ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RBI Rules: ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೇಫಾಗಿ ಇರಿಸೋದು ಹೇಗೆ? ಆರ್‌ಬಿಐಯ ಹೊಸ ರೂಲ್ಸ್ ಬಗ್ಗೆ ಇಲ್ಲಿದೆ ಮಾಹಿತಿ

RBI change bank website domain: ಭಾರತದ ಬ್ಯಾಂಕ್‌ಗಳ ವೆಬ್‌ಸೈಟ್‌ಗಳ ಡೊಮೈನ್ ಅನ್ನು ಡಾಟ್ ಕಾಮ್, ಡಾಟ್ ಕೋ ಡಾಟ್ ಇನ್‌ನಿಂದ ಡಾಟ್ ಬ್ಯಾಂಕ್ ಡಾಟ್ ಇನ್‌ಗೆ ಬದಲಾಯಿಸಲಾಗಿದೆ. ಗ್ರಾಹಕರ ಸುರಕ್ಷತೆ ಮತ್ತು ವೆಬ್‌ಸೈಟ್ ಭದ್ರತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್‌ಬಿಐ ಲೋಗೋ (ಸಾಂದರ್ಭಿಕ ಚಿತ್ರ).

ನವದೆಹಲಿ: ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಡಿಜಿಲ್ ಪೇಮೆಂಟ್ ಮತ್ತು ಆನ್‌ಲೈನ್‌ ಬ್ಯಾಂಕಿಂಗ್ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲೇ ಆನ್‌ಲೈನ್‌ ಸ್ಕ್ಯಾಮರ್ (Online Scam)ಗಳು ಹೊಸ ಹೊಸ ಕುತಂತ್ರಗಳ ಮೂಲಕ ನಿಮ್ಮ ಖಾತೆಯಲ್ಲಿರುವ ಹಣವನ್ನು ಗುಳುಂ ಮಾಡಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇದರಲ್ಲಿ ಒಂದು ವಿಧಾನವೆಂದರೆ ಜನರನ್ನು ಲಿಂಕ್ ಕ್ಲಿಕ್ ಮಾಡಿಸುವ ಮೂಲಕ ಅವರ ಖಾತೆಗೆ ಆಕ್ಸೆಸ್ ಪಡ್ಕೊಂಡು ಆ ಮೂಲಕ ಅವರ ಖಾತೆಯಲ್ಲಿರುವ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವ ಮೋಸದ ದಂಧೆ ಸರ್ವ ವ್ಯಾಪಿಯಾಗಿದೆ. ಜನರು ತಮ್ಮ ಮೊಬೈಲ್‌ಗೆ ಬರುವ ಮೆಸೇಜ್ ಲಿಂಕ್‌ಗಳಲ್ಲಿ ಸಾಚಾ ಯಾವುದು? ಮೋಸದ ಲಿಂಕ್ ಯಾವುದು? ಎಂಬುದನ್ನು ಗುರುತಿಸಲು ವಿಫಲರಾಗಿ ಆನ್‌ಲೈನ್‌ ವಂಚಕರ ಮೊಸದ ಬಲೆಗೆ ಸುಲಭ ತುತ್ತಾಗಿ ತಾವು ಕಷ್ಟಪಟ್ಟು ಗಳಿಸಿ ತಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಕೂಡಿಟ್ಟ ಹಣವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳುತ್ತಿದ್ದಾರೆ.

