ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುವ ಹೂಡಿಕೆದಾರರಿಗಾಗಿ ನಿವೃತ್ತಿ ಯೋಜನೆ ಮಾರ್ಗದರ್ಶಿ

ಯಶಸ್ವಿ ನಿವೃತ್ತಿ ಯೋಜನೆ(Successful Retirement Scheme) ಯನ್ನು ರೂಪಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯೆಂಬುದು ಸ್ಪಷ್ಟ, ಉತ್ತಮ ವಾಗಿ ವ್ಯಾಖ್ಯಾನಿಸಲಾದ ಗುರಿಗಳನ್ನು ಹೊಂದಿಸುವುದು, ಇದರಲ್ಲಿ ನೀವು ಯಾವಾಗ ನಿವೃತ್ತರಾಗಲು ಬಯಸುತ್ತೀರಿ ಎಂಬುದರ ದೃಢ ನಿರ್ಧಾರವೂ ಸೇರಿದೆ.

ಯುವ ಹೂಡಿಕೆದಾರರಿಗಾಗಿ ನಿವೃತ್ತಿ ಯೋಜನೆ ಮಾರ್ಗದರ್ಶಿ

Ashok Nayak Ashok Nayak Aug 3, 2025 12:32 PM

(ಬರಹಗಳು, ಕೆ. ವಿ. ಸನಿಲ್ ಕುಮಾರ್, ಅಸೋಸಿಯೇಟ್ ಡೈರೆಕ್ಟರ್, ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್)

ಯುವಜನರಿಗೆ, ನಿವೃತ್ತಿಯು ದೂರದ ಮೈಲಿಗಲ್ಲು ಎಂದು ತೋರುತ್ತದೆ, ಆದರೆ ವಾಸ್ತವದಲ್ಲಿ, ಅದು ಹತ್ತಿರದಲ್ಲಿದೆ. ಭಾರತೀಯರು ದೀರ್ಘಕಾಲ ಬದುಕುತ್ತಿರುವುದರಿಂದ, ಕುಟುಂಬಗಳು ಚಿಕ್ಕ ದಾಗುತ್ತಿವೆ ಮತ್ತು ಹಣದುಬ್ಬರದೊಂದಿಗೆ ಆರೋಗ್ಯ ಕುರಿತಾದ ವೆಚ್ಚಗಳು ಏರುತ್ತಿವೆ. ಯುವ ಹೂಡಿಕೆದಾರರು ಸೇರಿದಂತೆ, ಸಂಶೋಧನೆ ಮಾಡಿದ ಮತ್ತು ಚಿಂತನಶೀಲ ನಿವೃತ್ತಿ ಯೋಜನೆ ಎಲ್ಲರಿಗೂ ಅಗತ್ಯ, ಹೂಡಿಕೆ(Investment) ಬೇಗನೆ ಪ್ರಾರಂಭಿಸುವುದು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ.

ಯಶಸ್ವಿ ನಿವೃತ್ತಿ ಯೋಜನೆ(Successful Retirement Scheme) ಯನ್ನು ರೂಪಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯೆಂಬುದು ಸ್ಪಷ್ಟ, ಉತ್ತಮ ವಾಗಿ ವ್ಯಾಖ್ಯಾನಿಸಲಾದ ಗುರಿಗಳನ್ನು ಹೊಂದಿಸುವುದು, ಇದರಲ್ಲಿ ನೀವು ಯಾವಾಗ ನಿವೃತ್ತರಾಗಲು ಬಯಸುತ್ತೀರಿ ಎಂಬುದರ ದೃಢ ನಿರ್ಧಾರವೂ ಸೇರಿದೆ. ಭಾರತದಲ್ಲಿ, 60 ವರ್ಷ ಗಳನ್ನು ಮಾನದಂಡವೆಂದು ಪರಿಗಣಿಸಲಾಗುತ್ತದೆ, ಆದರೆ ಜೀವನಶೈಲಿಯ ಆಕಾಂಕ್ಷೆಗಳು, ಆರ್ಥಿಕ ಗುರಿಗಳು ಮತ್ತು ಆರೋಗ್ಯದ ದೃಷ್ಟಿಕೋನ ಅವಲಂಬಿಸಿ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರ ಬಹುದು.

