ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉಚಿತ ನಾರಾಯಣ ಕೃತಕ ಕಾಲು ಮತ್ತು ಕ್ಯಾಲಿಪರ್ ಅಳವಡಿಕೆ ಶಿಬಿರದಲ್ಲಿ 558 ವಿಕಲಚೇತನರಿಗೆ ನೆರವಾದ ನಾರಾಯಣ ಸೇವಾ ಸಂಸ್ಥಾನ

ಶಿಬಿರದಲ್ಲಿ 558 ವಿಕಲಚೇತನರು ಭಾಗವಹಿಸಿದ್ದು, ಸುಮಾರು 602 ಕೃತಕ ಕಾಲುಗಳು ಮತ್ತು ಕ್ಯಾಲಿಪರ್ ಗಳನ್ನು ಉಚಿತವಾಗಿ ಅಳವಡಿಸಲಾಯಿತು. ಇದರಲ್ಲಿ ಮೇಲ್ಭಾಗದ ಅಂಗಗಳು, ಕೆಳಭಾಗದ ಅಂಗಗಳು, ಬಹು ಅಂಗಗಳು ಮತ್ತು ಕ್ಯಾಲಿಪರ್ ಗಳನ್ನು ಒದಗಿಸ ಲಾಗಿದ್ದು, ಎಲ್ಲಾ ವಯೋಮಾನದ ಫಲಾನುಭವಿಗಳಿಗೆ, ವಿಶೇಷವಾಗಿ ಯುವಪೀಳಿಗೆಯ ಮಂದಿಗೆ ಗುಣಮಟ್ಟದ ಜೀವನ ಸಾಗಿಸಲು ಮತ್ತು ಸ್ವತಂತ್ರ ಜೀವನದತ್ತ ಆತ್ಮವಿಶ್ವಾಸದ ಹೆಜ್ಜೆ ಇಡಲು ಸಹಾಯ ಮಾಡಿತು

558 ವಿಕಲಚೇತನರಿಗೆ ನೆರವಾದ ನಾರಾಯಣ ಸೇವಾ ಸಂಸ್ಥಾನ

-

Ashok Nayak
Ashok Nayak Mar 3, 2026 2:01 PM

ಬೆಂಗಳೂರು: ಪ್ರತಿಷ್ಠಿತ ನಾರಾಯಣ ಸೇವಾ ಸಂಸ್ಥಾನವು ಒಳಗೊಳ್ಳುವ ಅಭಿವೃದ್ಧಿ ಸಾಧ್ಯವಾಗಬೇಕು ಮತ್ತು ವಿಕಲಚೇತನರಿಗೆ ಅತ್ಯುತ್ತಮ ಪ್ರೋತ್ಸಾಹ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮಾರ್ಚ್ 1 ರಂದು ಬೆಂಗಳೂರಿನಲ್ಲಿ ಉಚಿತ 'ನಾರಾಯಣ ಲಿಂಬ್ ಮತ್ತು ಕ್ಯಾಲಿಪರ್ ಅಳವಡಿಕೆ ಶಿಬಿರ'ವನ್ನು ಯಶಸ್ವಿಯಾಗಿ ಆಯೋಜಿಸಿದೆ.

ಈ ಶಿಬಿರದಲ್ಲಿ 558 ವಿಕಲಚೇತನರು ಭಾಗವಹಿಸಿದ್ದು, ಸುಮಾರು 602 ಕೃತಕ ಕಾಲುಗಳು ಮತ್ತು ಕ್ಯಾಲಿಪರ್ ಗಳನ್ನು ಉಚಿತವಾಗಿ ಅಳವಡಿಸಲಾಯಿತು. ಇದರಲ್ಲಿ ಮೇಲ್ಭಾಗದ ಅಂಗಗಳು, ಕೆಳಭಾಗದ ಅಂಗಗಳು, ಬಹು ಅಂಗಗಳು ಮತ್ತು ಕ್ಯಾಲಿಪರ್ ಗಳನ್ನು ಒದಗಿಸ ಲಾಗಿದ್ದು, ಎಲ್ಲಾ ವಯೋಮಾನದ ಫಲಾನುಭವಿಗಳಿಗೆ, ವಿಶೇಷವಾಗಿ ಯುವಪೀಳಿಗೆಯ ಮಂದಿಗೆ ಗುಣಮಟ್ಟದ ಜೀವನ ಸಾಗಿಸಲು ಮತ್ತು ಸ್ವತಂತ್ರ ಜೀವನದತ್ತ ಆತ್ಮವಿಶ್ವಾಸದ ಹೆಜ್ಜೆ ಇಡಲು ಸಹಾಯ ಮಾಡಿತು.