ಇದೀಗ ಕಳೆದ ಕೆಲವು ದಿನಗಳಿಂದ ಬ್ಯಾಂಕಿಂಗ್ ವೆಬ್‌ಸೈಟ್‌ಗಳ ಬಗ್ಗೆ ಮಾಹಿತಿ ನೀಡುವ ವಿಡಿಯೊ ಒಂದು ಡಿಜಿಟಲ್ ಮೀಡಿಯಾದಲ್ಲಿ(Digital Media) ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವಿಡಿಯೊದಲ್ಲಿ ಬ್ಯಾಂಕ್ ಗ್ರಾಹಕರು ನೈಜ ಬ್ಯಾಂಕಿಂಗ್ ವೆಬ್‌ಸೈಟ್‌ಗಳನ್ನು ಗುರುತಿಸುವುದು ಹೇಗೆ ಮತ್ತು ಆ ಮೂಲಕ ವಂಚಕರ ಟ್ರ್ಯಾಪ್ ಗೆ ಬಲಿಯಾಗದಿರುವುದು ಹೇಗೆ ಎಂಬ ಕುರಿತಾಗಿ ಮಾಹಿತಿಯನ್ನು ನೀಡಲಾಗಿದೆ. ಮತ್ತು ಆನ್‌ಲೈನ್‌ ಬ್ಯಾಂಕಿಂಗ್ ಭದ್ರತೆ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೈಗೊಂಡಿರುವ ಸುರಕ್ಷತಾ ಉಪಕ್ರಮಗಳ ಬಗ್ಗೆಯೂ ಈ ವಿಡಿಯೊದಲ್ಲಿ ವಿವರವಾದ ಮಾಹಿತಿಯನ್ನು ನೀಡಲಾಗಿದೆ.

ಆರ್‌ಬಿಐ ಅಪ್‌ಡೇಟ್‌ ಬಗ್ಗೆ ಮಾಹಿತಿ:



ಬ್ಯಾಂಕ್ ವೆಬ್‌ಸೈಟ್‌ಗಳ ಕುರಿತಾದ ಮಹತ್ವದ ಅಪ್‌ಡೇಟ್‌

ಆರ್.ಬಿ.ಐ. ಇತ್ತೀಚೆಗೆ ಹೊರಡಿಸಿರುವ ಹೊಸ ಅಪ್‌ಡೇಟ್‌ ನಿಮ್ಮನ್ನು ಜಾಗರೂಕರನ್ನಾಗಿ ಮಾಡುವುದಕ್ಕಾಗಿದೆ ಎಂದು ಈ ವಿಡಿಯೊದ ಪ್ರಾರಂಭದಲ್ಲಿ ಹೇಳಲಾಗಿದೆ. ಎಚ್.ಡಿ.ಎಫ್.ಸಿ., ಎಸ್.ಬಿ.ಐ., ಐಸಿಐಸಿಐ ಮತ್ತು ಕೋಟಕ್ ಮಹೇಂದ್ರದಂತಹ ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್ ಅಡ್ರೆಸ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿವೆ ಎಂದು ಈ ವಿಡಿಯೊದಲ್ಲಿ ವಿವರಿಸಲಾಗಿದೆ.

ವಾಟ್‌ ಎ ಗಿಫ್ಟ್‌?! ಬಾಯ್‌ಫ್ರೆಂಡ್‌ಗೆ ಗುಟ್ಕಾ ಪುಷ್ಪಗುಚ್ಛ‌ ನೀಡಿದ ಯುವತಿ

ನಿಮ್ಮಲ್ಲಿ ಯಾರಾದ್ರೂ ಈ ಮೇಲಿನ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡುತ್ತಿದ್ದರೆ, ಇದೀಗ ಈ ಬ್ಯಾಂಕ್‌ಗಳ ವೆಬ್‌ಸೈಟ್ ವಿಳಾಸ ‘.ಬ್ಯಾಂಕ್.ಇನ್’ನಿಂದ ಕೊನೆಗೊಳ್ಳುವುದನ್ನು ಗಮನಿಸಬಹುದು ಎಂದು ಈ ವಿಡಿಯೊದಲ್ಲಿ ಹೇಳಲಾಗಿದೆ. ಉದಾಹರಣೆಗ ನೀವು ಎಚ್.ಡಿ.ಎಫ್.ಸಿ. ಬ್ಯಾಂಕ್‌ನ ಗ್ರಾಹಕರಾಗಿದ್ದಲ್ಲಿ, ವೆಬ್‌ಸೈಟ್ ವಿಳಾಸ ಎಚ್.ಡಿ.ಎಫ್.ಸಿ. ಬ್ಯಾಂಕ್.ಇನ್ ಎಂದು ಕಾಣಿಸುತ್ತದೆ. ಅದೇ ರೀತಿ ಐಸಿಐಸಿಐ.ಬ್ಯಾಂಕ್.ಇನ್ ಎಂದೂ ಇರುತ್ತದೆ ಎಂದು ಆ ವಿಡಿಯೊದಲ್ಲಿ ಮಾಹಿತಿ ನೀಡಲಾಗಿದೆ.

