41.5% ಹೂಡಿಕೆಯಿಂದ IHC ಪ್ರಮೋಟರ್ ಸ್ಥಾನಕ್ಕೆ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್
ಬಲಿಷ್ಠ ಬಂಡವಾಳ, ಉತ್ತಮ ಕ್ರೆಡಿಟ್ ಪ್ರೊಫೈಲ್ ಮತ್ತು ಕಡಿಮೆ ವೆಚ್ಚದ ವಿಭಿನ್ನ ಹಣಕಾಸು ಮೂಲಗಳ ಲಭ್ಯತೆಯಿಂದ, FY 2029ರೊಳಗೆ ಭಾರತದ ಟಾಪ್-3 NBFCಗಳಲ್ಲಿ ಒಂದಾಗು ವುದು, ಜೊತೆಗೆ AUM, RoA ಮತ್ತು RoE ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿಸುವ ಗುರಿಯನ್ನು ಸಮ್ಮಾನ್ ಕ್ಯಾಪಿಟಲ್ ಹೊಂದಿದೆ.
-
ಬೆಂಗಳೂರು: ಭಾರತದ ಅತಿದೊಡ್ಡ ಬಹುರಾಷ್ಟ್ರೀಯ ಎನ್‌ಬಿಎಫ್‌ಸಿ(NBFC) ಸಂಸ್ಥೆ ಗಳಲ್ಲಿ ಒಂದಾದ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಹೊಸ ಬೆಳವಣಿಗೆಯ ಹಂತಕ್ಕೆ ಕಾಲಿಟ್ಟಿದ್ದು, ಅಬುಧಾಬಿಯ ಜಾಗತಿಕ ಹೂಡಿಕೆ ದಿಗ್ಗಜ ಇಂಟರ್‌ನ್ಯಾಷನಲ್ ಹೋಲ್ಡಿಂಗ್ ಕಂಪನಿ ಪಿಜೆಎಸ್‌ಸಿ (IHC) ತನ್ನ ಅಂಗಸಂಸ್ಥೆಯಾದ ಅವೆನಿರ್ ಇನ್ವೆಸ್ಟ್‌ಮೆಂಟ್ RSC ಲಿಮಿಟೆಡ್ (Avenir) ಮೂಲಕ ಕಂಪನಿಯಲ್ಲಿ 41.5% ಪಾಲು ಪಡೆದು ಪ್ರಮೊಟರ್ ಆಗುತ್ತಿದೆ.
ಪ್ರಾಧಾನ್ಯ ಹಂಚಿಕೆ (Preferential Allotment) ಮೂಲಕ ಇಕ್ವಿಟಿ ಷೇರುಗಳು ಮತ್ತು ವಾರಂಟ್‌ಗಳ ಹಂಚಿಕೆಯಿಂದ ಈ ಹೂಡಿಕೆ ನೆರವೇರಿದ್ದು, ಇದರೊಂದಿಗೆ IHC, ಸಮ್ಮಾನ್ ಕ್ಯಾಪಿಟಲ್‌ನ ದೀರ್ಘಕಾಲೀನ ತಂತ್ರಜ್ಞಾನದ ಪಾಲುದಾರ ಮತ್ತು ಪ್ರಮೊಟರ್ ಆಗಿ ಕಾರ್ಯನಿರ್ವಹಿಸಲಿದೆ.
ಕಂಪನಿಗೆ ಮೊದಲ ಹಂತದಲ್ಲಿ ₹5,652 ಕೋಟಿ (ಸುಮಾರು 600 ಮಿಲಿಯನ್ ಡಾಲರ್) ಹಣ ಲಭಿಸಿದ್ದು, ವಾರಂಟ್‌ಗಳನ್ನು ಪೂರ್ಣ ಪಾವತಿತ ಷೇರುಗಳಾಗಿ ಪರಿವರ್ತಿಸಿದ ನಂತರ ಮುಂದಿನ 18 ತಿಂಗಳೊಳಗೆ ₹3,198 ಕೋಟಿ (ಸುಮಾರು 338 ಮಿಲಿಯನ್ ಡಾಲರ್) ಹೆಚ್ಚು ವರಿ ಹೂಡಿಕೆ ಲಭಿಸಲಿದೆ.
