ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಯಾಮ್‌ಸಂಗ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಬಿಡುಗಡೆ

ಸ್ಯಾಮ್‌ಸಂಗ್ ತನ್ನ ದೂರದೃಷ್ಟಿಯ ಚಿಂತನೆ ಮತ್ತು ಭವಿಷ್ಯವನ್ನು ರೂಪಿಸುವ ಆಲೋಚನೆಗಳಿಗೆ ಹೆಸರುವಾಸಿಯಾಗಿದ್ದು, ಅದಕ್ಕೆ ಪೂರಕವಾಗಿ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಹೊಸ ಮತ್ತು ಅತ್ಯುತ್ತಮ ಉತ್ಪನ್ನವನ್ನು ಸೃಜನಶೀಲತೆ ಮತ್ತು ಸಹಯೋಗಕ್ಕೆ ಹೆಸರಾದ ಬ್ರೂಕ್ಲಿನ್ ಸೆಂಟರ್ ನಲ್ಲಿ ಬಿಡುಗಡೆ ಮಾಡುತ್ತಿದೆ. ಕಂಪನಿಯು ತನ್ನ ಏಳನೇ ಜನರೇಷನ್ ನ ಫೋಲ್ಡೆಬಲ್‌ ಸ್ಮಾರ್ಟ್ ಫೋನ್ ಗಳು ಈ ಹಿಂದಿನ ಮಾದರಿಗಳಿಗಿಂತ ಅತಿ ತೆಳ್ಳಗೆ, ಹಗುರವಾಗಿ ಮತ್ತು ದೀರ್ಘ ಬಾಳಿಕೆ ಬರುವಂತಿರುತ್ತವೆ ಎಂಬ ಸೂಚನೆ ನೀಡಿದೆ.

ಸ್ಯಾಮ್‌ಸಂಗ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಬಿಡುಗಡೆ

Profile Ashok Nayak Jul 11, 2025 5:59 PM

ಬೆಂಗಳೂರು: ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳನ್ನು ನ್ಯೂಯಾರ್ಕ್‌ ನ ಬ್ರೂಕ್ಲಿನ್‌ ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.

ಸ್ಯಾಮ್‌ಸಂಗ್ ತನ್ನ ದೂರದೃಷ್ಟಿಯ ಚಿಂತನೆ ಮತ್ತು ಭವಿಷ್ಯವನ್ನು ರೂಪಿಸುವ ಆಲೋಚನೆಗಳಿಗೆ ಹೆಸರುವಾಸಿಯಾಗಿದ್ದು, ಅದಕ್ಕೆ ಪೂರಕವಾಗಿ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಹೊಸ ಮತ್ತು ಅತ್ಯುತ್ತಮ ಉತ್ಪನ್ನವನ್ನು ಸೃಜನಶೀಲತೆ ಮತ್ತು ಸಹಯೋಗಕ್ಕೆ ಹೆಸರಾದ ಬ್ರೂಕ್ಲಿನ್ ಸೆಂಟರ್ ನಲ್ಲಿ ಬಿಡುಗಡೆ ಮಾಡುತ್ತಿದೆ. ಕಂಪನಿಯು ತನ್ನ ಏಳನೇ ಜನರೇಷನ್ ನ ಫೋಲ್ಡೆಬಲ್‌ ಸ್ಮಾರ್ಟ್ ಫೋನ್ ಗಳು ಈ ಹಿಂದಿನ ಮಾದರಿಗಳಿಗಿಂತ ಅತಿ ತೆಳ್ಳಗೆ, ಹಗುರವಾಗಿ ಮತ್ತು ದೀರ್ಘ ಬಾಳಿಕೆ ಬರುವಂತಿರುತ್ತವೆ ಎಂಬ ಸೂಚನೆ ನೀಡಿದೆ.

ಕಂಪನಿಯು 2019ರಲ್ಲಿ ಸ್ಮಾರ್ಟ್‌ಫೋನ್‌ನ ಸುಲಭವಾಗಿ ಸಾಗಿಸಬಹುದಾದ ಗುಣವನ್ನು ಟ್ಯಾಬ್ಲೆಟ್‌ನ ಅತ್ಯುತ್ತಮ ಪ್ರೊಡಕ್ಟಿವ್ ಗುಣದ ಜೊತೆ ಸಂಯೋಜಿಸಿ ಮೊದಲ ಬಾರಿಗೆ ಗ್ಯಾಲಕ್ಸಿ ಝಡ್ ಫೋಲ್ಡ್ ಅನ್ನು ಪರಿಚಯಿಸಿತು. ಆ ಮೂಲಕ ಸ್ಯಾಮ್ ಸಂಗ್ ಕಂಪನಿಯು ಗ್ರಾಹಕರಿಗೆ ಹೊಸ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ವಿಭಾಗವನ್ನು ಪರಿಚಯಿಸಿತ್ತು. ಆದರೆ, ಈ ವಿಭಾಗವು ಹೆಚ್ಚಿನ ಬೆಲೆ ಮತ್ತು ಫೋಲ್ಡಬಲ್ ಡಿವೈಸ್‌ ಗಳ ಬಾಳಿಕೆ ಮತ್ತು ದೀರ್ಘಾಯುಷ್ಯದ ಕುರಿತಾದ ಆತಂಕ ಗಳಿಂದ ಇನ್ನೂ ಚಿಕ್ಕದಾಗಿಯೇ ಉಳಿದಿದೆ.