ಇನ್ನು ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ .ಕಾಂ, .ಇನ್, .ನೆಟ್ ಮೂಲಕ ಅಂತ್ಯಗೊಳ್ಳುವ ವೆಬ್‌ಸೈಟ್‌ಗಳ ಬಗ್ಗೆ ಶಂಕೆಯಿಂದಿರುವಂತೆಯೂ ಈ ವಿಡಿಯೊದಲ್ಲಿ ಮಾಹಿತಿ ನೀಡಲಾಗಿದೆ. ಹಾಗೆಯೇ ಈ ವೆಬ್‌ಸೈಟ್ ಅಡ್ರೆಸ್‌ಗಳ ಮೂಲಕ ನಿಮಗೆ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡುವುದಾಗಲಿ ಅಥವಾ ಶೇರ್ ಮಾಡದಂತೆ ಈ ವಿಡಿಯೊದಲ್ಲಿ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

ಉದ್ಯೋಗಿಗಳಿಗೆ ಗುಡ್‌ನ್ಯೂಸ್‌! EPFO ಗರಿಷ್ಠ ವೇತನ ಮಿತಿ ₹25,000ಗೆ ಏರಿಕೆ ಸಾಧ್ಯತೆ

ಇ-ಮೇಲ್ ಸುರಕ್ಷತೆ

ಈ ವಿಡಿಯೊದಲ್ಲಿ ಇ-ಮೇಲ್‌ಗೆ ಸಂಬಂಧಪಟ್ಟಂತೆಯೂ ಮಹತ್ವದ ಮಾಹಿತಿ ನೀಡಲಾಗಿದೆ. ‘ನಿಮ್ಮ ಮೇಲ್‌ಗೆ ಬರುವ ಬ್ಯಾಂಕ್‌ಗಳಿಗೆ ಸಂಬಂಧಪಟ್ಟ ಎಲ್ಲ ಯು.ಆರ್.ಎಲ್.ಗಳು @ನಿಮ್ಮ ಬ್ಯಾಂಕ್ ಹೆಸರು.ಬ್ಯಾಂಕ್ ಇನ್ ಎಂದೇ ಬರುತ್ತದೆ. ಈ ಹಿಂದೆ ಆನ್‌ಲೈನ್‌ ವಂಚಕರು ಎಚ್.ಡಿ.ಎಫ್.ಸಿ. ಸೆಕ್ಯೂರ್.ಕಾಂ ಅಥವಾ ಐಸಿಐಸಿಐ ಲಾಗಿನ್.ನೆಟ್ ಅಡ್ರೆಸ್ ಗಳನ್ನು ಬಳಸಿ ಜನರನ್ನು ವಂಚಿಸುತ್ತಿದ್ದರು. ಆದರೆ ಇದೀಗ .ಬ್ಯಾಂಕ್.ಇನ್ ಡೊಮೈನ್‌ಗಳು ಆರ್.ಬಿ.ಐ. ನೋಂದಾಯಿತ ಬ್ಯಾಂಕ್‌ಗಳಿಗೆ ಮಾತ್ರ ಲಭ್ಯವಾಗುವ ಅಡ್ರೆಸ್‌ಗಳಾಗಿದ್ದು ಈ ಮೂಲಕ ಎಲ್ಲೆಡೆ ನಡೆಯುತ್ತಿರುವ ಆನ್‌ಲೈನ್‌ ಬ್ಯಾಂಕಿಂಗ್ ವಂಚನೆಗಳಿಗೆ ಸ್ವಲ್ಪಮಟ್ಟಿನ ಕಡಿವಾಣ ಬೀಳುವ ನಿರೀಕ್ಷೆಯಿದೆ.