ಇದನ್ನೂ ಓದಿ: Health Tips: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?

ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ದೀಪಕ್ ರಾಜ್ ಗೋಪಾಲ್, ಜನರಲ್ ಮೋಟಾರ್ಸ್ ಜಿಎಂ ಅಮಿತ್ ಪಟೇಲ್, ಸಿಎಸ್ಆರ್ ಮುಖ್ಯಸ್ಥ ಸಂದೀಪ್, ಎಸಿಐ ವರ್ಲ್ಡ್ ವೈಡ್ ಪ್ರತಿನಿಧಿ ರಮೇಶ್ ಕುಮಾರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿ ಕೃಷ್ಣ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ವಿನೋದ್ ಜೈನ್ ಮತ್ತು ಟ್ರಸ್ಟಿ ಹಾಗೂ ನಿರ್ದೇಶಕ ದೇವೇಂದ್ರ ಚೌಬೀಸಾ ಅವರು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ದೇವೇಂದ್ರ ಚೌಬೀಸಾ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ, ವೈದ್ಯರು, ಕೃತಕ ಅಂಗಾಂಗ ತಜ್ಞರು ಮತ್ತು ಸ್ವಯಂಸೇವಕರ ತಂಡದ ಬೆಂಬಲದೊಂದಿಗೆ ಈ ಶಿಬಿರವು ಅತ್ಯಂತ ಸುಗಮವಾಗಿ ನಡೆಯಿತು. ದಕ್ಷಿಣ ಭಾರತದ ವಿವಿಧ ಭಾಗಗಳ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಡಿಸೆಂಬರ್ 2025 ರಲ್ಲಿ ನಡೆದ ಪೂರ್ವಭಾವಿ ವೈದ್ಯಕೀಯ ತಪಾಸಣೆ ಮತ್ತು ಸ್ಕ್ರೀನಿಂಗ್ ನಂತರ, ಅರ್ಹ ವ್ಯಕ್ತಿಗಳಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಸುಧಾರಿತ, ಹಗುರವಾದ ಮತ್ತು ತಾಂತ್ರಿಕವಾಗಿ ಮೇಲ್ದರ್ಜೆಯ ನಾರಾಯಣ ಕೃತಕ ಕಾಲು ಮತ್ತು ಕ್ಯಾಲಿಪರ್ ಗಳನ್ನು ಒದಗಿಸಲಾಯಿತು.

uchita

ಮಹಾವೀರ್ ಧರ್ಮಾರ್ಥ ಭಂಡಾರದ ಸಿಎಸ್ಆರ್ ವಿಭಾಗದ ಉದಾರ ಬೆಂಬಲ ಹಾಗೂ ಸಿಎಸ್ಆರ್ ಪಾಲುದಾರರಾದ ಜನರಲ್ ಮೋಟಾರ್ಸ್, ಟಿಟಿಪಿ ಟೆಕ್ನಾಲಜೀಸ್ ಮತ್ತು ಎಸಿಐ ವರ್ಲ್ಡ್ ವೈಡ್ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಪಾಲುದಾರ ಸಂಸ್ಥೆಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಶಿಬಿರದಲ್ಲಿ ಸ್ವಯಂಸೇವಕರಾಗಿ ಸಕ್ರಿಯವಾಗಿ ಪಾಲ್ಗೊಂಡು, ಶಿಬಿರದ ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಇದೇ ಸಂದರ್ಭದಲ್ಲಿ ದಾನಿಗಳ ಅಮೂಲ್ಯ ಕೊಡುಗೆ ಯನ್ನು ಗೌರವಿಸಲು 'ದಾನಿಗಳ ಸನ್ಮಾನ ಸಮಾರಂಭ'ವನ್ನೂ ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ಹಲವಾರು ಸ್ಫೂರ್ತಿದಾಯಕ ವ್ಯಕ್ತಿತ್ವಗಳು ಭಾಗವಹಿಸಿದ್ದರು. ಅಲ್ಲಿ ಕಂಡು ಬಂದ ಅನೇಕ ಸ್ಫೂರ್ತಿದಾಯಕ ಕಥೆಗಳಲ್ಲಿ, ಕರ್ನಾಟಕದ ಕಲಬುರಗಿಯ 21 ವರ್ಷದ ಫಲಾನುಭವಿ ಸಾಯಿ ಬರ್ನಾ ಅವರ ಪಯಣವು ಬಹಳ ಆಶಾದಾಯಕವಾಗಿತ್ತು ಮತ್ತು ಅವರ ಮನೋದೃಢತೆಗೆ ಸಾಕ್ಷಿಯಾಗಿತ್ತು. ಎರಡು ವರ್ಷಗಳ ಹಿಂದೆ, ಅವರು ತುಮಕೂರಿನ ಟ್ರಾನ್ಸ್ ಫಾರ್ಮರ್ ತಯಾರಿಕಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅವರ ಎಡಗಾಲಿಗೆ ತೀವ್ರವಾಗಿ ಪೆಟ್ಟಾಗಿತ್ತು. ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರ ಕಾಲನ್ನು ಕತ್ತರಿಸಬೇಕಾಗಿ ಬಂದಿತ್ತು. ಅಂದಿನಿಂದ ಅವರು ನಿರುದ್ಯೋಗಿಯಾಗಿದ್ದರು.