ನಿವೃತ್ತಿಯ ನಂತರದ ನಿಮ್ಮ ಅಪೇಕ್ಷಿತ ಜೀವನಶೈಲಿಯನ್ನು ನಿರ್ಧರಿಸುವುದು, ನೀವು ಪ್ರಯಾಣಿ ಸಲು ಬಯಸುತ್ತೀರಾ, ಸ್ವಯಂಸೇವಕರಾಗಲು ಬಯಸುತ್ತೀರಾ ಅಥವಾ ನಿಮ್ಮ ಉತ್ಸಾಹವನ್ನು ಮುಂದು ವರಿಸಲು ಬಯಸುತ್ತೀರಾ ಎಂಬುದು ಮುಂದಿನ ಹಂತವಾಗಿದೆ. ನಿಮ್ಮ ದೃಷ್ಟಿಕೋನವು ನಿರ್ದಿಷ್ಟ ವಾಗಿದ್ದರೆ, ಹಣಕಾಸಿನ ಮಾರ್ಗಸೂಚಿ ಹೆಚ್ಚು ನಿಖರವಾಗಿರುತ್ತದೆ. ಅಂದರೆ, ಹಣದುಬ್ಬರ ಸೇರಿದಂತೆ ಪ್ರಸ್ತುತ ವೆಚ್ಚಗಳು ಮತ್ತು ಭವಿಷ್ಯದ ಬದಲಾವಣೆಗಳ ಪರಿಗಣಿಸಿದ ನಂತರ ಆ ಜೀವನಶೈಲಿ ಅಳವಡಿಸಿಕೊಂಡರೆ ಎಷ್ಟು ವೆಚ್ಚವಾಗುತ್ತದೆ ಎಂದು ನೀವು ಅಂದಾಜು ಮಾಡಬೇಕು, ಇದು ಕಾಲಾನಂತರದಲ್ಲಿ ಖರೀದಿ ಶಕ್ತಿಯನ್ನು ಕ್ಷೀಣಿಸುತ್ತದೆ.

ಇದನ್ನೂ ಓದಿ: Vinayak V Bhat Column: ಅಲ್ಲಿರುವುದು ನಮ್ಮನೆ...ಇಲ್ಲಿ ಬಂದೆ ಸುಮ್ಮನೆ !

ಲೆಕ್ಕಾಚಾರಗಳ ನಂತರ, ನಿಮ್ಮ ಹೂಡಿಕೆ ತಂತ್ರಕ್ಕೆ ಅನುಗುಣವಾಗಿ ಉಳಿತಾಯ ಗುರಿಗಳನ್ನು ಹೊಂದಿಸಿ ಕೊಳ್ಳಬೇಕು. ಯುವ ಹೂಡಿಕೆದಾರರಿಗೆ ಸಮಯವು ಆಸ್ತಿಯಾಗಿರುವುದರಿಂದ, ಹೂಡಿಕೆ ಬೇಗನೆ ಪ್ರಾರಂಭಿಸಿದರೆ, ದೀರ್ಘಾವಧಿ ಹೂಡಿಕೆಯಲ್ಲಿ ಸಿಗುವ ಪ್ರತಿಫಲದಲ್ಲಿ ಏರಿಕೆ ಕಾಣುತ್ತದೆ.

ಜೀವನದ ಆರಂಭದಲ್ಲೇ ಉಳಿತಾಯ ಮಾಡಲು ಪ್ರಾರಂಭಿಸುವುದರಿಂದ, ಆ ಪ್ರತಿಫಲವನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಸಾಧ್ಯ. ಇದರಿಂದಾಗಿ ಹೂಡಿಕೆದಾರರ ಹಣವು ಸಮಯ ಕಳೆದಂತೆ ಬೆಳೆಯುತ್ತಲೇ ಇರುತ್ತದೆ. ಉದಾಹರಣೆಗೆ, ನಿಮ್ಮ 20 ರ ದಶಕದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಹೂಡಿಕೆಗಳನ್ನು ಪ್ರಾರಂಭಿಸುವುದರಿಂದ ಸಣ್ಣ ಮೊತ್ತಗಳಿದ್ದರೂ ಸಹ ಕಾಲಾನಂತರದಲ್ಲಿ ಗಣನೀಯ ಮೊತ್ತ ನಿರ್ಮಿಸಲು ಸಹಾಯ ಮಾಡುತ್ತದೆ. ಇದು ನಿವೃತ್ತಿಯ ಸಮಯದಲ್ಲಿ ಅಥವಾ ಅವಧಿ ಮುನ್ನ ಹೊಂದುವ ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಯನ್ನು ಸಕ್ರಿಯಗೊಳಿಸುತ್ತದೆ.

