆಕ್ಕಚಾರ

Repo Rate: ರೆಪೋ ದರ ಆಧಾರಿತ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಬಡ್ಡಿ ದರಗಳು ಇಳಿಯಲಿದೆ. ರಿಸರ್ವ್‌ ಬ್ಯಾಂಕ್‌ ಅಫ್‌ ಇಂಡಿಯಾದ ಬಡ್ಡಿ ದರ ಇಳಿಕೆಯಿಂದ ರೆಪೊ ದರವು 6.25%ರಿಂದ 6% ಕ್ಕೆ ಇಳಿಕೆಯಾಗಿದೆ. ಏನಿದು ರೆಪೋ ದರ? ರೆಪೋ ದರ ಎಂದರೆ ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ. ಇದಯ ಕಡಿಮೆಯಾದಾಗ ಬ್ಯಾಂಕ್‌ಗಳಿಎ ಅಗ್ಗದ ದರದಲ್ಲಿ ಫಂಡ್‌ ಸಿಗುತ್ತದೆ. ಅದರ ಲಾಭವನ್ನು ಸಾಲಗಾರರಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ.

ಆರ್‌ಬಿಐ ರೆಪೋ ದರ ಕಡಿತ-ಗೃಹ ಸಾಲಗಾರರಿಗೆ EMIನಲ್ಲಿ ಉಳಿತಾಯ ಎಷ್ಟು?

Profile Rakshita Karkera Apr 9, 2025 11:50 AM

ಮುಂಬಯಿ: ನಿರೀಕ್ಷೆಯಂತೆಯೇ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬುಧವಾರ ತನ್ನ ರೆಪೋ ದರದಲ್ಲಿ(Repo Rate) 0.25% ರಷ್ಟು ಕಡಿತಗೊಳಿಸಿದ್ದು, ಹೋಮ್‌ ಲೋನ್‌ ಇಎಂಐ ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇದರಿಂದ ಈಗಾಗಲೇ ಸಾಲ ತೆಗೆದುಕೊಂಡಿರುವವರಿಗೆ ಇಎಂಐಗಳು ಕಡಿಮೆಯಾಗಲಿದ್ದರೆ, ಹೊಸತಾಗಿ ಸಾಲ ತೆಗೆದುಕೊಳ್ಳುವವರಿಗೂ ಬಡ್ಡಿ ದರ ಇಳಿಕೆಯ ಅನುಕೂಲವಾಗಲಿದೆ. ಹಾಗಾದರೆ ಹೋಮ್‌ ಲೋನ್‌(Home Loan) ಇಎಂಐನಲ್ಲಿ ಎಷ್ಟು ಉಳಿತಾಯವಾಗಲಿದೆ ಎಂಬುದನ್ನು ಈಗ ನೋಡೋಣ. ರೆಪೋ ದರ ಆಧಾರಿತ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಬಡ್ಡಿ ದರಗಳು ಇಳಿಯಲಿದೆ. ರಿಸರ್ವ್‌ ಬ್ಯಾಂಕ್‌ ಅಫ್‌ ಇಂಡಿಯಾದ ಬಡ್ಡಿ ದರ ಇಳಿಕೆಯಿಂದ ರೆಪೊ ದರವು 6.25%ರಿಂದ 6% ಕ್ಕೆ ಇಳಿಕೆಯಾಗಿದೆ. ಏನಿದು ರೆಪೋ ದರ? ರೆಪೋ ದರ ಎಂದರೆ ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ. ಇದಯ ಕಡಿಮೆಯಾದಾಗ ಬ್ಯಾಂಕ್‌ಗಳಿಎ ಅಗ್ಗದ ದರದಲ್ಲಿ ಫಂಡ್‌ ಸಿಗುತ್ತದೆ. ಅದರ ಲಾಭವನ್ನು ಸಾಲಗಾರರಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ.