ನಿಯಮಾನುಸಾರ, ₹139 ಪ್ರತಿ ಷೇರಿಗೆ ಘೋಷಿಸಿರುವ ಓಪನ್ ಆಫರ್ ಅನ್ನು 30 ದಿನ ಗಳೊಳಗೆ ಪೂರ್ಣಗೊಳಿಸಲು ಅವೆನಿರ್ ಕ್ರಮ ಕೈಗೊಳ್ಳಲಿದೆ. ಓಪನ್ ಆಫರ್ ಪೂರ್ಣ ಪ್ರಮಾಣದಲ್ಲಿ ಸ್ವೀಕೃತಿಯಾದಲ್ಲಿ, IHC ತನ್ನ ಅವೆನಿರ್ ಮೂಲಕ 63.3% ಪಾಲು ಹೊಂದ ಲಿದೆ.
ಭಾರತದ ಟಾಪ್ NBFCಗಳ ಸಾಲಿನಲ್ಲಿ ಸ್ಥಾನ ಗುರಿ
ಭಾರತದ Upper Layer NBFCs ಪಟ್ಟಿಯಲ್ಲಿರುವ ಸಮ್ಮಾನ್ ಕ್ಯಾಪಿಟಲ್‌ಗೆ IHCಯ ಹೂಡಿಕೆ ಮಹತ್ವದ ಮೈಲುಗಲ್ಲಾಗಿದ್ದು, ಜಾಗತಿಕ ಬಹುರಾಷ್ಟ್ರೀಯ ಗುಂಪಿನ ಬೆಂಬಲ ಹೊಂದಿದ ಬಲಿಷ್ಠ ಹಣಕಾಸು ಸಂಸ್ಥೆಯಾಗಿ ಕಂಪನಿಯ ಸ್ಥಾನಮಾನ ಮತ್ತಷ್ಟು ಗಟ್ಟಿ ಯಾಗಲಿದೆ.
ಕಂಪನಿಯು ಈಗಾಗಲೇ ತನ್ನ ಹಳೆಯ ಲೆಗಸಿ ಲೋನ್‌ಬುಕ್ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಕ್ರಮ ಕೈಗೊಂಡಿದ್ದು, ಇಂದಿನಿಂದ ಏಕೀಕೃತ, ಗುಣಮಟ್ಟದ ಸಾಲು ಪುಸ್ತಕ ದೊಂದಿಗೆ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ ಎಂದು ತಿಳಿಸಿದೆ.
ಬಲಿಷ್ಠ ಬಂಡವಾಳ, ಉತ್ತಮ ಕ್ರೆಡಿಟ್ ಪ್ರೊಫೈಲ್ ಮತ್ತು ಕಡಿಮೆ ವೆಚ್ಚದ ವಿಭಿನ್ನ ಹಣಕಾಸು ಮೂಲಗಳ ಲಭ್ಯತೆಯಿಂದ, FY 2029ರೊಳಗೆ ಭಾರತದ ಟಾಪ್-3 NBFCಗಳಲ್ಲಿ ಒಂದಾಗುವುದು, ಜೊತೆಗೆ AUM, RoA ಮತ್ತು RoE ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿ ಸುವ ಗುರಿಯನ್ನು ಸಮ್ಮಾನ್ ಕ್ಯಾಪಿಟಲ್ ಹೊಂದಿದೆ.