Invest

ನಿಮಗೆ ಹೆಚ್ಚಿನ ಬೆಳವಣಿಗೆಯ ಹೂಡಿಕೆ ಆಯ್ಕೆಗಳಾದ ಈಕ್ವಿಟಿ ಮ್ಯೂಚುವಲ್ ಫಂಡ್‌(Equity Mutual Fund)ಗಳ ಲಾಭವನ್ನು ಪಡೆಯಲು ಅನುವು ಮಾಡಿಕೊಡುವುದು ಆರಂಭದಲ್ಲೇ ಮೊದಲೇ ಹೂಡಿಕೆ ಮಾಡುವುದರ ಮತ್ತೊಂದು ಪ್ರಮುಖ ಪ್ರಯೋಜನವಾಗಿದೆ. ಇವುಗಳನ್ನು ಅಲ್ಪಾವಧಿ ಯಲ್ಲಿ ಅಸ್ಥಿರವೆಂದು ಪರಿಗಣಿಸಲಾಗುತ್ತದೆ. ಆದರೆ, ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡುವ ಕಾರಣ ಇದು ಸಮಯದೊಂದಿಗೆ ಯುವ ಹೂಡಿಕೆದಾರರಿಗೆ ಸೂಕ್ತವಾಗಿದೆ.

ನೀವು ಗುರಿಗಳನ್ನು ಹೊಂದಿಸಿ ಜತೆಗೆ ಹೂಡಿಕೆ ತಂತ್ರಗಳ ರೂಪಿಸಿ ಉಳಿತಾಯ ಪ್ರಾರಂಭಿಸಿದಾಗ, ನಿಮಗೆ ಬೇಕಾಗಿರುವುದು ಶಿಸ್ತುಬದ್ಧ ವಿಧಾನ. ಅಂದರೆ, ಎಲ್ಲಾ ಮಾಸಿಕ ವೆಚ್ಚಗಳ ಪಟ್ಟಿ ಮಾಡುವ ಮೂಲಕ ನೀವು ಹೂಡಿಕೆ ಪ್ರಾರಂಭಿಸಬಹುದು. ಇದು ನಿಮಗೆ ಹಣದ ಬಗ್ಗೆ ಸ್ಪಷ್ಟ ಚಿತ್ರಣ ನೀಡುವುದಲ್ಲದೇ ಅನಗತ್ಯ ವೆಚ್ಚಗಳ ಗುರುತಿಸಲು ಸಹಾಯ ಮಾಡುತ್ತದೆ. ನೀವು ಈ ವಿಧಾನ ವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ, ನಿವೃತ್ತಿ ಉಳಿತಾಯಕ್ಕೆ ಅಗತ್ಯವಿರುವ ಹಣದ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಇದು ಎಲ್ಲಾ ಹೂಡಿಕೆ ಕುರಿತಾದ ಗುರಿಗಳ ಸಾಧಿಸಲು ದಾರಿ ಮಾಡಿ ಕೊಡುತ್ತದೆ.

ನಿವೃತ್ತಿ ಯೋಜನೆ ಎಂಬುದು ಹಣ ಉಳಿಸುವುದರ ಬಗ್ಗೆ ಮಾತ್ರವಲ್ಲ, ಭವಿಷ್ಯವನ್ನು ಸುರಕ್ಷಿತ ಗೊಳಿಸುವ ಬಗ್ಗೆಯೂ ಆಗಿದೆ. ಬೇಗನೆ ಹೂಡಿಕೆ ಪ್ರಾರಂಭಿಸುವುದರಿಂದ ಯುವ ಹೂಡಿಕೆದಾರರಿಗೆ ಆಯ್ಕೆಗಳು, ಆತ್ಮವಿಶ್ವಾಸ ಮತ್ತು ತಮ್ಮದೇ ಆದ ನಿಯಮಗಳ ಮೇಲೆ ಜೀವನ ನಡೆಸುವ ಸಾಮರ್ಥ್ಯದೊಂದಿಗೆ ಅಧಿಕಾರವನ್ನೂ ನೀಡುತ್ತದೆ.