ಶಿಬಿರದಲ್ಲಿ ಕೃತಜ್ಞತೆ ಹಂಚಿಕೊಂಡು ತಮ್ಮ ಅನುಭವ ಹಂಚಿಕೊಂಡ ಸಾಯಿ ಅವರು, "ಇಂದು ನನಗೆ ಹೊಸ ಕಾಲು ಅಳವಡಿಸಲಾಗಿದೆ. ನಾನು ಮತ್ತೆ ನಡೆಯಲು ಪ್ರಾರಂಭಿಸಿ ದ್ದೇನೆ. ಎಲ್ಲಕ್ಕಿಂತ ಸಂತೋಷದ ವಿಷಯವೆಂದರೆ, ಇಂದೇ ನನ್ನ ಹಳೆಯ ಕಂಪನಿಯಿಂದ ಕರೆ ಬಂದಿದ್ದು, ಕೆಲಸಕ್ಕೆ ಮರು ಸೇರ್ಪಡೆಯಾಗುವಂತೆ ಕೇಳಿದ್ದಾರೆ. ನಾನು ತುಂಬಾ ಸಂತೋಷವಾಗಿದ್ದೇನೆ," ಎಂದು ಹೇಳಿದರು.

ದೈಹಿಕ ನಷ್ಟ ಉಂಟಾದ ಕ್ಷಣದಿಂದ ಮತ್ತೆ ನಡೆಯುವ ಕ್ಷಣಗಳ ವರೆಗಿನ ಅವರ ಈ ಪಯಣವು, ಸಮಯೋಚಿತ ನೆರವು ಮತ್ತು ಮಾನವೀಯ ಹಸ್ತಕ್ಷೇಪದ ಪರಿಣಾಮಕಾರಿ ಪ್ರಭಾವಕ್ಕೆ ಉತ್ತಮ ಉದಾಹರಣೆಯಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ನಾರಾಯಣ ಸೇವಾ ಸಂಸ್ಥಾನದ ಅಧ್ಯಕ್ಷರಾದ ಪ್ರಶಾಂತ್ ಅಗರವಾಲ್ ಅವರು, ಈ ಯೋಜನೆಯ ಹಿಂದಿನ ವಿಶಾಲ ದೃಷ್ಟಿಯನ್ನು ಒತ್ತಿಹೇಳಿದರು. ನಂತರ ಅವರು, "ನಮ್ಮ ಧ್ಯೇಯ ಕೇವಲ ಕೃತಕ ಕಾಲುಗಳನ್ನು ಒದಗಿಸುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ.

ನಾರಾಯಣ ಸೇವಾ ಸಂಸ್ಥಾನದಲ್ಲಿ ನಾವು, ಓಡಾಡಲು ಸಾಧ್ಯವಾಗುವುದು ಎನ್ನುವುದು ಕೇವಲ ಓಡಾಟ ಮಾತ್ರವೇ ಅಲ್ಲ, ಅದು ಘನತೆ, ಅವಕಾಶ ಮತ್ತು ಸ್ವಾತಂತ್ರ್ಯದ ಸಂಕೇತ ವಾಗಿದೆ ಎಂದು ನಂಬುತ್ತೇವೆ. ಇಂದು ನಾವು ಅಳವಡಿಸುವ ಪ್ರತಿ ಕೃತಕ ಅಂಗವೂ ಅವರ ಮಿತಿಯಿಂದ ಅವರು ಅನಂತ ಸಾಧ್ಯತೆಗಳತ್ತ ಸಾಗುವ ಅವಕಾಶವನ್ನು ಒದಗಿಸುತ್ತದೆ. ಯಾವುದೇ ವಿಕಲಚೇತನರು ಅವರಿಗೆ ಸಹಾಯವಾಗುವ ಸೌಲಭ್ಯಗಳ ಕೊರತೆಯಿಂದ ಹಿಂದೆ ಉಳಿಯಬಾರದು ಎಂಬುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು.