ಗೃಹ ಸಾಲ ಸಂಸ್ಥೆಯಿಂದ ವೈವಿಧ್ಯಮಯ NBFCಗೆ ರೂಪಾಂತರ
ಇದುವರೆಗೆ ಗೃಹಸಾಲ ಆಧಾರಿತ ಸಂಸ್ಥೆಯಾಗಿದ್ದ ಸಮ್ಮಾನ್ ಕ್ಯಾಪಿಟಲ್, ಮುಂದಿನ ದಿನ ಗಳಲ್ಲಿ ವೈವಿಧ್ಯಮಯ NBFC ಆಗಿ ರೂಪಾಂತರಗೊಳ್ಳಲು ಯೋಜಿಸಿದೆ. ದೇಶದಾದ್ಯಂತ ವಿಸ್ತರಿಸುತ್ತಿರುವ ಶಾಖಾ ಜಾಲದ ಮೂಲಕ ಮಧ್ಯಮ ಮತ್ತು ಕಡಿಮೆ ಆದಾಯದ ಗ್ರಾಹಕ ರಿಗೆ ಕೆಳಗಿನ ಸಾಲು ಉತ್ಪನ್ನಗಳನ್ನು ನೀಡಲು ಉದ್ದೇಶಿಸಿದೆ:
ಗೃಹಸಾಲ
ಸುರಕ್ಷಿತ ಮತ್ತು ಅಸುರಕ್ಷಿತ MSME ಸಾಲ
ವೈಯಕ್ತಿಕ ಸಾಲ
ವ್ಯವಹಾರ ಸಾಲ
ಚಿನ್ನದ ಸಾಲ
ಕಂಪನಿಯು ತನ್ನ ಕಾರ್ಯಾಚರಣೆಯಲ್ಲಿ ಅನುಸರಣೆ (Compliance) ಮತ್ತು ರಿಸ್ಕ್ ಮ್ಯಾನೇಜ್ಮೆಂಟ್‌ಗೆ ಪ್ರಾಮುಖ್ಯತೆ ನೀಡುವುದಾಗಿ ತಿಳಿಸಿದೆ. ಜೊತೆಗೆ IHCಯ ಜಾಗತಿಕ ಸಾಮರ್ಥ್ಯದಿಂದ ಡಿಜಿಟಲ್ ಹಾಗೂ AI ಆಧಾರಿತ ಸಾಮರ್ಥ್ಯ, ಉತ್ತಮ ಆಡಳಿತ ವ್ಯವಸ್ಥೆ ಮತ್ತು ವಿಶ್ವಮಟ್ಟದ ಗವರ್ನನ್ಸ್ ಮಾನದಂಡಗಳನ್ನು ಅಳವಡಿಸಿಕೊಳ್ಳಲು ನೆರವಾಗಲಿದೆ.
ಭವಿಷ್ಯದ ವಿಸ್ತರಣೆಗೆ ದೊಡ್ಡ ಗುರಿಗಳು
ಸಮ್ಮಾನ್ ಕ್ಯಾಪಿಟಲ್ ತನ್ನ ಮುಂದಿನ ವಿಸ್ತರಣೆಗೆ ಮಹತ್ವಾಕಾಂಕ್ಷಿ ಗುರಿಗಳನ್ನು ನಿಗದಿಪಡಿಸಿದೆ. ಅವು ಹೀಗಿವೆ:
ಲೋನ್ ಉತ್ಪನ್ನಗಳು: 4ರಿಂದ 15ಕ್ಕೂ ಹೆಚ್ಚು
ಶಾಖಾ ಜಾಲ: 200+ರಿಂದ 1,500+
ಸಂಭಾವ್ಯ ಗ್ರಾಹಕರು: 14 ಲಕ್ಷದಿಂದ ಸುಮಾರು 5 ಕೋಟಿ
ಸಿಬ್ಬಂದಿ ಬಲ: 4,000+ರಿಂದ 10,000+
IHC ಬೆಂಬಲದೊಂದಿಗೆ ಸಮ್ಮಾನ್ ಕ್ಯಾಪಿಟಲ್ ಭಾರತದಲ್ಲಿನ ಅತಿದೊಡ್ಡ ಹಣಕಾಸು ಸೇವಾ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು, ‘ವಿಕಸಿತ ಭಾರತ’ ದೃಷ್ಟಿಕೋನಕ್ಕೆ ತನ್ನದೇ ಕೊಡುಗೆ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಜುಡಾನ್ ಫೈನಾನ್ಶಿಯಲ್ ಅಡಿಯಲ್ಲಿ ಭಾರತದಲ್ಲಿ ಆಧಾರಕ ಕೇಂದ್ರ
IHC ತನ್ನ ಜಾಗತಿಕ ಹಣಕಾಸು ಸೇವಾ ವಿಸ್ತರಣೆಯ ಭಾಗವಾಗಿ ಜುಡಾನ್ ಫೈನಾನ್ಶಿಯಲ್ ಎಂಬ ವಿಶೇಷ ಅಂಗಸಂಸ್ಥೆಯನ್ನು ಸ್ಥಾಪಿಸಿದೆ. ಸುಮಾರು USD 235 ಬಿಲಿಯನ್ (ಸುಮಾರು ₹22.4 ಲಕ್ಷ ಕೋಟಿ) ಆಸ್ತಿ ನಿರ್ವಹಣೆಯ ಸಾಮರ್ಥ್ಯ ಹೊಂದಿರುವ ಈ ವೇದಿಕೆ, 13ಕ್ಕೂ ಹೆಚ್ಚು ದೇಶಗಳ ಬ್ಯಾಂಕಿಂಗ್, ಫಿನ್‌ಟೆಕ್ ಮತ್ತು ಆಸ್ತಿ ನಿರ್ವಹಣಾ ಹೂಡಿಕೆ ಗಳನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ.