ಇದನ್ನೂ ಓದಿ: Samsung: ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಿಗಾಗಿ, ಎಂಬೈಬ್ ನ ಎಐ-ಚಾಲಿತ ಕಲಿಕಾ ವೇದಿಕೆ

ಇವು ಸ್ಯಾಮ್‌ಸಂಗ್‌ನ ಹೆಚ್ಚು ಗಮನ ಹರಿಸಬೇಕಾಗಿರುವ ಸವಾಲುಗಳಾಗಿದ್ದು, ಈ ಕುರಿತು ಡಿವೈಸ್ ಎಕ್ಸ್‌ ಪೀರಿಯನ್ಸ್ (ಡಿಎಕ್ಸ್) ವಿಭಾಗದ ಕಾರ್ಯಕಾರಿ ಮುಖ್ಯಸ್ಥ ಟಿಎಂ ರೋಹ್ ಅವರು ಬ್ರೂಕ್ಲಿನ್ ಕನ್ವೆನ್ಷನ್ ಸೆಂಟರ್‌ ನಲ್ಲಿನ ವೇದಿಕೆಯಲ್ಲಿ ಮಾತನಾಡಲಿದ್ದಾರೆ. ಕಂಪನಿಯು ಇತ್ತೀಚೆಗೆ ತನ್ನ ಎಂಜಿನಿಯರ್‌ಗಳು ಮತ್ತು ವಿನ್ಯಾಸಕಾರರು ಗ್ಯಾಲಕ್ಸಿ ಝಡ್ ಸರಣಿಯ ಈ ಹಿಂದಿನ ಮಾಡೆಲ್ ಗಳಿಗಿಂತ ಹೆಚ್ಚು ತೆಳ್ಳಗಿರುವ, ಹಗುರವಾಗಿರುವ ಮತ್ತು ಹೆಚ್ಚು ಬಾಳಿಕೆ ಬರುವ ಸ್ಮಾರ್ಟ್ ಫೋನ್ ಅನ್ನು ರೂಪಿಸುತ್ತಿದ್ದಾರೆ ಎಂದು ತಿಳಿಸಿದೆ.

ಇವಿಷ್ಟೇ ಅಲ್ಲದೆ ಸ್ಯಾಮ್‌ಸಂಗ್ ಸಂಸ್ಥೆಯು ಕ್ಯಾಮೆರಾ ವಿಭಾಗದಲ್ಲಿಯೋ ಹೊಸ ಸಂಶೋಧನೆ ಗಳನ್ನು ಮಾಡಿದ್ದು, ಹೊಸ ಫೋಲ್ಡಬಲ್ ಡಿವೈಸ್‌ ಗಳು ಹೆಚ್ಚು ಶಕ್ತಿಶಾಲಿಯಾಗಿರುತ್ತವೆ ಮತ್ತು ಆಕರ್ಷಕ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುತ್ತವೆ ಎಂದು ಕಂಪನಿ ತಿಳಿಸಿದೆ. ಸ್ಯಾಮ್‌ಸಂಗ್‌ ನ ಇತ್ತೀಚಿನ ಮಾಹಿತಿಗಳ ಪ್ರಕಾರ, ಕಂಪನಿಯು ಗ್ಯಾಲಕ್ಸಿ ಎಸ್25 ಸರಣಿಯ ಆಲ್ಟ್ರಾ ಕ್ಯಾಮೆರಾ ಅನುಭವವನ್ನು ಹೊಸ ಗ್ಯಾಲಕ್ಸಿ ಝಡ್ ಫೋಲ್ಡ್7ನಲ್ಲಿ ಒದಗಿಸಲಿದೆ. ಇದರರ್ಥ, ಗ್ಯಾಲಕ್ಸಿ ಫೋಲ್ಡ್ ಸರಣಿಯು ತನ್ನ ಮೊದಲ ಫ್ಲ್ಯಾಗ್‌ಶಿಪ್ ಕ್ಯಾಮೆರಾವನ್ನು ಪಡೆಯಬಹುದಾಗಿದೆ. ಇದು ಫೋಲ್ಡ ಬಲ್ ಫೋನ್‌ಗಳನ್ನು ಬಳಸುವ ಆಲೋಚನೆ ಹೊಂದಿರುವ ಗ್ರಾಹಕರಿಗೆ ಕ್ಯಾಮೆರಾದ ಬಗ್ಗೆ ಇದ್ದ ದೊಡ್ಡ ಆಕ್ಷೇಪವನ್ನು ತೊಡೆದು ಹಾಕಲಿದೆ.

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಐ ಮೂಲಕ ಹೆಚ್ಚಿನ ಎಐ ಫೀಚರ್ ಗಳನ್ನು ಒದಗಿಸುವ ತನ್ನ ಕಾರ್ಯತಂತ್ರವನ್ನು ಮುಂದುವರಿಸುವ ಸಾಧ್ಯತೆಯಿದೆ. ಜನರು ಫೋನ್ ಗಳ ಜೊತೆ ಸಂವಹನ ನಡೆಸುವ ರೀತಿಯನ್ನು ಈ ಫೀಚರ್ ಗಳು ಬದಲಿಸಲಿವೆ ಎಂದು ಕಂಪನಿಯು ಹೇಳಿದೆ. ಕಂಪನಿಯು ಒದಗಿಸುತ್ತಿರುವ ಹೊಸ ಎಐ ಚಾಲಿತ ಇಂಟರ್‌ಫೇಸ್ ಜೊತೆಗೆ ಅತ್ಯುತ್ತಮ ಹಾರ್ಡ್‌ವೇರ್‌ ಒದಗಿಸುವ ನಿರೀಕ್ಷೆಯೂ ಇದೆ.