ಇದಲ್ಲದೆ, ನಾರಾಯಣ ಸೇವಾ ಸಂಸ್ಥಾನದ ನಿರ್ದೇಶಕಿ ಕುಮಾರಿ ಪಲಕ್ ಅಗರವಾಲ್ ಮಾತನಾಡಿ, "ನಿಜವಾದ ನೆರವು ಎಂದರೆ ಕೇವಲ ಕೃತಕ ಅಂಗವನ್ನು ಅಳವಡಿಸುವುದು ಮಾತ್ರವೇ ಅಲ್ಲ, ಬದಲಿಗೆ ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ತುಂಬುವುದು, ಕನಸುಗಳನ್ನು ಕಾಣುವಂತೆ ಪ್ರೇರೇಪಿಸುವುದು ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಹೊಂದಲು ಸಹಾಯ ಮಾಡುವುದು. ಸುಧಾರಿತ ತಂತ್ರಜ್ಞಾನ, ಮಾನವೀಯ ಕಾಳಜಿ ಮತ್ತು ಸಮುದಾಯದ ಒಳಗೊಳ್ಳುವಿಕೆಯನ್ನು ಒಂದು ಗೂಡಿಸಿ ಒದಗಿಸುವ ಆರೈಕೆಯ ವ್ಯವಸ್ಥೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ನಾವು ಸೇವೆ ಸಲ್ಲಿಸುವ ಪ್ರತಿಯೊಬ್ಬ ಫಲಾನುಭವಿಯೂ ಸಹ, ಸರಿಯಾದ ಅವಕಾಶ ಸಿಕ್ಕಾಗ ಬದಲಾವಣೆ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ" ಎಂದರು.

ನಾರಾಯಣ ಕೃತಕ ಕಾಲು ಅಳವಡಿಕೆಯ ಜೊತೆಗೆ, ಫಲಾನುಭವಿಗಳಿಗೆ ತರಬೇತಿ ಮತ್ತು ಆಹಾರದ ಸಮಗ್ರ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿಶೇಷ ಫಿಸಿಯೋಥೆರಪಿ ಸೆಷನ್ ಗಳು, ಸಹಾಯಕ ಸಾಧನಗಳ ಬಳಕೆಯ ತರಬೇತಿ, ಅಳವಡಿಕೆಯ ನಂತರದ ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆಯ ಮೂಲಕ ವ್ಯಕ್ತಿಗಳು ತಮ್ಮ ಹೊಸ ಸಾಧನಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತೆ ಮತ್ತು ದೀರ್ಘಕಾಲದವರೆಗೆ ಸ್ವತಂತ್ರವಾಗಿ ಬಳಸು ವಂತೆ ನೋಡಿಕೊಳ್ಳಲಾಯಿತು.

ನಾರಾಯಣ ಸೇವಾ ಸಂಸ್ಥಾನವು ಇದುವರೆಗೆ ಭಾರತ ಮತ್ತು ವಿದೇಶಗಳಲ್ಲಿ ವಿಕಲಚೇತನ ರಿಗೆ 39,000ಕ್ಕೂ ಹೆಚ್ಚು ಉಚಿತ ಕೃತಕ ಕಾಲುಗಳನ್ನು ಒದಗಿಸಿದೆ ಮತ್ತು 4,52,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಮೂಲಕ ಸೇವೆ ಮತ್ತು ಮಾನವೀಯತೆಯನ್ನು ಸಾರಿದೆ.

ಬೆಂಗಳೂರು ಶಿಬಿರದ ಯಶಸ್ಸು, ಭಾರತದಲ್ಲಿ ಸಮುದಾಯದ ಮಟ್ಟದಲ್ಲಿ ಅವಶ್ಯ ನೆರವು ಒದಗಿಸುವ ರೀತಿಯಲ್ಲಿ ಮತ್ತು ಅವಶ್ಯ ಇರುವ ಎಲ್ಲರಿಗೂ ನೆರವು ಲಭ್ಯವಾಗುವಂತೆ ಮಾಡುವಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.