ಸಮ್ಮಾನ್ ಕ್ಯಾಪಿಟಲ್, ಜುಡಾನ್ ಫೈನಾನ್ಶಿಯಲ್‌ನ ಅಡಿಯಲ್ಲಿ ಪ್ರಮುಖ ಹೂಡಿಕೆ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಭಾರತದಲ್ಲಿ ಜುಡಾನ್‌ನ ಹಣಕಾಸು ಹಾದಿಯನ್ನು ಬಲಪಡಿಸುವುದರ ಜೊತೆಗೆ, ಆಸ್ತಿ ನಿರ್ವಹಣಾ ಅನುಭವದ ನೆರವಿನಿಂದ ಭಾರತ ಕೇಂದ್ರೀ ಕೃತ ಆಲ್ಟರ್ನೇಟ್/ಪ್ರೈವೇಟ್ ಕ್ರೆಡಿಟ್ ವೇದಿಕೆಯನ್ನು ನಿರ್ಮಿಸುವ ಸಾಧ್ಯತೆಯೂ ಇದೆ.
IHC ಮತ್ತು ಸಮ್ಮಾನ್ ಕ್ಯಾಪಿಟಲ್ ಪ್ರತಿಕ್ರಿಯೆ
IHC ಸಿಇಒ ಸಯ್ಯದ್ ಬಸರ್ ಶುಯೇಬ್ ಅವರು ಮಾತನಾಡಿ, “ಭಾರತದ ಹಣಕಾಸು ಸೇವಾ ಕ್ಷೇತ್ರದಲ್ಲಿ ದೀರ್ಘಕಾಲೀನ ವಿಸ್ತರಣೆಯತ್ತ ಇದು ಮಹತ್ವದ ಹೆಜ್ಜೆ. ಸಮ್ಮಾನ್ ಕ್ಯಾಪಿಟಲ್ ಪ್ರಮೊಟರ್ ಆಗುವ ಮೂಲಕ ದೀರ್ಘಾವಧಿಯ ಮೌಲ್ಯ ಸೃಷ್ಟಿಗೆ ನಾವು ಬದ್ಧರಾಗಿದ್ದೇವೆ. AI ಸೇರಿದಂತೆ ಸಾಮರ್ಥ್ಯ ವೃದ್ಧಿಗೆ ಮತ್ತು ಭಾರತದ ಹಣಕಾಸು ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆ ನೀಡಲು ದೊಡ್ಡ ಅವಕಾಶಗಳಿವೆ” ಎಂದರು.
ಸಮ್ಮಾನ್ ಕ್ಯಾಪಿಟಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಗಗನ್ ಬಂಗಾ ಅವರು, “IHCಯನ್ನು ನಮ್ಮ ಪ್ರಮೊಟರ್ ಆಗಿ ಸ್ವಾಗತಿಸುತ್ತೇವೆ. ಈ ಭಾಗಸ್ಫೂರ್ತಿ ದೀರ್ಘಕಾಲೀನ ಬೆಳವಣಿಗೆ ಬಂಡವಾಳ ಹಾಗೂ ಜಾಗತಿಕ ಸಾಮರ್ಥ್ಯಗಳನ್ನು ತರುತ್ತದೆ. ಮುಂದಿನ ವರ್ಷ ಗಳಲ್ಲಿ ಜನರು, ಡಿಜಿಟಲ್ ಮೂಲಸೌಕರ್ಯ ಮತ್ತು ವಿಶೇಷವಾಗಿ ಕೃತಕ ಬುದ್ಧಿಮತ್ತೆ ಯಲ್ಲಿ ಆದ್ಯತೆಯ ಹೂಡಿಕೆ ಮಾಡಲಾಗುವುದು” ಎಂದು ಹೇಳಿದರು.