ಕೋವಿಡ್‌ ಕಾಲ ಘಟ್ಟದ ಬಳಿಕ ಬಳಿಕ ಎರಡನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಇಳಿಸಿದಂತಾಗಿದೆ. ಕೋವಿಡ್‌ ಲಾಲ ಅಂದ್ರೆ 2020ರ ಮೇ ಮತ್ತು 2022ರ ಏಪ್ರಿಲ್‌ ನಡುವೆ ಆರ್‌ಬಿಐ ರೆಪೊ ದರವನ್ನು 4 ಪರ್ಸೆಂಟ್‌ ನಡುವೆ ಇರಿಸಿತ್ತು. ಆರ್‌ಬಿಐ ನಾನಾ ಹಂತಗಳಲ್ಲಿ ರೆಪೊ ದರವನ್ನು 6.5% ತನಕ ಏರಿಸಿತ್ತು. ಹಾಗೂ ಇತ್ತೀಚಿನ ಕಡಿತದ ತನಕ ಯಥಾಸ್ಥಿತಿಯಲ್ಲಿ ಇರಿಸಿತ್ತು. ಆರ್‌ಬಿಐ ರೆಪೊ ದರ ಕಡಿತದಿಂದ ಹೋಮ್‌ ಲೋನ್‌ ಪಡೆದವರಿಗೆ ಎಷ್ಟು ಉಳಿತಾಯ ಆಗುತ್ತದೆ ಎಂಬುದನ್ನು ನೋಡೋಣ.

ಗೃಹ ಸಾಲಗಾರರಿಗೆ ಎಷ್ಟು ಉಳಿತಾಯ?

ಪಡೆದಿರುವ ಗೃಹ ಸಾಲದ ಮೊತ್ತ: 50 ಲಕ್ಷ

ಬಡ್ಡಿ ದರ : 8.70%

ಹಾಲಿ ಇಎಂಐ : 39,157 ರುಪಾಯಿ

ರೆಪೊ ದರ ಕಡಿತದ ಬಳಿಕ ಬಡ್ಡಿ ದರ ಇಳಿಕೆ ಎಷ್ಟು: 8.45%

ಪರಿಷ್ಕೃತ ಇಎಂಐ : 38,269 ರುಪಾಯಿ.

ಉಳಿತಾಯ : ತಿಂಗಳಿಗೆ 888 ರುಪಾಯಿ.

20-30 ವರ್ಷಗಳ ಗೃಹ ಸಾಲ ತೆಗೆದುಕೊಂಡಿರುವವರಿಗೆ ಇದರಿಂದ ದೀರ್ಘಕಾಲೀನವಾಗಿ ದೊಡ್ಡ ಮೊತ್ತದ ಉಳಿತಾಯವಾಗುತ್ತದೆ.

ಈ ಸುದ್ದಿಯನ್ನೂ ಓದಿ: Repo Rate: ಗುಡ್‌ನ್ಯೂಸ್‌! ರೆಪೋ ರೇಟ್‌ ದರ ಇಳಿಕೆ- ಬ್ಯಾಂಕ್‌ ಸಾಲಗಳ ಮೇಲಿನ ಬಡ್ಡಿದರ ಕಡಿತ

ಪರ್ಸನಲ್‌ ಲೋನ್‌ ಅಥವಾ ವೈಯಕ್ತಿಕ ಸಾಲಗಾರರಿಗೆ ಎಷ್ಟು ಉಳಿತಾಯ?

5 ವರ್ಷಗಳ ಅವಧಿಗೆ ಪಡೆದಿರುವ ಸಾಲ : 5 ಲಕ್ಷ ರುಪಾಯಿ.

ಬಡ್ಡಿ ದರ : 12 %

ಹಾಲಿ ಇಎಂಐ : 11,282 ರುಪಾಯಿ.

ಬಡ್ಡಿ ದರ ಕಡಿತ ಎಷ್ಟು: 0.25%

ಪರಿಷ್ಕೃತ ಇಎಂಐ : 11,149 ರುಪಾಯಿ.

ಉಳಿತಾಯ ತಿಂಗಳಿಗೆ 133/-, ವಾರ್ಷಿಕ 1,596 ರುಪಾಯಿ.

ಬಡ್ಡಿ ದರಗಳು ಇಳಿಕೆಯಾಗುವ ಟ್ರೆಂಡ್‌ ಇದ್ದಾಗ ಫ್ಲೋಟಿಂಗ್‌ ಬಡ್ಡಿ ದರವನ್ನು ಆಯ್ಕೆ ಮಾಡಿದರೆ ಸಾಲಗಾರರಿಗೆ ಅನುಕೂಲವಾಗುತ್ತದೆ. ಏಕೆಂದರೆ ಫಿಕ್ಸೆಡ್‌ ಬಡ್ಡಿ ದರ ಇದ್ದರೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ. ಆದರೆ ಬಡ್ಡಿ ದರ ಏರುಗತಿಯ ಟ್ರೆಂಡ್‌ನಲ್ಲಿ ಇದ್ದಾಗ ಫಿಕ್ಸೆಡ್‌ ಬಡ್ಡಿ ದರ ಇರುವವರಿಗೆ ಅನುಕೂಲವಾಗುತ್ತದೆ.